ನನಗೆ ಕ್ಯಾನ್ಸರ್ ಎಂದ ಜೋ ಬೈಡನ್, ಅಮೆರಿಕ ಅಧ್ಯಕ್ಷರ ಭಾಷಣಕ್ಕೆ ಶ್ವೇತ ಭವನ ಸ್ಪಷ್ಟನೆ!

By Suvarna NewsFirst Published Jul 21, 2022, 6:09 PM IST
Highlights

ಅಮೆರಿಕ ಅಧ್ಯಕ್ಷ ಜೋ ಬೈಡನ್ ತಮ್ಮ ಭಾಷಣದಲ್ಲಿ ಕ್ಯಾನ್ಸರ್ ಇದೆ ಎಂದು ಮಾತನಾಡಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕ ಸೇರಿದಂತೆ ವಿಶ್ವದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಮಧ್ಯಪ್ರವೇಶಿಸಿದ ಶ್ವೇತಭವನ ಸ್ಪಷ್ಟನೆ ನೀಡಿದೆ.

ವಾಶಿಂಗ್ಟನ್(ಜು.21) ಭಾಷಣ ಒಂದರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನನಗೆ ಕ್ಯಾನ್ಸರ್ ಎಂದಿದ್ದಾರೆ. ಈ ಮಾಹಿತಿ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ.  ಹಲವರು ಶೀಘ್ರ ಗುಣಮುಖರಾಗಲು ಪ್ರಾರ್ಥಿಸಿದ್ದಾರೆ. ಗೊಂದಲ ಹೆಚ್ಚಾಗುತ್ತಿದ್ದಂತೆ ಅಮೆರಿಕ ಶ್ವೇತಭವನ ಈ ಕುರಿತು ಸ್ಪಷ್ಟನೆ ನೀಡಿದೆ. ಈ ಮೂಲಕ ಸೃಷ್ಟಿಯಾಗಿದ್ದ ಗೊಂದಲಕ್ಕೆ ತೆರೆ ಎಳೆದಿದೆ. ಅಮೆರಿಕದ ಮ್ಯಾಸಾಚುಟ್ಸ್‌ನಲ್ಲಿನ  ಕಲ್ಲಿದ್ದಲು ಗಣಿ ಸ್ಥಾವರ ಬಳಿ ಭಾಷಣ ಮಾಡಿದ ಜೋ ಬೈಡೆನ್ ಜಾಗತಿ ತಾಪಮಾನ ಹಾಗೂ ತೈಲ ಸಂಸ್ಕರಣಾಗಾರಗಳಿಂದ ಹೊರಸೂಸುವ ಅನಿಲಗಳ ಕುರಿತು ಬೈಡನ್ ಭಾಷಣ ಮಾಡಿದ್ದಾರೆ. ಆರೋಗ್ಯ ಸಮಸ್ಯೆಗಳ ಕುರಿತು ಮಾತನಾಡುತ್ತಿದ್ದ ಜೋ ಬೈಡೆನ್ ಅಭಿವೃದ್ಧಿ ಹೊಂದಿದೆ ರಾಷ್ಟ್ರಗಳಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ. ನಾನು ಬೆಳೆದ ಪ್ರದೇಶದಲ್ಲಿ ನನಗೆ ಹಾಗೂ ಹಲವರಿಗೆ ಕ್ಯಾನ್ಸರ್ ಇತ್ತು ಎಂದಿದ್ದಾರೆ. ಇದು ಭಾರಿ ಸಂಚಲನ ಸೃಷ್ಟಿಸಿದೆ. ಮಾಧ್ಯಮಗಳಲ್ಲಿ ಜೋ ಬೈಡೆನ್‌ಗೆ ಕ್ಯಾನ್ಸರ್ ಎಂದು ಪ್ರಚಾರವಾಗಿದೆ. ಹಲವು ಮಾಧ್ಯಮಗಳು ತಪ್ಪಾಗಿ ಇದನ್ನು ಅರ್ಥೈಸಿ ವರದಿ ಮಾಡಿದೆ. ಇದರ ಬೆನ್ನಲ್ಲೇ ಶ್ವೇತ ಭವನ ಸ್ಪಷ್ಟನೆ ನೀಡಿದೆ.

ಜೋ ಬೈಡನ್(America President) ತಮ್ಮ ಭಾಷಣದಲ್ಲಿ ಕ್ಯಾನ್ಸರ್(Skin Cancer) ಕುರಿತು ಮಾತನಾಡುವ ವೇಳೆ ಅಧ್ಯಕ್ಷರಾಗುವ ಮೊದಲು ಚರ್ಮ ಕ್ಯಾನ್ಸರ್ ತೆಗೆದುಹಾಕುವ ಚಿಕಿತ್ಸೆಗೆ ತೆರಳಿದ್ದರು. ಆದರೆ ಜೋ ಬೈಡೆನ್‌ಗೆ(Joe Biden) ಯಾವುದೇ ಕ್ಯಾನ್ಸರ್ ಇಲ್ಲ. ಬೈಡೆನ್ ಭಾಷಣವನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ ಎಂದು ಶ್ವೇತಭವನ ಸ್ಪಷ್ಟನೆ ನೀಡಿದೆ.  ಸಾಮಾಜಿಕ ಜಾಲತಾಣದಲ್ಲಿ ಜೋ ಬೈಡೆನ್‌ಗೆ ಕ್ಯಾನ್ಸರ್ ಎಂದೇ ಹರಿದಾಡಿದೆ.

ಜೋ ಬೈಡೆನ್ ನಿಂಗ್ ವಯಸ್ಸಾಯ್ತೋ, ತಮ್ಮದೇ ಪಕ್ಷದಲ್ಲಿಅಮೆರಿಕ ಅಧ್ಯಕ್ಷರ ಇಳಿ ವಯಸ್ಸಿಗೆ ಅಪಸ್ವರ!

ನನ್ನ ತಾಯಿ, ನಾವು ನಡೆಯಲು ಆರಂಭಿಸಿದಾಗ ಓಡಲು ಕಲಿಸಿದರು. ಜಗತ್ತು ಅದಕ್ಕಿಂತ ವೇಗವಾಗಿ ಓಡುತ್ತಿದೆ. ಅಭಿವೃದ್ಧಿ ರಾಷ್ಟ್ರಗಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿದೆ. ತೈಲಾಗಾರ, ಅನಿಲ ಸಂಸ್ಕರಣಾ ಘಟಕಗಳಿಂದ ನಾನು ಹಾಗೂ ಇತರ ಅನೆಕ ಜನರಿಗೆ ಕ್ಯಾನ್ಸರ್ ಇದೆ.  ಡೆಲವೇರ್ ಅತೀ ಹೆಚ್ಚು ಕ್ಯಾನ್ಸರ್ ಪ್ರಮಾಣವನ್ನು ಹೊಂದಿತ್ತು ಎಂದು ಬೈಡೆನ್ ಹೇಳಿದ್ದಾರೆ. 

 

Did Joe Biden just announce he has cancer?

“That’s why I — and so damn many other people I grew up with — have cancer.” pic.twitter.com/lkm7AHJATX

— RNC Research (@RNCResearch)

 

ಈ ಭಾಷಣ ವೈರಲ್ ಆಗುತ್ತಿದ್ದಂತೆ ವಾಶಿಂಗ್ಟನ್ ಡಿಸಿ ಮಾಧ್ಯಮದ ಹಿರಿಯ ಪತ್ರಕರ್ತ ಗ್ಲೆನ್ ಕ್ಲೆಸ್ಲರ್, ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದರು. 2021ರಲ್ಲಿ  ಅನಾರೋಗ್ಯದ ಕಾರಣ ಚಿಕಿತ್ಸೆ ಒಳಗಾಗಿದ್ದ ಜೋ ಬೈಡೆನ್‌ಗೆ ಚರ್ಮ ಕ್ಯಾನ್ಸರ್ ಇತ್ತು ಎಂದು ವರದಿಯಾಗಿದೆ. ಚರ್ಮ ಕ್ಯಾನ್ಸರ್‌ನಿಂದ ಬೈಡೆನ್ ಬಳಲುತ್ತಿದ್ದಾರೆ ಎಂದು ಕ್ಲೆಸ್ಲರ್ ವರದಿ ಮಾಡಿದ್ದಾರೆ.

ಸೈಕಲ್‌ನಿಂದ ಕೆಳಗೆ ಬಿದ್ದ ಅಮೆರಿಕಾ ಅಧ್ಯಕ್ಷ : ವಿಡಿಯೋ ವೈರಲ್

ಜೋ ಬೈಡೆನ್ ಅಧ್ಯಕ್ಷ ಸ್ಥಾನಕ್ಕೇರುವ ಮೊದಲು ಮೊಹ್ಸ್ ಶಸ್ತ್ರಚಿಕಿತ್ಸೆ ಮೂಲಕ ಮೆಲನೋಮಾ ಚರ್ಮ ಕ್ಯಾನ್ಸರ್ ತೆಗೆದುಹಾಕಿದ್ದಾರೆ. ಡರ್ಮಟೋಲಾಜಿಕ್ ಕಣ್ಗಾವಲಿನಿಂದ ದೇಹಗ ಸಂಪೂರ್ಣ ಚರ್ಮದ ಪರೀಕ್ಷೆಯನ್ನು ನಡೆಸಲಾಗಿದೆ. ಈ ವೇಳೆ ಪತ್ತೆಯಾದ ಸೂಕ್ಷ್ಮ ಚರ್ಮ ಕ್ಯಾನ್ಸರ್‌ನ್ನು  ಲಿಕ್ವಿಡ್ ನೈಟ್ರೋಜನ್ ಕ್ರೈಯೊಥೆರಪಿಯೊಂದಿಗೆ ಚಿಕಿತ್ಸೆ ನೀಡಿ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಬಳಿಕ ಎರಡು ಬಾರಿ ಚರ್ಮದ ಡರ್ಮಟೊಲಾಜಿಕ್ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಯಾವುದೇ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ. 

click me!