ಇದೇನಿದು? ಮಾನಿಟರಿಂಗ್‌ ಕ್ಯಾಮರಾವನ್ನೇ ಮತ್ತೆ ಮತ್ತೆ ಕುತೂಹಲದಿಂದ ನೋಡುವ ಗೂಬೆ

Published : Apr 04, 2022, 06:36 PM IST
ಇದೇನಿದು? ಮಾನಿಟರಿಂಗ್‌ ಕ್ಯಾಮರಾವನ್ನೇ ಮತ್ತೆ ಮತ್ತೆ ಕುತೂಹಲದಿಂದ ನೋಡುವ ಗೂಬೆ

ಸಾರಾಂಶ

ಕುತೂಹಲ ತಡೆಯಲಾರದ ಗೂಬೆ ಏನ್‌ ಮಾಡ್ತಿದೆ ನೋಡಿ ಮಾನಿಟರಿಂಗ್‌ ಕ್ಯಾಮರಾವನ್ನೇ ಮತ್ತೆ ಮತ್ತೆ ನೋಡುವ ಗೂಬೆ ಗೂಬೆಯ ದೃಶ್ಯ ಸೆರೆ ಹಿಡಿದ ಹವಾಮಾನ ಮೇಲ್ವಿಚಾರಣಾ ಕ್ಯಾಮರಾ

ನ್ಯೂಯಾರ್ಕ್‌(ಏ.4): ಪ್ರದೇಶವೊಂದರಲ್ಲಿ ಹವಾಮಾನ ಮೇಲ್ವಿಚಾರಣೆ ಮಾಡಲು ಹಾಕಿದ್ದ ಕ್ಯಾಮರಾವೊಂದನ್ನು ಗೂಬೆ  ಮತ್ತೆ ಮತ್ತೆ ಬಂದು ಕುತೂಹಲದಿಂದ ನೋಡುತ್ತಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೇನಿರಬಹು ಎಂಬಂತೆ ಗೂಬೆ ಕ್ಯಾಮರಾವನ್ನೆ ಮತ್ತೆ ಮತ್ತೆ ನೋಡುತ್ತಿದೆ. ಕಣ್ಗಾವಲು ಕ್ಯಾಮೆರಾಗಳು ಯಾವಾಗಲೂ ನಿರ್ದಿಷ್ಟ ಪ್ರದೇಶದಲ್ಲಿನ ಚಟುವಟಿಕೆಗಳ ಮೇಲೆ ಕಣ್ಣಿಡುತ್ತವೆ. ಅಮೆರಿಕದ ಮೊಂಟಾನಾದಲ್ಲಿರುವ ಗೂಬೆಯೊಂದು ಈ ಕ್ಯಾಮರಾವನ್ನು ಇದೇನಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲದಿಂದ ಮತ್ತೆ ಮತ್ತೆ ಅದನ್ನೇ ಸಮೀಪದಿಂದ ವೀಕ್ಷಿಸುತ್ತಿದೆ. 

ವಿಡಿಯೋದಲ್ಲಿ ಕಾಣಿಸುವಂತೆ ಇದು ರಾತ್ರಿ ವೇಳೆಯಾಗಿದ್ದು, ದೊಡ್ಡ ಮಹಾನಗರಿಯ ಚಿತ್ರಣ ಗೂಬೆಯ ಹಿಂಭಾಗದಲ್ಲಿ ಕಾಣಿಸುತ್ತಿದೆ. ಕಟ್ಟಡಗಳು ವಿದ್ಯುತ್‌ ಬೆಳಕಿನಿಂದ ಜಗಮಗಿಸುತ್ತಿದ್ದು, ಗೂಬೆಯ ತಲೆಯು ಕೆಳಗಿನಿಂದ ಎದ್ದು ಕಾಣುತ್ತಿದೆ. ಮೇಲೇರಿ ಕ್ಯಾಮರಾವನ್ನು ನೋಡುವ ಗೂಬೆ ಅದರ ಅಲುಗಾಟ ಕಂಡು ಸುಮ್ಮನಾಗುತ್ತದೆ. ಮತ್ತೆ ನೋಡಲು ಶುರು ಮಾಡುತ್ತದೆ. 27 ಸೆಕೆಂಡ್‌ಗಳ ಈ ವಿಡಿಯೋ ನೋಡುಗರನ್ನು ಬೆರಗಾಗಿಸುತ್ತಿದೆ.' ವನ್ಯಜೀವಿಗಳು ಯಾವಾಗಲೂ ನಿಮ್ಮ ಉಳಿದ ದಿನವನ್ನು ಬೆಳಗಿಸುತ್ತವೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಸ್ಕೈ ನ್ಯೂಸ್ ವರದಿಯ ಪ್ರಕಾರ, ಕ್ಯಾಮೆರಾವನ್ನು ಗ್ರೇಟ್ ಫಾಲ್ಸ್‌ನ ದಂಡೆಯ ಮೇಲೆ ಇರಿಸಲಾಗಿದೆ. ಆ ಪ್ರದೇಶದ ಹವಾಮಾನ ಪರಿಸ್ಥಿತಿಗಳನ್ನು ವೀಕ್ಷಿಸಲು ಇದನ್ನು ಬಳಸಲಾಗುತ್ತದೆ.

ಮುದ್ದಾದ ಗೂಬೆಗಳ ಫ್ರಿ ವೆಡ್ಡಿಂಗ್‌ ಫೋಟೋಶೂಟ್ ... ಇಂಟರ್‌ನೆಟ್‌ನಲ್ಲಿ ವೈರಲ್

ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಹಕ್ಕಿಯೊಂದು GoPro ಕ್ಯಾಮರಾವನ್ನು ಕದ್ದು ಹೊತ್ತೊಯ್ದ ದೃಶ್ಯ ವೈರಲ್ ಆಗಿತ್ತು.  ನ್ಯೂಜಿಲ್ಯಾಂಡ್‌  ಅಲೆಕ್ಸ್ ವೆರ್ಹಾಲ್ ಎಂಬವರು ತಮ್ಮ ಕುಟುಂಬದೊಂದಿಗೆ ಚಾರಣಕ್ಕೆ ತೆರಳಿದ್ದರು. ಈ ವೇಳೆ ಪಕ್ಷಿಗಳ ಚಟುವಟಿಕೆ ಸೆರೆ ಹಿಡಿಯುವ ಸಲುವಾಗಿ ಕ್ಯಾಮರಾವನ್ನು ತಾವಿದ್ದ ಸ್ಥಳದ ಹೊರಭಾಗದಲ್ಲಿ ಇಟ್ಟಿದ್ದರು. ಈ ವೇಳೆ ಎಲ್ಲಿಂದಲೋ ಹಾರಿ ಬಂದ ಹಕ್ಕಿಯೊಂದು ಕ್ಯಾಮರಾವನ್ನು ಹೊತ್ತೊಯ್ದಿದೆ. ಆದಾಗ್ಯೂ ಸ್ವಲ್ಪ ಹೊತ್ತಿನಲ್ಲೇ ಕ್ಯಾಮರಾ ಮತ್ತೆ ಅದರ ಮಾಲೀಕರ ಕೈ ಸೇರಿದ್ದು, ಅದರಲ್ಲಿ ಹಕ್ಕಿ ಹಾರುತ್ತಿರುವಾಗ ಸೆರೆಯಾದ ವಿಹಂಗಮ ನೋಟವಿದೆ. 

ಹಕ್ಕಿ GoPro ಕ್ಯಾಮೆರಾವನ್ನು ಕದ್ದು ಆಕಾಶದಲ್ಲಿ ಹಾರಿದ್ದು, ಈ ವೇಳೆ ಕ್ಯಾಮರಾ ಹಕ್ಕಿ ಹಾರಿದ ದಾರಿಯ ದೃಶ್ಯವನ್ನು ಸೆರೆ ಹಿಡಿದಿದೆ. ಈ  ಗೋ ಪ್ರೋ ಕ್ಯಾಮರಾವನ್ನು ಮೈ ಜುಮ್ಮೆನಿಸುವ ಸಾಹಸ ಕ್ರೀಡೆಗಳ ಚಿತ್ರೀಕರಣಕ್ಕೆ ಬಳಸಲಾಗುತ್ತದೆ  ಸಾಮಾನ್ಯ ಕ್ಯಾಮರಾದಿಂದ ಮಾಡಲಾಗದ ಚಿತ್ರೀಕರಣವನ್ನು ಈ ಕ್ಯಾಮರಾದಿಂದ ಮಾಡಲಾಗುತ್ತದೆ. ಅಲ್ಲದೇ ಇದನ್ನು ಜಗತ್ತಿನ ಬಹುಮುಖಿ ಕ್ಯಾಮರಾ ಎಂದೇ ಕರೆಯಲಾಗುತ್ತದೆ. 

ಮರದ ಕೆಳಗೆ ಪ್ರೆಸ್‌ಮೀಟ್... ಮೇಲಿನಿಂದ ಕಕ್ಕ ಮಾಡಿದ ಗೂಬೆ... ವಿಡಿಯೋ

ಈ ವಿಶೇಷ ಕ್ಯಾಮರಾದ ಸಹಾಯದಿಂದ, ಬಳಕೆದಾರರು ಸ್ಕೂಬಾ-ಡೈವಿಂಗ್ (scuba-diving), ಸ್ಕೈ-ಡೈವಿಂಗ್ (sky-diving), ಬಂಗೀ ಜಂಪಿಂಗ್ (bungee jumping) ಸೇರಿದಂತೆ ಸಾಮಾನ್ಯ ಕ್ಯಾಮೆರಾ ಮಾಡಲಾಗದ ಸಾಹಸಗಳ ಚಿತ್ರೀಕರಣವನ್ನು ಮಾಡಬಹುದು. ಇನ್ನು ಈ ಕ್ಯಾಮರಾವನ್ನು ಹೊತ್ತೊಯ್ದ ಗಿಳಿಯೂ ಸ್ಥಳೀಯ ಆಲ್ಪೈನ್  ಜಾತಿಗೆ ಸೇರಿದ ಗಿಳಿ ಆಗಿದೆ.  ಆದಾಗ್ಯೂ, ಗಿಳಿ ಹಾರಾಟದ ವೇಳೆ GoPro ಕ್ಯಾಮರಾ ಸೆರೆ ಹಿಡಿದ ದೃಶ್ಯ ಪ್ರಪಂಚದಾದ್ಯಂತ ನೆಟ್ಟಿಗರನ್ನು ಆಕರ್ಷಿಸಿದೆ. ಏಕೆಂದರೆ ಈ ವೇಳೆ ಹಕ್ಕಿ ಚಿತ್ರೀಕರಣದ ಯೋಜನೆಯನ್ನು ರೂಪಿಸಲಾಗಿರಲಿಲ್ಲ. ಅಲ್ಲದೇ ಕ್ಯಾಮರಾ ಬಳಸಿದವರಿಗೆ ಅದರ ಬಗ್ಗೆ ಅರಿವಿರಲಿಲ್ಲ.  ಆದಾಗ್ಯೂ ಚಾರಣಿಗರಿಗೆ ಕ್ಯಾಮೆರಾ ಮರಳಿ ಸಿಕ್ಕಿರುವುದರಿಂದ ಈ ದೃಶ್ಯ ಸಾಮಾಜಿಕ ಜಾಲತಾಣ ಸೇರಿದ್ದು ವೈರಲ್ ಆಗುತ್ತಿದೆ. 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ