ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಗೆ ಈಗ ಹೊಸ ಸಮಸ್ಯೆ... ನಾಲಿಗೆಯಲ್ಲಿ ಬೆಳೆತಿದೆ ಕೂದಲು

By Suvarna NewsFirst Published Jan 24, 2022, 10:32 AM IST
Highlights
  • ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಗೆ ಈಗ ಹೊಸ ಸಮಸ್ಯೆ
  • ನಾಲಗೆಯಲ್ಲಿ ಕೂದಲು ಬೆಳೆಯುವ ಸಮಸ್ಯೆ
  • ನಾಲಗೆಯ ಕ್ಯಾನ್ಸರ್‌ನಿಂದ ಗುಣಮುಖರಾಗಿದ್ದ ಕ್ಯಾಮರೂನ್ ನ್ಯೂಸಮ್‌

ಕೊಲೆರಾಡೋ(ಜ. 24):  ಅಮೆರಿಕಾದ ಕೊಲೆರಾಡೋದ ಮಹಿಳೆಯೊಬ್ಬರಿಗೆ ಅಪರೂಪದ ನಾಲಗೆ ಕ್ಯಾನ್ಸರ್‌ ಬಂದಿದ್ದು, ಪ್ರಸ್ತುತ ನಾಲಗೆಯ ಮೇಲೆ ಕೂದಲು ಬೆಳೆಯಲು ಶುರುವಾಗಿದೆ. ಕೊಲೆರಾಡೋ(Colorado)ನಿವಾಸಿ, ಒಂದು ಮಗುವಿನ ತಾಯಿಯೂ ಆಗಿರುವ ಕ್ಯಾಮರೂನ್ ನ್ಯೂಸಮ್ ಅವರಿಗೆ ಆರಂಭದಲ್ಲಿ ನಾಲಗೆಯಲ್ಲಿ ಬಳಿಯ ಮಚ್ಚೆಯಂತೆ ಕಾಣಿಸಲು ಶುರುವಾಗಿದೆ. ಅದು ದಿನ ಕಳೆದಂತೆ ದೊಡ್ಡದಾಗುತ್ತಾ ಹೋಗಿದ್ದು, ವೈದ್ಯರಿಗೂ ಇದು ಕ್ಯಾನ್ಸರ್‌ ಎಂಬುದನ್ನು ಪತ್ತೆ ಮಾಡಲು ಮೂರು ವರುಷ ತಗುಲಿತ್ತು ಎಂದು ಕ್ಯಾಮರೂನ್‌ ನ್ಯೂಸಮ್‌ (Cameron Newsom) ಹೇಳಿದ್ದಾರೆ. 

ನ್ಯೂಸಮ್‌ಗೂ ತಮ್ಮ ನಾಲಿಗೆ ಮೇಲಿನ ಬಳಿ ಮಚ್ಚೆಯೊಂದು ನಾಲ್ಕನೇ ಹಂತದ ಕ್ಯಾನ್ಸರ್‌ ಆಗಿ ಬದಲಾಗಬಹುದು ಎಂಬ ಸಣ್ಣ ಕಲ್ಪನೆಯೂ ಇರಲಿಲ್ಲ. ಅಲ್ಲದೇ ಆಕೆಗೆ ಕ್ಯಾನ್ಸರ್ ಇದೆ ಎಂಬುದನ್ನು ಎರಡು ಬಯೋಪ್ಸಿಯಿಂದಲೂ ಪತ್ತೆ ಮಾಡಲಾಗಿರಲಿಲ್ಲ. ಆದರೆ ಕ್ರಮೇಣ ನಾಲಗೆಯಲ್ಲಿ ನೋವು ಆರಂಭವಾಗಿ ತಿನ್ನಲು ಹಾಗೂ ಮಾತನಾಡಲು ಕೂಡ ಕಷ್ಟವಾಗುತ್ತಿತ್ತು. ಬಳಿಕ ಆಕೆಯ ಡಾಕ್ಷರ್‌ ಆಕೆಗೆ ಅಲರ್ಜಿ ಆಗಿರಬಹುದು ಎಂದು ಭಾವಿಸಿ ಆಕೆಗೆ  antibiotic ಮಾತ್ರೆಯನ್ನು ನೀಡಿದರು. 

ಮಗಳಿಗೆ ಸಂಗಾತಿಗಾಗಿ ಬಿಲ್ಬೋರ್ಡ್‌ ಮೊರೆಹೋದ ಕ್ಯಾನ್ಸರ್‌ನಿಂದ ಬಳಲುತ್ತಿರುವ ತಾಯಿ

ಆದಾಗ್ಯೂ ಈ  antibiotic ಮಾತ್ರೆಗಳು ಕೂಡ ನ್ಯೂಸಮ್‌ಗೆ ಪರಿಹಾರ ಒದಗಿಸಲಿಲ್ಲ. ಜೊತೆಗೆ ನ್ಯೂಸಮ್‌ ದೇಹದ ತೂಕ ತನ್ನಷ್ಟಕ್ಕೇ ಕಡಿಮೆಯಾಗಲು ಶುರುವಾಯಿತು. ನಂತರ 2013ರಲ್ಲಿ ಅವರು ಓಟೋಲರಿಂಗೋಲಜಿಸ್ಟ್ (otolaryngologist) - (ಕಿವಿ, ಮೂಗು ಮತ್ತು ಗಂಟಲು ವೈದ್ಯರು) ಒಬ್ಬರು ಆಕೆಗೆ ನಾಲ್ಕನೇ ಹಂತದ ಕ್ಯಾನ್ಸರ್‌ನಿಂದ ತಾವು ಬಳಲುತ್ತಿರುವುದಾಗಿ ಹೇಳಿದರು. ಇದರಿಂದ ನ್ಯೂಸಮ್‌ ಕುಟುಂಬಸ್ಥರು ಗಾಬರಿಗೊಳಗಾಗಿದ್ದರು. ಆದರೆ ನ್ಯೂಸಮ್‌ ಮಾತ್ರ ಇದರ ವಿರುದ್ಧ ಹೋರಾಡುವ ನಿರ್ಧಾರ ಮಾಡಿದ್ದರು.

ಬಳಿಕ ಯಶಸ್ವಿ ಕೀಮೋಥೆರಪಿಯ ನಂತರ, ಆಕೆ ನಾಲಿಗೆಯಿಂದ ಗೆಡ್ಡೆಯನ್ನು ತೆದು ಹಾಕುವ ಚಿಕಿತ್ಸೆಗೆ ವೈದ್ಯರು ನಿರ್ಧರಿಸಿದ್ದರು. ನಂರ ಟೆಕ್ಸಾಸ್‌ನ (Texas) ಹೂಸ್ಟನ್‌ (Houston) ನಲ್ಲಿರುವ  ಎಂ.ಡಿ. ಆಂಡರ್ಸನ್ (MD Anderson) ಕ್ಯಾನ್ಸರ್ ಕೇಂದ್ರದ ಶಸ್ತ್ರಚಿಕಿತ್ಸಕರು ನ್ಯೂಸಮ್‌ನಲ್ಲಿ ಸಂಕೀರ್ಣವಾದ ಶಸ್ತ್ರಚಿಕಿತ್ಸೆಯನ್ನು ನಡೆಸಿದರು. ಒಂಭತ್ತು ಗಂಟೆಗಳ ದೀರ್ಘ ಶಸ್ತ್ರಚಿಕಿತ್ಸೆಯ ಬಳಿಕ ವೈದ್ಯರು ಆಕೆಯ ಎಡಭಾಗದ ನಾಲಗೆಯನ್ನು ಕತ್ತರಿಸಿ ತೆಗೆದು ಅಲ್ಲಿಗೆ ಆಕೆಯ ತೊಡೆಯಿಂದ ಚರ್ಮವನ್ನು ತೆಗೆದು ನಾಲಿಗೆಯ ಭಾಗಕ್ಕೆ ಜೋಡಿಸಿದರು. 

Side Effects of Wine: ಒಂದು ಪೆಗ್ ವೈನ್ ಕುಡಿದರೆ ಆರೋಗ್ಯಕ್ಕೆ ಎಷ್ಟು ಹಾನಿಯಿದೆ ಗೊತ್ತಾ ?

ಶಸ್ತ್ರಚಿಕಿತ್ಸೆಯ ನಂತರ, ನ್ಯೂಸಮ್‌ ವಿಕಿರಣ ಚಿಕಿತ್ಸೆ ( radiation therapy) ಮತ್ತು ಮೂರು ಸುತ್ತಿನ ಕೀಮೋಥೆರಪಿ (chemotherapy)ಗೆ ಒಳಗಾಗಬೇಕಾಯಿತು. ಅಲ್ಲದೇ ಆಕೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಮತ್ತು ಹೊಸದಾಗಿ ಸಿದ್ಧವಾದ ನಾಲಿಗೆಗೆ ಒಗ್ಗಿಕೊಳ್ಳಲು ಬಹಳ ಸಮಯ ತೆಗೆದುಕೊಂಡರು. ಜೊತೆಗೆನಿಧಾನವಾಗಿ ಮಾತನಾಡುವುದು ಮತ್ತು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡರು. 

ಆದರೆ ವಿಲಕ್ಷಣವಾದ ವಿಚಾರವೆಂದರೆ ಆಕೆಗೆ ನಾಲಿಗೆ ಜೋಡಿಸಲು ವೈದ್ಯರು ತೊಡೆಯ ಭಾಗದಿಂದ ಅಂಗಾಂಶ ತೆಗೆದು ನಾಲಿಗೆಗೆ ಜೋಡಿಸಿದ ಪರಿಣಾಮ ಈಗ ಆಕೆಯ ನಾಲಿಗೆಯಲ್ಲಿ ಕೂದಲು ಬೆಳೆಯಲು ಶುರುವಾಗಿದೆ. ಪ್ರಸ್ತುತ 42 ವರ್ಷದ ನ್ಯೂಸಮ್‌ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಅಲ್ಲದೇ ಕ್ಯಾನ್ಸರ್‌ನಿಂದ ಬಳಲುತ್ತಿರುವ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ. 

click me!