
ಕ್ಯಾಲಿಫೋರ್ನಿಯಾ(ಏ.26): ಭಾನುವಾರ ನಡೆದ ಹಾರುತ್ತಿರುವಾಗಲೇ ವಿಮಾನಗಳನ್ನು ಬದಲಿಸುವ ಅಪಾಯಕಾರಿ ಪ್ರದರ್ಶನ ವಿಫಲಗೊಂಡಿದ್ದು, ರೆಡ್‌ಬುಲ್‌ನ ಒಂದು ವಿಮಾನ ಅಪಘಾತಕ್ಕೀಡಾಗಿದೆ.
ಈ ಪ್ರದರ್ಶನಕ್ಕಾಗಿ ಮಾ.6ರಿಂದ ತಯಾರಿ ನಡೆಸುತ್ತಿದ್ದ ಪೈಲಟ್‌ಗಳು ಏ.24ರಂದು ಪ್ರದರ್ಶನ ನೀಡಲು ನಿರ್ಧರಿಸಿದ್ದರು. ಆದರೆ ಪ್ರದರ್ಶನ ವೇಳೆ 14 ಸಾವಿರ ಅಡಿ ಎತ್ತರದಲ್ಲಿ ವಿಮಾನಗಳನ್ನು ನೆಲಕ್ಕಭಿಮುಖಗೊಳಿಸಿ ವಿಮಾನದಿಂದ ಸ್ಕೈ ಡೈವ್ ಮಾಡಿದ್ದರು. ಓರ್ವ ಪೈಲಟ್ ಮತ್ತೊಂದು ವಿಮಾನಕ್ಕೆ ಹತ್ತಲು ಸಫಲನಾಗಿದ್ದರೆ, ಮತ್ತೊಬ್ಬ ಪೈಲಟ್ ವಿಫಲಗೊಂಡ ಪರಿಣಾಮ ವಿಮಾನ ನೆಲಕ್ಕಪ್ಪಳಿಸಿದೆ. ಆದರೆ ಪ್ಯಾರಾಚೂಟ್ ಬಳಸುವ ಮೂಲಕ ಪೈಲಟ್ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.
ರೆಡ್‌ಬುಲ್ ಏರ್‌ವೇಸ್‌ನಲ್ಲಿ ಪ್ರಸಾರಗೊಂಡಿದ್ದ ಈ ಪ್ರದರ್ಶನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಫ್ಲೈಟ್ ಏರಿ ಮಲೇಷ್ಯಾಕ್ಕೆ ಹಾರಿದ ಹಾವು... ವಿಡಿಯೋ ವೈರಲ್
ಡೇಂಜರ್ ಕಸರತ್ತಿಗೆ ಭಾರಿ ತಯಾರಿ ಮಾಡಿದ್ದ ಪೈಲೆಟ್ಸ್
ಹಾರುತ್ತಿರುವಾಗಲೇ ವಿಮಾನಗಳನ್ನು ಅದಲು ಬದಲು ಮಾಡಿಕೊಳ್ಳುವ ಅಪಾಯಕಾರಿ ಪ್ರದರ್ಶನವನ್ನು ಕ್ಯಾಲಿಫೋರ್ನಿಯಾದ ಇಬ್ಬರು ಪೈಲಟ್‌ಗಳು ಏ.24ರಂದು ಪ್ರದರ್ಶಿಸಿದ್ದಾರೆ.
ಪರಸ್ಪರ ಸಂಬಂಧಿಗಳಾದ ಲ್ಯೂಕ್ ಐಕೆನ್ಸ್ ಮತ್ತು ಆ್ಯಂಡಿ ಫಾರಿಂಗ್‌ಟನ್ ಎಂಬ ಈ ಪೈಲಟ್‌ಗಳೇ ಈ ಸಾಹಸಿಗಳು. ಇವರು ರೆಡ್‌ಬುಲ್ ಏರ್‌ಫೋರ್ಸ್ ಏವಿಯೇಶನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.
ವಿಮಾನಗಳು ಹಾರುತ್ತಿರುವಂತೆಯೇ ಅವುಗಳನ್ನು ಪರಸ್ಪರ ಹತ್ತಿರಕ್ಕೆ ತಂದುಕೊಳ್ಳುತ್ತಾರೆ. ಆಗ ವಿಮಾನದಿಂದ ಹೊರಕ್ಕೆ ಹಾರಿ ಮತ್ತೊಂದು ವಿಮಾನಕ್ಕೆ ಹತ್ತಿಕೊಳ್ಳಲಿದ್ದಾರೆ. ಈ ಅಪಾಯಕಾರಿ ಪ್ರದರ್ಶನಕ್ಕಾಗಿ ಮಾ.6ರಿಂದ ಟೆಸ್ಟ್ ಡ್ರೈವ್ ಮಾಡುತ್ತಿದ್ದಾರೆ. ಇದಕ್ಕಾಗಿ ಒಂದೇ ಆಸನವುಳ್ಳ ಸೆನ್ನಾ 182 ಮಾದರಿಯ 2 ವಿಮಾನಗಳನ್ನು ಆಯ್ಕೆ ಮಾಡಿಕೊಂಡಿದ್ದು, ಸುಮಾರು 14 ಸಾವಿರ ಅಡಿ ಎತ್ತರದಲ್ಲಿ ಪ್ರದರ್ಶನ ನೀಡಲಿದ್ದಾರೆ. ವಿಮಾನದಿಂದ ಸ್ಕೈ ಡೈವ್ ಮಾಡಿದ ನಂತರ ಮತ್ತೊಂದು ವಿಮಾನದ ಕಾಕ್‌ಪಿಟ್ ತಲುಪಿ ಅದನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಹಾರಾಟವನ್ನು ಮುಂದುವರೆಸಲಿದ್ದಾರೆ.
ಈ ಪ್ರದರ್ಶನವನ್ನು ರೆಡ್‌ಬುಲ್ ಏರ್‌ವೇಸ್‌ನ ವೆಬ್‌ಸೈಟ್ ನೇರ ಪ್ರಸಾರ ಮಾಡಲಿದೆ.
ಈ ಜೋಡಿ ಈಗಾಗಲೇ ಹಲವಾರು ಅಪಾಯಕಾರಿ ಪ್ರದರ್ಶನಗಳನ್ನು ನೀಡುವ ಮೂಲಕ ಪ್ರಸಿದ್ಧರಾಗಿದ್ದಾರೆ. ಲ್ಯೂಕ್ 25 ಸಾವಿರ ಅಡಿ ಎತ್ತರದಿಂದ ಪ್ಯಾರಾಚೂಟ್ ಇಲ್ಲದೇ ವಿಮಾನದಿಂದ ಸ್ಕೈಡೈವ್ ಮಾಡಿ ಬದುಕುಳಿದ್ದಾರೆ. ಆ್ಯಂಡಿ 27 ಸಾವಿರಕ್ಕೂ ಹೆಚ್ಚು ಬಾರಿ ಸ್ಕೈ ಡೈವಿಂಗ್, 1000 ಬಾರಿ ಬೇಸ್ ಡೈವಿಂಗ್ ಮಾಡಿದ್ದಾರೆ.
ದೆಹಲಿಗೆ ತೆರಳುತ್ತಿದ್ದ ಇಂಡಿಗೋ ಫ್ಲೈಟ್‌ನಲ್ಲಿ ಸ್ಮಾರ್ಟ್‌ಫೋನ್‌ಗೆ ಬೆಂಕಿ: DGCA ಮಾಹಿತಿ
42 ಏರ್‌ಕ್ರಾಫ್ಟ್‌ಗಳಿಂದ ಶೋ
ಏರೋ ಇಂಡಿಯಾದಲ್ಲಿ ಭಾರತ ಸೇರಿ ಇನ್ನಿತರ ದೇಶಗಳ 63 ವಿಮಾನಗಳು ಪ್ರದರ್ಶನಗೊಂಡಿದೆ. 42 ವಿಮಾನಗಳು ದಿನಕ್ಕೆ ಎರಡು ಬಾರಿ ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ ನೀಡಿದೆ. ಡಕೋಟಾ, ಸುಖೋಯ್, ರಫೆಲ್, ಎಲ್‌ಸಿಎಚ್, ಎಲ್‌ಯುಎಚ್, ಜಗ್ವಾರ್, ಹಾಕ್ ಸೇರಿ ಇನ್ನಿತರ ಫೈಟರ್ ಜೆಟ್, ಏರ್‌ಕ್ರಾಫ್ಟ್, ಹೆಲಿಕಾಪ್ಟರ್‌ಗಳಿಂದ ಪ್ರದರ್ಶನ ನೀಡಿದೆ.
‘ಆತ್ಮನಿರ್ಭರ ಭಾರತ್ ಫಾರ್ಮೇಷನ್’
ಹಿಂದೂಸ್ಥಾನ ಏರೊನಾಟಿಕ್ ಲಿಮಿಟೆಡ್ (ಎಚ್‌ಎಎಲ್) ವೈಮಾನಿಕ ಪ್ರದರ್ಶನದಲ್ಲಿ ‘ಆತ್ಮನಿರ್ಭರ ವೈಮಾನಿಕ ಪ್ರದರ್ಶನ’ ನೀಡಿದೆ ಸಂಪೂರ್ಣ ಸ್ವದೇಶಿ ಅಥವಾ ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸಿರುವ ಎಲ್‌ಸಿಎ ಟ್ರೈನರ್, ಎಚ್‌ಟಿಟಿ-40, ಹಾಕ್ ಎಂಕೆ-132, ಡು-228, ಐಜೆಟಿ ವಿಮಾನಗಳ ಫಾರ್ಮೆಷನ್ ಸ್ವದೇಶಿ ಸಾಮರ್ಥ್ಯ ಪ್ರದರ್ಶಿಸಿದೆ.
ಇನ್ನು ವಿಶ್ವದ ಏಕೈಕ ಹೆಲಿಕಾಪ್ಟರ್ ಸ್ಟಂಟ್ ತಂಡವಾದ ‘ಸಾರಂಗ್’, ‘ಸೂರ್ಯಕಿರಣ್’ ಏರೋ ಬ್ಯಾಟಿಕ್ ತಂಡಗಳು ಒಂದೇ ವೇಳೆಗೆ ಬಾನಂಗಳದಲ್ಲಿ ಕಾಣಿಸಿಕೊಂಡು ಕೌಶಲ್ಯ ಪ್ರದರ್ಶನ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ