
ಬಾಗ್ದಾದ್(ಜ.08): ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ನಡೆಸಿರುವ ಕ್ಷಿಪಣಿ ದಾಳಿಗೆ ಇರಾಕ್ ಪ್ರತಿಕ್ರಿಯೆ ನೀಡಿದೆ. ದಾಳಿಯ ಕುರಿತು ಇರನ್ ಯಾವುದೇ ಅಧಿಕೃತ ಸಂದೇಶ ಕಳುಹಿಸಿರಲಿಲ್ಲ ಎಂದು ಇರಾಕ್ ಸ್ಪಷ್ಟಪಡಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಇರಾಕ್ ಪ್ರಧಾನಿ ಆದಿಲ್ ಅಬ್ದುಲ್ ಮಹ್ದಿ ಕಚೇರಿಯ ವಕ್ತಾರ, ಇರಾನ್ ಕೇವಲ ದಾಳಿಯ ಕುರಿತು ಮೌಖಿಕ ಸಂದೇಶ ಕಳುಹಿಸಿತ್ತು ಎಂದು ಹೇಳಿದ್ದಾರೆ.
ಭಾರೀ ಹೊಡೆತ ಕಾದಿದೆ: ಇರಾನ್‌ಗೆ ಇಸ್ರೇಲ್ ಎಚ್ಚರಿಕೆಯ ಸಂದೇಶ!
ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಕೇವಲ ಮೌಖಿಕ ಸಂದೇಶ ಕಳುಹಿಸಿತ್ತು. ಆದರೆ ಅಧಿಕೃತ ಸಂದೇಶ ಕಳುಹಿಸಿರಲಿಲ್ಲ ಎಂದು ಇರಾಕ್ ಸ್ಪಷ್ಟಪಡಿಸಿದೆ.
ಇದೇ ವೇಳೆ ಇರಾನ್ ದಾಳಿಯನ್ನು ಖಂಡಿಸಿರುವ ಇರಾಕ್, ತನ್ನ ಸಾರ್ವಭೌಮ ನೆಲದ ಮೇಲೆ ನಡೆಯುವ ಯಾವುದೇ ವಿದೇಶಿ ದಾಳಿಯನ್ನು ಖಂಡಿಸುವುದಾಗಿ ಹೇಳಿದೆ.
ಇರಾನ್ ಮಿಸೈಲ್ ದಾಳಿಗೆ 80 'ಅಮೆರಿಕನ್ ಭಯೋತ್ಪಾದಕರ' ಸಾವು?: ಏನಾಗಿಲ್ಲ ಎಂದ ಟ್ರಂಪ್!
ಇರಾನ್ ಸೇನೆಯ ಉನ್ನತ ಸೇನಾಧಿಕಾರಿ ಖಾಸೀಂ ಸುಲೈಮನಿ ಹತ್ಯೆಗೆ ಪ್ರತಿಕಾರವಾಗಿ ಇರಾಕ್‌ನ ಐನ್-ಅಲ್-ಅಸದ್‌ನಲ್ಲಿರುವ ಅಮೆರಿಕದ ವಾಯುನೆಲೆ ಮೇಲೆ ಇರಾನ್ ದಾಳಿ ಮಾಡಿತ್ತು.
ಇರಾನ್ ಕ್ಷಿಪಣಿ ದಾಳಿಯನ್ನು ಅಮೆರಿಕ, ಇಂಗ್ಲೆಂಡ್, ಜರ್ಮನಿ ಹಾಗೂ ಇಸ್ರೇಲ್ ರಾಷ್ಟ್ರಗಳು ತೀವ್ರವಾಗಿ ಖಂಡಿಸಿದ್ದು, ಈ ಕೂಡಲೇ ದಾಳಿಗಳನ್ನು ನಿಲ್ಲಿಸುವಂತೆ ಎಚ್ಚರಿಕೆಯ ಸಂದೇಶ ನೀಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ