ತೋಳದಂತೆ ಕಾಣಿಸಲು 18 ಲಕ್ಷ ವೆಚ್ಚ ಮಾಡಿದ ವ್ಯಕ್ತಿ

By Anusha Kb  |  First Published Jan 1, 2023, 4:13 PM IST

ಟೋಕಿಯೋ: ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ನಾಯಿಯಂತೆ ಕಾಣಿಸಿಕೊಳ್ಳುವ ಸಮುವಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ ಘಟನೆ ನಡೆದಿತ್ತು. ಈ ಘಟನೆ ನೆನಪಿನಿಂದ ಮಾಸುವ ಮುನ್ನವೇ ಜಪಾನ್‌ನಲ್ಲಿ ಈಗ ಮತ್ತೊಬ್ಬ ವ್ಯಕ್ತಿ ತೋಳದಂತೆ ಕಾಣಿಸಿಕೊಳ್ಳುವ ಸಲುವಾಗಿ ಸುಮಾರು 18 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾನೆ.


ಟೋಕಿಯೋ: ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ನಾಯಿಯಂತೆ ಕಾಣಿಸಿಕೊಳ್ಳುವ ಸಮುವಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ ಘಟನೆ ನಡೆದಿತ್ತು. ಈ ಘಟನೆ ನೆನಪಿನಿಂದ ಮಾಸುವ ಮುನ್ನವೇ ಜಪಾನ್‌ನಲ್ಲಿ ಈಗ ಮತ್ತೊಬ್ಬ ವ್ಯಕ್ತಿ ತೋಳದಂತೆ ಕಾಣಿಸಿಕೊಳ್ಳುವ ಸಲುವಾಗಿ ಸುಮಾರು 18 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾನೆ. ಹಿಂಗಾಲುಗಳ ಮೇಲೆ ನಡೆಯುವ ತೋಳದಂತೆ ಕಾಣುವ ಸಲುವಾಗಿ ವ್ಯಕ್ತಿ ಇಷ್ಟೊಂದು ಹಣ ವೆಚ್ಚ ಮಾಡಿದ್ದು, ನೋಡಿ ಜನ ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ. 

ಪ್ರಪಂಚದಲ್ಲಿ (World) ಜನರಿಗೆ ಎಂತೆಂಥಾ ಆಸೆಗಳೆಲ್ಲಾ ಇರುತ್ತದೆ ನೋಡಿ, ಮನುಷ್ಯರ ಮನಸ್ಸು ಯಾವಾಗಲೂ ಇರುವುದಕ್ಕಿಂತ ಇಲ್ಲದಿರುವುದರ ಕಡೆಗೆ ಹೆಚ್ಚು ತುಡಿಯುತ್ತಿರುತ್ತದೆ. ಹಾಗೆಯೇ ಇಲ್ಲಿ ಈತನಿಗೆ ಕೈ ಕಾಲುಗಳೆಲ್ಲವೂ ಸರಿ ಇರುವ ಮನುಷ್ಯನಾಗಿ ಹುಟ್ಟಿದ ಈತನಿಗೆ ಈಗ ಪ್ರಾಣಿಯಾಗಬೇಕೆಂಬ ಆಸೆ ಆಗಿದೆ. ಅದೂ ತೋಳವಾಗಬೇಕೆಂಬ ಆಸೆ ಈತನಿಗಾಗಿದ್ದು, ತನ್ನ ಆಸೆ ಈಡೇರಿಸಿಕೊಳ್ಳುವ ಸಲುವಾಗಿ ಆತ ಬರೋಬ್ಬರಿ 18 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾನೆ.

Tap to resize

Latest Videos

ತೋಳದ ವೇಷಕ್ಕಾಗಿ ಈ ವ್ಯಕ್ತಿ ಝೆಪ್ಪೆಟ್ ಎಂಬ ಕಂಪನಿಯಿಂದ ಕಸ್ಟಮೈಸ್ (customised) ಮಾಡಿದ ವೇಷಭೂಷಣ ಮಾಡಿಸಿಕೊಂಡಿದ್ದಾನೆ. ಇದಕ್ಕೆ ಆತ 3,000,000 ಯೆನ್  ಅಂದರೆ ಸುಮಾರು 18.5 ಲಕ್ಷ ಭಾರತೀಯ ರೂಪಾಯಿ ಖರ್ಚು ಮಾಡಿದ್ದಾನೆ. ಹೀಗೆ ತೋಳವಾಗುವ ಆಸೆ ತೋರಿದ ಈ ವ್ಯಕ್ತಿ ತನ್ನ ಅನಾಮಧೇಯತೆ ಕಾಪಾಡಿಕೊಳ್ಳಲು ಕೋರಿದ್ದಾನಂತೆ. ಬಾಲ್ಯದಿಂದಲೂ ಈತನಿಗೆ ಪ್ರಾಣಿಗಳ (Animal) ಮೇಲೆ ವಿಶೇಷ ಆಸಕ್ತಿ ಇತ್ತಂತೆ. ಕೆಲವು ನೈಜ ಪ್ರಾಣಿಗಳಂತೆ ಕಾಣುವ ಸೂಟ್‌  ಧರಿಸಿದ ಟಿವಿ ಶೋಗಳನ್ನು ನೋಡಿದ ಅವರಿಗೆ ಅವರಲ್ಲಿ ತಾನು ಒಬ್ಬನಾಗಬೇಕು ಎಂದು ಅನಿಸಿತಂತೆ. 

ನೈಸರ್ಗಿಕ ಕರೆಗಾಗಿ ಕಾರಿನಿಂದಿಳಿದ ಹೆಂಡ್ತಿಯನ್ನೇ ಬಿಟ್ಟು ಹೋದ ಗಂಡ..!

ಈ ಕಾರಣಕ್ಕೆ ಈ ವ್ಯಕ್ತಿ ತೋಳದಂತೆ (Wolf) ಕಾಣಿಸಿಕೊಳ್ಳುವ ಕಸ್ಟಮೈಸ್ಡ್ ಡ್ರೆಸ್ ಹೊಲಿಸಿಕೊಳ್ಳಲು ಸರಿಯಾದ ಫಿಟ್ಟಿಂಗ್ ಹಾಗೂ ಅಳತೆ ನೀಡಲು ಹಲವು ಬಾರಿ ಸ್ಟುಡಿಯೋಗೆ ಭೇಟಿ ನೀಡಿದ್ದಾನಂತೆ. ಈ ಉಡುಪನ್ನು ತಯಾರಿಸುವ ಸಲುವಾಗಿ ಸಣ್ಣ ಸಣ್ಣ ವಿವರಗಳನ್ನು ಕಲೆ ಹಾಕಲು ನಿಜವಾದ ತೋಳಗಳ ಚಿತ್ರವನ್ನು ಅವರು ಪರಿಶೀಲಿಸಿದ್ದಾರೆ. 

ಹೀಗಾಗಿ ಈ ತೋಳದ ಉಡುಪನ್ನು ತಯಾರಿಸಲು ಸಂಸ್ಥೆಗೆ ಐವತ್ತು ದಿನಗಳೇ ಬೇಕಾಗಿದೆ. ಗ್ರಾಹಕನ (Customer) ನಿರೀಕ್ಷೆಯಂತೆಯೇ ತೋಳದ ಉಡುಪು ನಿರ್ಮಾಣವಾಗಿದ್ದು, ಇದರಿಂದ ತೋಳದಂತೆ ಕಾಣಿಸಬೇಕು ಎಂದು ಬಯಸಿದ್ದ ವ್ಯಕ್ತಿ ಪೂರ್ತಿ ಖುಷಿಯಾಗಿದ್ದ. ಇದು ನನ್ನ ಕನಸು ನನಸಾಗುವ ಕ್ಷಣವಾಗಿತ್ತು. 'ಹಿಂಗಾಲುಗಳ ಮೇಲೆ ನಡೆಯುವ ನಿಜವಾದ ತೋಳದಂತೆ ಕಾಣಿಸಬೇಕೆನ್ನುವ ನನ್ನ ಆಸೆಯ ಸೃಷ್ಟಿ ಕಷ್ಟಕರವಾಗಿತ್ತು. ಆದರೆ ಸಂಪೂರ್ಣ ಸೂಟ್ ನಾನು ಊಹಿಸಿದಂತೆಯೇ ಕಾಣುತ್ತದೆ ಎಂದು ತೋಳವಾಗಲು ಬಯಸ್ಸಿದ್ದ ಈ ಅನಾಮಧೇಯ ವ್ಯಕ್ತಿ ಹೇಳಿಕೊಂಡಿದ್ದಾನೆ.

ಸಾಲಗಾರರಿಂದ ತಪ್ಪಿಸಿಕೊಳ್ಳಲು ಮೂಗಿಗೆ ಹತ್ತಿ ಇಟ್ಟು ಫೇಸ್‌ಬುಕ್‌ಗೆ ಫೋಟೋ ಹಾಕಿದ ಮಹಿಳೆ

ನಾನು ಹೇಳಿದಂತೆ ನನ್ನ ಎಲ್ಲಾ ನಿರ್ದಿಷ್ಟತೆಗಳು ನನ್ನ ಎಲ್ಲಾ ಆದ್ಯತೆಗಳನ್ನು ಇದು ಸಂಪೂರ್ಣವಾಗಿ ಒಳಗೊಂಡಿವೆ. ಉಸಿರಾಟದ ವ್ಯವಸ್ಥೆಯ ಜೊತೆ ಅದನ್ನು ಯಾವುದೇ ಸಹಾಯವಿಲ್ಲದೇ ಧರಿಸಬಹುದಾಗಿದೆ ಎಂದು ಆತ ಹೇಳಿಕೊಂಡಿದ್ದಾನೆ. ಜೆಪ್ಪೆಟ್ ಸಂಸ್ಥೆ ಇಷ್ಟೊಂದು ವೆಚ್ಚದ ಪ್ರಾಣಿಗಳ ವೇಷಭೂಷಣವನ್ನು ತಯಾರಿಸುವುದು ಇದೇ ಮೊದಲಲ್ಲ. ಈ ಹಿಂದೆ ವ್ಯಕ್ತಿಯೊಬ್ಬ ತಾನು ನಾಯಿಯಂತೆ ಕಾಣಬೇಕು ಎಂದು ಬಯಸಿದಾಗ ಆತ ಅದಕ್ಕಾಗಿ 12 ಲಕ್ಷ ರೂಪಾಯಿ ವೆಚ್ಚ ಮಾಡಿದ್ದ. 

click me!