ಓಹ್ ನೋ... ಸೆಲ್ಪಿ ತೆಗೆದು ಮೈಮರೆತವನ ಸ್ಥಿತಿ ಏನಾಯ್ತು ನೋಡಿ... ವೈರಲ್ ವಿಡಿಯೋ

By Anusha KbFirst Published Sep 14, 2022, 1:40 PM IST
Highlights

ವಾಸ್ತವದಲ್ಲಿ ಬದುಕದೇ ಕಲ್ಪನಾ ಲೋಕದಲ್ಲಿ ವಿಹಾರಿಸುತ್ತಾ ಖುಷಿಯಲ್ಲಿ ತೇಲಿದ  ವ್ಯಕ್ತಿಯೊಬ್ಬ ಏನು ಮಾಡಿದ ಎಂಬುದರ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರಿಗೆ ಹೊಟ್ಟೆ ಹುಣ್ಣಾಗುವಂತೆ ನಗಿಸುವಂತೆ ಮಾಡುತ್ತಿದೆ.

ಕೈಯಲ್ಲೊಂದು ಮೊಬೈಲ್ ಫೋನ್ ಇದ್ದರೆ ಕೆಲವರ ಅತೀರೇಕಕ್ಕೆ ಕೊನೆಯೆಂಬುದು ಇರುವುದಿಲ್ಲ, ಕೂತಲಿ ನಿಂತಲ್ಲಿ ಸತ್ತಲ್ಲಿ ಹುಟ್ಟಿದಲ್ಲಿ ಎಲ್ಲೆಡೆಯೂ ಸೆಲ್ಪಿ ತೆಗೆಯಲು ಶುರು ಮಾಡಿ ಜೊತೆಗಿರುವವರಿಗೆ ಹುಚ್ಚೇ ಹಿಡಿಸಿ ಬಿಡುತ್ತಾರೆ. ಸೋಶಿಯಲ್ ಮೀಡಿಯಾದ ಈ ಯುಗದಲ್ಲಿ ಜನರ ಸೆಲ್ಫಿ ಕ್ರೇಜ್ ಅಂತದ್ದು, ಇತ್ತೀಚೆಗೆ ಈ ಸೆಲ್ಫಿ ವಿಡಿಯೋ ಆಗಿ ಬದಲಾಗಿದ್ದು, ಜನ ತಿಂದಿದ್ದು, ಉಂಡಿದ್ದು, ಮಲಗಿದ್ದನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುತ್ತಾರೆ. ಇನ್ನು ಫೋನೊಂದು ಕೈಯ್ಯಲಿದ್ದರೆ ಮಂಗದ ಕೈಯಲ್ಲಿ ಮಾಣಿಕ್ಯವಿದಂತೆ ಜನರಿಗೆ ತಾವು ಏನು ಮಾಡುತ್ತೇವೆ ಎಂಬುದರ ಅರಿವು ಕೆಲವೊಮ್ಮೆ ಇರುವುದಿಲ್ಲ. ತಮ್ಮದೇ ಲೋಕದಲ್ಲಿ ಅವರು ವಿಹಾರಿಸುತ್ತಿರುತ್ತಾರೆ. ಹೀಗೆ ವಾಸ್ತವದಲ್ಲಿ ಬದುಕದೇ ಕಲ್ಪನಾ ಲೋಕದಲ್ಲಿ ವಿಹಾರಿಸುತ್ತಾ ಖುಷಿಯಲ್ಲಿ ತೇಲಿದ  ವ್ಯಕ್ತಿಯೊಬ್ಬ ಏನು ಮಾಡಿದ ಎಂಬುದರ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರಿಗೆ ಹೊಟ್ಟೆ ಹುಣ್ಣಾಗುವಂತೆ ನಗಿಸುವಂತೆ ಮಾಡುತ್ತಿದೆ.

ಹೀಗೆಯೇ ವ್ಯಕ್ತಿಯೊಬ್ಬ ಸಮುದ್ರದಲ್ಲಿ ಬೋಟಿಂಗ್ ಮಾಡುತ್ತಿದ್ದಾನೆ. ಆತನ ಜೊತೆ ಇನ್ನಿಬ್ಬರು ಬೋಟ್‌ನಲ್ಲಿ ಕುಳಿತಿದ್ದರೆ, ಈತ ಮಾತ್ರ ನಿಂತುಕೊಂಡು ಕೈಯಲ್ಲಿ ಮೀನೊಂದು ಹಿಡಿದುಕೊಂಡು ಒಂದೇ ಸಮನೇ ಕ್ಲಿಕ್ ಕ್ಲಿಕ್ ಕ್ಲಿಕ್ ಅಂತ ಮೀನಿನೊಂದಿಗೆ ಫೋಟೋ ಕ್ಲಿಕ್ಕಿಸುತ್ತಿದ್ದಾನೆ. ಬರೀ ಫೋಟೋ (Photo) ಕ್ಲಿಕ್ಕಿಸಿ ಸುಮ್ಮನಾಗಿದ್ದಾರೆ. ಈ ವಿಡಿಯೋ (video) ಕ್ರೇಜಿ ಎನಿಸುತ್ತಿರಲಿಲ್ಲ ಬಿಡಿ, ಈತ ಫೋಟೋ ಕ್ಲಿಕ್ಕಿಸಿದ ನಂತರ ಮೈ ಮರೆತು ಮೀನನ್ನು ಕೆಳಕ್ಕೆಸೆಯುವ ಬದಲು ಮೊಬೈಲ್ ಫೋನ್‌ ಅನ್ನೇ ಸಮುದ್ರಕ್ಕೆಸೆದಿದ್ದಾನೆ. ಬಹುಶಃ ಈಗ ನಗುವ ಸರದಿ ಮೀನಿನದ್ದಾಗಿರಬಹುದು. ಈತ ಫೋಟೋ ಕ್ಲಿಕ್ಕಿಸುವ ವೇಳೆ ಈತನ ಕೈಯಲ್ಲಿ ಮೀನು ವಿಲ ವಿಲ ಒದ್ದಾಡುತ್ತಿದ್ದರೆ, ಮೊಬೈಲ್ ನೀರಿಗೆಸೆದ ಬಳಿಕ ನಿಂತಲ್ಲಿ ನಿಲ್ಲಲಾರದೇ ವಿಲ ವಿಲಗೊಳ್ಳುವ ಸರದಿ ಈತನದ್ದಾಗಿದೆ. ಸಮುದ್ರಕ್ಕೆಸೆದ (sea) ಮೀನಿಗಾಗಿ ಈತ ಬೋಟ್ (Boat) ಮೇಲೆಯೇ ನಿಂತು ನೀರಿನತ್ತ ಬಾಗುವುದನ್ನು ವಿಡಿಯೋದಲ್ಲಿ ಕಾಣಬಹುದು. 

😂 pic.twitter.com/i9aFrSYeRg

— Tansu YEĞEN (@TansuYegen)

ಮನಸ್ಸಿನ ಅನುಪಸ್ಥಿತಿ ಎಂತಹ ಅನಾಹುತ ಸೃಷ್ಟಿಸಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ನಾವು ಕೆಲವೊಮ್ಮೆ ಮೊಬೈಲ್(Mobile) ನೋಡುತ್ತಾ ವಾಸ್ತವ ಮರೆತು ಎಂತಹ ಅನಾಹುತಕ್ಕೆ ಸಿಲುಕುತ್ತೇವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಈ ವಿಡಿಯೋವನ್ನು 12.5 ಮಿಲಿಯನ್ ಜನ ವೀಕ್ಷಿಸಿದ್ದು, 33 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದವರೆಲ್ಲಾ ಓಹ್ ನೋ, ಹೀಗಾಗಬಾರದಿತ್ತು ಎಂದು ಕಾಮೆಂಟ್ ಮಾಡಿದರೆ, ಮತ್ತೆ ಕೆಲವರು ನಗುವಿನ ಇಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ. ಮನಸ್ಸಿನ ಅನುಪಸ್ಥಿತಿಯಿಂದ ಇಂತಹ ಹಲವು ಕಿತಾಪತಿಗಳನ್ನು ನಾನು ಮಾಡಿದ್ದೇನೆ. ಆದರೆ ಮೊಬೈಲ್ ಎಸೆಯುವ ಕೆಲಸ ಯಾವತ್ತೂ ಮಾಡಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದು ನಕಲಿ, ಆತ ಮೊಬೈಲ್ ಎಸೆದಿಲ್ಲ, ಸುಮ್ಮನೇ ವಿಡಿಯೋಗೋಸ್ಕರ ಈ ರೀತಿ ಮಾಡಿದ್ದಾನೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

ಫೋಟೋ ತೆಗೆಸಿಕೊಳ್ಳಲು ಹೋಗಿ ಜಲಪಾತಕ್ಕೆ ಬಿದ್ದ ಯುವಕ: ರಕ್ಷಣಾ ಪಡೆಯಿಂದ ಶೋಧ ಕಾರ್ಯಾಚರಣೆ

ಇನ್ನು ಮೊಬೈಲ್ (smart Phone) ಎಂಬುದು ಬಹುತೇಕ ಜನರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಜನ ಜೀವ ಹೋದರೂ ಪರವಾಗಿಲ್ಲ. ಮೊಬೈಲ್ ಮಾತ್ರ ಕಳೆದು ಹೋಗಬಾರದು ಎಂಬ ಮನಸ್ಥಿತಿಯಲ್ಲಿ ಇದ್ದಾರೆ. ಅಲ್ಲದೇ ಈ ರೀತಿ ಎಲ್ಲೆಂದರಲ್ಲಿ ಸೆಲ್ಫಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಹಲವು ನಿದರ್ಶನಗಳಿವೆ. 


ಚುಂಚಿಫಾಲ್ಸ್‌ನಲ್ಲಿ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಸಾವನ್ನಪ್ಪಿದ ಯುವಕ

click me!