ಸಿಂಹದ ದಾಳಿಯಿಂದ ಮರಿಯನ್ನು ರಕ್ಷಿಸಿದ ಜಿರಾಫೆ : ವಿಡಿಯೋ ವೈರಲ್

By Anusha Kb  |  First Published Oct 17, 2022, 5:23 PM IST

ಮಗುವಿನ ಮೇಲಿನ ತಾಯಿ ಪ್ರೀತಿಗೆ ಈಗಾಗಲೇ ಸಾಕಷ್ಟು ಉದಾಹರಣೆಗಳು ಆಗಿ ಹೋಗಿವೆ. ಪ್ರಾಣಿಗಳು ಕೂಡ ತಮ್ಮ ಕಂದನನ್ನು ಬಹಳ ಜೋಪಾನವಾಗಿ ಕಾಯುತ್ತವೆ. ಅದಕ್ಕೆ ಮತ್ತೊಂದು ಉದಾಹರಣೆ ಈ ವೈರಲ್ ವಿಡಿಯೋ.


ಮಕ್ಕಳ ರಕ್ಷಣೆಯ ವಿಚಾರದಲ್ಲಿ ತಾಯಿಯರು ಎಂದಿಗೂ ರಾಜೀ ಮಾಡಿಕೊಳ್ಳಲಾರರು. ಇದು ಮನುಷ್ಯರೇ ಇರಬಹುದು ಅಥವಾ ಪ್ರಾಣಿಗಳೇ ಇರಬಹುದು. ತಾಯಿ ಪ್ರೀತಿ ತೋರುವುದರಲ್ಲಿ ಪ್ರಾಣಿಗಳು ಕೂಡ ಕಡಿಮೆ ಏನಿಲ್ಲ. ಮಗುವಿನ ಮೇಲಿನ ತಾಯಿ ಪ್ರೀತಿಗೆ ಈಗಾಗಲೇ ಸಾಕಷ್ಟು ಉದಾಹರಣೆಗಳು ಆಗಿ ಹೋಗಿವೆ. ಪ್ರಾಣಿಗಳು ಕೂಡ ತಮ್ಮ ಕಂದನನ್ನು ಬಹಳ ಜೋಪಾನವಾಗಿ ಕಾಯುತ್ತವೆ. ಅದಕ್ಕೆ ಮತ್ತೊಂದು ಉದಾಹರಣೆ ಈ ವೈರಲ್ ವಿಡಿಯೋ.

ವಿಡಿಯೋದಲ್ಲಿ ಕಾಣಿಸುವಂತೆ ಜಿರಾಫೆಯ ಮರಿಯೊಂದರ ಮೇಲೆ ಸಿಂಹ (Lion)ಹೊಂಚು ಹಾಕಿ ದಾಳಿ ನಡೆಸಿದ್ದು, ಈ ವೇಳೆ ದೂರದಲ್ಲಿದ್ದ ತಾಯಿ ಜಿರಾಫೆ ಓಡಿ ಬಂದು ಮರಿಯನ್ನು ರಕ್ಷಣೆ ಮಾಡಿದೆ. ತಾಯಿ ಜಿರಾಫೆ ಬಂದಿದೆ ತಡ ಸಿಂಹ ಎದ್ನೋ ಬಿದ್ನೋ ಅಂತ ಆ ಸ್ಥಳದಿಂದ ಓಡಿ ಹೋಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗಿದ್ದು, ತಾಯಿ ಎಂದಿದ್ದರೂ ತಾಯಿಯೇ ಎಂಬುದನ್ನು ಸಾಬೀತುಪಡಿಸಿದೆ. ಅನಿಮಲ್ಸ್ ಪವರ್ ಎಂಬ ಇನ್ಸ್ಟಾಗ್ರಾಮ್(Instagram Page) ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಲಕ್ಷಾಂತರ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಎರಡು ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. 

 
 
 
 
 
 
 
 
 
 
 
 
 
 
 

Tap to resize

Latest Videos

A post shared by Animal Power (@animals_powers)

ಜಿರಾಫೆಗೆ ಆಹಾರ ತಿನ್ನಿಸಿದ ಮಹಿಳೆ: ವಿಡಿಯೋ ವೈರಲ್

ಜಿರಾಫೆ ಬಹಳ ನೀಳ ಕಾಯದ ಪ್ರಾಣಿಯಾಗಿದ್ದು, ಜಿರಾಫೆಗಳನ್ನು(Giraffe) ಬೇಟೆಯಾಡುವುದು ಸಿಂಹಕ್ಕೆ ಸುಲಭ ಕೆಲಸವಲ್ಲ. ಅದಾಗ್ಯೂ ಕೆಲವೊಮ್ಮೆ ಜಿರಾಫೆಗಳು ಬೇಟೆಯಾಡುತ್ತವೆ. ಆದರೆ ಸಣ್ಣ, ಅಸಹಾಯಕ, ಅನಾರೋಗ್ಯ, ಗರ್ಭಿಣಿ (Pragnent) ಮತ್ತು ದುರ್ಬಲ ಜಿರಾಫೆಗಳನ್ನು ಗುರಿಯಾಗಿಸಿಕೊಳ್ಳುತ್ತವೆ. ಸಧೃಡ ಜಿರಾಫೆಗಳನ್ನು ಬೇಟೆ ಸಿಂಹಗಳಿಂದಲೂ ಕಷ್ಟಸಾಧ್ಯ ಸಿಂಹಗಳು ಸಾಮಾನ್ಯವಾಗಿ ಹಿಂದಿನಿಂದ ಜಿರಾಫೆಯ ಮೇಲೆ ದಾಳಿ ಮಾಡುತ್ತವೆ, ಅವುಗಳನ್ನು ನೆಲಕ್ಕೆ ಮುಗ್ಗರಿಸಿ, ಗಂಟಲು ಕಟ್ಟಿಕೊಂಡು ಸಾಯುವಂತೆ ಮಾಡುತ್ತವೆ. ನಂತರ ಅವುಗಳನ್ನು ತಿನ್ನುತ್ತವೆ. ಸಾಮಾನ್ಯವಾಗಿ ಜಿರಾಫೆಯ ಬೃಹತ್ ಗಾತ್ರ ಮತ್ತು ಎತ್ತರದಿಂದಾಗಿ ಜಿರಾಫೆಯನ್ನು ಸಿಂಹಗಳಿಗೆ ಸುಲಭವಾಗಿ ಸೋಲಿಸಲಾಗುವುದಿಲ್ಲ. ಜಿರಾಫೆಯು ಎಷ್ಟು ಎತ್ತರವಾಗಿದೆ ಎಂದರೆ ಸಿಂಹಕ್ಕೆ ಎಂದಿಗೂ ಅದರ ಗಂಟಲನ್ನು ಮುಟ್ಟುವುದು ಅಸಾಧ್ಯದ ಕೆಲಸ ಅದಾಗ್ಯೂ ಅತ್ಯಂತ ವಿರಳ ಸಂದರ್ಭದಲ್ಲಿ ಜಿರಾಫೆಗಳು ಸಿಂಹಕ್ಕೆ ಬಲಿಯಾಗುತ್ತವೆ.

ಇದೇ ಕಾರಣಕ್ಕೆ ಈ ಬೃಹತ್ ಗಾತ್ರದ ಜಿರಾಫೆಯನ್ನು ಸಿಂಹಗಳು ಒಂಟಿಯಾಗಿ ಬೇಟೆಯಾಡುವುದು ವಿರಳ, ಸಿಂಹಗಳು ಗುಂಪಿನಲ್ಲಿ ಬಂದು ಈ ಬೃಹತ್ ಗಾತ್ರದ ಪ್ರಾಣಿ ಮೇಲೆ ದಾಳಿ ನಡೆಸುತ್ತವೆ. ಈ ಮಧ್ಯೆ ಸಿಂಹವೊಂದು ಜಿರಾಫೆಯ ಮರಿಯನ್ನು ಬೇಟೆಯಾಡಲು ಮುಂದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಜಿಂಕೆ ಮರಿಯ ಕೊಂಬಿನಲ್ಲಿ ಸಿಲುಕಿದ್ದ ಗಿಡ ಕಿತ್ತೆಸೆದ ಜಿರಾಫೆ : ವಿಡಿಯೋ ವೈರಲ್ 

ಆಹಾರ ತಿನ್ನಲು ಹೋದ ಜಿರಾಫೆ ಉಸಿರುಕಟ್ಟಿ ಸಾವು

 ಆಹಾರ ತಿನ್ನಲು ಕುತ್ತಿಗೆಯನ್ನು ಹೊರ  ಹಾಕಿದ್ದ ಜಿರಾಫೆ ಕಬ್ಬಿಣದ ಮೆಶ್‌ ಗೆ ಸಿಲುಕಿ ಮೃತಪಟ್ಟ ಘಟನೆ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಬನ್ನೇರುಘಟ್ಟದ (Bannergatta) ಜೈವಿಕ ಉದ್ಯಾನವನದಲ್ಲಿ ನಡೆದಿತ್ತು. ಕಬ್ಬಿಣದ ಮೆಶ್ ಗೆ ಕತ್ತು ಸಿಲುಕಿ ಜಿರಾಫೆ ಸಾವು ಕಂಡಿತ್ತು. ಆಹಾರ ತಿನ್ನಲು ಜಿರಾಫೆ ಕತ್ತು ಹೊರಹಾಕಿತ್ತು. 2020ರಲ್ಲಿ ಮೈಸೂರಿನಿಂದ (Mysore) ತರಲಾಗಿದ್ದ ಮೂರುವರೆ ವರ್ಷದ ಜಿರಾಫೆ ಯದುನಂದನ್ (Yadunandan) ಹೀಗೆ ದುರಂತವಾಗಿ ಸಾವಿಗೀಡಾಗಿತ್ತು

click me!