
ನವದೆಹಲಿ (ಡಿ.2): ಫಿಲಿಪೈನ್ಸ್‌ನ ಮಿಂಡಾನಾವೊದಲ್ಲಿ ಶನಿವಾರ 7.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ (EMSC) ತಿಳಿಸಿದೆ. ಭೂಕಂಪವು 63 ಕಿಮೀ (39 ಮೈಲುಗಳು) ಆಳದಲ್ಲಿದೆ ಎಂದು ಇಎಂಎಸ್‌ಸಿ ಹೇಳಿದೆ. ಭೂಕಂಪದ ನಂತರ ಯುಎಸ್ ಸುನಾಮಿ ಎಚ್ಚರಿಕೆ ವ್ಯವಸ್ಥೆಯು ಸುನಾಮಿ ಎಚ್ಚರಿಕೆಯನ್ನು ನೀಡಿದೆ. ಸುರಿಗಾವೊ ಡೆಲ್ ಸುರ್‌ನ ಹಿನಾಟುವಾನ್‌ನ ನೀರಿನಲ್ಲಿ 7.5 ತೀವ್ರತೆಯ ಭೂಕಂಪನದ ನಂತರ ಸಾಮಾನ್ಯ ಉಬ್ಬರವಿಳಿತಕ್ಕಿಂತ ಒಂದು ಮೀಟರ್‌ಗಿಂತ ಹೆಚ್ಚು ಎತ್ತರದ ಅಲೆಗಳು ಏಳುವ ಸಾಧ್ಯತೆ ಇದ್ದು, ಜೀವಕ್ಕೆ ಅಪಾಯವನ್ನುಂಟುಮಾಡುವ ವಿನಾಶಕಾರಿ ಸುನಾಮಿ ಅಲೆಗಳು ಏಳಬಹುದು ಫಿಲಿಪ್ಪಿನ್ಸ್‌ನ ಸರ್ಕಾರಿ ಪ್ರಕಟಣೆ ತಿಳಿಸಿದೆ. 63 ಕಿಲೋಮೀಟರ್ ಆಳದ ಭೂಕಂಪವು ಶನಿವಾರ ರಾತ್ರಿ 10:37 ರ ಸುಮಾರಿಗೆ ಮಿಂಡಾನಾವೊದಲ್ಲಿ ಪರಿಣಾಮ ಬೀರಿde. ಸುರಿಗಾವೊ ಡೆಲ್ ಸುರ್‌ನಲ್ಲಿರುವ ಬಿಸ್ಲಿಗ್ ಸಿಟಿ ಮತ್ತು ಅಗುಸನ್ ಡೆಲ್ ನಾರ್ಟೆಯ ಕಬಡ್‌ಬರನ್ ಸಿಟಿಯಲ್ಲಿ ಭೂಕಂಪದ ತೀವ್ರತೆಯನ್ನು ಅನುಭವಿಸಿತು. ರಾತ್ರಿ 11 ಗಂಟೆಗೆ, ಪ್ರಬಲ ಭೂಕಂಪದ ನಂತರ ಫಿವೋಲ್ಕ್ಸ್ ಸುನಾಮಿ ಎಚ್ಚರಿಕೆಯನ್ನು ನೀಡಿತು.
ಫಿಲಿಪೈನ್ ಭೂಕಂಪಶಾಸ್ತ್ರ ಏಜೆನ್ಸಿ PHIVOLCS ಪ್ರಕಾರ ಸುನಾಮಿ ಅಲೆಗಳು ಫಿಲಿಪೈನ್ಸ್ ಅನ್ನು ಮಧ್ಯರಾತ್ರಿಯ ವೇಳೆಗೆ ಅಪ್ಪಳಿಸಬಹುದು ಮತ್ತು ಗಂಟೆಗಳವರೆಗೆ ಮುಂದುವರಿಯಬಹುದು. ಜಪಾನ್ ಬ್ರಾಡ್‌ಕಾಸ್ಟರ್ ಎನ್‌ಎಚ್‌ಕೆ ಪ್ರಕಾರ, ಒಂದು ಮೀಟರ್ (3 ಅಡಿ) ಎತ್ತರದ ಸುನಾಮಿ ಅಲೆಗಳು ಸ್ವಲ್ಪ ಸಮಯದ ನಂತರ ಜಪಾನ್‌ನ ಪಶ್ಚಿಮ ಕರಾವಳಿಯನ್ನು ತಲುಪುವ ನಿರೀಕ್ಷೆಯಿದೆ - ಭಾನುವಾರ ಮುಂಜಾನೆ ವೇಳೆಗೆ ಇದು ಅಪ್ಪಳಿಸಬಹುದು ಎಂದಿದೆ.
(ಸುದ್ದಿ ಅಪ್‌ಡೇಟ್ ಆಗುತ್ತಿದೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ