ಅಮೆರಿಕಾದಲ್ಲಿ ವ್ಯಕ್ತಿಯೊಬ್ಬರು ವಿಚಿತ್ರ ದಾಖಲೆ ಮಾಡಿ ಇತಿಹಾಸ ನಿರ್ಮಿಸಿದ್ದಾರೆ. 53 ವರ್ಷ ಪ್ರಾಯದ ಬಾಬ್ ಸೇಲಂ ಎಂಬ ಕೊಲರಾಡೋ ಮೂಲದ ವ್ಯಕ್ತಿ ಮೂಗಿಗೆ ಟೇಪ್ ಹಾಕುವ ಮೂಲಕ ಅದರಲ್ಲೇ ಕಡಲೆಕಾಯಿಯನ್ನು ತಳ್ಳುತ್ತಾ ಕೊಲರಾಡೋದ 31ನೇ ಅತೀ ಎತ್ತರದ ಪರ್ವತದ ತುದಿಗೆ ತಲುಪಿಸಿ ದಾಖಲೆ ಬರೆದಿದ್ದಾರೆ.
ಸಿಟಿ ಆಫ್ ಮ್ಯಾನಿಟೌ ಸ್ಪ್ರಿಂಗ್ಸ್ ಸರ್ಕಾರವು ಬಾಬ್ ಸೇಲಂ ಅವರ ಸಾಹಸದ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ. ಈ ವೀಡಿಯೊವು ಜುಲೈ 9 ರಂದು ಪ್ರಾರಂಭ ಮಾಡಿದ ಸಾಹಸದ ಒಂದು ಭಾಗವನ್ನು ತೋರಿಸಿದೆ. ಈ ಕಾರ್ಯವನ್ನು ಪೂರ್ಣಗೊಳಿಸಲು ಬಾಬ್ ಸೇಲಂ ಸುಮಾರು ಏಳು ದಿನಗಳನ್ನು ತೆಗೆದುಕೊಂಡಿದ್ದಾರೆ. ಜುಲೈ 15 ರಂದು ಈ ಸಾಹಸ ಕಾರ್ಯ ಯಶಸ್ವಿಯಾಗಿ ಮುಕ್ತಾಯವಾಯಿತು. ಈ ಸಾಧನೆ ಮಾಡಿದ ಅವರನ್ನು ಮ್ಯಾನಿಟೌ ಸ್ಪ್ರಿಂಗ್ಸ್ ನಗರ ಮತ್ತು ಕೊಲೊರಾಡೋ ಸ್ಪ್ರಿಂಗ್ಸ್ ನಗರದ ಮೇಯರ್ ಜಾನ್ ಸುಥರ್ಸ್ ಅವರು ಪ್ರಮಾಣ ಪತ್ರ ನೀಡಿ ಸ್ವಾಗತಿಸಿದರು.
ತಮ್ಮ ಈ ಸಾಧನೆಯ ಕುರಿತು ಮಾತನಾಡಿದ ಬಾಬ್ ಸೇಲಂ, ಮ್ಯಾನಿಟೌ ಸ್ಪ್ರಿಂಗ್ಸ್‌ನಂತಹ ಬೇರೆ ನಗರ ಎಲ್ಲೂ ಇಲ್ಲ. ನಾನು ಮ್ಯಾನಿಟೌ ಸ್ಪ್ರಿಂಗ್ಸ್ ನಗರದ 150 ನೇ ಸಂಭ್ರಮಾಚರಣೆಯನ್ನು ಈ ಸಣ್ಣ ಸಾಧನೆಯೊಂದಿಗೆ ಆಚರಿಸಲು ಉತ್ಸುಕನಾಗಿದ್ದೇನೆ. ಪ್ರತಿಯೊಬ್ಬರು ಸಮಯ ಮಾಡಿಕೊಂಡು ಶ್ರೀಮಂತ ಇತಿಹಾಸ ಹೊಂದಿರುವ ಪೈಕ್ ಪೀಕ್ ಪರ್ವತ ಇರುವ ಈ ಮ್ಯಾನಿಟೌ ಸ್ಪ್ರಿಂಗ್ಸ್ ನಗರದ ಸಂಭ್ರಮದಲ್ಲಿ ಪ್ರಾತಿನಿಧ್ಯ ವಹಿಸುತ್ತಾರೆ ಎಂದು ನಾನು ಭರವಸೆ ಹೊಂದಿದ್ದೇನೆ. ನೀವು ಒಮ್ಮೆ ಇಲ್ಲಿಗೆ ಬಂದಲ್ಲಿ ಇಲ್ಲಿಂದ ತೆರಳಲು ಇಚ್ಛಿಸುವುದಿಲ್ಲ ಎಂದು ಅವರು ಹೇಳಿದರು.
ಅಬ್ಬಬ್ಬಾ.. ಇದು 24,679 ವಜ್ರ ಅಳವಡಿಸಿದ ಉಂಗುರ, ಗಿನ್ನಿಸ್ ದಾಖಲೆಗೆ ಸೇರ್ಪಡೆ
ಫೇಸ್‌ಬುಕ್‌ನಲ್ಲಿ ಶೇರ್ ಮಾಡಲಾದ ಈ ವಿಡಿಯೋವನ್ನು 9 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ನೂರಾರು ಜನ ಕಾಮೆಂಟ್ ಮಾಡಿದ್ದಾರೆ. ಕೊಲರಾಡೋದ 9 ನ್ಯೂಸ್ ಪ್ರಕಾರ, 93 ವರ್ಷಗಳ ಹಿಂದೆ ಒಬ್ಬ ವ್ಯಕ್ತಿ ತನ್ನ ಮೂಗಿನಿಂದ ಪೈಕ್ಸ್ ಪೀಕ್ ಮೇಲೆ ಕಡಲೆಕಾಯಿಯನ್ನು ತಳ್ಳಿದ್ದರು. ಅದಕ್ಕೆ ಅವರು ಸುಮಾರು ಎಂಟು ದಿನಗಳನ್ನು ತೆಗೆದುಕೊಂಡಿದ್ದರು. ಇದಾದ ಬಳಿಕ ಹಲವು ಬಾರಿ ಈ ರೀತಿ ಸಾಧನೆ ಮಾಡಲು ಅನೇಕರು ಪ್ರಯತ್ನಿಸಿದ್ದಾರೆ ಆದರೆ ಸಾಧ್ಯವಾಗಿಲ್ಲ ಅದರಲ್ಲೂ 21 ನೇ ಶತಮಾನದಲ್ಲಿ ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಲಾಗಿದೆ.
ಪ್ರಪಂಚದಲ್ಲಿ ಏನೇನೋ ವಿಚಿತ್ರ ದಾಖಲೆಗಳನ್ನು ಮಾಡುವ ಮೂಲಕ ಜನ ಹೆಸರು ಮಾಡಲು ಬಯಸುತ್ತಾರೆ. ಕೆಲ ದಿನಗಳ ಹಿಂದೆ ಇಟಾಲಿಯನ್ ವ್ಯಕ್ತಿಯೊಬ್ಬರು ಅತೀ ಹೆಚ್ಚು ಪೆಪ್ಸಿ ಕ್ಯಾನ್‌ಗಳನ್ನು ಸಂಗ್ರಹಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಕ್ರಿಶ್ಚಿಯನ್ ಕವಲೆಟ್ಟಿ ಎಂಬುವವರು ಪ್ರಪಂಚದ ಪ್ರತಿಯೊಂದು ಖಂಡದಿಂದ ಸಂಗ್ರಹಿಸಿದ 12,042 ಪೆಪ್ಸಿ ಕ್ಯಾನ್‌ಗಳ ಹೆಮ್ಮೆಯ ಮಾಲೀಕರಾಗಿದ್ದಾರೆ. ಈ ಸಂಗ್ರಹಿಸಲ್ಪಟ್ಟ ಈ ಕ್ಯಾನ್‌ಗಳಲ್ಲಿ ಹಳೆಯ ಕ್ಯಾನ್‌ಗಳು ಕೂಡ ಇವೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ಪ್ರಕಟಣೆಯಲ್ಲಿ ತಿಳಿಸಿದೆ. ಅವರ ಸಂಗ್ರಹವು ಪೆಪ್ಸಿ ಪಾನೀಯದ ಇತರ ಸೀಮಿತ ಆವೃತ್ತಿಗಳನ್ನು ಸಹ ಒಳಗೊಂಡಿದೆ.
ಲೇಹ್‌ನಿಂದ ಮನಾಲಿಗೆ ಸೈಕಲ್ ತುಳಿದ ಮಹಿಳೆ : 55 ಗಂಟೆಗಳಲ್ಲಿ 430 ಕಿಮೀ ಕ್ರಮಿಸಿದ ಪ್ರೀತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ