- ಕ್ರೆಮಿನ್ನಾ ಕೈವಶ ಮಾಡಿಕೊಂಡ ಪುಟಿನ್ ಪಡೆ
- ಉಕ್ರೇನ್‌ಗೆ ರಷ್ಯಾದ ರಾಯಭಾರಿ ಎಚ್ಚರಿಕೆ
- ಮೂರನೇ ಮಹಾಯುದ್ಧದ ಕುರಿತು ಉಕ್ರೇನ್ ಪ್ರಚೋದನೆ
ಕೀವ್(ಏ.27): ಎರಡು ತಿಂಗಳಿನಿಂದ ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ, ಮರಿಯುಪೋಲ್ ಬಳಿಕ ಉಕ್ರೇನ್‌ನ ಮತ್ತೊಂದು ನಗರವನ್ನು ವಶಕ್ಕೆ ತೆಗೆದುಕೊಂಡಿದೆ. ಲುಕಾಂಕ್‌್ಷ ವಲಯದಲ್ಲಿರುವ ಕ್ರೆಮಿನ್ನಾ ನಗರದಲ್ಲಿ ಹಲವು ದಿನಗಳ ಕಾಳಗದ ಬಳಿಕ ವಶಕ್ಕೆ ಪಡೆಯುವಲ್ಲಿ ರಷ್ಯಾ ಸಫಲವಾಗಿದೆ ಎಂದು ಬ್ರಿಟನ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ ಈ ಬಗ್ಗೆ ಉಕ್ರೇನ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಈ ಮಧ್ಯೆ, ಮೂರನೇ ಮಹಾಯುದ್ಧದ ಕುರಿತು ಉಕ್ರೇನ್ ಪ್ರಚೋದನೆ ನೀಡಬಾರದು. ಜತೆಗೆ ಅಣ್ವಸ್ತ್ರ ಬಿಕ್ಕಟ್ಟಿನ ಬೆದರಿಕೆಯನ್ನು ಉಕ್ರೇನ್ ಲಘುವಾಗಿ ಪರಿಗಣಿಸಬಾರದು ಎಂದು ರಷ್ಯಾದ ರಾಯಭಾರಿ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ, ರೈಲು ಹಾಗೂ ಇಂಧನ ಕೇಂದ್ರಗಳ ಮೇಲೆ ರಷ್ಯಾ ತನ್ನ ದಾಳಿಯನ್ನು ತೀವ್ರಗೊಳಿಸಿದೆ.
ರಷ್ಯಾ ಹೊಸದಾಗಿ ವಶಪಡಿಸಿಕೊಂಡಿರುವ ಕ್ರಿಮಿನ್ನಾ ಉಕ್ರೇನ್ ರಾಜಧಾನಿ ಕೀವ್‌ನಿಂದ 575 ಕಿ.ಮೀ. ದೂರದಲ್ಲಿದೆ. ಇದೀಗ ರಷ್ಯಾ ಸ್ಲೋವಿಯಾನ್ಸ್$್ಕ ಹಾಗೂ ಕ್ರಾಮಾಟೋರ್ಸ್$್ಕ ಕಡೆ ದಾಪುಗಾಲು ಇಟ್ಟಿದೆ ಎಂದು ಬ್ರಿಟನ್ ಸೇನೆ ಹೇಳಿದೆ.
World War III ಮೂರನೇ ಮಹಾಯುದ್ಧದ ಎಚ್ಚರಿಕೆ ನೀಡಿದ ರಷ್ಯಾ, ರಾತ್ರೋರಾತ್ರಿ ತಲ್ಲಣ!
ಉಕ್ರೇನ್‌ನ ಎರಡನೇ ಅತಿದೊಡ್ಡ ನಗರ ಖಾರ್ಕೀವ್ ಮೇಲೆ ರಷ್ಯಾದ ದಾಳಿ ಮುಂದುವರಿದಿದೆ. ಡೊನೆಟ್ಸ್$್ಕ ಹಾಗೂ ಲುಹಾನ್ಸ್$್ಕ ಪ್ರಾಂತ್ಯಗಳ ವಶಕ್ಕೆ ರಷ್ಯಾ ಹೋರಾಡುತ್ತಿದೆ. ಲುಹಾನ್ಸ್$್ಕ ಪ್ರಾಂತ್ಯದಲ್ಲಿ ಡಾನ್‌ಬಾಸ್ ಇದ್ದು, ಅದು ಉಕ್ರೇನ್ ಪ್ರಮುಖ ಕೈಗಾರಿಕಾ ಪ್ರದೇಶವಾಗಿದೆ. ಅಲ್ಲಿಂದ ಕ್ರಿಮಿಯಾಗೆ ಕಾರಿಡಾರ್ ಸ್ಥಾಪಿಸುವ ಆಸೆಯನ್ನು ರಷ್ಯಾ ಹೊಂದಿದೆ.
ಉಕ್ರೇನ್‌ನ ಉಕ್ಕು ಕಾರ್ಖಾನೆ ಮೇಲೆ ರಷ್ಯಾ ದಾಳಿ
ರಷ್ಯಾ ಸೇನೆ ಬಹುತೇಕ ವಶಕ್ಕೆ ಪಡೆದುಕೊಂಡಿರುವ ಬಂದರು ನಗರ ಮರಿಯುಪೋಲ್‌ನಲ್ಲಿ ಉಳಿದಿರುವ ಉಕ್ರೇನ್‌ನ ಕೊನೆಯ ತುಕಡಿಯನ್ನು ಹೊರಹಾಕುವ ಉದ್ದೇಶದಿಂದ ಇಲ್ಲಿನ ಉಕ್ಕು ಕಾರ್ಖಾನೆಯ ಮೇಲೆ ರಷ್ಯಾ ಪಡೆಗಳು ವಾಯುದಾಳಿ ನಡೆಸಿವೆ.
ರಷ್ಯಾದ ಉಕ್ಕು ಕಾರ್ಖಾನೆಯಲ್ಲಿ ವಶಪಡಿಸಿಕೊಳ್ಳಲು ಸುಮಾರು 2000 ಯೋಧರು ಹೋರಾಟ ನಡೆಸುತ್ತಿದ್ದಾರೆ. ಅತಿ ದೂರಕ್ಕೆ ದಾಳಿ ಮಾಡಬಲ್ಲ ವಿಮಾನಗಳನ್ನುಬಳಸಿ ರಷ್ಯಾ ದಾಳಿ ನಡೆಸುತ್ತಿದೆ. ಮರಿಯುಪೋಲ್‌ನಲ್ಲಿ ಉಳಿದಿರುವ ಜನರಿಗೆ ಆಹಾರದ ಅಭಾವ ಎದುರಾಗಿದೆ. ಇದೇ ವೇಳೆ ರಾಜಧಾನಿ ಕೀವ್‌ನಿಂದ ತನ್ನ ಸೇನೆಯನ್ನು ಹಿಂಪಡೆಯುತ್ತಿರುವ ರಷ್ಯಾ ಉಳಿದ ನಗರ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ.
ಯುದ್ಧ ಆರಂಭವಾದಾಗಿನಿಂದಲೂ ಬಂದರು ನಗರ ಮಾರಿಯುಪೋಲ್ ಮೇಲೆ ರಷ್ಯಾ ಭೀಕರ ದಾಳಿ ನಡೆಸುತ್ತಲೇ ಇದೆ.
ರಷ್ಯಾದ ಮೇಲೆ ಪರಿಣಾಮ ಬೀರಲು ಆರಂಭಿಸಿದ ಪಾಶ್ಚಿಮಾತ್ಯ ನಿರ್ಬಂಧ, ಕೆಲಸ ಕಳೆದುಕೊಂಡ 2 ಲಕ್ಷ ಜನ!
ರಷ್ಯಾ ಮಿಲಿಟರಿ ಕಮಾಂಡ್ ನಾಶ:
ಖೇರ್ಸನ್‌ನಲ್ಲಿ ನಿರ್ಮಿಸಲಾಗಿದ್ದ ರಷ್ಯಾದ ಸೇನಾ ಕಮಾಂಡ್ ನೆಲೆಯನ್ನು ನಾಶ ಮಾಡಿರುವುದಾಗಿ ಉಕ್ರೇನ್ ಸೇನೆ ಹೇಳಿದೆ. ಶುಕ್ರವಾರ ಈ ದಾಳಿ ನಡೆಸಲಾಗಿದ್ದು, ಇಬ್ಬರು ಸೇನಾ ಜನರಲ್‌ಗಳು ಹತರಾಗಿದ್ದಾರೆ. ಈ ಕಮಾಂಡ್‌ನಲ್ಲಿ 50ಕ್ಕೂ ಹೆಚ್ಚು ರಷ್ಯಾ ಸೇನೆಯ ಹಿರಿಯ ಅಧಿಕಾರಿಗಳಿದ್ದರು ಎಂದು ಉಕ್ರೇನ್ ಹೇಳಿದೆ.
ಕೀವ್ ಶವಾಗಾರದಲ್ಲಿವೆ 1020 ಮೃತದೇಹಗಳು
ರಷ್ಯಾದ ಪಡೆಗಳು ಕೀವ್ ನಗರದಿಂದ ಹಿಂದೆ ಸರಿದ ಮೇಲೆ ಕೀವ್‌ನ ಶವಾಗಾರದಲ್ಲಿ 1020 ಮೃತದೇಹಗಳನ್ನು ಇಡಲಾಗಿದೆ ಎಂದು ಉಕ್ರೇನ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ದೇಹಗಳು ಸಾಮಾನ್ಯ ನಾಗರಿಕರದ್ದಾಗಿವೆ. ಇದು ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ಭೀಕರ ದಾಳಿಯನ್ನು ಜಗಜ್ಜಾಹೀರು ಮಾಡಿದೆ.
ಈ ಎಲ್ಲಾ ಮೃತದೇಹಗಳನ್ನು ನಾಶಗೊಂಡ ಕಟ್ಟಡಗಳು ಮತ್ತು ಬೀದಿಗಳಿಂದ ಸಂಗ್ರಹಿಸಲಾಗಿದೆ. ಇವರಲ್ಲಿ ರಷ್ಯಾದ ದ್ವೇಷಕ್ಕೆ ಬಲಿಯಾದವರು ಅಥವಾ ಚಿತ್ರಹಿಂಸೆಗೆ ಒಳಗಾದವರೂ ಸೇರಿದ್ದಾರೆ. ಇವರುಗಳ ಸಾವು ಹೇಗಾಗಿರಬಹುದು ಎಂಬುದನ್ನು ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಪರೀಕ್ಷೆ ಮಾಡುತ್ತಿದ್ದಾರೆ. ನಾವು ನೋಡಿದಂತೆ ಬಹುಪಾಲು ಜನರ ಕೈಗಳನ್ನು ಹಿಂದಕ್ಕೆ ಕಟ್ಟಿಹಿಂಬದಿಯಿಂದ ಗುಂಡು ಹಾರಿಸಲಾಗಿದೆ ಎಂದು ಕೀವ್‌ನ ಪ್ರದೇಶಿಕ ಗವರ್ನರ್ ಒಲೆಕ್ಸಾಂಡರ್ ಪಾವ್ಲಿಕ್ ಹೇಳಿದ್ದಾರೆ.