ಒಂದು ವರ್ಷದಲ್ಲಿ ಈತ ನೋಡಿದ ಸಿನಿಮಾ ಎಷ್ಟು ಗೊತ್ತಾ? ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೆ ಥಿಯೇಟರ್‌ ನಲ್ಲಿರ್ತಿದ್ದ ವ್ಯಕ್ತಿ ವಿಶ್ವದಾಖಲೆ

Published : Nov 04, 2026, 11:52 AM IST
Guinness World Record

ಸಾರಾಂಶ

ಪ್ರತಿ ದಿನ ಸಿನಿಮಾ ನೋಡೋದು ಕಷ್ಟಸಾಧ್ಯ. ಒಂತೂ ಇಂಥೂ ವಾರಕ್ಕೆ ಒಂದು ಸಿನಿಮಾ ನೋಡ್ಬಹುದು ಎನ್ನುವವರಿಗೆ ಅಚ್ಚರಿ ಸುದ್ದಿಯೊಂದಿದೆ. ಈತ ದಿನಕ್ಕೆ ವೀಕ್ಷಣೆ ಮಾಡ್ತಿದ್ದ ಸಿನಿಮಾ ಸಂಖ್ಯೆ ಕೇಳಿದ್ರೆ ನೀವು ಶಾಕ್‌ ಆಗ್ತೀರಿ.

ವಾರಪೂರ್ತಿ ಕೆಲ್ಸದಲ್ಲಿ ಬ್ಯುಸಿಯಾಗಿರುವ ಜನರು ವಾರಾಂತ್ಯದಲ್ಲಿ ರಿಲ್ಯಾಕ್ಸ್‌ ಆಗಲು ತಮ್ಮಿಷ್ಟದ ಕೆಲ್ಸ ಮಾಡ್ತಾರೆ. ಕೆಲವರಿಗೆ ಸಿನಿಮಾ ರಿಲ್ಯಾಕ್ಸ್‌ ನೀಡುತ್ತೆ. ಆದ್ರೆ ಕೆಲವರಿಗೆ ಸಿನಿಮಾ ಮೇಲೆ ವಿಶೇಷ ಪ್ರೀತಿ ಇರುತ್ತೆ. ಅವರು ಬರೀ ವಾರಾಂತ್ಯದಲ್ಲಿ ಮಾತ್ರವಲ್ಲ ವಾರದ ಮಧ್ಯೆಯೂ ಸಿನಿಮಾ ಎಂಜಾಯ್‌ ಮಾಡ್ತಾರೆ. ಸಿನಿಮಾ ಮೇಲಿನ ಪ್ರೀತಿಯೇ ಈ ವ್ಯಕ್ತಿ ದಾಖಲೆ ಬರೆಯಲು ಕಾರಣವಾಗಿದೆ.

ವಾರಕ್ಕೆ ಒಂದು ಸಿನಿಮಾ ನೀವು ನೋಡಿದ್ರೂ ಒಂದು ವರ್ಷಕ್ಕೆ 52 ಸಿನಿಮಾವನ್ನು ನೀವು ನೋಡ್ಬಹುದು. ಆದ್ರೆ ಈ ವ್ಯಕ್ತಿ ಒಂದು ವರ್ಷದಲ್ಲಿ ಬರೋಬ್ಬರಿ 1,207 ಸಿನಿಮಾಗಳನ್ನು ನೋಡಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅಚ್ಚರಿಯ ಸಂಗತಿಯೆಂದ್ರೆ ಇವರು ದಿನಕ್ಕೆ ಸರಾಸರಿ ಮೂರು ಸಿನಿಮಾಗಳನ್ನು ಥಿಯೇಟರ್ನಲ್ಲೇ ಕುಳಿತು ನೋಡಿದ್ದಾರೆ. ಅಮೆರಿಕದ 60 ವರ್ಷದ ಈ ಸಿನಿಮಾ ಪ್ರೇಮಿಯ ಸಾಧನೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ದಿನಕ್ಕೆ 3 ಸಿನಿಮಾ, ವರ್ಷಕ್ಕೆ 1,207 ಸಿನಿಮಾ

ಅಮೆರಿಕದ ಪೆನ್ಸಿಲ್ವೇನಿಯಾದ ಯಾರ್ಕ್ ಹೆವನ್ ನಿವಾಸಿ ಗ್ಲೆನ್ವುಡ್ ಹಾಸ್ಕಿನ್ ಜೂನಿಯರ್ (Glenwood Hoskin Jr.) ಈ ಅಪರೂಪದ ಸಾಧನೆ ಮಾಡಿದ ವ್ಯಕ್ತಿ. 60 ವರ್ಷದ ನಿವೃತ್ತ ತೆರಿಗೆ ಅಧಿಕಾರಿ ಗ್ಲೆನ್ವುಡ್, ಏಪ್ರಿಲ್ 2024ರಿಂದ ಏಪ್ರಿಲ್ 2025ರವರೆಗೆ ಸತತ 12 ತಿಂಗಳು ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಈ ಅವಧಿಯಲ್ಲಿ ಅವರು ಒಟ್ಟು 1,207 ಸಿನಿಮಾಗಳನ್ನು ವೀಕ್ಷಿಸಿದ್ದಾರೆ. ಈ ಮೂಲಕ ಈ ಹಿಂದಿನ 777 ಸಿನಿಮಾಗಳ ದಾಖಲೆಯನ್ನು ಮುರಿದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದಾರೆ.

ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಸಿನಿಮಾ ನೋಡುತ್ತಿದ್ದ ವ್ಯಕ್ತಿ

ಗ್ಲೆನ್ವುಡ್ ಅವರ ಸಿನಿಮಾ ಪ್ರೀತಿ ಎಷ್ಟರಮಟ್ಟಿಗಿತ್ತು ಎಂದರೆ, ಪ್ರತಿದಿನ ಚಿತ್ರಮಂದಿರಗಳ ವೇಳಾಪಟ್ಟಿಯನ್ನು ಪರಿಶೀಲಿಸಿ ಸಿನಿಮಾ ವೀಕ್ಷಣೆಗೆ ಪ್ಲಾನ್ ರೂಪಿಸುತ್ತಿದ್ದರು. ಬೆಳಗ್ಗೆಯೇ ಥಿಯೇಟರ್ಗೆ ತೆರಳುತ್ತಿದ್ದ ಅವರು, ಕೆಲವೊಮ್ಮೆ ಮಧ್ಯರಾತ್ರಿಯವರೆಗೂ ಸಿನಿಮಾ ನೋಡುತ್ತಿದ್ದರು. ಪೆನ್ಸಿಲ್ವೇನಿಯಾದ ಯಾರ್ಕ್ ಹೆವನ್ನಲ್ಲಿರುವ ಸ್ಥಳೀಯ ರೀಗಲ್ ಸಿನಿಮಾ ಥಿಯೇಟರ್ (Regal Cinema) ಅವರ ನೆಚ್ಚಿನ ತಾಣವಾಗಿತ್ತು. ಪ್ರತಿದಿನ ಸರಾಸರಿ 3.3 ಸಿನಿಮಾಗಳನ್ನು ವೀಕ್ಷಿಸುತ್ತಿದ್ದ ಅವರು, ಸಮಯವನ್ನು ಸರಿಯಾಗಿ ನಿರ್ವಹಿಸುವ ಮೂಲಕ ಈ ಸವಾಲನ್ನು ಪೂರ್ಣಗೊಳಿಸಿದ್ದಾರೆ.

ಗ್ಲೆನ್ವುಡ್ಗೆ ಕಾರ್ಟೂನ್ ಸಿನಿಮಾಗಳೆಂದರೆ ವಿಶೇಷ ಪ್ರೀತಿ. ಬಹುಶಃ ಅವುಗಳ ಅವಧಿ ಕಡಿಮೆ ಇರುವುದರಿಂದ ಮತ್ತು ಮನರಂಜನಾತ್ಮಕವಾಗಿರುವುದರಿಂದ ಅವುಗಳನ್ನು ಹೆಚ್ಚು ಇಷ್ಟ. ಇದರ ಜೊತೆಗೆ ಕಾಮಿಡಿ ಸಿನಿಮಾಗಳೂ ಅವರ ಫೇವರಿಟ್. ಇಷ್ಟೊಂದು ಸಿನಿಮಾಗಳನ್ನು ನೋಡಿದ್ರೂ ಕೆಲವೇ ಕೆಲವು ಚಿತ್ರಗಳು ಗ್ಲೆನ್ವುಡ್ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿವೆ. 2024ರಲ್ಲಿ ಬಿಡುಗಡೆಯಾದ 'ದಿ ವೈಲ್ಡ್ ರೋಬೋಟ್' (The Wild Robot) ಸಿನಿಮಾ ಅವರು ನಿರೀಕ್ಷಿಸಿದ್ದಕ್ಕಿಂತಲೂ ಅದ್ಭುತವಾಗಿತ್ತಂತೆ. ಇದೇ ವರ್ಷ ಬಿಡುಗಡೆಯಾದ 'ಡೆಡ್ಪೂಲ್ ಆ್ಯಂಡ್ ವೊಲ್ವೆರಿನ್' (Deadpool & Wolverine) ಚಿತ್ರವೂ ಅವರಿಗೆ ಬಹಳ ಇಷ್ಟವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಮೆರಿಕದಲ್ಲಿ ಕಾರಿನಿಂದ ಇಳಿಯದೇ ATMನಲ್ಲಿ ಹಣ ಡ್ರಾ! ಡ್ರೈವ್-ಥ್ರೂ ಬ್ಯಾಂಕಿಂಗ್ ಕಂಡು ಅಚ್ಚರಿಪಟ್ಟ ಭಾರತೀಯರು!
ದೇವನಹಳ್ಳಿಯಿಂದ NASAವರೆಗೆ ಬೆಳೆದ ಪ್ರತಿಭೆ! ₹180 ಕೋಟಿ ಬಾಹ್ಯಾಕಾಶ ಮಿಷನ್ ಮುನ್ನಡೆಸುತ್ತಿರುವ ಕನ್ನಡತಿ