ಮಾಜಿ ಪೋಪ್‌ ಬೆನೆಡಿಕ್ಟ್ ನಿಧನ: ಗಣ್ಯರ ಕಂಬನಿ

By Kannadaprabha NewsFirst Published Jan 1, 2023, 7:06 AM IST
Highlights

: ಕ್ರೈಸ್ತರ ಪರಮೋಚ್ಛ ಧರ್ಮಗುರು ಮಾಜಿ ಪೋಪ್‌, ಬೆನೆಡಿಕ್ಟ್ (95) ಶನಿವಾರ ನಿಧನರಾಗಿದ್ದಾರೆ. ಬಹುಕಾಲದಿಂದಲೂ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರ ಆರೋಗ್ಯ ಬುಧವಾರ ಹದಗೆಟ್ಟಿತ್ತು.

ವ್ಯಾಟಿಕನ್‌ ಸಿಟಿ: ಕ್ರೈಸ್ತರ ಪರಮೋಚ್ಛ ಧರ್ಮಗುರು ಮಾಜಿ ಪೋಪ್‌, ಬೆನೆಡಿಕ್ಟ್ (95) ಶನಿವಾರ ನಿಧನರಾಗಿದ್ದಾರೆ. ಬಹುಕಾಲದಿಂದಲೂ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರ ಆರೋಗ್ಯ ಬುಧವಾರ ಹದಗೆಟ್ಟಿತ್ತು. ಇದರ ಬೆನ್ನಲ್ಲೇ ಹೊಸ ವರ್ಷಾಚರಣೆಯ ಒಂದು ದಿನ ಮುನ್ನ ಇವರು ಮುಂಜಾನೆ 9:34 ರ ಸಮಯಕ್ಕೆ ನಿಧನರಾದರು. ಇದು ನಮ್ಮ ಅತೀವ ದುಃಖಕ್ಕೆ ಕಾರಣವಾಗಿದೆ ಎಂದು ವ್ಯಾಟಿಕನ್‌ ವಕ್ತಾರ ತಿಳಿಸಿದ್ದಾರೆ.

2005ರಲ್ಲಿ ಧರ್ಮಗುರು ಹುದ್ದೆಗೇರಿದ ಬೆನೆಡಿಕ್ಟ್ (Benedict) 2013ರಲ್ಲಿ ಪೋಪ್‌ (pope)ಸ್ಥಾನದಿಂದ ಕೆಳಗಿಳಿದಿದ್ದರು. 1000 ವರ್ಷದಲ್ಲಿ ಪೋಪ್‌ ಹುದ್ದೆಗೇರಿದ ಮೊದಲ ಜರ್ಮನ್‌, ಕಳೆದ 600 ವರ್ಷಗಳಲ್ಲಿ ಹುದ್ದೆಯಿಂದ ಕೆಳಗಿಳಿದ ಮೊದಲ ಪೋಪ್‌ ಎಂಬ ದಾಖಲೆಯೂ ಇವರ ಹೆಸರಲ್ಲಿತ್ತು.ಇವರ ಮೂಲ ಹೆಸರು ಜೋಸೆಫ್‌ ರಾಟ್ಸಿಂಗರ್‌ (Joseph Ratzinger) ಆಗಿದ್ದು, 1927ರಲ್ಲಿ ಜರ್ಮನಿಯಲ್ಲಿ (Germany)ಜನಿಸಿದ್ದರು. ಬಳಿಕ ಅವರು ತಮ್ಮ ಹೆಸರನ್ನು ಬೆನೆಡಿಕ್ಟ್ ಎಂದು ಬದಲಾಯಿಸಿಕೊಂಡರು. ಇದರ ಅರ್ಥ ‘ಆಶೀರ್ವದಿಸಲ್ಪಟ್ಟ’ ಎಂದಾಗಿದೆ.

Latest Videos

2013ರಲ್ಲಿ ಭಾರತಕ್ಕೂ ಭೇಟಿ ನೀಡಬೇಕೆಂದು ಬಯಸಿದ ಪೋಪ್‌ ಬಳಿಕ ತಮ್ಮ ಇಳಿ ವಯಸ್ಸಿನ ಕಾರಣದಿಂದಾಗಿ ಭೇಟಿ ರದ್ದು ಮಾಡಿದ್ದರು. ಇವರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ(Prime Minister Narendra Modi), ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi) ಸೇರಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ಪಾದ್ರಿಗಳು, ಕ್ರೈಸ್ತ ಸನ್ಯಾಸಿನಿಯರು ಕೂಡ Porn ವೀಕ್ಷಿಸ್ತಾರೆ, ಅಪಾಯದ ಎಚ್ಚರಿಕೆ ನೀಡಿದ ಪೋಪ್‌!

ಪ್ರಧಾನಿ ಮೋದಿ ಸಂತಾಪ:

‘ಪೋಪ್ ಎಮೆರಿಟಸ್‌ ಬೆನೆಡಿಕ್ಟ್ (Emeritus Benedict)ನಿಧನದ ಸುದ್ದಿಯಿಂದ ದುಃಖಿತನಾಗಿದ್ದೇನೆ. ಅವರು ತಮ್ಮ ಇಡೀ ಜೀವನವನ್ನು ಚರ್ಚ್‌ಗಾಗಿ ಹಾಗೂ ಕ್ರೈಸ್ತನ ಬೋಧನೆಗಳನ್ನು ಜನರಿಗೆ ತಿಳಿಸಲು ಸಮರ್ಪಿಸಿದ್ದರು. ಅವರು ಸಮಾಜಕ್ಕೆ ಸಲ್ಲಿಸಿದ ಅಪ್ರತಿಮ ಸೇವೆಯಿಂದಾಗಿ ಸದಾ ಜನರ ಮನಸ್ಸಿನಲ್ಲಿ ಜೀವಂತವಾಗಿರುತ್ತಾರೆ. ಅವರ ನಿಧನದ ಹಿನ್ನೆಲೆಯಲ್ಲಿ ಶೋಕಿಸುತ್ತಿರುವ ಕೋಟ್ಯಾಂತರ ಜನರಿಗೆ ನನ್ನ ಸಂತಾಪಗಳು ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

 ಪೋಪ್‌ ಬೆನಡಿಕ್ಟ್ ನಿಧನಕ್ಕೆ ಉಡುಪಿ ಬಿಷಪ್‌ ಸಂತಾ

21ನೇ ಶತಮಾನದ ಪ್ರಮುಖ ಹಾಗೂ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಪೋಪ್‌ 16ನೇ ಬೆನೆಡಿಕ್ಟ್ ಅವರ ನಿಧನಕ್ಕೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ ಐಸಾಕ್‌ ಲೋಬೊ (Geralda Isaac Lobo) ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 2005ರಲ್ಲಿ ಪೋಪ್‌ ಆಗಿ ‘ಹದಿನಾರನೇ ಬೆನೆಡಿಕ್ಟ್’ ಎಂಬ ಹೆಸರನ್ನು ಪಡೆದು, 8 ವರ್ಷಗಳ ಕಾಲ ನೂರಾರು ಕೋಟಿ ಕ್ರೈಸ್ತರ ಕಣ್ಮಣಿಯಾದರು. ಅನಾರೋಗ್ಯದಿಂದ 2013ರಲ್ಲಿ ಧರ್ಮಸಭೆಯ 600 ವರ್ಷಗಳ ಚರಿತ್ರೆಯಲ್ಲಿ ಮೊತ್ತಮೊದಲ ಬಾರಿಗೆ ಪೋಪ್‌ ಪದವಿಗೆ ರಾಜೀನಾಮೆಯಿತ್ತು, ವಿಶ್ರಾಂತಿಯ ಜೀವನವನ್ನು ನಡೆಸಿದರು. ದಯಾಮಯ ಭಗವಂತನು ತಮ್ಮನ್ನು ದಿವ್ಯ ಸನ್ನಿಧಿಗೆ ಬರಮಾಡಿಕೊಳ್ಳಲಿ ಎಂದು ಪ್ರಾರ್ಥಿಸುವುದಾಗಿ ಬಿಷಪ್‌ ಹೇಳಿದ್ದಾರೆ.

ಮದುವೆಗೆ ಮೊದಲು ಸೆಕ್ಸ್ ಬೇಡ ಎಂದು ಪೋಪ್ ಹೇಳಿದ್ದೇಕೆ?

ಪೋಪ್‌ ಬೆನೆಡಿಕ್ಟ್-16 ಅವರ ನಿಧನಕ್ಕೆ ಮಂಗಳೂರಿನ ಬಿಷಪ್‌ ರೆ.ಫಾ. ಪೀಟರ್‌ ಪಾಲ್ ಸಲ್ದಾನ ಅವರು ಮಂಗಳೂರು ಧರ್ಮಪ್ರಾಂತ್ಯದ ಸಮಸ್ತ ಕೆಥೋಲಿಕ್‌ ಕ್ರೈಸ್ತರ ಪರವಾಗಿ ಸಂತಾಪ ವ್ಯಕ್ತಪಡಿಸಿದ್ದಾರೆ. ಪೋಪ್‌ ಬೆನೆಡಿಕ್ಟ್ ಅವರ ಪಾರ್ಥಿವ ಶರೀರದ ಅಂತ್ಯವಿಧಿಗಳು ಜ.5ರಂದು ರೋಮ್‌ನ ಸೇಂಟ್‌ ಪೀಟರ್‌ ಸ್ಕ್ವೇರ್‌ನಲ್ಲಿ ಬೆಳಗ್ಗೆ 9.30 ಗಂಟೆಗೆ (ಭಾರತೀಯ ಕಾಲ ಮಾನ ಮಧ್ಯಾಹ್ನ 2 ಗಂಟೆ) ನಡೆಯಲಿದೆ. ಭಾನುವಾರ ಆರಾಧನೆಯ ಸಂದರ್ಭದಲ್ಲಿ ದಿವಂಗತ ಪೋಪ್‌ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು. ನಾವು ಮಹಾನ್‌ ವ್ಯಕ್ತಿಯನ್ನು ಕಳೆದು ಕೊಂಡಿದ್ದೇವೆ ಎಂದು ಬಿಷಪ್‌ ಪೀಟರ್ ಪಾಲ್ ಸಲ್ದಾನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!