ಕಷ್ಟದಲ್ಲಿದ್ದಾಗ ನೆರವಿಗೆ ನಿಂತ ಭಾರತಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟ್‌ ಬಿಗ್‌ ಗಿಫ್ಟ್‌!

By Santosh Naik  |  First Published Sep 15, 2022, 1:05 PM IST

ಭಾರತೀಯ ಪ್ರವಾಸಿಗರು ಮತ್ತು ಉದ್ಯಮಿಗಳಿಗೆ ವೀಸಾ ಮುಕ್ತ ಯೋಜನೆಯನ್ನು ಪ್ರಾರಂಭಿಸುವುದಾಗಿ ರಷ್ಯಾ ಘೋಷಿಸಿದೆ. ಶೀಘ್ರದಲ್ಲಿಯೇ ಈ ಯೋಜನೆ ಪ್ರಾರಂಭವಾಗಲಿದೆ ಎಂದೂ ರಷ್ಯಾ ಹೇಳಿದೆ.  ಪ್ರಸ್ತುತ, ಭಾರತೀಯರಿಗಾಗಿ ಇ-ವೀಸಾ ಯೋಜನೆಯನ್ನು ಸಹ ಪ್ರಾರಂಭಿಸಲಾಗುವುದು ಇದರಿಂದ ಹೆಚ್ಚು ಹೆಚ್ಚು ಭಾರತೀಯರು ಯಾವುದೇ ತೊಂದರೆಯಿಲ್ಲದೆ ರಷ್ಯಾಕ್ಕೆ ಪ್ರಯಾಣಿಸಬಹುದಾಗಿದೆ.
 


ನವದೆಹಲಿ (ಸೆ.15): ಭಾರತೀಯ ಪ್ರವಾಸಿಗರಿಗೆ ವೀಸಾ ಮುಕ್ತ ಪ್ರವೇಶ ವ್ಯವಸ್ಥೆಯನ್ನು ಪ್ರಾರಂಭಿಸಲು ರಷ್ಯಾ ಯೋಚನೆ ಮಾಡುತ್ತಿದೆ. ಮಾಸ್ಕೋ ಸಿಟಿ ಟೂರಿಸಂ ಕಮಿಟಿಯ ಉಪಾಧ್ಯಕ್ಷೆ ಅಲೀನಾ ಅರುಟುನೋವಾ ಅವರು ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತೀಯ ಉದ್ಯಮಿಗಳು ಮತ್ತು ಪ್ರವಾಸಿಗರಿಗೆ ವೀಸಾ ಮುಕ್ತ ಯೋಜನೆಯನ್ನು ಪರಿಚಯಿಸುವ ಯೋಜನೆಯಲ್ಲಿ ರಷ್ಯಾ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಹೇಳಿದರು. ಪ್ರಸ್ತುತ ರಷ್ಯಾ ಶೀಘ್ರದಲ್ಲೇ ಭಾರತೀಯರಿಗೆ ಇ-ವೀಸಾವನ್ನು ಪ್ರಾರಂಭಿಸಲಿದೆ ಎಂದು ಅವರು ಹೇಳಿದರು. ಭಾರತೀಯ ಪ್ರವಾಸಿಗರಿಗೆ ವೀಸಾ ಮುಕ್ತ ಯೋಜನೆಯನ್ನು ನೀಡುವ ಕಾರ್ಯಕ್ರಮವನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕೂಡ ಬೆಂಬಲಿಸಿದ್ದಾರೆ ಎಂದು ಅರುಟುನೋವಾ ಹೇಳಿದ್ದಾರೆ. . ಇರಾನ್‌ಗೆ ವೀಸಾ ಮುಕ್ತ ಯೋಜನೆಗೆ ಈಗಾಗಲೇ ಗ್ರೀನ್ ಸಿಗ್ನಲ್ ನೀಡಲಾಗಿದೆ ಮತ್ತು ಶೀಘ್ರದಲ್ಲೇ ಈ ಯೋಜನೆಯನ್ನು ಭಾರತಕ್ಕೂ ಪ್ರಾರಂಭಿಸಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರತಿ ವರ್ಷ ಟರ್ಕಿ, ಜರ್ಮನಿ ಮತ್ತು ಭಾರತದಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ರಷ್ಯಾಕ್ಕೆ ಬರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. "2020 ರಲ್ಲಿ, ಭಾರತ ಸೇರಿದಂತೆ 52 ದೇಶಗಳಿಗೆ ಎಲೆಕ್ಟ್ರಾನಿಕ್ ವೀಸಾಗಳನ್ನು ಪರಿಚಯಿಸಲು ನಿರ್ಣಯವನ್ನು ಅಂಗೀಕರಿಸಲಾಯಿತು, ಆದರೆ ಕರೋನಾದಿಂದಾಗಿ, ಇದು ಇನ್ನೂ ಜಾರಿಗೆ ಬಂದಿಲ್ಲ ಆದರೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಮತ್ತು ಇ-ವೀಸಾದೊಂದಿಗೆ ಸುಲಭವಾಗಿ ವಿದೇಶಿ ಪ್ರವಾಸಿಗರ ಆಗಮನದ ಪ್ರಕ್ರಿಯೆಯು ನಡೆಯಲಿದೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.

ಪ್ರವಾಸೋದ್ಯಮ ಕ್ಷೇತ್ರದ ಮೇಲೆ ರುಸ್ಸೋ-ಉಕ್ರೇನ್ ಯುದ್ಧದ ಪ್ರಭಾವದ ಬಗ್ಗೆಯೂ ಅವರು ಮಾತನಾಡಿದ್ದಾರೆ. 'ಪ್ರವಾಸೋದ್ಯಮವು ಪ್ರಪಂಚದಾದ್ಯಂತ ಅನಿಶ್ಚಿತತೆಯ ವಾತಾವರಣದಲ್ಲಿ ಜನರು ಮತ್ತು ಸಂಸ್ಕೃತಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ವರ್ಷದ ಮೊದಲ ಆರು ತಿಂಗಳಲ್ಲಿ 13,300 ಭಾರತೀಯ ಪ್ರವಾಸಿಗರು ರಷ್ಯಾಕ್ಕೆ ಬಂದಿದ್ದಾರೆ. ರಷ್ಯಾ 2023 ರ ಅಂತ್ಯದ ವೇಳೆಗೆ, ಈ ಅಂಕಿ ಅಂಶವು ಸಾಂಕ್ರಾಮಿಕ ರೋಗದ ಹಿಂದಿನ ಅವಧಿಯಂತೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

2016 ಮತ್ತು 2019 ರ ನಡುವೆ, ಭಾರತದಿಂದ (India) ರಷ್ಯಾಕ್ಕೆ (Russia) ಪ್ರವಾಸಿಗರ ಪ್ರಯಾಣ  61,000 ರಿಂದ ಒಂದು ಲಕ್ಷಕ್ಕೆ ಏರಿದೆ. ಕುತೂಹಲಕಾರಿ ಸಂಗತಿಯೆಂದರೆ, 2021 ರಲ್ಲಿ, ರಷ್ಯಾಕ್ಕೆ ಬಂದ 48 ಪ್ರತಿಶತ ಭಾರತೀಯ ಪ್ರಯಾಣಿಕರು (Indian Tourists) ವರ್ಷಕ್ಕೆ ಎರಡು ಬಾರಿ ಅಲ್ಲಿಗೆ ಪ್ರಯಾಣಿಸಿದ್ದಾರೆ. 2021 ರಲ್ಲಿ, ಅಲ್ಲಿಗೆ ಬರುವ ಜನರಿಗೆ ಕ್ವಾರಂಟೈನ್ ನಿಯಮವನ್ನು ಜಾರಿಗೆ ತರದ ಕೆಲವೇ ದೇಶಗಳಲ್ಲಿ ರಷ್ಯಾ ಕೂಡ ಒಂದಾಗಿದೆ.

ದುಬೈನಲ್ಲಿ ಗೋಲ್ಡನ್ ವೀಸಾ ಪಡೆದ ಕನ್ನಡದ ಮೊದಲ ನಟ ಸುದೀಪ್; ಇದರ ಲಾಭವೇನು?

ಪ್ರಸ್ತುತ ಈ ದೇಶಗಳಿಗೆ ಭಾರತೀಯರಿಗೆ ವೀಸಾ ಮುಕ್ತ (Visa Free Entry) ಪ್ರವೇಶ: ಭಾರತೀಯರು ಪ್ರಸ್ತುತ ನೇಪಾಳ, ಮಕಾವು, ಫಿಜಿ, ಮಾರ್ಷಲ್ ದ್ವೀಪಗಳು, ಜೋರ್ಡಾನ್, ಓಮನ್, ಕತಾರ್, ಅಲ್ಬೇನಿಯಾ, ಸೆರ್ಬಿಯಾ, ಬಾರ್ಬಡೋಸ್, ಸಮೋವಾ, ಪಲಾವ್ ದ್ವೀಪ, ಮೈಕ್ರೋನೇಷಿಯಾ, ಭೂತಾನ್, ಬ್ರಿಟಿಷ್ ವರ್ಜಿನ್ ದ್ವೀಪಗಳು, ಡೊಮಿನಿಕಾ, ಗ್ರೆನಡಾ, ಹೈಟಿ, ಜಮೈಕಾ, ಮೊಂಟ್ಸೆರಾಟ್, ಸೇಂಟ್ ಕಿಟ್ಸ್ ಮತ್ತು ನೆವಿಸ್ , ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಟ್ರಿನಿಡಾಡ್ ಮತ್ತು ಟೊಬಾಗೊ, ಕಾಂಬೋಡಿಯಾ, ಇಂಡೋನೇಷಿಯಾ, ಸೇಂಟ್ ಲೂಸಿಯಾ, ಲಾವೋಸ್, ಮಕಾವೊ, ಥೈಲ್ಯಾಂಡ್, ಟಿಮೋರ್-ಲೆಸ್ಟೆ, ಬೊಲಿವಿಯಾ, ಗ್ಯಾಬೊನ್, ಗಿನಿಯಾ-ಬಿಸ್ಸಾವು, ಕುಕ್ ದ್ವೀಪಗಳು, ಮೈಕ್ರೋನೇಷಿಯಾ, ನಿಯು, ಸಮೋ, ಟುವಾಲು ವನವಾಟು,  ಇರಾನ್, ಟೋಗೊ, ಟುನೀಶಿಯಾ, ಉಗಾಂಡಾ, ಇಥಿಯೋಪಿಯಾ, ಜಿಂಬಾಬ್ವೆ, ಕೇಪ್ ವರ್ಡೆ ಐಲ್ಯಾಂಡ್, ಕೊಮೊರೊ ಐಲ್ಯಾಂಡ್, ಎಲ್ ಸಾಲ್ವಡಾರ್, ಬೋಟ್ಸ್ವಾನಾ, ಬುರುಂಡಿ, ಮಡಗಾಸ್ಕರ್, ಮಾರಿಟಾನಿಯಾ, ಮೊಜಾಂಬಿಕ್, ರುವಾಂಡಾ, ಸೆನೆಗಲ್, ಸೀಶೆಲ್ಸ್, ಸಿಯೆರಾ, ಸಿಯೆರಾ ಹಾಗೂ ಟಾಂಜಾನಿಯಾ ಸೇರಿದಂತೆ ಸುಮಾರರು 60 ದೇಶಗಳಿಗೆ ಭಾರತೀಯ ವೀಸಾ ಇಲ್ಲದೆ ಪ್ರವೇಶಿಸಬಹುದು.

Tap to resize

Latest Videos

ಕೊನೆಗೂ ಸಿಕ್ತು ವೀಸಾ: ಅಮೆರಿಕದ ಫ್ಲೋರಿಡಾದಲ್ಲೇ ನಡೆಯಲಿವೆ Ind vs WI ಕೊನೆಯ 2 ಟಿ20 ಪಂದ್ಯ..!

ವೀಸಾ ಆನ್‌ ಅರೈವಲ್‌ ವ್ಯವಸ್ಥೆ: ಅನೇಕ ದೇಶಗಳು ಭಾರತೀಯರಿಗೆ ವೀಸಾ ಆನ್ ಅರೈವಲ್ ಸೌಲಭ್ಯವನ್ನು ಸಹ ಒದಗಿಸುತ್ತವೆ, ಅಂದರೆ ನೀವು ಪ್ರಯಾಣಿಸುವ ದೇಶದ ವಿಮಾನ ನಿಲ್ದಾಣದಲ್ಲಿ ತಕ್ಷಣವೇ ವೀಸಾ ಸಿಗುತ್ತದೆ. ಶ್ರೀಲಂಕಾ ಭಾರತೀಯ ಪ್ರವಾಸಿಗರಿಗೆ ವೀಸಾ ಆನ್ ಅರೈವಲ್‌ (Visa On Arrival) ಸೌಲಭ್ಯವನ್ನು ಒದಗಿಸುತ್ತದೆ. ಇದಲ್ಲದೆ ಮಾರಿಷಸ್, ಮಾಲ್ಡೀವ್ಸ್, ಹಾಂಗ್ ಕಾಂಗ್, ಮಲೇಷ್ಯಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾ ಕೂಡ ಭಾರತದಿಂದ ಬರುವ ಜನರಿಗೆ ವೀಸಾ ಆನ್ ಅರೈವಲ್‌ ಸೌಲಭ್ಯವನ್ನು ಒದಗಿಸುತ್ತದೆ.

 

click me!