ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ತನ್ನ ಸೈನಿಕರಿಗೆ ನೀಡುವ ಸಂಬಳ ಎಷ್ಟು ಗೊತ್ತಾ? ಇತ್ತೀಚೆಗಷ್ಟೆ ಪಾಕಿಸ್ತಾನ ಸೈನಿಕರು ಆಹಾರ ಕೊರತೆಯಿಂದ ಬಳಲುತ್ತಿರುವ ಬಗ್ಗೆ ವರದಿಯಾಗಿತ್ತು. ಪಾಕ್ ಸೈನಿಕರ ಸಂಬಳ ಹೇಗೆ ನಿರ್ಧಾರವಾಗುತ್ತೆ? ಇಲ್ಲಿದೆ ಮಾಹಿತಿ.
ಇಸ್ಲಾಮಾಬಾದ್: ಆರ್ಥಿಕಮಟ್ಟದಲ್ಲಿ ಪಾಕಿಸ್ತಾನ ಹಂತ ಹಂತವಾಗಿ ಕುಸಿಯುತ್ತಿದ್ದು, ಬೆಲೆ ಏರಿಕೆಯಿಂದಾಗಿ ಪಾಕ್ ಜನರು ತತ್ತರಿಸಿ ಹೋಗಿದ್ದಾರೆ. ರಕ್ಷಣಾ ವಲಯಕ್ಕೆ ಹೆಚ್ಚು ಅನುದಾನ ಮೀಸಲಿಡುವ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಒಂದಾಗಿದೆ. ಹಾಗಾದ್ರೆ ಪಾಕಿಸ್ತಾನ ತನ್ನ ಸೇನೆಯಲ್ಲಿ ಸೇವೆ ಸಲ್ಲಿಸುವ ಸೈನಿಕರಿಗೆ ಎಷ್ಟು ಸಂಬಳ ನೀಡುತ್ತೆ ಎಂಬುದರ ಮಾಹಿತಿ ಇಲ್ಲಿದೆ. ಸೈನಿಕರ ವೇತನ ಶ್ರೇಣಿ ಮತ್ತು ಸೇವಾವಧಿ ಮೇಲೆ ನಿರ್ಧಾರ ಮಾಡಲಾಗುತ್ತದೆ. ಪಾಕ್ ಸೈನಿಕರ ವೇತನವನ್ನು 22 ಶ್ರೇಣಿಯಲ್ಲಿ ನಿರ್ಧರಿಸಲಾಗುತ್ತದೆ ಎಂದು ವರದಿಯಾಗಿದೆ.
ದೇಶದ ರಕ್ಷಣೆಯ ವಿಷಯ ಬಂದಾಗ ಎಲ್ಲರೂ ಮಾತನಾಡೋದು ಸೇನೆಯ ಸಾಮರ್ಥ್ಯ. ಸದಾ ಭಾರತದ ಮೇಲೆ ವಿಷಕಾರುವ ಪಾಕಿಸ್ತಾನಕ್ಕೆ ನಮ್ಮ ಸೈನಿಕರು ಮುಟ್ಟಿ ನೋಡುಕೊಳ್ಳುವಂತೆ ತಿರುಗೇಟು ನೀಡುತ್ತಿರುತ್ತಾರೆ. ಇಂದು ನಾವು ನಿಮಗೆ ಪಾಕಿಸ್ತಾನ ತನ್ನ ಸೈನಿಕರಿಗೆ ಎಷ್ಟು ವೇತನ ನೀಡುತ್ತೆ ಎಂಬುದನ್ನು ನೋಡೋಣ ಬನ್ನಿ.
ಸಂಬಳ ಅಂದ್ರೆ ಬೇಸಿಕ್ ಸ್ಕೇಲ್ ಅಂತ ಇರುತ್ತದೆ. ಆದರೆ ಪಾಕಿಸ್ತಾನ ಸೈನಿಕರ ಸಂಬಳಕ್ಕೆ ಬೇಸಿಕ್ ಸ್ಕೇಲ್ ಇರಲ್ಲ. ವೇತನದ ಜೊತೆಯಲ್ಲಿ ಹೆಚ್ಚುವರಿ ಭತ್ಯೆಗಳು ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಎಲ್ಲಾ ಸೈನಿಕರಿಗೆ ಸಿಗುತ್ತವೆ. ವರದಿಗಳ ಪ್ರಕಾರ, ಪಾಕ್ ಸೈನಿಕರಿಗೆ 22 ಬಿಪಿಎಸ್ ಕೆಟಗೆರಿಯಲ್ಲಿ ಸಂಬಳ ಪಾವತಿಸಲಾಗುತ್ತದೆ. ಈ ಸಂಬಳದ ಆಧಾರದ ಮೇಲೆಯೇ ಸೈನಿಕರ ನೇಮಕಾತಿ ಆಗುತ್ತದೆ.
ಪಾಕಿಸ್ತಾನದ ಅತ್ಯಂತ ಜೂನಿಯರ್ ಸೈನಿಕರ ಸಂಬಳ ಕನಿಷ್ಠ 11,720 ಪಾಕಿಸ್ತಾನಿ ರೂಪಾಯಿ ನೀಡಲಾಗುತ್ತದೆ. ಈ ಶ್ರೇಣಿಯಲ್ಲಿರುವ ಸೈನಿಕರ ಅತ್ಯಧಿಕ ಸಂಬಳ 23,120 ಪಾಕಿಸ್ತಾನಿ ರೂಪಾಯಿ ಆಗಿದೆ. 22ನೇ ಶ್ರೇಯಾಂಕದಲ್ಲಿ ಸೇವೆ ಸಲ್ಲಿಸುವ ಸೈನಿಕರು ಅತ್ಯಧಿಕ ಸಂಬಳ ಪಡೆಯುತ್ತಾರೆ. 22 ಬಿಪಿಎಸ್ ಸೈನಿಕರು 82,320 ರಿಂದ 1,64,560 ಪಾಕಿಸ್ತಾನಿ ರೂಪಾಯಿ ಪಡೆಯುತ್ತಾರೆ. ಇದಲ್ಲದೇ ಇತರ ದೇಶಗಳ ಸೇನೆಗಳಂತೆ ಪಾಕಿಸ್ತಾನ ಸೇನೆಯ ಸೈನಿಕರಿಗೂ ಭತ್ಯೆ ಮತ್ತು ಸೌಲಭ್ಯಗಳು ಸಿಗುತ್ತವೆ ಎಂದು ವರದಿಯಾಗಿದೆ. ಆದರೆ ಈ ಸಂಬಳ ಅತ್ಯಂತ ಕಡಿಮೆ ಎಂದು ಹೇಳಲಾಗುತ್ತದೆ.
ಪಾಕಿಸ್ತಾನದಲ್ಲಿ ಧರ್ಮ ಬದಲಿಸುತ್ತಿರೋ ಜನರು; ಹೆಚ್ಚಾಗ್ತಿದೆ ಹಿಂದೂಗಳ ಸಂಖ್ಯೆ!
ಯೋಧರಿಗೆ ಆಹಾರ ನೀಡಲು ಪರದಾಡುತ್ತಿರೋ ಪಾಕಿಸ್ತಾನ
ಪಾಕಿಸ್ತಾನದಲ್ಲಿ ಉಂಟಾಗಿರುವ ಆರ್ಥಿಕ ದುಸ್ಥಿತಿ ಇದೀಗ ಪಾಕಿಸ್ತಾನದ ಸೇನೆಯನ್ನು ಬಾಧಿಸಲು ಆರಂಭಿಸಿದೆ. ಸೇನಾ ಕಮಾಂಡ್‌ಗಳಲ್ಲಿ ಆಹಾರದ ಕೊರತೆ ಉಂಟಾಗಿದ್ದು, ಹೆಚ್ಚಿನ ಅನುದಾನ ಒದಗಿಸುವಂತೆ ಹಲವು ಕಮಾಂಡ್‌ಗಳು ಸೇನಾ ಮುಖ್ಯಸ್ಥರಿಗೆ ಪತ್ರ ಬರೆದಿವೆ ಎಂದು ಮೂಲಗಳು ತಿಳಿಸಿವೆ.
ಕೆಲವು ಫೀಲ್ಡ್ ಕಮಾಂಡರ್‌ಗಳು ರಾವಲ್ಪಿಂಡಿಯಲ್ಲಿರುವ ಕ್ವಾರ್ಟರ್ ಮಾಸ್ಟರ್ ಜನರಲ್ ಅವರಿಗೆ ಈ ಸಮಸ್ಯೆಯ ಕುರಿತಾಗಿ ಪತ್ರಗಳನ್ನು ಬರೆದಿದ್ದಾರೆ. ಈ ವಿಷಯವನ್ನು ಈಗಾಗಲೇ ಮುಖ್ಯ ಲಾಜಿಸ್ಟಿಕ್ ಸ್ಟಾಫ್ ಮತ್ತು ಸೇನಾ ಕಾರ್ಯಾಚರಣೆಗಳ ಮುಖ್ಯಸ್ಥರ ಗಮನಕ್ಕೆ ತರಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಹೆಚ್ಚಾಗುತ್ತಿರುವ ಹಣದುಬ್ಬರ ಹಾಗೂ ವಿಶೇಷ ಅನುದಾನಗಳನ್ನು ಕಡಿತಗೊಳಿಸಿರುವುದರಿಂದ ಪಾಕಿಸ್ತಾನದಲ್ಲಿ ಸೈನಿಕರಿಗೆ 2 ಹೊತ್ತು ಸರಿಯಾಗಿ ಊಟ ನೀಡಲು ಸಹ ಸಾಧ್ಯವಾಗುತ್ತಿಲ್ಲ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಅಷ್ಘಾನಿಸ್ತಾನ ಗಡಿಯಲ್ಲಿ ತೆಹ್ರಿಕ್ ಇ ತಾಲೀಬಾನ್ ಪಾಕಿಸ್ತಾನದ ಉಗ್ರರು ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೇನೆ ಈ ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದೆ. ಅಲ್ಲದೇ ಗಡಿ ಪ್ರದೇಶಗಳಲ್ಲಿ ಹಲವು ಕಾರ್ಯಾಚರಣೆಗಳಲ್ಲಿ ಸೇನೆ ತೊಡಗಿರುವ ಸಮಯದಲ್ಲೇ ಆಹಾರದ ಕೊರತೆ ಎದುರಾಗಿರುವುದು ಭಾರಿ ಸಂಕಷ್ಟುತಂದೊಡ್ಡಿದೆ. ಪ್ರಸ್ತುತ ಬಜೆಟ್‌ನಲ್ಲಿ ಭದ್ರತೆಗಾಗಿ 1.53 ಟ್ರಿಲಿಯನ್ ಡಾಲರ್ ವೆಚ್ಚ ಮಾಡಲಾಗಿದೆ. ಪಾಕಿಸ್ತಾನ ಪ್ರತಿ ವರ್ಷ ಓರ್ವ ಸೈನಿಕನ ಮೇಲೆ 13,400 ಡಾಲರ್ ಖರ್ಚು ಮಾಡುತ್ತಿದೆ.
ಹಣದುಬ್ಬರದಿಂದ ದಿವಾಳಿಯಾದ ಪಾಕ್‌ನಲ್ಲಿ 50 ರೂ ಮಾಲ್ ಓಪನ್; ಕ್ಷಣಾರ್ಧದಲ್ಲಿಯೇ ಹಣ ಕೊಡದೇ ಲೂಟಿಗೈದ ಪಾಕಿಸ್ತಾನಿಗಳು