Vladimir Putin: ಸಂಭಾವ್ಯ ದಾಳಿಯಿಂದ ರಕ್ಷಣೆಗೆ ಪುಟಿನ್‌ ಬಾಡಿ ಡಬಲ್‌ ನೇಮಕ

Published : Apr 05, 2022, 03:00 AM IST
Vladimir Putin: ಸಂಭಾವ್ಯ ದಾಳಿಯಿಂದ ರಕ್ಷಣೆಗೆ ಪುಟಿನ್‌ ಬಾಡಿ ಡಬಲ್‌ ನೇಮಕ

ಸಾರಾಂಶ

ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ತಮ್ಮ ಮೇಲಾಗುವ ಸಂಭಾವ್ಯ ದಾಳಿಯಿಂದ ತಪ್ಪಿಸಿಕೊಳ್ಳಲು ತಮ್ಮ ಮುಖಚರ್ಯೆ ಹೋಲುವ ವ್ಯಕ್ತಿಯೊಬ್ಬನನ್ನು ನೇಮಿಸಿಕೊಂಡಿದ್ದಾರೆ ಎನ್ನಲಾಗಿದೆ. 

ಮಾಸ್ಕೋ (ಏ.05): ರಷ್ಯಾದ (Russia) ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ತಮ್ಮ ಮೇಲಾಗುವ ಸಂಭಾವ್ಯ ದಾಳಿಯಿಂದ ತಪ್ಪಿಸಿಕೊಳ್ಳಲು ತಮ್ಮ ಮುಖಚರ್ಯೆ ಹೋಲುವ ವ್ಯಕ್ತಿಯೊಬ್ಬನನ್ನು ನೇಮಿಸಿಕೊಂಡಿದ್ದಾರೆ ಎನ್ನಲಾಗಿದೆ. ಪುಟಿನ್‌ರನ್ನೇ ಹೋಲುವ ವ್ಯಕ್ತಿಯು ಮಾಸ್ಕೋದಲ್ಲಿರುವ ರಷ್ಯಾದ ಅಧ್ಯಕ್ಷರ ಮನೆಯಾದ ‘ಪುಟಿನ್‌ ಪ್ಯಾಲೇಸ್‌’ನಲ್ಲೇ (Putin Palace) ವಾಸವಾಗಿದ್ದಾನೆ. ಇವನು ಪುಟಿನ್‌ರಂತೇ ಕಾಣುತ್ತಾನೆ ಮಾತ್ರವಲ್ಲದೇ ಅವರಂತೇ ನಡೆದಾಡುವ ತರಬೇತಿಯನ್ನೂ (Training) ಈತನಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಉಕ್ರೇನಿನ (Ukraine) ಮೇಲೆ ಪುಟಿನ್‌ ಯುದ್ಧ ಘೋಷಿಸಿದ್ದಕ್ಕಾಗಿ ರಷ್ಯಾದ ಜನರೂ ಆತನನ್ನು ವಿರೋಧಿಸಿದ್ದರು. ಯುದ್ಧ ಘೋಷಿಸಿ ತಿಂಗಳು ಕಳೆದರೂ ಇನ್ನೂ ಸಂಪೂರ್ಣವಾಗಿ ಉಕ್ರೇನನ್ನು ವಶಪಡಿಸಿಕೊಳ್ಳಲು ಅಸಮರ್ಥವಾದ ಹಿನ್ನೆಲೆಯಲ್ಲಿ ಪುಟಿನ್‌ ರಷ್ಯಾದ 8 ಪ್ರಮುಖ ಜನರಲ್‌ರನ್ನು ಅಮಾನತುಗೊಳಿಸಿದ್ದರು. ಈಗಾಗಲೇ 15,000ಕ್ಕೂ ಹೆಚ್ಚು ರಷ್ಯಾದ ಸೈನಿಕರು ಯುದ್ಧದಲ್ಲಿ ಬಲಿಯಾಗಿದ್ದಾರೆ. ರಷ್ಯಾದ ಹಲವಾರು ಹಿರಿಯ ಸೇನಾಧಿಕಾರಿಗಳು ಹತ್ಯೆಯಾದ ನಂತರ ಸೇನೆ ಖಿನ್ನತೆಗೊಳಗಾಗಿದೆ. ಹೀಗಾಗಿ ಸೇನೆಯೇ ಅವರ ವಿರುದ್ಧ ಆಂತರಿಕ ದಂಗೆ ಹೂಡಬಹುದು ಎಂಬ ಶಂಕೆಯಿದೆ. 

ನಮ್ಮ ಅಸ್ತಿತ್ವಕ್ಕೆ ಬೆದರಿಕೆ ಬಂದರೆ ಅಣ್ವಸ್ತ್ರ ಪ್ರಯೋಗ: ರಷ್ಯಾ

ಈ ಹಿನ್ನೆಲೆಯಲ್ಲಿ ಪುಟಿನ್‌ ಜೀವಕ್ಕೆ ಬೆದರಿಕೆಯಿರುವುದರಿಂದ ಅವರು ಬಾಡಿ ಡಬಲ್‌ನನ್ನು ನೇಮಿಸಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ರಷ್ಯಾದ ನಾಯಕರು ತಮ್ಮನ್ನೇ ಹೋಲುವ ಬಾಡಿ ಡಬಲ್‌ನನ್ನು ನೇಮಿಸಿಕೊಳ್ಳುವುದು ಇದೇ ಮೊದಲಲ್ಲ. ರಷ್ಯಾದ ನಾಯಕ ಜೋಸೆಫ್‌ ಸ್ಟಾಲಿನ್‌ ಕೂಡಾ 4 ಬಾಡಿ ಡಬಲ್‌ ನೇಮಿಸಿಕೊಂಡಿದ್ದರು. ಚೆಚೆನ್ಯಾ ಬಂಡುಕೋರರ ಆಕ್ರಮಣದ ಸಮಯದಲ್ಲಿ ತಮ್ಮ ವೈಯಕ್ತಿಕ ರಕ್ಷಣೆಗಾಗಿ ಪುಟಿನ್‌ ತಾವು ಬಾಡಿ ಡಬಲ್‌ ನೇಮಿಸಿಕೊಂಡಿರುವುದಾಗಿ ಹೇಳಿದ್ದರು.

ಲಾವ್ರೊವ್ ಮೂಲಕ ಪ್ರಧಾನಿ ಮೋದಿ ಸಂದೇಶ ರವಾನಿಸಿದ ಪುಟಿನ್: ಭಾರತಕ್ಕೆ ಆಗಮಿಸಿರುವ ರಷ್ಯಾ ವಿದೇಶಾಂಕ ಸಚಿವ ಸರ್ಗೇಯ್ ಲಾವ್ರೋವ್ ಮಹತ್ವದ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿಗೆ ರವಾನಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವೈಯುಕ್ತಿಕವಾಗಿ ತಮ್ಮಲ್ಲಿ ಹೇಳಿರುವ ಹಾಗೂ ಇದನ್ನು ಪ್ರಧಾನಿ ನರೇಂದ್ರ ಮೋದಿಗೆ ತಲುಪಿಸಲು ಹೇಳಿರುವ ಸಂದೇಶವನ್ನು ಲಾವ್ರೋವ್ ರವಾನಿಸಿದ್ದಾರೆ. ಈ ಮೂಲಕ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಒಪ್ಪಂದ ಮಾತುಕತೆ ಆರಂಭಗೊಂಡಿದೆ. ಭಾರತದ ವಿದೇಶಾಂಗ ಸಚಿವ ಜೈಶಂಕರ್ ಜೊತೆ ದ್ವಿಪಕ್ಷೀಯ ಒಪ್ಪಂದ, ಸಹಕಾರ ಕುರಿತು ಮಾತುಕತೆ ಆರಂಭಿಸಿದ ಸರ್ಗೇಯ್ ಲಾವ್ರೋವ್, ಪುಟಿನ್ ಶುಭಾಶಯ ಮೋದಿಗೆ ತಳಿಸಲು ಸೂಚಿಸಿದ್ದಾರೆ. 

Ukraine Crisis 34 ದಿನಗಳ ಯುದ್ಧದ ಬಳಿಕ ಮಹತ್ವದ ತಿರುವು, ದಾಳಿ ಕಡಿತಕ್ಕೆ ರಷ್ಯಾ ಒಪ್ಪಿಗೆ!

ವೈಯುಕ್ತಿಕವಾಗಿ ಈ ಸಂದೇಶವನ್ನು ಮೋದಿಯವರಿಗೆ ತಲುಪಿಸಲು ಹೇಳಿದ್ದಾರೆ ಎಂದು ಮಾತು ಆರಂಭಿಸಿದ್ದಾರೆ. ಪ್ರಧಾನಿ ಮೋದಿ ಹಾಗೂ ಪುಟಿನ್ ಸಂಪರ್ಕದಲ್ಲಿದ್ದಾರೆ. ಇಂದಿನ ಮಾತುಕತೆ ಕುರಿತು ರಷ್ಯಾ ಅಧ್ಯಕ್ಷರಿಗೆ ವರದಿ ನೀಡುತ್ತೇನೆ ಎಂದು ಲಾವ್ರೋವ್ ಹೇಳಿದ್ದಾರೆ. ಯುದ್ಧದ ವೇಳೆ ಭಾರತದ ನಿಲುವಿಗೆ ಲಾವ್ರೋವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಭಾರತ ಮಾತುಕತೆ ಮೂಲಕ ಶಾಂತಿಯುತವಾಗಿ ಸಮಸ್ಯೆ ಬಗೆ ಹರಿಸಲು ಸಲಹೆ ನೀಡಿದೆ. ಇದೇ ವೇಳೆ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ರಷ್ಯಾವನ್ನು ಖಂಡಿಸುವ ಎಲ್ಲಾ ನಿರ್ಣಯಗಳಿಂದ ಭಾರತ ದೂರ ಉಳಿದಿತ್ತು. ಭಾರತದ ನಡೆಯನ್ನು ರಷ್ಯಾ ಅಧ್ಯಕ್ಷರೂ ಸ್ವಾಗತಿಸಿದ್ದರು. ಭಾರತ ಹಾಗೂ ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ ಎಂದು ಲಾವ್ರೋವ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ