Global Survey: ವಿಶ್ವದ ಅತ್ಯಂತ ಕುಡುಕ ದೇಶ ಆಸ್ಟ್ರೇಲಿಯಾ!

By Gowthami K  |  First Published Dec 3, 2021, 12:23 PM IST
  • ಅತಿ ಹೆಚ್ಚು ಅಲ್ಕೋಹಾಲ್ ಸೇವನೆಯ ದೇಶಗಳ ಪಟ್ಟಿ ಬಿಡುಗಡೆ
  • ಸರ್ವೆ ನಡೆಸಿದ ಜಾಗತಿಕ ಡ್ರಗ್ ಸಮೀಕ್ಷೆ
  • ಆಸ್ಟ್ರೇಲಿಯಾಕ್ಕೆ ಅಗ್ರಸ್ಥಾನ

ಸಿಡ್ನಿ(ಡಿ.3): ಜಾಗತಿಕ ಸಮೀಕ್ಷೆಯೊಂದು (Global Survey) ಪ್ರಪಂಚದಲ್ಲಿ ಅತಿ ಹೆಚ್ಚು ಅಲ್ಕೋಹಾಲ್ ಸೇವನೆಯನ್ನು ಪ್ರೀತಿಸುವ ದೇಶವನ್ನು ಬಹಿರಂಗಪಡಿಸಿದೆ. ಆಶ್ಚರ್ಯಕರ ಎಂಬಂತೆ ಆಸ್ಟ್ರೇಲಿಯಾ (Australia) ಈ ಗೌರವವನ್ನು ಪಡೆದುಕೊಂಡಿದೆ.

ಜಾಗತಿಕ ಡ್ರಗ್ ಸಮೀಕ್ಷೆ 2021ರ (Global Drug Survey 2021) ಸರ್ವೆ ಪ್ರಕಾರ ಈ ವಿಚಾರ ಬೆಳಕಿಗೆ ಬಂದಿದ್ದು, 22 ದೇಶಗಳಿಂದ 32,000 ಕ್ಕೂ ಹೆಚ್ಚು ಜನರ ಪ್ರತಿಕ್ರಿಯೆಗಳನ್ನು ಆಧರಿಸಿ, ಆಸ್ಟ್ರೇಲಿಯಾವನ್ನು ವಿಶ್ವದ ಅತಿ ಹೆಚ್ಚು ಕುಡುಕ ದೇಶ ಎಂದು ಘೋಷಿಸಿದೆ.

Latest Videos

undefined

ಸಂಶೋಧನೆ ನಡೆಸಿದಾಗ ಕಂಡುಬಂದ ಅಂಶವೆಂದರೆ 2020 ರಲ್ಲಿ ಕಾಂಗರೂ (Kangaroo) ನಾಡಿನವರು ಒಂದು ವಾರಕ್ಕೆ ಸರಾಸರಿಯಂತೆ 27 ಬಾರಿ ಕುಡಿದಿದ್ದಾರೆ. ಇದು ಜಾಗತಿಕ ಸರಾಸರಿ 15 ಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಇನ್ನು ಡೆನ್ಮಾರ್ಕ್ ಮತ್ತು ಸ್ವೀಡನ್ ಈ ಪಟ್ಟಿಯಲ್ಲಿ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ, ಇಲ್ಲಿ ವ್ಯಕ್ತಿ ವರ್ಷಕ್ಕೆ ಸರಾಸರಿ 23.8 ಬಾರಿ ಕುಡಿಯುತ್ತಾನೆ. 

ಚಾಲಕ ಮದ್ಯಪಾನ ಮಾಡಿದ್ರೆ ಅಮೆರಿಕ ಕಾರು ಚಲಿಸೋಲ್ಲ, ಹೊಸ ವ್ಯವಸ್ಥೆ!

ಕೊರೊನಾ ಪಿಡುಗಿಂದ ಎಣ್ಣೆಗೆ ಏಟಿಲ್ಲ:
ಆಸ್ಟ್ರೇಲಿಯನ್ನರು ವಾರಕ್ಕೆ ಸರಾಸರಿ ಎರಡು ದಿನ ಬಿಯರ್ ಅಥವಾ ವೈನ್ ಕುಡಿಯುತ್ತಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ. ಕೊರೊನಾ ವೈರಸ್  ಲಾಕ್‌ಡೌನ್ ನಿಂದಾಗಿ ಒಂದೇ ಮಾದರಿಯ ಆಲ್ಕೋಹಾಲ್ (alcohol)ಅನ್ನು ಆಸ್ಟ್ರೇಲಿಯನ್ನರು  ಅತೀ ಹೆಚ್ಚು ತೆಗೆದುಕೊಂಡಿದ್ದರೂ, ಈ ಸಾಂಕ್ರಾಮಿಕ ಪಿಡುಗಿನಿಂದ ಎಣ್ಣೆ ಪ್ರಿಯರಿಗೆ ಅಷ್ಟೇನು ತೊಂದರೆಯಾಗಿಲ್ಲ.

ಎಣ್ಣೆ ಕುಡಿದು ಹೆಜ್ಜೆ ಹಾಕಿದ ರಚಿತಾ ರಾಮ್ Viral Video!

ವಾರಕ್ಕೆ ಮಹಿಳೆಯರು ಎಷ್ಟು ಕುಡಿಯುತ್ತಾರೆ:
ಸಮೀಕ್ಷೆಯ ಪ್ರಕಾರ, ತೃತೀಯ ಲಿಂಗಿಗಳು  ನಾನ್-ಬೈನರಿ ಅಥವಾ ಸಲಿಂಗಿ ನಾಗರಿಕರು ಅತೀ ಹೆಚ್ಚು ಕುಡಿಯುತ್ತಾರೆ, ಅವರು ವರ್ಷಕ್ಕೆ ಸರಾಸರಿ 35 ಬಾರಿ ಮದ್ಯಪಾನ ಸೇವನೆ ಮಾಡುತ್ತಾರೆ. ಇನ್ನು ಪುರುಷರು ವಾರಕ್ಕೆ 30 ಬಾರಿ ಮತ್ತು ಮಹಿಳೆಯರು 21 ಬಾರಿ ಕುಡಿದಿದ್ದಾರೆ ಎಂದು ವರದಿಯಾಗಿದೆ. ಆಸಿಸ್ ನ 24% ಜನರು ಸಮಾರಂಭಗಳಲ್ಲಿ ಕುಡಿದು ತಮ್ಮ ವಿಷಾದವನ್ನು ಹೊರಹಾಕುತ್ತಾರಂತೆ. ಅದರಲ್ಲೂ ಮಹಿಳೆಯರು ಗುಂಪಾಗಿ ಕುಡಿದು ತಮ್ಮ ವಿಷಾದವನ್ನು ಹೊರಹಾಕುತ್ತಾರಂತೆ.

ಮದ್ಯಪಾನಕ್ಕೆ ವಯೋಮತಿ ಇಳಿಕೆ, ಹಿಂದೆ ಸರಿಯುವ ಮಾತೇ ಇಲ್ಲ!

ಫ್ರಾನ್ಸ್ ನಲ್ಲಿ ಓರ್ವ ಮದ್ಯಪ್ರಿಯನ ಸರಾಸರಿ:
ಇನ್ನು ಒಂದು ವರ್ಷದಲ್ಲಿ ಸೇವಿಸುವ ಸರಾಸರಿ ಸಂಖ್ಯೆಯ ಮದ್ಯಪಾನದ ಜಾಗತಿಕ ಪಟ್ಟಿಯಲ್ಲಿ ಫ್ರಾನ್ಸ್ ಅಗ್ರಸ್ಥಾನದಲ್ಲಿದೆ. ಇಲ್ಲಿ ವರ್ಷಕ್ಕೆ ಓರ್ವ 132 ಗ್ಲಾಸ್‌ಗಳಿಗಿಂತ ಹೆಚ್ಚು ಕುಡಿದು ಆನಂದಿಸುತ್ತಾನೆ. ನ್ಯೂಜಿಲೆಂಡ್ ನಲ್ಲಿ ಓರ್ವ ವ‍ರ್ಷಕ್ಕೆ ಸರಾಸರಿ 122 ಗ್ಲಾಸ್ ಕುಡಿದು ಆನಂದಿಸುತ್ತಿದ್ದು ನಂತರದ ಸ್ಥಾನದಲ್ಲಿದೆ. ಆದರೆ ಆಸ್ಟ್ರೇಲಿಯದಲ್ಲಿ ಓರ್ವ ಮನುಷ್ಯ ವರ್ಷಕ್ಕೆ ಸರಾಸರಿ 106 ಮದ್ಯಗಳನ್ನು ಕುಡಿಯುತ್ತಾನೆ ಎಂಧು ಸಮೀಕ್ಷೆಯು ಬಹಿರಂಗಪಡಿಸಿದೆ. 

ಡಬ್ಲ್ಯುಎಚ್‌ಒ ವರದಿಯಲ್ಲೇನಿತ್ತು:
ವಿಶ್ವ ಆರೋಗ್ಯ ಸಂಸ್ಥೆ 2018-19ನೇ ಸಾಲಿನಲ್ಲಿ ವಿಶ್ವದ ಕುಡಿಯುವ ದೇಶಗಳ ಪಟ್ಟಿಯನ್ನು ಪ್ರಕಟಿಸಿತ್ತು. ಆಗ ಬೆಲಾರಸ್, ಉಕ್ರೇನ್, ಎಸ್ಟೋನಿಯಾ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿತ್ತು.  ಆಸ್ಟ್ರೇಲಿಯಾ 18ನೇ ಸ್ಥಾನದಲ್ಲಿತ್ತು.  ಡಬ್ಲ್ಯುಎಚ್‌ಒ(WHO) 1961 ರಿಂದ ಇಂತಹ ಅಂಕಿಅಂಶಗಳನ್ನು ಇಟ್ಟುಕೊಂಡಿದೆ. ಆಲ್ಕೊಹಾಲ್ ಸೇವನೆಯ ಜಾಗತಿಕ ಮಟ್ಟದಲ್ಲಿ ಹೆಚ್ಚಾಗಿದೆ. 2018-19ರಲ್ಲಿ, 15 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೆ ವರ್ಷಕ್ಕೆ 6.6 ಲೀಟರ್ ಶುದ್ಧ ಮದ್ಯ ಬೇಕಾಗಿದೆ. 2014 ರಿಂದ, ಈ ಸೂಚ್ಯಾಂಕವು ಬೆಳೆಯುತ್ತಲೇ ಇದೆ.

ಭಾರತೀಯರ ಆದ್ಯತೆ ಯಾವುದು: 
ವೋಡ್ಕಾ, ರಮ್, ವಿಸ್ಕಿ, ಜಿನ್ ಮತ್ತು ಟಕಿಲಾಗಳು ಮೊದಲ ಸ್ಥಾನದಲ್ಲಿ ಬಂದರೆ ಎರಡನೆಯ ಸ್ಥಾನವು ಬಿಯರ್ಗೆ ಸೇರಿದೆ. ರಷ್ಯನ್ನರು ವೋಡ್ಕಾ ಸೇವನೆಯನ್ನು ಹೆಚ್ಚು ಇಷ್ಟಪಡುತ್ತಾರೆ. ಫ್ರೆಂಚ್ ವಿಸ್ಕಿ ಆದ್ಯತೆ ನೀಡುತ್ತದೆ. ಇಟಲಿಯನ್ನರು ಮತ್ತು ಮೋಲ್ಡೊವನ್ನರು ವೈನ್, ಮತ್ತು ಭಾರತೀಯರು  ರಮ್ ಗೆ ಹೆಚ್ಚು ಆದ್ಯತೆ ನೀಡುತ್ತಾರಂತೆ.

click me!