ನೀಲಾಕಾಶದಲ್ಲಿ ಚಿತ್ತಾರ ಮೂಡಿಸಿದ ಬಣ್ಣ ಬಣ್ಣದ ಚಿಟ್ಟೆಗಳು: ವೈರಲ್ ವಿಡಿಯೋ

Published : Sep 25, 2022, 12:53 PM ISTUpdated : Sep 25, 2022, 12:54 PM IST
ನೀಲಾಕಾಶದಲ್ಲಿ ಚಿತ್ತಾರ ಮೂಡಿಸಿದ ಬಣ್ಣ ಬಣ್ಣದ ಚಿಟ್ಟೆಗಳು: ವೈರಲ್ ವಿಡಿಯೋ

ಸಾರಾಂಶ

ನೀಲಿ ಆಕಾಶದಲ್ಲಿ ಚಿಟ್ಟೆಗಳು ಸ್ವಚ್ಛಂದವಾಗಿ ಸುತ್ತಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಮೋನಾರ್ಕ್ ಬಟರ್‌ಫ್ಲೈ (monarch butterflies) ಎಂದು ಕರೆಯಲ್ಪಡುವ ಈ ಚಿಟ್ಟೆಗಳ ವಿಡಿಯೋವನ್ನು ಬ್ಯುಟೆಂಗೆಬೀಡೆನ್ (Buitengebieden) ಎಂಬ ಟ್ವಿಟ್ಟರ್ ಖಾತೆಯಿಂದ (Twitter account) ಪೋಸ್ಟ್ ಮಾಡಲಾಗಿದೆ.

ಪಾತರಗಿತ್ತಿ ಪಕ್ಕಾ ನೋಡಿದ್ದೇನಾ ಅಕ್ಕ ಎಂಬ ಹಾಡನ್ನು ನೀವು ಕೇಳಿರಬಹುದು. ಇದರಲ್ಲಿ ವರಕವಿ ಧಾ.ರಾ. ಬೇಂದ್ರೆಯವರು ಪಾತರಗಿತ್ತಿ ಎಂದು ಕರೆಯಲ್ಪಡುವ ಚಿಟ್ಟೆಯ ವರ್ಣನೆ ಮಾಡಿದ್ದಾರೆ. ಹಲವು ಬಣ್ಣಗಳಲ್ಲಿ ವಿವಿಧ ಆಕಾರಗಳಲ್ಲಿ ಇರುವ ಚಿಟ್ಟೆಗಳು ಕಣ್ಣಿಗೆ ತಂಪು ಮಾಡುವ ಜೊತೆಗೆ ಹೂವಿಂದ ಹೂವಿಗೆ ಹಾರುತ್ತ ಹೂಗಳು ನಗುವಂತೆ ಮಾಡುವವು. ಚಿಟ್ಟೆಗಳ ಚಿತ್ತಾರವನ್ನು ಬೇಂದ್ರಯವರಂತೆ ಹಲವು ಕವಿಗಳು ಕೂಡ ವರ್ಣಿಸಿದ್ದಾರೆ. 

ಅದೇ ರೀತಿ ನೀಲಿ ಆಕಾಶದಲ್ಲಿ ಚಿಟ್ಟೆಗಳು ಸ್ವಚ್ಛಂದವಾಗಿ ಸುತ್ತಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಮೋನಾರ್ಕ್ ಬಟರ್‌ಫ್ಲೈ (monarch butterflies) ಎಂದು ಕರೆಯಲ್ಪಡುವ ಈ ಚಿಟ್ಟೆಗಳ ವಿಡಿಯೋವನ್ನು ಬ್ಯುಟೆಂಗೆಬೀಡೆನ್ (Buitengebieden) ಎಂಬ ಟ್ವಿಟ್ಟರ್ ಖಾತೆಯಿಂದ (Twitter account) ಪೋಸ್ಟ್ ಮಾಡಲಾಗಿದೆ. ಈ ಪೇಜ್ ಸದಾ ಕಾಲ ಪ್ರಾಣಿ ಪಕ್ಷಿಗಳ ಹಾಗೂ ಪ್ರಕೃತಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳನ್ನು ಆಗಾಗ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡುತ್ತಿರುತ್ತದೆ. ಅದೇ ರೀತಿ ಈ ಸುಂದರ ಚಿಟ್ಟೆಗಳ ವಿಡಿಯೋ ಪೋಸ್ಟ್ ಮಾಡಲಾಗಿದ್ದು ಕಣ್ಮನ ಸೆಳೆಯುತ್ತಿದೆ. ಸಾವಿರಾರು ಚಿಟ್ಟೆಗಳು, ಸ್ವಚ್ಛ ನೀಲಾಕಾಶದಲ್ಲಿ ಸೊಗಸಾಗಿ ಹಾರಾಡುತ್ತಾ ಬಾನ ಸೌಂದರ್ಯಕ್ಕೆ ಕಳೆ ಕಟ್ಟಿವೆ. ಲಕ್ಷಾಂತರ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅಲ್ಲದೇ ನೂರಾರು ಜನ ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಎರಡು ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ಶೇರ್ ಮಾಡಿಕೊಂಡು ಕಾಮೆಂಟ್ ಮಾಡಿದ್ದಾರೆ.  

ಕೆಲವರು ಇವು ವಲಸೆ ಬಂದಿರಬೇಕು ಎಂದು ಹೇಳಿದರೆ ಮತ್ತೆ ಕೆಲವರು ಅವುಗಳ ಸೌಂದರ್ಯಕ್ಕೆ ಬೆರಗಾಗಿದ್ದಾರೆ. ನಾನು ವಾಸಿಸುವ ಸಮೀಪದಲ್ಲಿ ಬೀಚೊಂದು ಇದ್ದು ಇಲ್ಲಿ ನೀಲಗಿರಿ ಮರಗಳು ಸಾಕಷ್ಟಿವೆ. ಇಲ್ಲಿ  ಪ್ರತಿ ವರ್ಷ ಈ ಮೊನಾರ್ಕ್ ಚಿಟ್ಟೆಗಳು ಆಗಮಿಸುತ್ತವೆ. ನೋಡಲು ಬಹಳ ಅದ್ಭುತವಾಗಿರುತ್ತವೆ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. 

ಈ ಮೋನಾರ್ಕ್ ಚಿಟ್ಟೆಗಳು ಹಾಲು ರಸ ಬಿಡುವ ಸಸ್ಯಗಳ ಮೇಲೆ ಮೊಟ್ಟೆಯಿಡುವ ಒಂದು ಬಗೆಯ ಚಿಟ್ಟೆಗಳಾಗಿದ್ದು, ಉತ್ತರ ಅಮೆರಿಕಾದ (North america) ಚಿಟ್ಟೆಗಳಲ್ಲೇ ಇವು ಬಹಳ ಜನಪ್ರಿಯವಾದ ಚಿಟ್ಟೆಗಳಾಗಿವೆ. ಈ ಮೊನಾರ್ಕ್ ಚಿಟ್ಟೆಗಳು ಅಮೆರಿಕಾದಲ್ಲಿ, ದಕ್ಷಿಣ ಕೆನಡಾ (South canada), ದಕ್ಷಿಣ ಅಮೆರಿಕಾದ ಉತ್ತರ ಭಾಗಗಳಲ್ಲಿ ಹಾಗೂ ಅತ್ಯಂತ ವಿರಳವಾಗಿ ಪಶ್ಚಿಮ ಯೂರೋಪ್ ನಲ್ಲೂ ಕಂಡುಬರುತವೆ. ಹಾಗೆಯೇ ಬರ್ಮುಡಾ, ಹವಾಯಿ, ಸೊಲೋಮನ್ಸ್, ನ್ಯೂ ಕ್ಯಾಲೆಡೋನಿಯಾ, ನ್ಯೂ ಜೀಲ್ಯಾಂಡ್, ಆಸ್ಟ್ರೇಲಿಯಾ, ನ್ಯೂ ಗಿನಿಯಾ, ಸಿಲೋನ್, ಭಾರತ, ಅಝೋರ್ಸ್ ಹಾಗೂ ಕ್ಯಾನರಿ ದ್ವೀಪಗಳಲ್ಲೂ ಕಂಡುಬರುತ್ತವೆ.

ಚಿಟ್ಟೆಗೂ ‘ರಾಷ್ಟ್ರೀಯ’ ಮಾನ್ಯತೆ - ಏಳು ಚಿಟ್ಟೆಗಳು ಅಂತಿಮ ಸುತ್ತಿನಲ್ಲಿ

ಇವುಗಳ ರೆಕ್ಕೆಗಳು ‌ಸುಲಭವಾಗಿ ಗುರುತಿಸಲು ಸಾಧ್ಯವಾಗುವ ಕೇಸರಿ (Orange) ಹಾಗೂ ಕಪ್ಪು ಬಣ್ಣದ ಚಿತ್ತಾರಗಳಿಂದ ಕೂಡಿವೆ. ಹಿಂದಿನ ರೆಕ್ಕೆಯ ಮೇಲಿನ ಒಂದು ವಿಶೇಷವಾದ ಚಿತ್ತಾರದಿಂದ ಅವುಗಳನ್ನು ಪ್ರತ್ಯೇಕವಾಗಿ ಗುರುತಿಸಬಹುದಾಗಿದೆ. ಹೆಣ್ಣು ಚಿಟ್ಟೆಗಳ ರೆಕ್ಕೆಗಳ ಮೇಲಿನ ಗೆರೆಗಳು ಕಡುಗಪ್ಪಾಗಿರುತ್ತವೆ, ಗಂಡು ಚಿಟ್ಟೆಗಳ ಹಿಂದಿನ ರೆಕ್ಕೆಗಳ ನಡುವೆ ಆಂಡ್ರೋಕೋನಿಯಂ (Androconium) ಎಂದು ಕರೆಯಲ್ಪಡುವ ಕಪ್ಪು ಚುಕ್ಕೆಗಳಿರುತ್ತವೆ.

ಹಾಗೆಯೇ ಗಂಡು ಚಿಟ್ಟೆಗಳು ಗಾತ್ರದಲ್ಲಿ ಹೆಣ್ಣು ಚಿಟ್ಟೆಗಳಿಗಿಂತ ದೊಡ್ಡದಾಗಿರುತ್ತವೆ. ಮೊನಾರ್ಕ್ ಚಿಟ್ಟೆಗಳು ಅವುಗಳ ವಲಸೆಗಾಗಿಯೇ ಹೆಚ್ಚು ಪ್ರಸಿದ್ಧಿಯನ್ನು ಹೊಂದಿವೆ. ಈ ವಲಸೆಯನ್ನು ಮುಗಿಸುವಷ್ಟರಲ್ಲಿ ಅವುಗಳ ಅನೇಕ ತಲೆಮಾರುಗಳೇ (Generation) ಕಳೆದು ಹೋಗುತ್ತವೆ. ಉತ್ತರ, ಮಧ್ಯ ಮತ್ತು ದಕ್ಷಿಣ ಅಮೆರಿಕಾದಲ್ಲಿ ಅವರು ಹೆಚ್ಚು ಸಾಮಾನ್ಯವಾಗಿದ್ದರೂ, ಆಸ್ಟ್ರೇಲಿಯಾ (Australia), ಹವಾಯಿ, ಭಾರತ ಮತ್ತು ಇತರ ಸ್ಥಳಗಳಲ್ಲಿಯೂ ಇವು ವಿರಳವಾಗಿ ಕಂಡುಬರುತ್ತವೆ.

ರೈತರಿಗೆ ಸಂತಸದ ಸುದ್ದಿ: ಚಿಟ್ಟೆ ಗುರುತು ಹೇಳಲು ಬಂದಿದೆ ಆ್ಯಪ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?