Iran Anti Hijab Protest: ಕೂದಲು ಕತ್ತರಿಸಿಕೊಂಡು ಸಹೋದರನ ಸಮಾಧಿ ಮೇಲೆ ಎಸೆದ ಮಹಿಳೆ

By BK AshwinFirst Published Sep 26, 2022, 1:35 PM IST
Highlights

ಇರಾನ್‌ನಲ್ಲಿ ನೈತಿಕತೆ ಪೊಲೀಸರಿಂದ ಬಂಧನಕ್ಕೀಡಾಗಿದ್ದ ಮಹಿಳೆ ಕಸ್ಟಡಿಯಲ್ಲಿ ಮೃತಪಟ್ಟ ಬಳಿಕ ಇರಾನ್‌ ಮಹಿಳೆಯರು ಜಗತ್ತಿನ ಹಲವು ದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಕೂದಲು ಕತ್ತರಿಸಿಕೊಂಡು ಸಾಂಕೇತಿಕವಾಗಿ ಪ್ರತಿಭಟಿಸುತ್ತಿದ್ದಾರೆ. 

ಇರಾನ್‌ನಲ್ಲಿ 22 ವರ್ಷದ ಮಹ್ಸಾ ಅಮೀನಿ ಸಾವಿನ ಬಳಿಕ ಹಿಜಾಬ್ ವಿರೋಧಿ ಪ್ರತಿಭಟನೆ (Anti Hijab Protest) ತೀವ್ರಗೊಂಡಿದೆ. ಈ ಪ್ರತಿಭಟನೆಗಳಿಗೆ 41 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು(Death), 700 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ(Arrested). ಈ ಪ್ರತಿಭಟನೆ ವೇಳೆ  ಮರಣ ಹೊಂದಿದ ಎಂದು ಹೇಳಲಾದ ಜಾವದ್‌ ಹೇಯ್ದಾರಿ ಅಂತ್ಯಕ್ರಿಯೆಯ (Final Rites) ವಿಡಿಯೋವನ್ನು ವ್ಯಾಪಕವಾಗಿ ಶೇರ್‌ ಮಾಡಿಕೊಳ್ಳಲಾಗಿದೆ. ಈ ವೇಳೆ, ಮೃತಪಟ್ಟ ವ್ಯಕ್ತಿಯ ಸಮಾಧಿ ಬಳಿ ಸಹೋದರಿ ತನ್ನ ಕೂದಲನ್ನು (Hair) ಕತ್ತರಿಸುತ್ತಿರುವುದನ್ನು ನೋಡಬಹುದು. ಅಲ್ಲದೆ, ಆ ಕತ್ತರಿಸಿಕೊಂಡ ಕೂದಲನ್ನು ಸಮಾಧಿಯ (Grave) ಮೇಲೆ ಹಾಕಿದ್ದಾಳೆ. 

ಅಲ್ಲದೆ, 22 ವರ್ಷದ ಮಹ್ಸಾ ಅಮಿನಿಯ ಸಾವನ್ನು ಪ್ರತಿಭಟಿಸುತ್ತಿರುವ ವಿಶ್ವಾದ್ಯಂತ ಇರಾನಿನ ಮಹಿಳೆಯರು ಕೂದಲು ಕತ್ತರಿಸಿಕೊಳ್ಳುವುದು, ಹಿಜಾಬ್‌ (Hijab) ಸುಡುವ ಮೂಲಕ ಪ್ರಬಲ ಸಾಂಕೇತಿಕ ಗೆಸ್ಚರ್ ಅನ್ನು ಬಳಸಿದ್ದಾರೆ. "ಸರಿಯಾದ ರೀತಿಯಲ್ಲಿ" ಹಿಜಾಬ್ ಅನ್ನು ಧರಿಸದಿದ್ದಕ್ಕಾಗಿ ಇರಾನ್‌ನ ನೈತಿಕತೆಯ ಪೋಲೀಸರು ಮಹ್ಸಾ ಅಮೀನಿಯನ್ನು ಬಂಧಿಸಿದ್ದರು ಮತ್ತು ಕಸ್ಟಡಿಯಲ್ಲಿದ್ದಾಗ ಆಕೆ ಮೃತಪಟ್ಟಿದ್ದಳು.

ಇದನ್ನು ಓದಿ: ಇರಾನ್‌ನಲ್ಲಿ ತೀವ್ರಗೊಂಡ Anti Hijab Protest; ಕೂದಲು ಕತ್ತರಿಸಿಕೊಂಡು ಹಿಜಾಬ್‌ ಸುಟ್ಟ ಮಹಿಳೆಯರು

Javad Heydari's sister, who is one of the victims of protests against the murder of , cuts her hair at her brother's funeral. pic.twitter.com/6PJ21FECWg

— 1500tasvir_en (@1500tasvir_en)

ಇನ್ನು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೋದಲ್ಲಿ, ಬೇಸರದಲ್ಲಿರುವ ಮಹಿಳೆಯರು ಸಮಾಧಿಯ ಮೇಲೆ ಹೂಗಳನ್ನು ಎಸೆಯುತ್ತಿರುವುದನ್ನು ಕಾಣಬಹುದು, ಆದರೆ ಜಾವದ್‌ ಹೇಯ್ದಾರಿ ಅವರ ಸಹೋದರಿ ಎಂದು ಗುರುತಿಸಲಾಗಿರುವ ಮಹಿಳೆ,  ಜಾವದ್‌ ಸಮಾಧಿಯ ಬಳಿ ಕೂದಲು ಕತ್ತರಿಸಿಕೊಂಡು ಆ ಕೂದಲನ್ನು ಸಮಾಧಿಯ ಮೇಲೆ ಹಾಕಿದ್ದಾರೆ. ಶೋಕತಪ್ತ ಸ್ತ್ರೀಯರ ಗುಂಪೊಂದು ಅವಳ ಹಿಂದೆ ನಿಂತಿರುವಂತೆ, ಆ ಮಹಿಳೆ ಹೂ-ಮುಚ್ಚಿದ ಸಮಾಧಿಯ ಮೇಲೆ ಕೂದಲನ್ನು ಇಡುತ್ತಾಳೆ.

ಇನ್ನು, ತಮ್ಮ ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ, "ಇರಾನ್‌ ಮಹಿಳೆಯರು ತಮ್ಮ ದುಃಖ ಮತ್ತು ಕೋಪವನ್ನು ತೋರಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಇರಾನಿನ ಪತ್ರಕರ್ತೆ ಮತ್ತು ಕಾರ್ಯಕರ್ತೆ ಮಾಸಿಹ್ ಅಲಿನೆಜಾದ್ ಅವರು ಹೇಳಿದ್ದಾರೆ. ಹಿಜಾಬ್ ಅನ್ನು ಸರಿಯಾದ ರೀತಿಯಲ್ಲಿ ಧರಿಸದ ಆರೋಪದ ಮೇಲೆ ಇರಾನ್‌ನ ಕುಖ್ಯಾತ ನೈತಿಕತೆಯ ಪೊಲೀಸರು ಬಂಧಿಸಿದ ನಂತರ ಮಹ್ಸಾ ಅಮೀನಿ ನಿಧನರಾದರು. ಆಕೆಯ ಸಾವಿನ ನಂತರ, ಇರಾನ್‌ನಲ್ಲಿ ಮಾತ್ರವಲ್ಲದೆ, ಜಗತ್ತಿನ ಹಲವೆಡೆ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದಿವೆ.

ತೀರಾ ಇತ್ತೀಚೆಗೆ, ಫ್ರೆಂಚ್ ಪೊಲೀಸರು ನಿನ್ನೆ ಅಶ್ರುವಾಯು ಬಳಸಿದರು ಮತ್ತು ಪ್ಯಾರಿಸ್‌ನಲ್ಲಿ ನೂರಾರು ಜನರು ಟೆಹ್ರಾನ್‌ನ ರಾಯಭಾರ ಕಚೇರಿಯ ಮೇಲೆ ಮೆರವಣಿಗೆ ಮಾಡುವುದನ್ನು ತಡೆಯಲು ಗಲಭೆ ವಿರೋಧಿ ತಂತ್ರಗಳನ್ನು ಬಳಸಿದ್ದಾರೆ ಎಂದು AFP ವರದಿಗಾರರು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಲ್ಲದೆ, ಲಂಡನ್‌ನಲ್ಲಿ, ಇರಾನ್‌ನ ಯುಕೆ ರಾಯಭಾರ ಕಚೇರಿಯನ್ನು ರಕ್ಷಿಸುವ ಅಡೆತಡೆಗಳನ್ನು ಭೇದಿಸಲು ಪ್ರಯತ್ನಿಸುತ್ತಿರುವ ಪ್ರತಿಭಟನಾಕಾರರೊಂದಿಗೆ ಅಧಿಕಾರಿಗಳು ಘರ್ಷಣೆ ಮಾಡಿದ್ದರಿಂದ ಪೊಲೀಸರು ಹಲವು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Hijab ಧರಿಸದ್ದಕ್ಕೆ ಯುವತಿ ಬಂಧನ: ಕೋಮಾದಲ್ಲಿದ್ದ ಮಹಿಳೆ ಸಾವು

ಇನ್ನೊಂದೆಡೆ, ಹಿಜಾಬ್‌ ವಿರೋಧಿ ಪ್ರತಿಭಟನೆಗೆ ತಡೆಯೊಡ್ಡಲು ಇರಾನ್‌ ಸರ್ಕಾರ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸಿದೆ. ಈ ಹಿನ್ನೆಲೆ ಪ್ರತಿಭಟನೆಗಳ ಮೇಲೆ ಇರಾನ್‌ ಆಡಳಿತ ಸರ್ಕಾರ ದಮನ ಹೇರುತ್ತಿರುವುದಕ್ಕೆ ವ್ಯಾಪಕವಾಗಿ ಖಂಡನೆ ವ್ಯಕ್ತವಾಗಿದೆ. ವಾಟ್ಸಾಪ್‌ (WhatsApp), ಸ್ಕೈಪ್‌ (Skype), ಲಿಂಕ್ಡ್‌ಇನ್‌ (LinkedIn) ಮತ್ತು ಇನ್ಸ್ಟಾಗ್ರಾಮ್‌ (Instagram) ನಂತಹ ಸಂವಹನ ವೇದಿಕೆಗಳ ಮೇಲೂ ನಿರ್ಬಂಧ ಹೇರಲಾಗಿದೆ. 

click me!