ಕಣ್ಣಿಗೆ ಕೂಲಿಂಗ್ ಗ್ಲಾಸ್‌ ಕಾಲಿಗೆ ಶೂಸ್‌: ಶ್ವಾನದಳಕ್ಕೆ ವಿಶೇಷ ಸವಲತ್ತು

By Anusha Kb  |  First Published Jul 22, 2022, 12:22 PM IST

ಸೆಖೆ ಹಾಗೂ ಸೂರ್ಯನ ಶಾಖ ಮನುಷ್ಯರನ್ನು ಮಾತ್ರವಲ್ಲ ಪ್ರಾಣಿಗಳನ್ನು ಕೂಡ ಸತಾಯಿಸುತ್ತದೆ. ಇದನ್ನರಿತ ಅಮೆರಿಕಾ ಪೊಲೀಸ್ ಇಲಾಖೆ ಈಗ ತಮ್ಮ ಇಲಾಖೆಯಲ್ಲಿರುವ ಶ್ವಾನಗಳಿಗೂ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸನ್‌ಗ್ಲಾಸ್‌ಗಳು ಹಾಗೂ ಕಾಲಿಗೆ ಬೂಟುಗಳನ್ನು ಸಿದ್ಧಪಡಿಸಿ ನೀಡಿದೆ.


ಸೆಖೆ ಹಾಗೂ ಸೂರ್ಯನ ಶಾಖ ಮನುಷ್ಯರನ್ನು ಮಾತ್ರವಲ್ಲ ಪ್ರಾಣಿಗಳನ್ನು ಕೂಡ ಸತಾಯಿಸುತ್ತದೆ. ಇದನ್ನರಿತ ಅಮೆರಿಕಾ ಪೊಲೀಸ್ ಇಲಾಖೆ ಈಗ ತಮ್ಮ ಇಲಾಖೆಯಲ್ಲಿರುವ ಶ್ವಾನಗಳಿಗೂ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸನ್‌ಗ್ಲಾಸ್‌ಗಳು ಹಾಗೂ ಕಾಲಿಗೆ ಬೂಟುಗಳನ್ನು ಸಿದ್ಧಪಡಿಸಿ ನೀಡಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದ ಕ್ಯಾಲಿಫೋರ್ನಿಯಾದ ಪೋಲೀಸ್ ಇಲಾಖೆಯು ತನ್ನ ಶ್ವಾನದಳದ ಶ್ವಾನಗಳಿಗೆ ಸನ್‌ಗ್ಲಾಸ್‌ ಹಾಗೂ ವಿಶೇಷ ಬೂಟುಗಳನ್ನು ನೀಡಿದೆ.  ಇದು ತೀವ್ರವಾದ ಶಾಖದ ಅಲೆಯನ್ನು ಎದುರಿಸಲು ಶ್ವಾನಗಳಿಗೆ ಸಹಾಯ ಮಾಡುತ್ತದೆ.

ಈ ವಿಶೇಷ ಸವಲತ್ತನ್ನು ಬಳಸಿಕೊಂಡಿರುವ ಶ್ವಾನದ ಫೋಟೋಗಳನ್ನು ವೆಂಚುರಾ ಕೌಂಟಿ ಶೆರಿಫ್ ಆಫೀಸ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಅಮೆರಿಕಾದಲ್ಲಿ ಈಗ ಬೇಸಿಗೆ ಕಾಲವಾಗಿದ್ದು, ಬಿಸಿಯಾದ ತಾಪಮಾನವಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಶ್ವಾನಗಳಿಗೆ ಬಿಸಿಲಿನಿಂದ ರಕ್ಷಣಗಾಗಿ ಕಾಲಿಗೆ ಬೂಟು, ಕಣ್ಣಿಗೆ ತಂಪು ಕನ್ನಡಕ ನೀಡಲಾಗಿದೆ. 

Tap to resize

Latest Videos

Davanagere: ತುಂಗಾ ಚಾರ್ಲಿ ನೀಡಿದ ಸುಳಿವಿನ ಮೇಲೆ ಆರೋಪಿಯನ್ನು ಬಂಧಿಸಿದ ಪೊಲೀಸರು!

K9 ಥಾರ್ ಶ್ವಾನ ತನ್ನ ಬೂಟು ಹಾಗೂ ಕಪ್ಪು ಕನ್ನಡಕವನ್ನು ತೋರಿಸುವ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ. ಬಿಸಿಲಿನ ತಾಪ ಹೆಚ್ಚಿರುವುದರಿಮದ ನಿಮ್ಮ ರೋಮದಿಂದ ಕೂಡಿದ ಸ್ನೇಹಿತರನ್ನು ವಾಹನಗಳಲ್ಲಿ ಬಿಡಬೇಡಿ ಮತ್ತು ಪ್ರಾಣಿಗಳನ್ನು ಹೊರಗೆ ಕಳುಹಿಸುವ ಮೊದಲು  ತಾಪಮಾನವನ್ನು ನೋಡಿಕೊಳ್ಳಿ. ಇದು ನಿಮಗೆ ತುಂಬಾ ಬಿಸಿಯಾಗಿದ್ದರೆ, ಅದು ಅವರಿಗೂ ತುಂಬಾ ಬಿಸಿಯಾಗಿರುತ್ತದೆ ಎಂದು ಪೊಲೀಸ್ ಇಲಾಖೆಯು ಫೇಸ್‌ಬುಕ್ ಪೋಸ್ಟ್‌ನಲ್ಲಿ #germanshepherd ಮತ್ತು #protectyourpup ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ವಿಡಿಯೋ ಫೋಟೋಗಳನ್ನು ಹಂಚಿಕೊಂಡಿದೆ. 

 

ಥಾರ್ ಎಂಬ ಶ್ವಾನಕ್ಕೆ ಪೊಲೀಸ್‌ ಅಧಿಕಾರಿಯೊಬ್ಬರು ಬೂಟುಗಳನ್ನು ಹಾಕುವುದನ್ನು ವೀಡಿಯೊ  ತೋರಿಸುತ್ತಿದೆ. ಶ್ವಾನವೂ ವಿಶೇಷ ಬೂಟುಗಳು ಮತ್ತು ಸನ್‌ಗ್ಲಾಸ್‌ಗಳನ್ನು ಧರಿಸಿರುವುದು ಕಂಡುಬರುತ್ತದೆ. ಪೊಲೀಸ್ ಇಲಾಖೆಯ ಈ ವಿನೂತನ ಕ್ರಮಕ್ಕೆ ಅನೇಕರು ಮೆಚ್ಚುಗೆ ವ್ಯಕ್ಯಪಡಿಸಿದ್ದಾರೆ. ಅಲ್ಲದೇ ಕಾಮೆಂಟ್‌ಗಳನ್ನು ಮಾಡಿದ್ದಾರೆ. 

ಕಷ್ಟಪಟ್ಟು ದುಡಿಯುವ ಸುಂದರ ಹುಡುಗ, ಬೂಟುಗಳು ಹಾಗೂ ಸನ್‌ಗ್ಲಾಸ್‌ಗಳಿಂದ ಆತನನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಸುರಕ್ಷಿತವಾಗಿರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಾವು ನಾಯಿಗಳಿಗೆ ಅರ್ಹ ವ್ಯಕ್ತಿಗಳಲ್ಲ, ನಾಯಿಗಳು ಮನುಷ್ಯರಿಗಿಂತ ಉತ್ತಮವಾಗಿವೆ, ಅವುಗಳು ಪ್ರೀತಿ ಮತ್ತು ಕಾಳಜಿಯುಳ್ಳವುಗಳಾಗಿವೆ. ನಿಮ್ಮ ಕಡೆಯಿಂದ ವಿಶೇಷವಾಗಿ ಪೋಲೀಸ್, ಮಿಲಿಟರಿ ಮತ್ತು ಇತರ ಸೇವೆಯ ಸಿಬ್ಬಂದಿ ನಾಯಿಗಳನ್ನು  ಪಕ್ಕಕ್ಕೆ ಸರಿಸದೇ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. 

ಮಡಿಕೇರಿ: 400ಕ್ಕೂ ಹೆಚ್ಚು ಸ್ಫೋಟಕ ತಪಾಸಣೆ ನಡೆಸಿದ್ದ ಶ್ವಾನ 'ರ‍್ಯಾಂಬೋ' ಇನ್ನಿಲ್ಲ

ಅಮೆರಿಕಾದಲ್ಲಿ ತಾಪಮಾನ ತೀವ್ರವಾಗಿದ್ದು, ಕಳೆದ ಎರಡು ದಿನಗಳಲ್ಲಿ 20 ಕ್ಕೂ ಹೆಚ್ಚು ರಾಜ್ಯಗಳಲ್ಲಿ ತಾಪಮಾನ ಎಚ್ಚರಿಕೆಯನ್ನು ನೀಡಲಾಗಿದೆ.  ಮುಂದಿನ ವಾರದಲ್ಲಿ ಅಮೆರಿಕಾದ ಕೆಲ ರಾಜ್ಯಗಳಲ್ಲಿ ತಾಪಮಾನವು ಶತಮಾನದ ಈ ಹಿಂದೆಂದಿಗಿಂತಲೂ ಹೆಚ್ಚಾಗಿರುತ್ತದೆ ಎಂದು ಹವಾಮಾನ ಮುನ್ಸೂಚನೆ ಕೇಂದ್ರವು ಹೇಳಿದೆ.

ಅಪಾಯಕಾರಿ ಏರಿಕೆಯ ತಾಪಮಾನವೂ ಅಮೆರಿಕಾದ ಹೆಚ್ಚಿನ ಭಾಗದ ಮೇಲೆ ಪರಿಣಾಮ ಬೀರುತ್ತಿದೆ. ಯುರೋಪ್ ಈಗಾಗಲೇ ಇದೇ ರೀತಿಯ ಬಿಸಿ ತಾಪಮಾನದ ಅಲೆಯೊಂದಿಗೆ ಹೋರಾಡುತ್ತಿದೆ ಮತ್ತು ವಿವಿಧ ದೇಶಗಳಲ್ಲಿ ತಾಪಮಾನವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಜುಲೈ 10 ರಿಂದ 17 ರ ನಡುವೆ 679 ಜನರು ಬಿಸಿ ತಾಪಮಾನದಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸ್ಪೇನ್‌ನ ಆರೋಗ್ಯ ಸಚಿವಾಲಯ  ವರದಿ ಮಾಡಿದೆ. ಜುಲೈ 17 ರಂದೇ 169 ಸಾವುಗಳು ಸಂಭವಿಸಿವೆ ಎಂದು ಕಾರ್ಲೋಸ್ III ಆರೋಗ್ಯ ಸಂಸ್ಥೆ (ISCIII) ಹೇಳಿದೆ. ವಿಶ್ವ ಮಾಪನಶಾಸ್ತ್ರ ಸಂಸ್ಥೆ (WMO) ಪ್ರಕಾರ ಪಶ್ಚಿಮ ಯೂರೋಪ್‌ನಲ್ಲಿನ ವಿಪರೀತ ಶಾಖವು ಫ್ರಾನ್ಸ್ ಮತ್ತು ಸ್ಪೇನ್‌ನಲ್ಲಿ ವಿನಾಶಕಾರಿ ಕಾಳ್ಗಿಚ್ಚು ಮತ್ತು ಇಟಲಿ ಮತ್ತು ಪೋರ್ಚುಗಲ್‌ನಲ್ಲಿ ತೀವ್ರ ಬರವನ್ನು ಉಂಟು ಮಾಡಿದೆ. 

click me!