21st Annual Summit: ಜಾಗತಿಕ ಮಟ್ಟದಲ್ಲಿ ಏರಿರುವ ಭಾರತದ ಘನತೆಯನ್ನು ಒಪ್ಪಿದ ರಷ್ಯಾ ಅಧ್ಯಕ್ಷ

Suvarna News   | Asianet News
Published : Dec 03, 2021, 12:52 PM ISTUpdated : Dec 03, 2021, 02:46 PM IST
21st Annual Summit: ಜಾಗತಿಕ ಮಟ್ಟದಲ್ಲಿ ಏರಿರುವ ಭಾರತದ ಘನತೆಯನ್ನು ಒಪ್ಪಿದ ರಷ್ಯಾ ಅಧ್ಯಕ್ಷ

ಸಾರಾಂಶ

ಡಿಸೆಂಬರ್ ಮೊದಲ ವಾರದಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ವ್ಲಾಡಿಮಿರ್ ಪುಟಿನ್ ಭಾರತ ರಷ್ಯಾ ನಡುವಿನ 21ನೇ ವಾರ್ಷಿಕ ಶೃಂಗಸಭೆ ಕಳೆದ ವರ್ಷ ಕೋವಿಡ್‌ನಿಂದಾಗಿ ವಾರ್ಷಿಕ ಶೃಂಗಸಭೆ ನಡೆದಿರಲಿಲ್ಲ.

ನವದೆಹಲಿ(ಡಿ.3): ಜಾಗತಿಕ ಮಟ್ಟದಲ್ಲಿ ಎತ್ತರಕ್ಕೇರಿರುವ ಭಾರತದ ಘನತೆಯನ್ನು ಒಪ್ಪಿಕೊಂಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌(Vladimir Putin),ಭಾರತವನ್ನು 'ಬಹುಧ್ರುವ  ಹೊಂದಿರುವ ಪ್ರಪಂಚದ ಅಧಿಕೃತ ಕೇಂದ್ರ ಎಂದು ಕರೆದಿದ್ದಾರೆ. ವ್ಲಾದಿಮಿರ್‌ ಪುಟಿನ್ ಸದ್ಯದಲ್ಲಿಯೇ ಭಾರತಕ್ಕೆ ಆಗಮಿಸಿದ್ದಾರೆ. ತಮ್ಮ ಭಾರತ ಭೇಟಿಗೂ ಮೊದಲು ಪುಟಿನ್‌ ಈ ಹೇಳಿಕೆ ನೀಡಿದ್ದಾರೆ. ಭಾರತದ ವಿದೇಶಾಂಗ ನೀತಿ(Foreign Policy)ಗಳು ಹಾಗೂ ಆದ್ಯತೆಗಳು ಮಾಸ್ಕೋ ಅಂದರೆ ರಷ್ಯಾದ ಚಿಂತನೆಗೆ ಹತ್ತಿರವಾಗಿದೆ. ಸ್ನೇಹ  ಮತ್ತು ಪರಸ್ಪರ ತಿಳುವಳಿಕೆಯ ಬಲವಾದ ಸಂಪ್ರದಾಯಗಳನ್ನು ಅವಲಂಬಿಸಿ, ನಾವು ಜಂಟಿಯಾಗಿ ರಷ್ಯಾ-ಭಾರತ ಸಂಬಂಧಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದನ್ನು ಮುಂದುವರಿಸುತ್ತೇವೆ ಎಂಬುದು ನನಗೆ ಮನವರಿಕೆಯಾಗಿದೆ ಎಂದು ಅವರು ಹೇಳಿದರು.

ಮುಂದಿನ ವಾರ ನಾನು ಭಾರತಕ್ಕೆ ಭೇಟಿ ನೀಡುತ್ತೇನೆ. ಈ ವೇಳೆ ಪ್ರಧಾನಿ ಮೋದಿಯವರೊಂದಿಗೆ ಮಾತುಕತೆ ನಡೆಸಲಿದ್ದು, ವಿಶೇಷವಾಗಿ ವಿಶೇಷ ಸವಲತ್ತು ಹೊಂದಿರುವ ರಷ್ಯಾ-ಭಾರತೀಯ ಸಂಬಂಧ, ರಷ್ಯಾ-ಭಾರತದ ಕಾರ್ಯತಂತ್ರದ ಪಾಲುದಾರಿಕೆಯ ಮತ್ತಷ್ಟು ಅಭಿವೃದ್ಧಿಗಾಗಿ ನಾವು ಹೊಸದಾದ ದೊಡ್ಡ-ಪ್ರಮಾಣದ  ಕ್ರಮಗಳನ್ನು ರೂಪಿಸುತ್ತೇವೆ. ಈ ಪಾಲುದಾರಿಕೆಯು ಎರಡೂ ದೇಶಗಳಿಗೆ ನಿಜವಾದ ಪರಸ್ಪರ ಪ್ರಯೋಜನವನ್ನು ತರುತ್ತದೆ ಎಂದು ರಷ್ಯಾದ ಅಧ್ಯಕ್ಷರು ಹೇಳಿದರು.
'ದ್ವಿಪಕ್ಷೀಯ ವ್ಯಾಪಾರವು ಉತ್ತಮ ಬದಲಾವಣೆಯನ್ನು ತೋರಿಸುತ್ತದೆ.  ಇಂಧನ ವಲಯ,  ಹೊಸ ಆವಿಷ್ಕಾರ,  ಬಾಹ್ಯಾಕಾಶ ಮತ್ತು ಕೊರೋನಾ ವೈರಸ್ ಲಸಿಕೆ ಹಾಗೂ ಔಷಧಿಗಳ ಉತ್ಪಾದನೆಯಲ್ಲಿ  ಸಕ್ರಿಯವಾಗಿ ಅಭಿವೃದ್ಧಿ ಹೊಂದುತ್ತಿವೆ.  ಜಂಟಿಯಾಗಿ  ಉದ್ಯಮಗಳ ಸ್ಥಾಪನೆ ಜೊತೆ ರಕ್ಷಣಾ ವಲಯದಲ್ಲಿಯೂ ಉತ್ತಮ ಸಹಕಾರವಿದೆ' ಎಂದು ಅವರು ಹೇಳಿದರು.

Omicron Panic: ಹೊಸ ಕೊರೋನಾ ತಳಿಯ ವಿರುದ್ಧವೂ ಕೆಲಸ ಮಾಡುತ್ತೆ ಸ್ಫುಟ್ನಿಕ್ -ರಷ್ಯಾ

ಪ್ರಧಾನಿ ಮೋದಿ ಜೊತೆ ಭಾರತ ರಷ್ಯಾ ನಡುವಿನ 21ನೇ ವಾರ್ಷಿಕ ಶೃಂಗಸಭೆ(21st Annual Summit)ಯ ಹಿನ್ನೆಲೆಯಲ್ಲಿ ಡಿಸೆಂಬರ್‌ 6ರಂದು ಪುಟಿನ್‌(Putin) ಭಾರತಕ್ಕೆ ಆಗಮಿಸಲಿದ್ದಾರೆ. ಈ ಶೃಂಗಸಭೆಯಲ್ಲಿ ಈ ಇಬ್ಬರು ನಾಯಕರು ಎರಡು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ(Bilateral Relationship)ದ ಸ್ಥಿತಿ ಹಾಗೂ ಭವಿಷ್ಯವನ್ನು ವಿಮರ್ಶಿಸಲಿದ್ದಾರೆ. ಅಲ್ಲದೇ ಎರಡು ದೇಶಗಳ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಲಿದ್ದಾರೆ. ಜೊತೆಗೆ ಈ ಭೇಟಿಯ ವೇಳೆ ಭಾರತ ಮತ್ತು ರಷ್ಯಾ ಎಕೆ-203 ಒಪ್ಪಂದಕ್ಕೆ ಸಹಿ ಹಾಕಲಿವೆ.7.5 ಲಕ್ಷ AK-203  ರೈಫಲ್‌ಗಳನ್ನು ಪೂರೈಸುವ ಒಪ್ಪಂದ ಇದಾಗಿದೆ. ಭದ್ರತೆಯ ವಿಚಾರಕ್ಕೆ ಸಂಬಂಧಿಸಿದಂತೆ ಸಂಪುಟ ಸಮಿತಿಯ ಅಂತಿಮ ಅನುಮೋದನೆ ಸೇರಿದಂತೆ ಎಲ್ಲಾ ಅಗತ್ಯ ಅನುಮತಿಗಳನ್ನು ಪಡೆಯಲಾಗಿದೆ  ಎಂದು ತಿಳಿದು ಬಂದಿದೆ. 

ಪುಟಿನ್‌ ಟಿವಿ ಸಂವಾದದ ಮೇಲೆ ‘ಸೈಬರ್‌ ದಾಳಿ’: ರಷ್ಯಾ ಅಧ್ಯಕ್ಷರಿಗೆ ಆಘಾತ!

ಪುಟಿನ್ ಮತ್ತು ಮೋದಿ ನಡುವಿನ ಈ ಶೃಂಗಸಭೆಯಲ್ಲಿ ಭಾರತಕ್ಕೆ S-400 ವಾಯು ರಕ್ಷಣಾ ವ್ಯವಸ್ಥೆ(air defence system)ಯನ್ನು ನೀಡುವ ಸಾಧ್ಯತೆಯಿದೆ, ಇದು ಈಗಾಗಲೇ ಭಾರತಕ್ಕೆ ಹಂತ ಹಂತವಾಗಿ ಆಗಮಿಸಲು ಪ್ರಾರಂಭಿಸಿದೆ. ಈ ಹಿಂದಿನ ಶೃಂಗ ಸಭೆಯೂ 2019 ರಲ್ಲಿ ರಷ್ಯಾದ ವ್ಲಾಡಿವೋಸ್ಟಾಕ್‌(Vladivostok)ನಲ್ಲಿ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ(Narendra Modi) ಈ ಶೃಂಗಸಭೆಯಲ್ಲಿ ಭಾಗಿಯಾಗಿದ್ದರು. ನಂತರ  2020 ರ ಶೃಂಗಸಭೆಯೂ ಕೋವಿಡ್‌ ಕಾರಣದಿಂದ ನಡೆದಿರಲಿಲ್ಲ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ