ಬ್ರೆಜಿಲ್ (ಜು. 07) ಏ..ಹೇ..ಕೊರೋನಾ ಅದೊಂದು ಸಣ್ಣ ಜ್ವರ.. ಬಂದರೆ ಏನಾಗಲ್ಲ.. ನೋಡಿಕೊಳ್ಳುತ್ತೇನೆ ಬಿಡಿ.. ಎಂದು ಮಾರಕ ವೈರಸ್‌ಗೆ ಸವಾಲು ಹಾಕುತ್ತ ಧಿಮಾಕು ತೋರಿಸುತ್ತಿದ್ದ ದೊಡ್ಡ ವ್ಯಕ್ತಿಯೊಬ್ಬರು ಕೊರೋನಾ ಬಲೆಗೆ ಬಿದ್ದಿದ್ದಾರೆ.
ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸಾನರೋ ಕೊರೋನಾ ಒಂದು ಸಣ್ಣ ಕಾಯಿಲೆ. ಉಳಿದ ಜ್ವರಗಳಂತೆ ಎಂದು ನಿಕೃಷ್ಟವಾಗಿ ಮಾತನಾಡಿದ್ದರು. ಕೊರೋನಾ ಇದೀಗ ಅವರನ್ನೇ ಆವರಿಸಿದೆ.
ದೇಹದ ಉಷ್ಟಾಂಶ ಸಿಕ್ಕಾಪಟ್ಟೆ ಏರಿಕೆ ಕಂಡಾಗ ಅಧ್ಯಕ್ಷರು ಕೊರೋನಾ ಪರೀಕ್ಷೆಗೆ ಒಳಪಟ್ಟಿದ್ದಾರೆ. ಲಾಕ್ ಡೌನ್ ಮಾಡಲೇಬಾರದು. ಅರ್ಥ ವ್ಯವಸ್ಥೆಗೆ ದೊಡ್ಡ ಹೊಡೆತವಾಗುತ್ತದೆ ಎಂದು ಹೇಳುತ್ತಿದ್ದ ಅಧ್ಯಕ್ಷರು ಸೋಮವಾರ ತಮ್ಮ ಮುಖಕ್ಕೆ ಮಾಸ್ಕ್ ಧರಿಸಿದರು!
ಬ್ರೆಜಿಲ್ ಅಧ್ಯಕ್ಷರ ವಿಡಿಯೋ ಸಂವಾದದಲ್ಲಿ ನಗ್ನ ಉದ್ಯಮಿ
ಟಿವಿ ಸಂದರ್ಶನವೊಂದರಲ್ಲಿ ಜನರ ಮುಂದೆ ಬಂದ ಜೈರ್, ಭಾನುವಾರ ನನಗೆ ಜ್ವರ, ಕೆಮ್ಮು ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತು. ಸೋಮವಾರ ಪರಿಸ್ಥಿತಿ ಕೈಮೀರುವಂತೆ ಕಂಡಿದ್ದರಿಂದ ಕೊರೋನಾ ಟೆಸ್ಟ್ ಮಾಡಿಸಿಕೊಂಡೆ ಈಗ ಏನ್ ತೊಂದ್ರೆ ಇಲ್ಲ ಎಂದು 65 ವರ್ಷದ ಅಧ್ಯಕ್ಷರು ಹೇಳಿದ್ದಾರೆ!
ಫ್ರೆಂಡ್ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಲಹೆ ಮೇರೆಗೆ Hydroxychloroquine ಮತ್ತು azithromycin ತೆಗೆದುಕೊಳ್ಳುತ್ತಿದ್ದೇನೆ ಎಂಬ ಮಾಹಿತಿಯನ್ನು ಈಗ ಕೊರೋನಾಕ್ಕೆ ಬೆದರಿರುವ ಜೈರ್ ನೀಡುತ್ತಾರೆ.
ವಿಶ್ವ ಆರೋಗ್ಯ ಸಂಸ್ಥೆ ಕಾರ್ಯಕಾರಿ ನಿರ್ದೇಶಕ ಡಾ. ಮೈಕ್ ರಿಯಾನ್ ಜೈರ್ ಬೊಲ್ಸಾನರೋ ಬೇಗ ಗುಣಮುಖರಾಗಿ ಎಂದು ಹಾರೈಸಿರುವುದರ ಜತೆಗೆ ವೈರಸ್ ನಮಗೆ ಮತ್ತೊಂದು ಸಂದೇಶ ನೀಡಿದೆ ಎಂದು ಎಚ್ಚರಿಸಿದ್ದಾರೆ.
ಚೂರು ಹಿಂದೆ ಅಂದರೆ ಏಪ್ರಿಲ್ ಗೆ ಹೋದರೆ ಇದೇ ಅಧ್ಯಕ್ಷರು ಕೊರೋನಾ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದರು. ಒಂದು ವೇಳೆ ವೈರಸ್ ನನಗೆ ತಗುಲಿದರೆ ಏನು ಸಮಸ್ಯೆ ಇಲ್ಲ, ಇದೊಂದು ಸಣ್ಣ ಜ್ವರದಂತೆ ಬಂದು ಹೋಗುತ್ತದೆ ಎಂದು ಧಿಮಾಕು ತೋರಿಸಿದ್ದರು. ಬ್ರೇಜಿಲ್ ನಲ್ಲಿ ಆ ವೇಳೆ ಕೊರೋನಾ ಸಾವುಗಳ ಸಂಖ್ಯೆ 3 ಸಾವಿರಕ್ಕಿಂತ ಕಡಿಮೆ ಇದ್ದರೆ 40 ಸಾವಿರ ಪಾಸಿಟಿವ್ ಕೇಸುಗಳು ಇದ್ದವು. ಇದಕ್ಕಿದ್ದಂತೆ ಒಂದೆ ಸಾರಿ ಏರಿಕೆಕಂಡ ಕೊರೋನಾ ಬ್ರೆಜಿಲ್ ನಲ್ಲಿ 65 ಸಾವಿರ ಜನರನ್ನು ಬಲಿಪಡೆದು 1.65 ಲಕ್ಷ ಜನರಲ್ಲಿ ಕಾಣಿಸಿಕೊಂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ