ವಕಾ ವಕಾ ಮ್ಯಾಂಗೋ : ವಿಭಿನ್ನವಾಗಿ ಮಾವು ಮಾರುವ ಶಕೀರಾ ಫ್ಯಾನ್‌ ಫುಲ್ ವೈರಲ್‌

By Anusha KbFirst Published Jun 19, 2023, 2:59 PM IST
Highlights

ಪಾಪ್‌ ಸಿಂಗರ್ ಶಕೀರಾ ಯಾರಿಗೆ ಗೊತ್ತಿಲ್ಲ ಹೇಳಿ ಫುಟ್ಬಾಲ್ ಪ್ರೇಮಿಗಳಿಗಾಗಿ ಅವರು ಹಾಡಿದ ವಕಾ ವಕಾ ಓ ಓ ಹಾಡು ಅವರಿಗಿಂತಲೂ ಫೇಮಸ್‌ ಈ ಹಾಡನ್ನು ಗುನುಗದವರೇ ಇಲ್ಲ.

ಕರಾಚಿ: ಪಾಪ್‌ ಸಿಂಗರ್ ಶಕೀರಾ ಯಾರಿಗೆ ಗೊತ್ತಿಲ್ಲ ಹೇಳಿ ಫುಟ್ಬಾಲ್ ಪ್ರೇಮಿಗಳಿಗಾಗಿ ಅವರು ಹಾಡಿದ ವಕಾ ವಕಾ ಓ ಓ ಹಾಡು ಅವರಿಗಿಂತಲೂ ಫೇಮಸ್‌ ಈ ಹಾಡನ್ನು ಗುನುಗದವರೇ ಇಲ್ಲ. ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಶಕೀರಾಗೆ ಪಾಕಿಸ್ತಾನದಲ್ಲೂ ಒಬ್ಬ ಮ್ಯಾಂಗೋ ವ್ಯಾಪಾರಿ ಅಭಿಮಾನಿ ಇದ್ದು, ಆತ ಮಾವಿನ ಹಣ್ಣು ಮಾರುವ ಸ್ಟೈಲ್ ಈಗ ಸಖತ್ ಫೇಮಸ್ ಆಗಿದೆ. 

ಬೀದಿಯಲ್ಲಿ ಹಣ್ಣು ತರಕಾರಿ ಮಾರಾಟ ಮಾಡುವ ವ್ಯಾಪಾರಿಗಳು ಗ್ರಾಹಕರನ್ನು ಸೆಳೆಯಲು ವಿಭಿನ್ನ ತಂತ್ರಗಳನ್ನು ಬಳಸುತ್ತಾರೆ. ಕೆಲದಿನಗಳ ಹಿಂದೆ ಬಾಲಕನೋರ್ವ ಡಾನ್ಸ್ ಮಾಡುತ್ತಾ ಗ್ರಾಹಕರನ್ನು ಸೆಳೆಯುತ್ತಿರುವ ವೀಡಿಯೋ ವೈರಲ್ ಆಗಿತ್ತು. ಅದೇ ರೀತಿ ತಮ್ಮ ವಿಭಿನ್ನವಾದ ಶೈಲಿಯಿಂದ ಕಡ್ಲೆಕಾಯಿ ಮಾರಾಟ ಮಾಡಿ ಇಂದು ಸೆಲೆಬ್ರಿಟಿ ಎನಿಸಿರುವ ಪಶ್ಚಿಮ ಬಂಗಾಳದ ಕಚ್ಚ ಬಾದಾಮ್ ಹಾಡುಗಾರ ಭುವನ್ ಬದ್ಯಕರ್ ಬಗ್ಗೆ ಹೆಚ್ಚೇನು ಹೇಳ ಬೇಕಿಲ್ಲ, ಸೋಶಿಯಲ್‌ ಮೀಡಿಯಾದ ಇಂದಿನ ಯುಗದಲ್ಲಿ ವಿಭಿನ್ನ ಎನಿಸಿದ್ದೆಲ್ಲವೂ ಸಖತ್ ಫೇಮಸ್ ಆಗ್ತಿದೆ. ಹಾಗೆಯೇ ಈಗ ಪಾಕಿಸ್ತಾನದ ಮಾವು ಮಾರಾಟಗಾರನೋರ್ವ ಇಂಟರ್‌ನೆಟ್‌ನಲ್ಲಿ ಸಖತ್ ಫೇಮಸ್ ಆಗಿದ್ದಾನೆ.

ಅಬ್ಬಬ್ಬಾ..ಬರೋಬ್ಬರಿ 12 ಕೆಜಿ ತೂಕದ ಸಮೋಸಾ, 30 ನಿಮಿಷದಲ್ಲಿ ತಿನ್ನಿ, ಬಂಪರ್ ಬಹುಮಾನ ಗೆಲ್ಲಿ

ಮಾವಿನ ಹಣ್ಣು ಮಾರುವ ವಿಭಿನ್ನ ಶೈಲಿಗೆ ಈ ತರುಣ ಫೇಮಸ್ ಆಗಿದ್ದು, ಆತ ಗ್ರಾಹಕರನ್ನು ಸೆಳೆಯುವ ರೀತಿ ನೋಡಿ ನಿಮಗೆ ಶಕೀರಾ ನೆನಪಾಗದೇ ಇರಲ್ಲ, ಹೌದು ಈತ ಶಕೀರಾ ಹಾಡಿದ ವಕಾ ವಕಾ ದಿ ಟೈಮ್ ಫಾರ್ ಸೌತ್ ಆಫ್ರಿಕಾ ಹಾಡನ್ನು ಅದೇ ಟ್ಯೂನ್ ರೀತಿ ಬಳಸಿಕೊಂಡು ಮಾವಿನ ಹಣ್ಣು ಮಾರುತ್ತಿದ್ದು, ಈ ವೀಡಿಯೋವನ್ನು ಮೂರು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಆತನ ಮಾವಿನ ಹಣ್ಣು ಸೇಲ್ ಆಗುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಆತನ ವೀಡಿಯೋ ಮಾತ್ರ ಇಂಟರ್‌ನೆಟ್‌ನಲ್ಲಿ ಫುಲ್ ಸಂಚಲನ ಸೃಷ್ಟಿಸಿದೆ. ಈತ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಮಾವಿನ ಹಣ್ಣು ಮಾರುತ್ತಾನೆ ಎಂದು ತಿಳಿದು ಬಂದಿದೆ.

hamzachoudharyofficial ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್ ಆಗಿದ್ದು, ವೀಡಿಯೋ ನೋಡಿದ ಜನ ಹಲವು ಕಾಮೆಂಟ್‌ಗಳನ್ನು ಮಾಡಿದ್ದು ಆತನ ಟ್ಯಾಲೆಂಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಈತನನ್ನು ಮಲ್ಟಿವರ್ಸೆಯ ಶಕೀರಾ ಎಂದು ಕರೆದರೆ, ಮತ್ತೆ ಕೆಲವರು ಈತನನ್ನು ಪಾಕಿಸ್ತಾನದ ಶಕೀರಾ ಎಂದು ಕರೆದಿದ್ದಾರೆ.  ಈತ ಗಾಯಕನಾಗಬೇಕಿದ್ದವ ತಪ್ಪಿ ಮಾವು ಮಾರಾಟಗಾರನಾಗಿದ್ದಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದು ಗಂಡು ಶಕೀರಾ ಎಂದರೆ, ಮತ್ತೆ ಕೆಲವರು ಶಕೀರಾ ಇದನ್ನು ನೋಡಿ ಮೂಲೆಯಲ್ಲಿ ನಿಂತು ಅಳುತ್ತಿದ್ದಾಳೆ ಎಂದು ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಮಾವವಿನ ಹಣ್ಣು ಮಾರಾಟಗಾರನ ಶಕೀರಾ ಸ್ಟೈಲ್‌ಗೆ ನೆಟ್ಟಿಗರು ಫಿದಾ ಆಗಿರುವುದಂತೂ ನಿಜ.

ಬನ್ನಿ ಬನ್ನಿ ಬಿರಿಯಾನಿ ಟೀ ಕುಡೀರಿ, ಎಗ್‌ ಚಿಲ್ಲಿ ಚಹಾನೂ ಸೂಪರ್!

ಇನ್ನು ಬೀದಿ ಬದಿ ವ್ಯಾಪಾರಿಗಳು ತಮ್ಮದೇ ಆದಂತಹ ವಿಭಿನ್ನ ಮಾರಾಟ ಶೈಲಿಯನ್ನು ಹೊಂದಿರುತ್ತಾರೆ. ಅವರ ವಿಭಿನ್ನತೆಯೇ ಅವರತ್ತ ಗ್ರಾಹಕರು ಸೆಳೆಯುವಂತೆ ಮಾಡುತ್ತದೆ. ವರ್ಷದ ಹಿಂದೆ ಪಶ್ಚಿಮ ಬಂಗಾಳದ ಭುವನ್ ಬದ್ಯಕರ್ ಕೂಡ ತಮ್ಮ ವಿಭಿನ್ನ ಶೈಲಿಯಿಂದ ಕಡಲೆಕಾಯಿ ಮಾರುವ ಕಾರಣಕ್ಕೆ ಸಖತ್ ಫೇಮಸ್ ಆದರು. ಕಚ್ಚಾ ಬಾದಾಮ್ ಕಚ್ಚಾ ಬಾದಮ್‌ ಎಂದು ಸುಂದರವಾಗಿ ಹಾಡುತ್ತಾ ಬೀದಿ ಬದಿಯಲ್ಲಿ ಕಡಲೆಕಾಯಿ ಮಾರಾಟ ಮಾಡುತ್ತಿದ್ದ ಅವರನ್ನು ಯಾರೋ ವೀಡಿಯೋ ಮಾಡಿ ಇಂಟರ್‌ನೆಟ್‌ನಲ್ಲಿ ಹರಿ ಬಿಟ್ಟಿದ್ದರು. ಅದು ಎಷ್ಟು ಫೇಮಸ್ ಆಯ್ತು ಎಂದರೆ ಸಾಮಾನ್ಯ ಬೀದಿ ಬದಿ ವ್ಯಾಪಾರಿ ಎನಿಸಿದದ್ದ ಭುವನ್‌ಗೆ ಸೆಲೆಬ್ರಿಟಿ ಪಟ್ಟ ನೀಡಿತ್ತು. ಜೊತೆಗೆ ಸಿಕ್ಕ ಸಿಕ್ಕವರೆಲ್ಲಾ ಈ ಹಾಡಿಗೆ ರೀಲ್ಸ್ ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಾ ಈ ಹಾಡನ್ನು ಮತ್ತಷ್ಟು  ಫೇಮಸ್ ಮಾಡಿದರು, ಜೊತೆಗೆ ಮ್ಯೂಸಿಕ್ ಸಂಸ್ಥೆಯೊಂದು ಇದೇ ಹಾಡಿನ ರ್ಯಾಪ್ ಸಾಂಗ್ ಮಾಡಿ ಸಾಕಷ್ಟು ದುಡ್ಡು ಮಾಡಿತ್ತು. ಜೊತೆಗೆ ಸ್ವಲ್ಪ ಹಣವನ್ನು ಭುವನ್‌ಗೂ ನೀಡಿತ್ತು. ಒಟ್ಟಿನಲ್ಲಿ ಇದು ಸೋಶಿಯಲ್ ಮೀಡಿಯ ಯುಗವಾಗಿದ್ದು, ಯಾರು ಯಾವಾಗ ಹೇಗೆ ಫೇಮಸ್ ಆಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.

https://www.instagram.com/p/CtalAQro01x/

click me!