ಪುಷ್ಪಾದ ಒ ಅಂಟವಾ ಹಾಡಿಗೆ ಸಮಂತಾ ಕೂಡ ನಾಚುವಂತೆ ಕುಣಿದ ಅಮೆರಿಕನ್ ಡ್ಯಾಡ್‌

Suvarna News   | Asianet News
Published : Jan 05, 2022, 11:55 PM IST
ಪುಷ್ಪಾದ ಒ ಅಂಟವಾ ಹಾಡಿಗೆ ಸಮಂತಾ ಕೂಡ ನಾಚುವಂತೆ ಕುಣಿದ ಅಮೆರಿಕನ್ ಡ್ಯಾಡ್‌

ಸಾರಾಂಶ

ಒ ಅಂಟವಾ ಹಾಡಿಗೆ ಅಮೆರಿಕನ್ ಡ್ಯಾಡ್ ಸಖತ್‌ ಸ್ಟೆಪ್ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ನಟನೆ ಸಿನಿಮಾ ಪುಷ್ಪಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌   

ಅಲ್ಲು ಅರ್ಜುನ್‌ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ತೆಲುಗು ಸಿನಿಮಾ ಪುಷ್ಪಾದ ಒ ಅಂಟವಾ ಹಾಡಿಗೆ ಅಮರಿಕನ್ ಡ್ಯಾಡ್ ರಿಕಿ ಪಾಂಡ್‌ ( Ricky Pond)ಸಖತ್‌ ಸ್ಟೆಪ್‌ ಹಾಕಿದ್ದಾರೆ. ಸ್ವತಃ ಪುಷ್ಪಾ ಸಿನಿಮಾದಲ್ಲಿ ಡಾನ್ಸ್‌ ಮಾಡಿದ್ದ ನಟಿ ಸಮಂತಾಳೇ ನಾಚುವಂತೆ ರಿಕಿ ಪಾಂಡ್‌ ಕುಣಿದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ರಿಕಿ ಪಾಂಡ್‌ ಡಾನ್ಸ್‌ಗೆ ಫಿದಾ ಆಗಿದ್ದಾರೆ. 

ಜನವರಿ 4ರಂದು ಈ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಚೆಕ್ಸ್ ಶರ್ಟ್‌ ಹಾಗೂ ಪ್ಯಾಂಟ್ ಧರಿಸಿ ಒ ಅಂಟಾವಾ ಹಾಡಿಗೆ ಸಖತ್‌ ಆಗಿ ಕುಣಿದಿರುವ ರಿಕಿ ಪಾಂಡ್‌ ತಮ್ಮ ಕುಣಿತದಿಂದ ಇಂಟರ್‌ನೆಟ್‌ನಲ್ಲಿ ಧೂಳೆಬ್ಬಿಸಿದ್ದಾರೆ. ಈ ವಿಡಿಯೋವನ್ನು 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಕಾಮೆಂಟ್ ಸೆಕ್ಷನ್‌ನಲ್ಲಿ ಅನೇಕರು ರಿಕಿ ಡಾನ್ಸ್‌ ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. ನಾಲ್ಕು ಮಕ್ಕಳ ತಂದೆಯಾಗಿರುವ ರಿಕಿ ಪಾಂಡ್‌ ಇನ್ಸ್ಟಾಗ್ರಾಮ್‌ ಖಾತೆ ಪೂರ್ತಿ ಅವರು ವಿವಿಧ ಹಾಡುಗಳಿಗೆ ಕುಣಿದಿರುವ ವಿಡಿಯೋಗಳಿವೆ. 

 

ಡಾನ್ಸ್‌ ಮೇರಿ ರಾಣಿ ಹಾಡಿಗೆ ನರ್ತಿಸಿದ ಕಿಲಿಪೌಲ್
ಇತ್ತೀಚೆಗೆ ತಾಂಜಾನೀಯಾದ ತರುಣ ಕಿಲಿ ಪೌಲ್‌ ಬಾಲಿವುಡ್ ಸಿನಿಮಾದ ಹಲವು ಹಾಡುಗಳಿಗೆ ಡಾನ್ಸ್‌ ಮಾಡಿ ಭಾರತೀಯರ ಪ್ರೀತಿ ಗಳಿಸಿದ್ದ. ಬಾಲಿವುಡ್‌ನ ಅನೇಕ ಹಾಡುಗಳಿಗೆ ಈಗಾಗಲೇ ಸಖತ್‌ ಆಗಿ ಹೆಜ್ಜೆ ಹಾಕಿ ಖ್ಯಾತಿ ಗಳಿಸಿರುವ ತಾಂಜೇನಿಯಾದ ಪ್ರತಿಭೆ ಕಿಲಿ ಪೌಲ್‌ (Kili Paul)  ಈಗ ಮತ್ತೊಂದು ಫೇಮಸ್‌ ಡಾನ್ಸ್‌ನೊಂದಿಗೆ ಸಾಮಾಜಿಕ ಜಾಲತಾಣಕ್ಕೆ ಬಂದಿದ್ದು, ಈ ವಿಡಿಯೋ ಕೂಡ ಸಖತ್ ವೈರಲ್ ಆಗಿದೆ. ನೂರ್ ಫತೇಹಿ ನಟಿಸಿರುವ  ಗುರು ರಂದಾವ್‌ ಹಾಗೂ ಜಹ್ರಾ ಎಸ್ ಖಾನ್‌  ಹಾಡಿರುವ  ಡಾನ್ಸ್‌ ಮೇರಿ ರಾಣಿ ಹಾಡಿಗೆ ಈ ಬಾರಿ ಕಿಲಿ ಪೌಲ್‌ ಹೆಜ್ಜೆ ಹಾಕಿದ್ದಾರೆ.  ಈ ವೈರಲ್ ವೀಡಿಯೋದಲ್ಲಿ ಕಿಲಿ ಪೌಲ್ ಡ್ಯಾನ್ಸ್ ಮೇರಿ ರಾಣಿ ಹಾಡಿನಲ್ಲಿರುವ ಹುಕ್ ಸ್ಟೆಪ್ಸ್‌ಗಳನ್ನು ಸಖತ್ ಆಗಿ ಹಾಕುತ್ತಿದ್ದು, ತನ್ನ ಅಮೋಘ ನೃತ್ಯದ ಮೂಲಕ ಈಗಾಗಲೇ ಸಾಕಷ್ಟು ನೆಟ್ಟಿಗರ ಗಮನ ಸೆಳೆದಿದ್ದಾನೆ.

Pushpa Box Office Collection: 300 ಕೋಟಿ ಕೆಲಕ್ಷನ್, 2021ರ ನಂ.1 ಸಕ್ಸಸ್ ಸಿನಿಮಾ

ಹುಲ್ಲು ಬೆಳೆದ ಬಯಲಿನಲ್ಲಿ ಯಾವುದೇ ಅಡೆತಡೆ ಇಲ್ಲದೇ ನುಣುಪಾದ ನೆಲದಲ್ಲಿ ಕಾಲು ಜಾರಿಸುವಂತೆ ಹೆಜ್ಜೆ ಹಾಕುತ್ತಿರುವ ಕಿಲಿಯ ಈ ನೃತ್ಯ ಎಲ್ಲರನ್ನು ಸೆಳೆಯುತ್ತಿದೆ. ಡಾನ್ಸ್‌ ಗೊತ್ತಿದ್ದವರು ಎಂತ ಸ್ಥಳದಲ್ಲೂ ಕುಣಿಯಲು ಸಿದ್ಧರಿರುತ್ತಾರೆ ಎಂಬುದು ಈ ವಿಡಿಯೋದಿಂದ ಸಾಬೀತಾಗಿದೆ.  ಡಾನ್ಸರ್‌ ನೂರ್ ಫತೇಹಿ ಹಾಕಿದ ಸ್ಟೆಪ್ಸ್‌ಗೆ ಕಿಲಿ ಪೌಲ್‌ ಲಿಪ್‌ ಸಿಂಕ್‌ ಜೊತೆ ಡಾನ್ಸ್‌ ಮಾಡಿದ್ದಾನೆ. ಈ ಹಾಡನ್ನು ತನಿಷ್ಕ್‌ ಬಗಚಿ(Tanishk Bagchi) ಸಂಯೋಜಿಸಿದ್ದಾರೆ.  ಕಿಲಿ ಮಾಡಿದ ಡಾನ್ಸ್‌ ವಿಡಿಯೋವನ್ನು ನೊರಾ ಫತೇಹಿ ಕೂಡ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದು, ಲೆಟ್ಸ್‌ ಗೋ ಅಂತ ಕ್ಯಾಪ್ಷನ್‌ ನೀಡಿದ್ದಾರೆ. ಸುಂದರವಾದ ಹೆಜ್ಜೆಗಳು. ಇದೊಂದು ಅದ್ಭುತ ಎಂದು ನೋರಾ ಪ್ರತಿಕ್ರಿಯಿಸಿದ್ದಾರೆ. 

Bollywood Film Offer To Allu Arjun: ಪುಷ್ಪಾ ಸಕ್ಸಸ್, ಬಾಲಿವುಡ್‌ನಲ್ಲೂ ಅಲ್ಲೂಗೆ ಡಿಮ್ಯಾಂಡ್

ಕೆಲ ದಿನಗಳ ಹಿಂದಷ್ಟೇ ಕಿಲಿ ಪೌಲ್‌  ಇನ್ಸ್ಟಾಗ್ರಾಮ್‌ನಲ್ಲಿ 732 ಸಾವಿರ ಫಾಲೋವರ್‌ಗಳನ್ನು ಗಳಿಸಿದ್ದರು. ಇದರಲ್ಲಿರುವ ಬಹುತೇಕ ಫಾಲೋವರ್‌ಗಳು ಭಾರತದವರಾಗಿದ್ದಾರೆ. ಇವರು ಸಂಪ್ರದಾಯಿಕ ಮಾಸೈ ಧಿರಿಸು ಧರಿಸಿ  ತಮ್ಮ ಸಹೋದರಿ ನೀಮಾ(Neema) ಜೊತೆ ಸೇರಿ ಡಾನ್ಸ್‌ ಮಾಡುತ್ತಾರೆ. ಇವರ ಡಾನ್ಸ್‌ ಕೇವಲ ಭಾರತೀಯರನಷ್ಟೇ ಆಕರ್ಷಿಸಿಲ್ಲ. ನಟರು ಗಾಯಕರು, ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಇರುವ ಗಣ್ಯರು ಕಿಲಿ ಪೌಲ್‌ ಡಾನ್ಸ್‌ನ್ನು ಇಷ್ಟ ಪಡುತ್ತಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ