Covid 19 Cases ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಕೋವಿಡ್‌!

By Kannadaprabha NewsFirst Published Apr 27, 2022, 5:15 AM IST
Highlights
  • 2 ಡೋಸ್ ಜೊತೆಗೆ 2 ಬೂಸ್ಟರ್ ಡೋಸ್ ಪಡೆದಿರುವ ಹ್ಯಾರಿಸ್
  • ಆದರೂ ಕೋವಿಡ್ ಸೋಂಕು, ಅಮೆರಿಕದಲ್ಲಿ ಕೊರೋನಾ ಏರಿಕೆ
  • ಸೋಂಕಿನ ಲಕ್ಷಣಗಳು ತೀವ್ರವಾಗಿಲ್ಲ, ಮನೆಯಿಂದಲೇ ಕೆಲಸ

ವಾಷಿಂಗ್ಟನ್‌(ಏ.27): ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರಿಗೆ ಮಂಗಳವಾರ ಕೋವಿಡ್‌ ಸೋಂಕು ದೃಢಪಟ್ಟಿದೆ. ಆದರೆ ಅಧ್ಯಕ್ಷ ಜೋ ಬೈಡೆನ್‌ ಹಾಗೂ ಅವರ ಪತ್ನಿ ಜಿಲ್‌ ಬೈಡೆನ್‌ ಅವರು ಕಮಲಾ ಅವರ ಸಂಪರ್ಕಕ್ಕೆ ಬಂದಿಲ್ಲ ಎಂದು ಶ್ವೇತ ಭವನ ಪ್ರಕಟಣೆಯಲ್ಲಿ ತಿಳಿಸಿದೆ.

ಕಮಲಾ ಅವರು ಇತ್ತೀಚಿಗೆ ಪಶ್ಚಿಮ ಕರಾವಳಿಯ ಪ್ರವಾಸದಿಂದ ಹಿಂದಿರುಗಿದ್ದರು. ಅವರಿಗೆ ಸೋಂಕು ಇರುವುದು ರಾರ‍ಯಪಿಡ್‌ ಮತ್ತು ಪಿಸಿಆರ್‌ ಪರೀಕ್ಷೆಗಳೆರಡರಲ್ಲೂ ದೃಡಪಟ್ಟಿದೆ. ಆದರೆ ಸೋಂಕಿನ ಲಕ್ಷಣಗಳು ತೀವ್ರವಾಗಿಲ್ಲ. ಸೋಂಕು ಇರುವ ಕಾರಣ ಅವರು ಶ್ವೇತ ಭವನ ಪ್ರವೇಶಿಸುವಂತಿಲ್ಲ. ಅವರು ಗುಣವಾಗುವವರೆಗೆ ಮನೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಚೀನಾದಲ್ಲಿ ಲಾಕ್‌ಡೌನ್ ಭೀತಿ, ಅಗತ್ಯವವಸ್ತು ಖರೀದಿಸಲು ಮುಗಿಬಿದ್ದ ಜನ!

ಕಮಲಾ ಮಾಡೆರ್ನಾ ಲಸಿಕೆಯ ಮೊದಲ 2 ಡೋಸ್‌ ಅಲ್ಲದೆ, 2 ಬೂಸ್ಟರ್‌ ಲಸಿಕೆಗಳನ್ನೂ ಪಡೆದಿದ್ದರು.ಇದೀಗ ಕೋವಿಡ್ ದೃಢಪಟ್ಟಿದೆ. ಇದರ ಬೆನ್ನಲ್ಲೇ ಅಮೆರಿಕದಲ್ಲಿನ ಕೊವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದೆ.

ಭಾರತದಲ್ಲೂ ಕೊರೋನಾ ವೈರಸ್ ಮತ್ತೆ ಅಬ್ಬರಿಸಲು ಆರಂಭಿಸಿದೆ. ದಿನದಿಂದ ದಿನಕ್ಕೆ ಪ್ರಕರಣ ಹೆಚ್ಚಾಗುತ್ತಿದೆ. ದೇಶದಲ್ಲಿ ನಾಲ್ಕನೇ ಅಲೆ ಭೀತಿ ಎದುರಾಗಿದೆ. ಈಗಾಗಲೇ ಹಲವು ರಾಜ್ಯಗಳು ಮಾಸ್ಕ್ ಕಡ್ಡಾಯ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಸಭೆ ಬಳಿಕ ಮತ್ತಷ್ಟು ಕಠಿಣ ನಿಯಮ ಜಾರಿಯಾಗುವ ಸಾಧ್ಯತೆ ಇದೆ.

ದಿಲ್ಲಿಯಲ್ಲಿ 1204 ಕೇಸು
ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌ ಪ್ರಕರಣಗಳ ಏರಿಕೆ ಮುಂದುವರೆದಿದ್ದು ಮಂಗಳವಾರ ಹೊಸದಾಗಿ 1204 ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಓರ್ವ ಸೋಂಕಿತ ಸಾವಿಗೀಡಾಗಿದ್ದಾನೆ. ಪಾಸಿಟಿವಿಟಿ ದರದಲ್ಲೂ ಏರಿಕೆ ಕಂಡು ಬಂದಿದ್ದು ಶೇ.4.64ಕ್ಕೆ ಏರಿಕೆಯಾಗಿದೆ.

Covid 19 cases ರಾಜ್ಯದಲ್ಲಿ ಕೋವಿಡ್ 4ನೇ ಅಲೆ ಭೀತಿ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಂತಿಲ್ಲ!

ಕೋವಿಡ್‌ 4ನೇ ಅಲೆ ತಡೆಗೆ ಸರ್ಕಾರ ಸನ್ನದ್ಧ
ಕೊರೋನಾ ಸಂಭವೀನಿಯ 4ನೇ ಅಲೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಬುಧವಾರ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಹಾಗು ಆರೋಗ್ಯ ಸಚಿವರ ಜೊತೆ ವರ್ಚುಲ್‌ ಸಭೆ ನಡೆಸಲಿದ್ದಾರೆ. ಸದ್ಯದ ವಸ್ತುಸ್ಥಿತಿ ಬಗ್ಗೆ ಮಾಹಿತಿ ಪಡೆದ ನಂತರ ಮುಂದಿನ ಕ್ರಮಗಳ ಕುರಿತು ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಚಿಕ್ಕಬಳ್ಳಾಪುರ ತಾಲೂಕಿನ ಕಣಜೇನಹಳ್ಳಿಯಲ್ಲಿ ಮಂಗಳವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೂಡ ದೇಶದ ಬೇರೆ ಬೇರೆ ರಾಜ್ಯಗಳ ಹಾಗೂ ದೇಶಗಳಲ್ಲಿ 4ನೇ ಅಲೆಗಳ ವಸ್ತುಸ್ಥಿತಿ ಆಯಾ ರಾಜ್ಯಗಳ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ವಿಶೇಷವಾಗಿ 8 ವಿದೇಶಗಳಿಂದ ರಾಜ್ಯಕ್ಕೆ ಆಗಮಿಸುವ ವಿದೇಶಿ ವ್ಯಕ್ತಿಗಳನ್ನು ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸಲಾಗುತ್ತಿದ್ದು ಅಗತ್ಯ ಇರುವವರಿಗೆ ಟೆಲಿ ಮೆಡಿಸಿನ್‌ ಸೌಲಭ್ಯ ಕಲ್ಪಿಸಲಾಗುವುದು. ಜನತೆ 4ನೇ ಅಲೆ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಇನ್ನೂ 2 ಹಾಗೂ 3ನೇ ಡೋಸ್‌ ಲಸಿಕೆ ಪಡೆಯದವರು ಕೂಡಲೇ ಪಡೆದುಕೊಳ್ಳಬೇಕು ಎಂದರು.

ಕಣಜೇನಹಳ್ಳಿಯಲ್ಲಿ ಅದ್ಧೂರಿ ಜಾತ್ರೆ
ಇದೇ ವೇಳೆ ಸಚಿವ ಡಾ.ಕೆ.ಸುಧಾಕರ್‌, ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್‌, ರಾಜ್ಯ ಮಾವು ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್‌ ಮತ್ತಿತರರು ಕಣಜೇನಹಳ್ಳಿಯಲ್ಲಿ ನಡೆದ ಶ್ರೀ ಆದಿಶಕ್ತಿ ಕಾಳಿಕಾಂಭ ದೇವಿ, ಶ್ರೀ ಚೌಡೇಶ್ವರಿ ಭದ್ರಕಾಳಿದೇವಿ ಜಾತ್ರ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಗ್ರಾಮಸ್ಥರು ಸಚಿವದ್ವರಿಗೆ ಸೇಬಿನ ಹಾರ ಹಾಕಿ ಸ್ವಾಗತಿಸಿದರು.

click me!