ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮೆಟಾ ಸಿಇಒ ತಮ್ಮ ಮಗಳ ಫೋಟೋಗಳನ್ನು ಹಂಚಿಕೊಂಡಿದ್ದು ಮತ್ತು ಈ ಪೋಸ್ಟ್‌ಗೆ “ಜಗತ್ತಿಗೆ ಸ್ವಾಗತ, ಔರೆಲಿಯಾ ಚಾನ್ ಜುಕರ್‌ಬರ್ಗ್'' ಎಂದಿದ್ದಾರೆ.
ನವದೆಹಲಿ (ಮಾರ್ಚ್ 25, 2023): ಸಾವಿರಾರು ಉದ್ಯೋಗಿಗಳನ್ನು ಲೇ ಆಫ್ ಮಾಡುತ್ತಿರುವ ಕಾರಣ ಫೇಸ್‌ಬುಕ್ ಸಾಕಷ್ಟು ಸುದ್ದಿಯಲ್ಲಿದೆ. ಈ ನಡುವೆ ಫೇಸ್‌ಬುಕ್‌ನ ಸಹ-ಸಂಸ್ಥಾಪಕ ಮತ್ತು ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಪತ್ನಿ ಡಾ. ಪ್ರಿಸಿಲ್ಲಾ ಚಾನ್ ಇತ್ತೀಚೆಗೆ ತಮ್ಮ ಮೂರನೇ ಮಗುವನ್ನು ಸ್ವಾಗತಿಸಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ ಇನ್ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಮಾರ್ಕ್ ಜುಕರ್‌ಬರ್ಗ್ ತಮ್ಮ ಮೂರನೇ ಮಗಳು ಔರೆಲಿಯಾ ಚಾನ್ ಜನನವಾಗಿರುವುದನ್ನು ಘೋಷಿಸಿದ್ದು, ಈ ಫೋಟೋ ಸಾಕಷ್ಟು ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮೆಟಾ ಸಿಇಒ ತಮ್ಮ ಮಗಳ ಫೋಟೋಗಳನ್ನು ಹಂಚಿಕೊಂಡಿದ್ದು ಮತ್ತು ಈ ಪೋಸ್ಟ್‌ಗೆ “ಜಗತ್ತಿಗೆ ಸ್ವಾಗತ, ಔರೆಲಿಯಾ ಚಾನ್ ಜುಕರ್‌ಬರ್ಗ್! ನೀನು ಪುಟ್ಟ ಆಶೀರ್ವಾದ’’ ಎಂದಿದ್ದಾರೆ. ಫೋಟೋವೊಂದರಲ್ಲಿ ತನ್ನ ಶಿಶುವನ್ನು ನೋಡಿ ಮಾರ್ಕ್ ಜುಕರ್‌ಬರ್ಗ್ ನಗುತ್ತಿರುವುದನ್ನು ಕಾಣಬಹುದು. ನಂತರದ ಫೋಟೋದಲ್ಲಿ, ಮಿಸಸ್ ಪ್ರಿಸಿಲ್ಲಾ ಚಾನ್ ಮಲಗಿದ್ದು, ತನ್ನ ಪುಟ್ಟ ಹೆಣ್ಣು ಮಗುವನ್ನು ತನ್ನ ಬಳಿ ಮಲಗಿಸಿಕೊಂಡಿದ್ದಾರೆ. ಹಲವು ನೆಟ್ಟಿಗರು ಅಭಿನಂದನೆ ಮೂಲಕ ಈ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ.
ಇದನ್ನು ಓದಿ: ಫೇಸ್‌ಬುಕ್, ಇನ್ಸ್ಟಾ ಬ್ಲೂ ಬ್ಯಾಡ್ಜ್‌ಗೂ ಶುಲ್ಕ: ಚಂದಾ ಪಾವತಿಸಿದವರಿಗೆ ಖಾತೆ ನಕಲು ತಡೆ ಸೇರಿ ಹಲವು ಸವಲತ್ತು..!
ಮಾರ್ಕ್ ಜುಕರ್‌ಬರ್ಗ್ ಮತ್ತು ಪ್ರಿಸಿಲ್ಲಾ ಚಾನ್‌ಗೆ 5 ವರ್ಷದ ಆಗಸ್ಟ್, ಮತ್ತು 7 ವರ್ಷದ ಮ್ಯಾಕ್ಸಿಮಾ ("ಮ್ಯಾಕ್ಸ್,") ಎಂಬ ಇಬ್ಬರು ಹೆಣ್ಣು ಮಕ್ಕಳು ಈಗಾಗಲೇ ಇದ್ದಾರೆ. ಈಗ ಔರೆಲಿಯಾ ಚಾನ್ ಮೂರನೆಯ ಹೆಣ್ಣು ಮಗುವಾಗಿದ್ದಾರೆ. ಇನ್ನು, ಪ್ರಿಸಿಲ್ಲಾ ಚಾನ್ ಪ್ರೆಗ್ನೆಂಟ್ ಆಗಿದ್ದಾಗಲೇ, ಮೂರನೇ ಹೆಣ್ಣು ಮಗು ಹುಟ್ಟುತ್ತಿರುವ ಬಗ್ಗೆ ಮಾರ್ಕ್ ಜುಕರ್‌ಬರ್ಗ್ ಘೋಷಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಮಾರ್ಕ್ ಜುಕರ್‌ಬರ್ಗ್, ಮ್ಯಾಕ್ಸ್ ಮತ್ತು ಆಗಸ್ಟ್‌ಗೆ ನೂತನ ಸಹೋದರಿ ಆಗಮಿಸುತ್ತಿದ್ದಾರೆ ಎಂದು ದಂಪತಿ ಸೆಪ್ಟೆಂಬರ್ 2022 ರಲ್ಲೇ ಪ್ರಕಟಿಸಿದ್ದರು.
ಈ ಫೋಟೋದಲ್ಲಿ, ಪ್ರಿಸಿಲ್ಲಾ ಮತ್ತು ಜುಕರ್‌ಬರ್ಗ್, ಪ್ರಿಸಿಲ್ಲಾ ಅವರ ಗರ್ಭದ ಮೇಲೆ ಕೈ ಇಟ್ಟುಕೊಂಡಿದ್ದು, ಜತೆಗೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದರು. ಈ ಪೋಸ್ಟ್ ಹಲವು ಬಳಕೆದಾರರ ಗಮನ ಸೆಳೆದಿದ್ದು, ಹಲವು ನೆಟ್ಟಿಗರು ಅಭಿನಂದನೆ ತಿಳಿಸಿದ್ದರು. ಅಲ್ಲದೆ, ಕೆಲವು ನೆಟ್ಟಿಗರು ತುಂಬಾ ಕಷ್ಟಪಡುತ್ತಿದ್ದಿರಾ ಎಂದೂ ಕಾಲೆಳೆದಿದ್ದರು.
ಇದನ್ನೂ ಓದಿ: ಟ್ವಿಟ್ಟರ್ ಆಯ್ತು ಈಗ Meta ಕಂಪನಿಯಿಂದ ಸಾವಿರಾರು ಉದ್ಯೋಗಿಗಳ ವಜಾ..!
ಮಾರ್ಕ್ ಜುಕರ್‌ಬರ್ಗ್ ಮತ್ತು ಡಾ. ಪ್ರಿಸ್ಸಿಲ್ಲಾ ಚಾನ್ 2003 ರಲ್ಲಿ ಪಾರ್ಟಿಗಾಗಿ ಕ್ಯೂನಲ್ಲಿ ಕಾಯುತ್ತಿರುವಾಗ ಇವರು ಮೊದಲ ಬಾರಿಗೆ ಭೇಟಿಯಾಗಿದ್ದು, ವಿಶಿಷ್ಟವಾದ ಪ್ರೇಮಕಥೆಯನ್ನು ಹೊಂದಿದ್ದಾರೆ. ಆ ಸಮಯದಲ್ಲಿ ಮಾರ್ಕ್ ಜುಕರ್‌ಬರ್ಗ್ ಎರಡನೇ ವರ್ಷದ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದು, ಪ್ರಿಸಿಲ್ಲಾ ಚಾನ್ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದರು. 2010 ರಲ್ಲಿ, ಅವರು ಲಿವಿಂಗ್ ಟುಗೆದರ್‌ನಲ್ಲಿದ್ದರು ಮತ್ತು 2012 ರಲ್ಲಿ ಅವರು ವಿವಾಹವಾದರು.
ಪ್ರಿಸಿಲ್ಲಾ ಚಾನ್ ಅವರ ಮೆಡಿಕಲ್ ಗ್ರ್ಯಾಜುಯೇಷನ್ ಪಾರ್ಟಿ ಎಂದು ಅವರ ಅತಿಥಿಗಳು ಭಾವಿಸಿದ್ದು, ಆದರೆ ಅವರು ಆ ಪಾರ್ಟಿಯಲ್ಲೇ ಮಾರ್ಕ್ ಜುಕರ್‌ಬರ್ಗ್ ಅವರನ್ನು ಮದುವೆಯಾಗಿದ್ದರು. ಈ ಹಿನ್ನೆಲೆ ಅವರು ಮದುವೆಯಾಗಿದ್ದಕ್ಕೆ ಅತಿಥಿಗಳು ತೀವ್ರ ಆಶ್ಚರ್ಯಚಕಿತರಾಗಿದ್ದರು.
ಇದನ್ನೂ ಓದಿ: ಮಾಯವಾಗುತ್ತಿದ್ದಾರೆ Facebook ಹಿಂಬಾಲಕರು: ಮಾರ್ಕ್ ಜುಕರ್‌ಬರ್ಗ್‌ಗೂ 10 ಸಾವಿರ ಫಾಲೋವರ್ಸ್ ಇಲ್ಲ..!