
ಜೆರುಸಲೇಂ(ಜ.08): ಅತ್ತ ಇರಾನ್-ಅಮೆರಿಕ ನಡುವಿನ ಯುದ್ಧೋನ್ಮಾದ ತಾರಕಕ್ಕೇರಿದೆ. ಇತ್ತ ಅಮೆರಿಕ ಬೆಂಬಲಕ್ಕೆ ನಿಂತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು, ಇರಾನ್‌ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಇರಾನ್ ಒಂದು ವೇಳೆ ಇಸ್ರೇಲ್ ಮೇಲೆ ದಂಡೆತ್ತಿ ಬಂದರೆ, ಕಂಡುಕೇಳರಿಯದ ಹೊಡೆತ ಬೀಳುತ್ತದೆ ಎಂದು ನೆತನ್ಯಾಹು ಇರಾನ್‌ಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಮಧ್ಯಪ್ರಾಚ್ಯಕ್ಕೆ ಹೋದವರಿಗೆ, ಹೋಗುವವರಿಗೆ ವಿದೇಶಾಂಗ ಇಲಾಖೆ ಸಲಹೆ!
ಇರಾಕ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದ ಬೆನ್ನಲ್ಲೇ, ಅಮೆರಿಕದ ಮಿತ್ರ ರಾಷ್ಟ್ರ ಇಸ್ರೇಲ್ ಮೇಲೂ ಇರಾನ್ ದಾಳಿ ಮಾಡಲಿದೆ ಎಂಬ ಗುಮಾನಿ ಎದ್ದಿದೆ.
ಇದೇ ವಿಚಾರವಾಗಿ ಇರಾನ್ ವಿರುದ್ಧ ಕಿಡಿಕಾರಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು, ಇಸ್ರೇಲ್ ಮೇಲೆ ದಂಡೆತ್ತಿದರೆ ಕಂಡುಕೇಳರಿಯದ ಹೊಡೆತ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಅವ್ರದ್ದು ಯುದ್ಧ ಆರಂಭಿಸುವ ಬಯಕೆ, ನಮ್ದು ಮುಗಿಸುವ ಬಯಕೆ: ಎಸ್ಪರ್!
ಇಸ್ರೇಲ್ ಪ್ರಾದೇಶಿಕ ಶಾಂತಿ ಬಯಸುವ ರಾಷ್ಟ್ರವಾಗಿದ್ದು, ಯಾವುದೇ ದೇಶ ಇಸ್ರೇಲ್ ಮೇಲೆ ದಾಳಿ ಮಾಡುವ ದುಸ್ಸಾಹಸಕ್ಕೆ ಕೈಹಾಕಿದರೆ ಕ್ರಮ ಅನಿವಾರ್ಯ ಎಂದು ನೆತಾನ್ಯಾಹು ಸೂಚ್ಯವಾಗಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ