ಚೀನಾ ವಿಷಯದಲ್ಲಿ ನಮ್ಮ ಬೆಂಬಲ ಭಾರತಕ್ಕೆ: ಅಮೆರಿಕ!

By Suvarna News  |  First Published Jul 8, 2020, 8:42 AM IST

ಚೀನಾ ವಿಷಯದಲ್ಲಿ ನಮ್ಮ ಬೆಂಬಲ ಭಾರತಕ್ಕೆ: ಅಮೆರಿಕ| ನಾವು ಸುಮ್ಮನಿರೋದಿಲ್ಲ: ಶ್ವೇತಭವನದ ಅಧಿಕಾರಿ| ಶ್ವೇತಭವನದ ಉನ್ನತ ಅಧಿಕಾರಿ ಮೆಡೋಸ್‌ ಖಡಕ್‌ ಸಂದೇಶ


ವಾಷಿಂಗ್ಟನ್‌(ಜು.08): ಭಾರತ-ಚೀನಾ ನಡುವಿನ ಸಂಘರ್ಷದಲ್ಲಿ ನಮ್ಮ ದೇಶದ ಸೇನೆಯ ಬೆಂಬಲ ಭಾರತಕ್ಕಿದೆ ಎಂದು ಅಮೆರಿಕ ಸರ್ಕಾರ ಹೇಳಿದೆ. ಅಷ್ಟೇ ಅಲ್ಲ, ಜಗತ್ತಿನಲ್ಲಿ ಎಲ್ಲೇ ಆಗಲಿ, ಯಾರೇ ಆಗಲಿ, ಸೇನಾ ಪ್ರಾಬಲ್ಯ ಮೆರೆಯಲು ಬಂದರೆ ಅದನ್ನು ನೋಡಿಕೊಂಡು ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದೂ ಖಡಕ್‌ ಸಂದೇಶ ನೀಡಿದೆ.

ಅಮೆರಿಕದ ಶ್ವೇತಭವನದ ಚೀಫ್‌ ಆಫ್‌ ಸ್ಟಾಫ್‌ ಮಾರ್ಕ್ ಮೆಡೋಸ್‌ ಸೋಮವಾರ ಫಾಕ್ಸ್‌ ನ್ಯೂಸ್‌ ಜೊತೆ ಮಾತನಾಡಿ, ‘ನಮ್ಮ ಸಂದೇಶ ಸ್ಪಷ್ಟವಾಗಿದೆ. ಚೀನಾ ಇರಲಿ ಅಥವಾ ಇನ್ನಾರೇ ಇರಲಿ, ದಕ್ಷಿಣ ಏಷ್ಯಾದಲ್ಲಾಗಲೀ ಅಥವಾ ಇನ್ನೆಲ್ಲೇ ಆಗಲಿ, ಸೇನಾ ಪ್ರಾಬಲ್ಯ ಮೆರೆಯಲು ಬಂದರೆ ನಾವು ಸುಮ್ಮನಿರುವುದಿಲ್ಲ. ನಮ್ಮ ಸೇನೆ ಬಲಿಷ್ಠವಾಗಿದೆ. ಇದು ಹೀಗೆಯೇ ಬಲಿಷ್ಠವಾಗಿ ಮುಂದುವರೆಯುತ್ತದೆ. ಇದು ಭಾರತ-ಚೀನಾ ಸಂಘರ್ಷದ ವಿಷಯಕ್ಕೂ ಅನ್ವಯಿಸುತ್ತದೆ. ಭಾರತದ ಪರ ನಾವಿದ್ದೇವೆ’ ಎಂದು ಹೇಳಿದರು.

Latest Videos

undefined

ಟಿಕ್‌ಟಾಕ್‌ ಸೇರಿ ಚೀನಿ ಆ್ಯಪ್‌ಗಳು ಅಮೆರಿಕದಲ್ಲೂ ನಿಷೇಧ?

ಭಾರತಕ್ಕೆ ಬೆಂಬಲ ನೀಡಲು ದಕ್ಷಿಣ ಚೀನಾ ಸಮುದ್ರಕ್ಕೆ ಅಮೆರಿಕದ ಸೇನಾಪಡೆಯು ಎರಡು ಏರ್‌ಕ್ರಾಫ್ಟ್‌ ಕ್ಯಾರಿಯರ್‌ (ಯುದ್ಧವಿಮಾನಗಳನ್ನು ಹೊತ್ತ ಹಡಗು)ಗಳನ್ನು ಕಳುಹಿಸಿದ ಬೆನ್ನಲ್ಲೇ ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ನೀಡಿದ ಈ ಹೇಳಿಕೆ ಮಹತ್ವ ಪಡೆದಿದೆ.

ಸಂದರ್ಶನದ ವೇಳೆ, ಚೀನಾದ ಸೈನಿಕರು ಕಳೆದ ತಿಂಗಳು ಗಡಿಯಲ್ಲಿ ಭಾರತದ ಯೋಧರನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಭಾರತವು ಚೀನಾದ ಆ್ಯಪ್‌ಗಳನ್ನು ನಿಷೇಧ ಮಾಡಿದೆ. ಈ ಬೆಳವಣಿಗೆಯಲ್ಲಿ ಅಮೆರಿಕದ ನಿಲುವೇನು ಎಂಬ ಪ್ರಶ್ನೆ ಎದುರಾಯಿತು. ಆಗ ಮೇಲ್ಕಂಡಂತೆ ಉತ್ತರಿಸಿದ ಮೆಡೋಸ್‌, ದಕ್ಷಿಣ ಚೀನಾಕ್ಕೆ ನಾವು ಎರಡು ಯುದ್ಧನೌಕೆಗಳನ್ನು ಕಳುಹಿಸಿದ್ದೇವೆ. ಜಗತ್ತಿನಲ್ಲಿ ಈಗಲೂ ನಮ್ಮದು ಪ್ರಬಲ ಮಿಲಿಟರಿ ಶಕ್ತಿಯಾಗಿದೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಸೇನಾಪಡೆಗೆ ಸಾಕಷ್ಟುಬಲ ತುಂಬಿದ್ದಾರೆ. ಅದು ಕೇವಲ ಹಾರ್ಡ್‌ವೇರ್‌ ರೂಪದಲ್ಲಿ ಅಲ್ಲ, ಸಾಕಷ್ಟು ಹೊಸ ಸೈನಿಕರನ್ನೂ ತಯಾರು ಮಾಡಿದ್ದಾರೆ. ಇದು ಹೀಗೇ ಮುಂದುವರೆಯುತ್ತದೆ ಎಂದೂ ಹೇಳಿದರು.

ಅಮೆರಿಕದಲ್ಲಿ ಕೊರೋನಾ‌ ನಿಯಂತ್ರಣದಲ್ಲಿದೆ, 99% ಪ್ರಕರಣ ಅಪಾಯವಲ್ಲ: ಟ್ರಂಪ್‌ ಮತ್ತೆ ಎಡವಟ್ಟು!

ಇದೇ ವೇಳೆ, ಶೀಘ್ರದಲ್ಲೇ ಚೀನಾಕ್ಕೆ ಸಂಬಂಧಿಸಿದಂತೆ ಟ್ರಂಪ್‌ ಹೊಸ ಆದೇಶವೊಂದನ್ನು ಹೊರಡಿಸಲಿದ್ದಾರೆ ಎಂಬ ಸುಳಿವನ್ನೂ ನೀಡಿದರು.

ಇನ್ನು, ಸೋಮವಾರವೇ ಫಾಕ್ಸ್‌ ನ್ಯೂಸ್‌ ಜೊತೆ ಮಾತನಾಡಿದ ಅಮೆರಿಕದ ಪ್ರಭಾವಿ ರಿಪಬ್ಲಿಕನ್‌ ಸಂಸದ ಟಾಮ್‌ ಕಾಟನ್‌, ‘ದಕ್ಷಿಣ ಚೀನಾ ಸಮುದ್ರದಲ್ಲಿ ತೈವಾನ್‌ ಅಥವಾ ಇನ್ನಾವುದೇ ದೇಶದ ವಿರುದ್ಧ ಚೀನಾ ದುಸ್ಸಾಹಸಕ್ಕೆ ಕೈಹಾಕಿದರೆ ಅದನ್ನು ಎದುರಿಸಲೆಂದೇ ಅಮೆರಿಕ ಎರಡು ಯುದ್ಧನೌಕೆಗಳನ್ನು ಕಳುಹಿಸಿದೆ. ಚೀನಾದವರು ಕಳೆದ ಕೆಲ ವಾರಗಳಲ್ಲಿ ಭಾರತದ ಮೇಲೆ ದಾಳಿ ನಡೆಸಿದ್ದಾರೆ. ಚೀನಾದ ಗಡಿಯಲ್ಲಿರುವ ಯಾವ ದೇಶವೂ ಸದ್ಯ ಸುರಕ್ಷಿತವಾಗಿಲ್ಲ. ಆ ಎಲ್ಲ ದೇಶಗಳಿಗೂ ಅಮೆರಿಕದ ಜೊತೆಗೆ ಸಂಬಂಧ ಬೇಕಿದೆ. ನಾವು ಆ ಸಂಬಂಧ ಇರಿಸಿಕೊಳ್ಳುತ್ತೇವೆ’ ಎಂದು ಹೇಳಿದರು.

click me!