
ವಾಷಿಂಗ್ಟನ್ (ಏ.20): ಇರಾನ್ ಜತೆಗೆ ಅಮೆರಿಕದ ಸಂಧಾನ ಮಾಡಿಸುತ್ತೇನೆಂಬ ಹುಮ್ಮಸ್ಸಿನಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜ। ಅಸಿಂ ಮುನೀರ್ ಕುಣಿಯುತ್ತಿರುವ ಹೊತ್ತಿನಲ್ಲಿ, ‘ಆತ ರೆಡ್ ಫ್ಲ್ಯಾಗ್(ಅಪಾಯ) ಹಾಗೂ ಹೊರೆ ಇದ್ದಂತೆ’ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಎಚ್ಚರಿಕೆ ನೀಡಿದೆ. ‘ನನ್ನಿಷ್ಟದ ಫೀಲ್ಡ್ ಮಾರ್ಷಲ್’ ಎಂದು ಟ್ರಂಪ್‌ರಿಂದ ಹೊಗಳಿಸಿಕೊಳ್ಳುತ್ತಿರುವ ಮುನೀರ್‌ಗೆ, ಇರಾನ್‌ನಲ್ಲಿ ಸದ್ಯ ಬಲಿಷ್ಠವಾಗಿರುವ ಅರೆಸೇನಾಪಡೆ ಐಆರ್‌ಜಿಸಿ ಜತೆ ನಂಟಿದೆ ಎಂಬರ್ಥದಲ್ಲಿ ಹೀಗೆ ಹೇಳಲಾಗಿದೆ.
ಪಾಕಿಸ್ತಾನದ ನಿವೃತ್ತ ಜ। ಅಹ್ಮದ್ ಸಯೀದ್ ಅಮೆರಿಕದ ಫಾಕ್ಸ್ ನ್ಯೂಸ್ ಜತೆ ಮಾತನಾಡುತ್ತಾ, ‘2016ರಿಂದಲೇ ಮುನೀರ್ ಇರಾನ್ ಜತೆ ನಂಟು ಬೆಳೆಸಿಕೊಳ್ಳುತ್ತಿದ್ದರು. ಅವರಿಗೆ ಐಆರ್‌ಜಿಸಿ, ಇರಾನ್‌ನ ಸೇನೆ, ಖುದ್ಸ್ ಫೋರ್ಸ್‌ನ ಕಮಾಂಡರ್ ಆಗಿದ್ದ ಖಾಸಿಂ ಸೊಲೈಮಾನಿ, ಹೊಸೇನ್ ಸಲಾಮಿಯಂತಹ ನಾಯಕರೊಂದಿಗೆ ಒಳ್ಳೆ ಬಾಂಧವ್ಯವಿದೆ’ ಎಂದು ಹೇಳಿದ್ದರು.
ಇದರ ಬೆನ್ನಲ್ಲೇ ಇನ್ನೊಬ್ಬ ಭದ್ರತಾ ವಿಶ್ಲೇಷಕ ಬಿಲ್ ರೋಗಿಯೋ, ‘ಅಫ್ಘಾನಿಸ್ತಾನದ ಜತೆಗಿನ ಯುದ್ಧದ ವೇಳೆ ನಮಗೆ ಮಿತ್ರನಾಗಿದ್ದುಕೊಂಡೇ ಪಾಕಿಸ್ತಾನವು ತಾಲಿಬಾನಿಗಳನ್ನು ಬೆಂಬಲಿಸುತ್ತಿತ್ತು. ಈಗ ಇರಾನ್ ಜತೆಗಿನ ಯುದ್ಧ ಸ್ಥಗಿತಕ್ಕೆ ಮಧ್ಯಸ್ಥಿಕೆ ವಹಿಸುತ್ತಿರುವ ಮುನೀರ್ ಮತ್ತು ಐಆರ್‌ಜಿಸಿ ನಡುವಿನ ನಂಟನ್ನು ಅಪಾಯವೆಂದು ಪರಿಗಣಿಸಬೇಕು’ ಎಂದು ಸಲಹೆ ನೀಡಿದ್ದಾರೆ.
ಇರಾನ್ ಹಾಗೂ ಅಮೆರಿಕ, ಎರಡೂ ರಾಷ್ಟ್ರಗಳಿಗೆ ಮಿತ್ರನಾಗಿರುವ ಪಾಕಿಸ್ತಾನವು ಅವೆರಡರ ನಡುವೆ ಸಂಧಾನ ಮಾಡಿಸಲು ಮಧ್ಯಸ್ಥಿಕೆ ವಹಿಸುತ್ತಿದೆ. ಅದರ ಬೆನ್ನಲ್ಲೇ ಇಂತಹ ಎಚ್ಚರಿಕೆ ಬಂದಿರುವುದು ಕಳವಳಕಾರಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ