ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ಕೊರೋನಾ ಪಾಸಿಟೀವ್, ಶ್ವೇತಭವನದಲ್ಲಿ ಐಸೋಲೇಶನ್‌!

Published : Jul 21, 2022, 09:57 PM ISTUpdated : Jul 21, 2022, 09:58 PM IST
ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ಕೊರೋನಾ ಪಾಸಿಟೀವ್, ಶ್ವೇತಭವನದಲ್ಲಿ ಐಸೋಲೇಶನ್‌!

ಸಾರಾಂಶ

ಕಳೆದ ಎರಡೂವರೆ ವರ್ಷದಿಂದ ಕೋವಿಡ್ ವಿರುದ್ಧ ಹೈರಾಣಾಗಿರುವ ಅಮೆರಿಕದಲ್ಲಿ ಇದೀಗ ಮತ್ತೆ ಕೋವಿಡ್ ಪ್ರಕರಣ ಸಂಖ್ಯೆ ಏರಿಕೆಯಾಗಿದೆ. ಇದೀಗ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೂ ಕೊರೋನಾ ಅಂಟಿಕೊಂಡಿದೆ.

ವಾಶಿಂಗ್ಟನ್(ಜು.21):  ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ಕೊರೋನಾ ದೃಢಪಟ್ಟಿದೆ. ಈ ಕುರಿತು ಶ್ವೇತಭವನದ ಕಾರ್ಯದರ್ಶಿ ಕರಿನ್ ಜೀನ ಪಿರೆರಾ ಸ್ಪಷ್ಟಪಡಿಸಿದ್ದಾರೆ. ಜೋ ಬೈಡನ್‌ಗೆ ಕೋವಿಡ್ ಮೈಲ್ಡ್ ಸಿಂಪ್ಟಮ್ಸ್ ಕಾಣಿಸಿಕೊಂಡಿದೆ. ಹೀಗಾಗಿ ಪರೀಕ್ಷೆಯಲ್ಲಿ ಬೈಡೆನ್ ಕೋವಿಡ್ ಪಾಸಿಟೀವ್ ವರದಿ ಬಂದಿದೆ. ಇದರಿಂದ ಜೋ ಬೈಡೆನ್ ಶ್ವೇತಭವನದಲ್ಲಿ ಐಸೋಲೇಶನ್‌ಗೆ ಒಳಗಾಗಲಿದ್ದಾರೆ. ಈಗಾಗಲೇ ಬೈಡೆನ್‌ಗೆ ಪಾಕ್ಸ್‌ಲೋವಿಡ್ ಆ್ಯಂಟಿ ಡ್ರಗ್ ನೀಡಲಾಗುತ್ತಿದೆ. ಸದ್ಯ ಆರೋಗ್ಯವಾಗಿರುವ ಜೋ ಬೈಡೆನ್ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮೀಟಿಂಗ್ ನಡೆಸಲಿದ್ದಾರೆ ಎಂದು ಶ್ವೇತಭವನ ಕಾರ್ಯದರ್ಶಿ ಹೇಳಿದ್ದಾರೆ. ಕಳೆದ ಎರಡೂವರೆ ವರ್ಷದಿಂದ ಅಮೆರಿಕ ಕೋವಿಡ್‌ಗೆ ತತ್ತರಿಸಿದೆ. ಇದೀಗ ಮತ್ತೆ ಅಮೆರಿಕದಲ್ಲಿ ಕೊರೋನಾ ಏರಿಕೆಯತ್ತ ಸಾಗಿದೆ. ಇತ್ತ ಅಮೆರಿಕ ಅಧ್ಯಕ್ಷರಿಗೆ ಕೊರೋನಾ ಕಾಣಿಸಿಕೊಂಡಿರುವು ಇದೀಗ ಅಮೆರಿಕ ಜನತೆಯಲ್ಲಿ ಮತ್ತೊಂದು ಕೋವಿಡ್ ಅಲೆಯ ಆತಂಕ ಎದುರಾಗಿದೆ.

ಜೋ ಬೈಡೆನ್ ಈಗಾಗಲೇ ಎರಡೂ ಡೋಸ್ ಹಾಗೂ ಎರಡು ಬೂಸ್ಟರ್ ಡೋಸ್ ತೆಗೆದುಕೊಂಡಿದ್ದಾರೆ. 79 ವರ್ಷದ ಬೈಡೆನ್ ಆರೋಗ್ಯದ ಕುರಿತು ವೈದ್ಯರು ತೀವ್ರ ನಿಘಾವಹಿಸಿದ್ದಾರೆ. ಸದ್ಯ ಆರೋಗ್ಯವಾಗಿದ್ದು, ಆಡಳಿತದ ಎಲ್ಲಾ ಕಾರ್ಯಗಳನ್ನು ನೋಡಿಕೊಳ್ಳಲಿದ್ದಾರೆ. ಕೋವಿಡ್ ಇತರರಿಗೆ ಹರಡದಂತೆ ಎಚ್ಚರವಹಿಸಲು ಐಸೋಲೇಶನ್‌ಗೆ ಒಳಗಾಗಿದ್ದಾರೆ ಎಂದು ಕಾರ್ಯದರ್ಶಿ ಹೇಳಿದ್ದಾರೆ.ಇತ್ತೀಚೆಗೆ ಬೈಡೆನ್ ಅತೀ ದೊಡ್ಡ ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ಇಲ್ಲಿ ಕೋವಿಡ್ ಪರೀಕ್ಷೆ ಮಾಡದ ಹಲವರು ಭಾಗಿಯಾಗಿರುವ ಸಾಧ್ಯತೆ ಇದೆ. ಹೀಗಾಗಿ ಈ ಸಭೆಗಳಿಂದ ಕೋವಿಡ್ ಹರಡಿರಬಹುದು ಎಂದು ಕಾರ್ಯದರ್ಶಿ ಹೇಳಿದ್ದಾರೆ. 

ನನಗೆ ಕ್ಯಾನ್ಸರ್ ಎಂದ ಜೋ ಬೈಡನ್, ಅಮೆರಿಕ ಅಧ್ಯಕ್ಷರ ಭಾಷಣಕ್ಕೆ ಶ್ವೇತ ಭವನ ಸ್ಪಷ್ಟನೆ!

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ಕ್ಯಾನ್ಸರ್ ಎಂಬ ವದಂತೆ ಹಬ್ಬಿದ ಬೆನ್ನಲ್ಲೇ ಆತಂಕ ಮನೆ ಮಾಡಿತ್ತು. ಈ ವದಂತಿಗೆ ಶ್ವೇತಭವನ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಇದೀಗ ಜೋ ಬೈಡೆನ್‌ ಕೊರೋನಾ ಕಾಣಿಸಿಕೊಂಡಿದೆ. ಭಾಷಣ ಮಾಡುತ್ತಿದ್ದ ವೇಳೆ ಬೈಡೆನ್ ಹೇಳಿದ ಒಂದು ಮಾತಿನಿಂದ ಕ್ಯಾನ್ಸರ್ ತಗುಲಿದೆ ಎಂಬ ವದಂತಿ ಹಬ್ಬಿತ್ತು. ಜೋ ಬೈಡೆನ್ ಆರೋಗ್ಯವಾಗಿದ್ದಾರೆ ಎಂದು ಶ್ವೇತಭವನ ಸ್ಪಷ್ಟನೆ ನೀಡಿತ್ತು. ಇದೀಗ ಕೋವಿಡ್ ಕಾಣಿಸಿಕೊಂಡು ಐಸೋಲೇಶನ್‌ಗೆ ಒಳಗಾಗಿದ್ದಾರೆ.

ಅಮೆರಿಕದಲ್ಲಿ ಓಮಿಕ್ರಾನ್ ರೂಪಾಂತರಿ ತಳಿಗಳು ಪತ್ತೆಯಾಗಿದೆ. ಎಪ್ರಿಲ್ ತಿಂಗಳಲ್ಲಿ ಪ್ರತಿ ದಿನ ಸರಾಸರಿ 8 ಸಾವಿರ ಕೇಸ್ ಪತ್ತೆಯಾಗುತ್ತಿದ್ದ ಅಮೆರಿಕದಲ್ಲಿ ಇದೀಗ ಪ್ರತಿ ದಿನದ ಕೊರೋನಾ ಪ್ರಕರಣ ಸಂಖ್ಯೆ ಲಕ್ಷ ದಾಟಿದೆ. ಇದು ಮತ್ತೆ ಆತಂಕದ ವಾತಾವಾರಣ ನಿರ್ಮಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!