ಡೊನಾಲ್ಡ್ ಟ್ರಂಪ್ ಸೋಲು ಭಾರತಕ್ಕೆ ಲಾಭವೋ? ನಷ್ಟವೋ? ಈ 3 ಕಾರಣಗಳಿಂದಲೇ ಸೋಲು!

Published : Nov 04, 2026, 09:58 PM IST
US midterm election results

ಸಾರಾಂಶ

US Midterm election results ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಹೀನಾಯ ಸೋಲು ಅನುಭವಿಸಿದ್ದು, ಡೆಮಾಕ್ರಟಿಕ್ ಪಕ್ಷ ಬಹುಮತ ಸಾಧಿಸಿದೆ. ಈ ಫಲಿತಾಂಶದಿಂದ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ, ರಕ್ಷಣಾ ಮತ್ತು ವೀಸಾ ನಿಯಮಗಳಲ್ಲಿ ಮಹತ್ತರ ಬದಲಾವಣೆಗಳಾಗುವ ನಿರೀಕ್ಷೆಯಿದೆ.

ಅಮೆರಿಕದ ಮಧ್ಯಂತರ ಚುನಾವಣೆ(US Midterm Elections)ಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald trump) ಹೀನಾಯ ಸೋಲು ಅನುಭವಿಸಿದ್ದಾರೆ. ಈ ಚುನಾವಣಾ ಫಲಿತಾಂಶಗಳ ನಂತರ ಇದೀಗ ಎಲ್ಲ ಕಣ್ಣು ಭಾರತದ ಮೇಲೆ ನೆಟ್ಟಿದೆ. ಏಕೆಂದೆ ಅಮೆರಿಕ ಚುನಾವಣೆಯಲ್ಲಾದ ಈ ಪರಿವರ್ತನೆ ಅಂದರೆ ಡೊನಾಲ್ಡ್ ಟ್ರಂಪ್‌ಗೆ ಹಿನ್ನೆಡೆಯಾಗಿರುವುದರಿಂದ ಇದು ಅಮೆರಿಕ-ಭಾರತ ಸಂಬಂಧಗಳ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? ಭಾರತಕ್ಕೆ ಲಾಭವಾಗಲಿದೆಯೇ? ನಷ್ಟವೇ? ಎಂದೆಲ್ಲ ಚರ್ಚೆಗಳು, ಊಹಾಪೋಹಗಳು ಹರಿದಾಡುತ್ತಿವೆ. ಅದರಲ್ಲೂ ರಕ್ಷಣಾ, ಸಹಕಾರ, ರಾಜತಾಂತ್ರಿಕತೆಯಲ್ಲಿ ಎರಡು ದೇಶಗಳ ನಡುವೆ ಏನೆಲ್ಲ ಬದಲಾವಣೆಯಾಗಬಹುದು ಎಂಬುದರ ಬಗ್ಗೆ ಭಾರೀ ಕುತೂಹಲ ಕೆರಳಿಸಿದೆ.

ಮುಖ್ಯವಾಗಿ ಡೆಮಾಕ್ರಟಿಕ್ ಪಕ್ಷ ಡೊನಾಲ್ಡ್ ಟ್ರಂಪ್‌ರಿಗಿಂತ ಭಿನ್ನವಾಗಿ ಯೋಚಿಸುತ್ತದೆ. ಟ್ರಂಪ್ ಅಮೆರಿಕ್ ಫಸ್ಟ್ ಎಂದರೆ ಡೆಮಾಕ್ರಟಿಕ್ ಪಕ್ಷವು ಭಾರತದೊಂದಿಗಿನ ವ್ಯಾಪಾರ ಸಂಬಂಧಗಳನ್ನ ಉತ್ತಮಗೊಳಿಸಲು, ಇನ್ನಷ್ಟು ಗಟ್ಟಿಗೊಳಿಸಲು ಬಯಸುತ್ತೆ. ಹೀಗಾಗಿ ಈ ಚುನಾವಣೆ ಫಲಿತಾಂಶಗಳ ಬಳಿಕ ಟ್ರಂಪ್ ಅಧಿಕಾರ ಕಳೆದುಕೊಂಡರೆ ಭಾರತ-ಅಮೆರಿಕ ನಡುವಿನ ಒಪ್ಪಂದ ನಿಯಮಗಳು ಬದಲಾಗಬಹುದು ಅಥವಾ ಮತ್ತೆ ಎರಡು ದೇಶಗಳ ನಡುವೆ ಹೊಸದಾಗಿ ಮಾತುಕತೆ ಶುರುವಾಗಬಹುದು. ಟ್ರಂಪ್ ಕಳೆದ ವರ್ಷ ಭಾರತಕ್ಕೆ ಭಾರೀ ಸುಂಕ ವಿಧಿಸಿದ್ದರು. ರಷ್ಯಾದಿಂದ ತೈಲ ಖರೀದಿಸಿದರೆ ಶೇ.100ರಷ್ಟು ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಈಗ ಸಂಸತ್ತಿನಲ್ಲಿ ಬಹುಮತದ ಕೊರತೆಯಿಂದಾಗಿ ಟ್ರಂಪ್ ಆಟ ನಡೆಯುವುದಿಲ್ಲ. ಉದಾಹರಣೆಗೆ ಇತ್ತೀಚೆಗೆ ಭಾರತೀಯ ಐಟಿ ವಲಯದ ಉದ್ಯೋಗಿಗಳಿಗೆ H-1B ವೀಸಾ ನಿಯಮಗಳನ್ನು ಟ್ರಂಪ್ ಬಿಗಿಗೊಳಿಸಿದ್ದರು ಆದರೆ ಈಗ ಡೆಮಾಕ್ರಾಟಿಕ್ ಪಕ್ಷ ಅದನ್ನು ವಿರೋಧಿಸಬಹುದು.

ಇನ್ನು ಚೀನಾ ವಿಷಯಕ್ಕೆ ಬಂದರೆ ಭಾರತ ಅಮೆರಿಕ ಒಂದೇ ಅಭಿಪ್ರಾಯ ಹೊಂದಿವೆ. ಕ್ವಾಡ್ ಆಗಿರಲಿ, ರಕ್ಷಣಾ ಒಪ್ಪಂದವೇ ಆಗಿರಲಿ, ರಿಪಬ್ಲಿಕ್, ಡೆಮಾಕ್ರಟ್ ಎರಡೂ ಕಡೆಯವರು ಭಾರತದೊಂದಿಗಿನ ಸಂಬಂಧ ಮುಖ್ಯವೆಂದೇ ಬಯಸುತ್ತಾರೆ. ಹೀಗಾಗಿ ಈ ವಿಚಾರದಲ್ಲಿ ಬದಲಾವಣೆಗಳು ನಿರೀಕ್ಷಿಸುವಂತಿಲ್ಲ. ಅಮೆರಿಕ-ಇರಾನ್ ಯುದ್ಧವು ತೈಲ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಹೀಗಾಗಿ ಈ ಯುದ್ಧ ಕೊನೆಗೊಳಿಸಲು ಒತ್ತಡ ಹಾಕುವ ಭಾರತದ ನಿಲುವಿಗೆ ಪರಿಹಾರವಾಗಬಹುದು. ಅಷ್ಟೇ ಅಲ್ಲ ರಷ್ಯಾದಿಂದ ತೈಲ ಖರೀದಿಸುವ ಮೇಲಿನ ಅಮೆರಿಕದ ಒತ್ತಡ, ಸುಂಕ ಹೆಚ್ಚಳದಂತಹ ಬೆದರಿಕೆಗಳು ಕಡಿಮೆಯಾಗಬಹುದು.

ಅಮೆರಿಕದ ಮಧ್ಯಂತರ ಚುನಾವಣಾ ಫಲಿತಾಂಶಗಳು:

ವಿರೋಧ ಪಕ್ಷವಾದ ಡೆಮಾಕ್ರಟಿಕ್ ಪಕ್ಷವು ಸೆನೆಟ್‌ನಲ್ಲಿ ಸಂಪೂರ್ಣ ಬಹುಮತವನ್ನು ಪಡೆದುಕೊಂಡಿದೆ. ಡೆಮಾಕ್ರಟಿಕ್ 54 ಸ್ಥಾನಗಳನ್ನು ಗೆದ್ದರೆ, ಆಡಳಿತಾರೂಢ ರಿಪಬ್ಲಿಕನ್ ಪಕ್ಷವು 44 ಸ್ಥಾನಗಳನ್ನು ಗೆದ್ದಿದೆ. ಒಟ್ಟು 435 ಸ್ಥಾನಗಳನ್ನು ಹೊಂದಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ, ಡೆಮಾಕ್ರಟಿಕ್ ಪಕ್ಷವು 231 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತದ ಮ್ಯಾಜಿಕ್ ಸಂಖ್ಯೆ ಸುಲಭವಾಗಿ ದಾಟಿದೆ.

ಯುಎಸ್ ಕಾಂಗ್ರೆಸ್ ನಿಯಮಗಳಡಿ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಎಲ್ಲಾ 435 ಸ್ಥಾನಗಳು, 35 ಸೆನೆಟ್ ಸ್ಥಾನಗಳು ಮತ್ತು 36 ರಾಜ್ಯ ಗವರ್ನರ್‌ಶಿಪ್‌ಗಳಿಗೆ ಮತದಾನ ನಡೆದಿದೆ. ಅಮೆರಿಕಾದಲ್ಲಿ ಮಧ್ಯಂತರ ಚುನಾವಣೆಗಳನ್ನು ಸಾಮಾನ್ಯ ಚುನಾವಣೆಯಾಗಿ ನೋಡಲಾಗುತ್ತಿತ್ತು. ಆದರೆ ಇದೀಗ ಡೊನಾಲ್ಡ್ ಟ್ರಂಪ್ ಅವರ ಎರಡು ವರ್ಷಗಳ ಅಧಿಕಾರದ ಮೇಲಿನ ನೇರ ಸಾರ್ವಜನಿಕ ತೀರ್ಪಾಗಿ ನೋಡಲಾಗುತ್ತಿದೆ. ಈಗಿನ ಚುನಾವಣಾ ಫಲಿತಾಂಶ ಡೊನಾಲ್ಡ್ ಟ್ರಂಪ್‌ಗೆ ವಿರುದ್ಧವಾಗಿದೆ.

ಟ್ರಂಪ್ ಸೋಲಿಗೆ ಇಲ್ಲಿವೆ ಮೂರು ಪ್ರಮುಖ ಕಾರಣಗಳು

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್ ಹೀನಾಯವಾಗಿ ಸೋತಿದ್ದಾರೆ. ಟ್ರಂಪ್ ಸೋಲಿಗೆ ಮೂರು ಪ್ರಮುಖ ಕಾರಣಗಳನ್ನು ತಜ್ಞರು ಗುರುತಿಸಿದ್ದಾರೆ. ಮೊದಲನೆಯದಾಗಿ ಹದಗೆಡುತ್ತಿರುವ ಅಮೆರಿಕದ ಆರ್ಥಿಕತೆ. ಟ್ರಂಪ್ ಅವರ ಹಲವು ಭರವಸೆಗಳ ನಡುವೆಯೂ ಹಣದುಬ್ಬರ ಅಮೆರಿಕದ ಸಾಮಾನ್ಯ ನಾಗರಿಕರನ್ನು ಹೈರಾಣಾಗಿಸಿದೆ. ಅದರಲ್ಲೂ ಪೆಟ್ರೋಲ್, ಆಹಾರ, ಮನೆ ಬಾಡಿಗೆ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಭಾರೀ ಏರಿಕೆಯಾಗಿದೆ. ಇದರಿಂದ ಅಮೆರಿಕದ ಸಾಮಾನ್ಯ ಜನರು ಬದುಕು ದುಸ್ತರವಾಗಿದೆ. ಆದರೆ ಯಾವುದೇ ಪರಿಹಾರ ನೀಡದಿರುವುದು ಟ್ರಂಪ್ ಆಡಳಿತಕ್ಕೆ ಜನರು ರೋಸಿಹೋಗಿದ್ದಾರೆ. ಇದರ ಪರಿಣಾಮವಾಗಿ, ಸಾರ್ವಜನಿಕ ಕೋಪವು ಮತಗಳಾಗಿ ಪರಿವರ್ತನೆಗೊಂಡಿದೆ.

ಇನ್ನು ಫೆಬ್ರವರಿ 2026 ರಲ್ಲಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದ ನಂತರ ದೇಶದಲ್ಲಿ ಯುದ್ಧದ ವಿರುದ್ಧ ಅಸಹನೆ ಹೆಚ್ಚುತ್ತಿದೆ. ಇರಾನ್ ಪ್ರತಿಕಾರದ ದಾಳಿಯ ಭೀತಿಯಲ್ಲಿ ಅಮೆರಿಕನ್ನರು ಬದುಕುವಂತಾಗಿದೆ. ಅಲ್ಲೀಗ ಶಾಂತಿಯೇ ಇಲ್ಲದಂತಾಗಿದೆ. ಟ್ರಂಪ್ ಅವರ ಯುದ್ಧದಾಹಕ್ಕೆ ಅಲ್ಲಿನ ನಾಗರಿಕರ ಕೋಪ, ಅಸಹನೆ ಹೆಚ್ಚಾಗಿ ಮಧ್ಯಂತರ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಯಾಗಿ ಟ್ರಂಪ್ ಹೀನಾಯ ಸೋಲಿಗೆ ಕಾರಣವಾಗಿದೆ.

ಮೂರನೇಯದು ಮತ್ತು ಕೊನೆಯ ಕಾರಣವೆಂದರೆ ವಲಸೆ ಮತ್ತು ಉದ್ಯೋಗ. ಟ್ರಂಪ್ ಅವರ ಕಠಿಣ ನಿಲುವು, ವಲಸೆ ನೀತಿಗಳಿಂದಾಗಿ ಲ್ಯಾಟಿನೋ ಮತದಾರರನ್ನು ಕೆರಳಿಸಿತು. ಈ ನಡುವೆ ಕೃತಕ ಬುದ್ಧಿಮತ್ತೆ(AI) ಯುಗದಲ್ಲಿ ಉದ್ಯೋಗಿಗಳಿಗ ಆತಂಕ ಶುರುವಾಯ್ತು. ಎಐನಿಂದ ಉದ್ಯೋಗ ನಷ್ಟ, ಲೇಆಫ್‌ನಿಂದಾಗಿ ಯುವಕರು ಕೆಲಸವಿಲ್ಲದೆ ನಿರುದ್ಯೋಗಿಗಳಾಗುವಂತಾಯ್ತು. ಅಷ್ಟೇ ಅಲ್ಲ ಮುಂದಿನ 2027ರ ಹೊತ್ತಿಗೆ ಅದಿನ್ನೂ ಹೆಚ್ಚಬಹುದು ಎಂಬ ಆತಂಕವೇ ಟ್ರಂಪ್ ವಿರುದ್ಧದ ಮತಗಳಾಗಿ ಬದಲಾದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ರಾಮಾಯಣ: ಪಾರ್ಟ್ 2' ಸಿನಿಮಾ 2027ರ ಬದಲು 2028ಕ್ಕೆ ಬಿಡುಗಡೆ; ಈ ನಿರ್ಧಾರದ ಹಿಂದಿದೆ ಜಗತ್ತು ಅರಿಯದ ಮಹಾ ತಂತ್ರ!
ಅಮೆರಿಕದಲ್ಲಿ ಕಾರಿನಿಂದ ಇಳಿಯದೇ ATMನಲ್ಲಿ ಹಣ ಡ್ರಾ! ಡ್ರೈವ್-ಥ್ರೂ ಬ್ಯಾಂಕಿಂಗ್ ಕಂಡು ಅಚ್ಚರಿಪಟ್ಟ ಭಾರತೀಯರು!