ಚೀನಾದಿಂದ ಅಮೆರಿಕಾಗೆ ಅಪಾಯವಿರುವುದು ನಿಜ ಎಂದ ಕಾರ್ಯದರ್ಶಿ ಪೋಂಪೆ

By Suvarna News  |  First Published Oct 16, 2020, 10:32 AM IST

ಅಮೆರಿಕದಾಗೆ ಚೀನಾ ಬೆದರಿಕೆ | ಬೆದರಿಕೆ ಬಂದಿದ್ದು ನಿಜ ಎಂದ ಅಮೆರಿಕ ಕಾರ್ಯದರ್ಶಿ


ನವದೆಹಲಿ(ಅ.16): ಚೈನೀಸ್ ಕಮ್ಯುನಿಸ್ಟ್ ಪಕ್ಷದಿಂದ ಅಪಾಯ ಬಂದಿದ್ದು ನಿಜ ಎಂದು ಅಮೆರಿಕ ಕಾರ್ಯದರ್ಶಿ  ಮೈಕಲ್ ಪೋಂಪೆ ತಿಳಿಸಿದ್ದಾರೆ. ಅಪಾಯ ಬಂದಿತ್ತು, ನಾವದನ್ನು ಕಡೆಗಣಿಸಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಪೋಂಪೆ, ಚೀನಾದ ಫಿಲೋಸೊಫರ್ ಕನ್ಫ್ಯೂಷಿಯಸ್‌ ಸಂಸ್ಥೆಗಳು ಅವರ ಮಕ್ಕಳ ಮೇಲೆ ಸಿದ್ಧಂತಗಳನ್ನು ಹೇರಿ ಅಮೆರಿಕದ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದ್ದಾರೆ ಎಂದಿದ್ದಾರೆ.

Latest Videos

ಬೈಡನ್‌ಗೆ ತಲೆನೋವಾಯ್ತು ಇಮೇಲ್ ಸಂದೇಶಗಳು, ವರದಿಗೆ ಫೇಸ್ಬುಕ್ ಕತ್ತರಿ!

ಚೀನಾದ ಕಮ್ಯುನಿಸ್ಟ್ ಪಕ್ಷದಿಂದ ಎದುರಾಗಿರುವ ಬೆದರಿಕೆ ನಿಜ. 40 ವರ್ಷಗಳಿಂದ ಹೀಗೆ ಇದೆ. ಇದು ರಾಜಕೀಯವಲ್ಲ. ರಿಪಬ್ಲಿಕನ್ ಅಧ್ಯಕ್ಷರು, ರಿಪಬ್ಲಿಕನ್ ಕಾಂಗ್ರೆಸ್, ಡೆಮೋಕ್ರಾಟ್ ಇದ್ಯಾವುದೂ ಯಾವುದೇ ವ್ಯತ್ಯಾಸ ಮಾಡಲಿಲ್ಲ - ನಾವು ಬಾಗಿದ್ದೇವೆ. ಚೀನೀ ಕಮ್ಯುನಿಸ್ಟ್ ಪಕ್ಷವು ನಮ್ಮ ಮಧ್ಯೆ ನಡೆದು ಬಂದಾಗಿದೆ ಎಂದಿದ್ದಾರೆ.

ಚೈನೀಸ್ ಕಮ್ಯುನಿಸ್ಟ್ ಪಕ್ಷದಿಂದ ಅಪಾಯ ನಿಜ:

ಶಾಲೆಗಳಿಗಾಗಿ ಚೀನಾ ಸಿಸಿಪಿ ಪಕ್ಷ ನೀಡಿದ ಹಣಕಾಸಿನ ನೆರವು ಒಪ್ಪಿಕೊಳ್ಳುವಂತಹ ವ್ಯಾಪಾರ ಒಪ್ಪಂದವಲ್ಲ. ಸಿಸಿಪಿ ನೀಡಿದ ಹಣ ನಮ್ಮ ಡೆಮಾಕ್ರಸಿಯನ್ನು ಮಟ್ಟಹಾಕುವಂತದ್ದು ಎಂದು ಹೇಳಿದ್ದಾರೆ. ಸಿಸಿಪಿ ನೀಡುವ ಹಣ ನಮ್ಮ ಡೆಮಾಕ್ರಸಿಯನ್ನು ಕುಗ್ಗಿಸುತ್ತಿದೆ. ನಮ್ಮ ಜೀವನ ಶೈಲಿಯನ್ನು ತಗ್ಗಿಸುತ್ತಿದೆ. ನಾವು ಇದು ನಾವು ಒಪ್ಪುವುದಿಲ್ಲ ಎಂದು ಹೇಳಬೇಕಿದೆ ಎಂದಿದ್ದಾರೆ.

ಕನ್ಫ್ಯೂಷಿಯಸ್ ಸಂಸ್ಥೆ ಎಂದರೇನು?

ಸಿಐ ಪ್ರಪಂಚದಾದ್ಯಂತ ಭಾಷೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ  ನಿಡುವ ಸಂಸ್ಥೆಯಾಗಿದೆ. ಇದನ್ನು ಫಾರಿನ್ ಸರ್ಕಾರ ನಿಯಂತ್ರಿಸುತ್ತಿದ್ದು, ಸಂಸ್ಥೆಯ ಎಲ್ಲಾ ಸಿಬ್ಬಂದಿ ರಾಜತಾಂತ್ರಿಕ ರಾಯಭಾರ ಕಚೇರಿಗಳ ನಿರ್ಬಂಧಗಳನ್ನು ಅನುಸರಿಸಿ ನೋಂದಾಯಿಸಿಕೊಳ್ಳಬೇಕು ಮತ್ತು ಪಾಲಿಸಬೇಕು.

ಈ ಸಂಸ್ಥೆ ನಾನ್ ಫ್ರಾಫಿಟ್ ಸಂಸ್ಥೆಯಾಗಿದ್ದು, ಚೈನೀಸ್ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತದೆ. ಅಮೆರಿಕದ ನಂತರ ಇದೀಗ ಭಾರತವೂ ವಿಶ್ವವಿದ್ಯಾಲಯದಲ್ಲಿರುವ ಐಸಿಗಳನ್ನು ಪರಿಶೀಲಿಸುವುದಾಗಿ ಹೇಳಿದೆ.

ಜೋ ಬೈಡನ್‌ಗೆ ಮುಳುವಾಗುತ್ತಾ ಹಂಟರ್‌ ಬೈಡನ್‌ ಕಂಪನಿಯ ಸಂದೇಶಗಳು?

ಇದನ್ನು ತೀವ್ರವಾಗಿ ಖಂಡಿಸಿರುವ ಚೀನಾ, ಭಾರತ ಇದನ್ನು ರಾಜಕೀಯವಾಗಿ ಬದಲಾಯಿಸುವುದು ಬಿಟ್ಟು ಎರಡೂ ರಾಷ್ಟ್ರಗಳ ಸಂಸ್ಕೃತಿ ಸಂವಹನವನ್ನು ಪ್ರೋತ್ಸಾಹಿಸಬೇಕು ಎಂದಿದೆ.

click me!