ಒಂದಿಲ್ಲೊಂದು ಎಡವಟ್ಟು ಹೇಳಿಕೆಗಳನ್ನು ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್,| ಅಮೆರಿಕದಲ್ಲಿ ಕೊರೋನಾ ವೈರಸ್ ನಿಯಂತ್ರಣದಲ್ಲಿದೆ | 99% ಕೊರೋನಾ ಕೇಸ್ ಅಪಾಯವಲ್ಲ: ಟ್ರಂಪ್ ಎಡವಟ್ಟು|
ವಾಷಿಂಗ್ಟನ್:(ಜು.07): ಕೊರೋನಾ ವೈರಸ್ ಕುರಿತಂತೆ ಒಂದಿಲ್ಲೊಂದು ಎಡವಟ್ಟು ಹೇಳಿಕೆಗಳನ್ನು ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶೇ.99ರಷ್ಟುಕೊರೋನಾ ಪ್ರಕರಣಗಳು ಹಾನಿಕಾರಕವಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಅಮೆರಿಕದಲ್ಲಿ ಕೊರೋನಾ ವೈರಸ್ ನಿಯಂತ್ರಣದಲ್ಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.
ಟ್ರಂಪ್ ಸೇವಿಸಿದ್ದ ಭಾರತದ ಮಾತ್ರೆ ಇನ್ನು ಕೊರೋನಾ ರೋಗಿಗಳಿಗೆ ವಿತರಣೆ ಇಲ್ಲ!
undefined
ಆದರೆ, ಅಮೆರಿಕದಲ್ಲಿ ವಾಸ್ತವ ಸಂಗತಿಯೇ ಬೇರೆ ಇದ್ದು, ಈಗಾಗಲೇ ಕೊರೋನಾಕ್ಕೆ 1.30 ಲಕ್ಷ ಬಲಿಯಾಗಿದ್ದಾರೆ. ಸೋಂಕಿತರ ಪೈಕಿ ಶೇ.20ರಷ್ಟುಮಂದಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳು ತಿಳಿಸಿವೆ. ಸುಳ್ಳು ಮಾಹಿತಿ ನೀಡಿದ ಕಾರಣಕ್ಕೆ ಟ್ರಂಪ್ ವಿರುದ್ಧ ಈಗ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ.
ಶನಿವಾರ ಸ್ವಾತಂತ್ರ್ಯ ದಿನದ ಭಾಷಣ ಮಾಡಿದ ಟ್ರಂಪ್, ಅಮೆರಿಕದಲ್ಲಿ 4 ಕೋಟಿ ಜನರನ್ನು ಕೊರೋನಾ ವೈರಸ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇವುಗಳ ಪೈಕಿ ಶೇ.99ರಷ್ಟುಪ್ರಕರಣಗಳು ಹಾನಿಕಾರಕವಲ್ಲ ಎಂಬುದು ಕಂಡುಬಂದಿದೆ ಎಂದು ಹೇಳಿದ್ದಾರೆ.