ಕಾರು ಅಪಘಾತ: ಅಪಾಯದಲ್ಲಿದ್ದ ಮಾಲೀಕನ ರಕ್ಷಣೆಗೆ ಧಾವಿಸಿದ ಶ್ವಾನ

Suvarna News   | Asianet News
Published : Jan 05, 2022, 06:37 PM IST
ಕಾರು ಅಪಘಾತ: ಅಪಾಯದಲ್ಲಿದ್ದ ಮಾಲೀಕನ ರಕ್ಷಣೆಗೆ ಧಾವಿಸಿದ ಶ್ವಾನ

ಸಾರಾಂಶ

  ಅಪಾಯದಲ್ಲಿದ್ದ ಮಾಲೀಕನ ರಕ್ಷಣೆಗೆ ಧಾವಿಸಿದ ನಾಯಿ ಇಂಗ್ಲೆಂಡ್‌ನ ನ್ಯೂ ಹಂಪ್‌ಶೈರ್‌ನಲ್ಲಿ ಘಟನೆ ಘಟನಾ ಸ್ಥಳಕ್ಕೆ ಪೊಲೀಸರ ಕರೆದೊಯ್ದ ಶ್ವಾನ

ಇಂಗ್ಲೆಂಡ್: ಶ್ವಾನಗಳು ಮನುಷ್ಯನ ಬೆಸ್ಟ್ ಫ್ರೆಂಡ್‌ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇಂಗ್ಲೆಂಡ್‌ನ ನ್ಯೂ ಹಂಪ್‌ಶೈರ್‌ನಲ್ಲಿ ನಾಯಿಯೊಂದು ತನ್ನ ಮಾಲೀಕ ಅಪಾಯದಲ್ಲಿರುವುದನ್ನು ತಿಳಿದು ಆ ಸ್ಥಳಕ್ಕೆ ಧಾವಿಸಿ ಆತನ ಜೀವ ಉಳಿಸಿದೆ. ಟಿನ್ಸ್‌ಲಿ (Tinsley) ಹೆಸರಿನ ಜರ್ಮನ್‌ ಶೆಫರ್ಡ್ ನಾಯಿ ಹೀಗೆ ಮಾಲೀಕನ ರಕ್ಷಣೆಗೆ ಧಾವಿಸಿ ಬಂದ ಶ್ವಾನ. ಈತನ ಮಾಲೀಕ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾಗಿ ಪಲ್ಟಿ ಹೊಡೆದಿದೆ. ಪರಿಣಾಮ ಮಾಲೀಕ ಅಪಾಯಕ್ಕೊಳಗಾಗಿದ್ದಾರೆ. ಕಾರು ಹಾಗೂ ಟ್ರಕ್‌ನಲ್ಲಿದ್ದವರಿಗೂ ಈ ಅಪಘಾತದಲ್ಲಿ ಗಾಯಗಳಾಗಿತ್ತು. ಆದರೆ ಶ್ವಾನ ಟಿನ್ಸ್‌ಲಿ ನೆರವಿನಿಂದ ಅವರು ಶೀಘ್ರದಲ್ಲೇ ವೈದ್ಯಕೀಯ ಸಹಾಯ ಪಡೆಯುವಂತಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ನಾಯಿಯ ವರ್ತನೆಯಿಂದ ಅದು ನಮಗೇನೋ ಹೇಳಲು, ತೋರಿಸಲು ಬಯಸುತ್ತಿತ್ತು ಎಂದು ನಮಗನಿಸುತ್ತಿತ್ತು ಎಂದು ನ್ಯೂ ಹಂಪ್‌ಶೈರ್‌ನ ರಾಜ್ಯ ಪೊಲೀಸ್ ಆದ ಲೆಫ್ಟಿನೆಂಟ್ ಡೇನಿಯಲ್ ಬಾಲ್ಡಸ್ಸರ್ (Daniel Baldassarre) ಹೇಳಿದರು. ಅದು ನನ್ನನ್ನು ಹಿಂಬಾಲಿಸಿ ನನ್ನನ್ನು ಹಿಂಬಾಲಿಸಿ ಅನ್ನುವಂತಿತ್ತು. ಹಾಗಾಗಿ ನಾವು ಅದರ ಹಿಂದೆಯೇ ಹೋದೆವು. ಅದು ನಮ್ಮನ್ನು ಕರೆದುಕೊಂಡು ಹೋದ ಸ್ಥಳವನ್ನು ತಲುಪಿದಾಗ ನಮಗೆ ಅಚ್ಚರಿಯಾಗಿತ್ತು. ಅಲ್ಲಿ ರಸ್ತೆ ಬದಿ ಹಾಕಿದ ಗಾರ್ಡ್‌ರೈಲ್‌ ಹಾನಿಗೊಳಗಾಗಿತ್ತು. ಹಾಗೂ ಅಲ್ಲಿ ಕೆಳಗೆ ನಾಯಿ ನೋಡಲು ಶುರು ಮಾಡಿತ್ತು. ನಂತರ ನಾವು ಅಲ್ಲಿ ನೋಡಿದಾಗ ಅಪಘಾತವಾಗಿರುವುದು ಕಂಡು ಬಂತು ಎಂದು ಡೇನಿಯಲ್ ಬಾಲ್ಡಸ್ಸರ್ ಹೇಳಿದರು. ನಂತರ ಅಲ್ಲಿಗೆ ಸಮೀಪದ ಪೊಲೀಸರು ಹಾಗೂ ಹಂಪ್‌ಶೈರ್‌ ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯ ನಡೆಸಿದರು ಎಂದು ತಿಳಿದು ಬಂದಿದೆ.

Hurdle Jumps: ಶ್ವಾನದ ಜಂಪಿಂಗ್‌ ಜಪಾಂಗ್‌... ನಕ್ಕು ನಗಿಸುವ ವಿಡಿಯೋ...

ಇತ್ತೀಚೆಗೆ ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯ ಲೋರ್ಮಿಯಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿತ್ತು. ಇಲ್ಲಿ ನವಜಾತ ಹೆಣ್ಣು ಶಿಶುವನ್ನು ಜನ್ಮ ಕೊಟ್ಟ ತಾಯಿಯೇ ಬೀದಿಗೆಸೆದಿದ್ದಳು. ಆದರೆ ಕಂದನ ಕಂಡ ನಾಯಿಗಳು ಸುತ್ತಲೂ ನಿಂತು ರಕ್ಷಣೆ ನೀಡಿದ್ದವು. ಕೆಲ ಸಮಯದ ಬಳಿಕ ಈ ವಿಚಾರ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳ ನಡುವೆ ಇದ್ದರೂ ಈ ಮುಗ್ಧ ನವಜಾತ ಶಿಶು ಸಂಪೂರ್ಣವಾಗಿ ಆರೋಗ್ಯಕರ ಮತ್ತು ಸುರಕ್ಷಿತವಾಗಿತ್ತು. 

ಲೋರ್ಮಿಯ ಸರಿಸ್ಟಾಲ್ ಗ್ರಾಮದಲ್ಲಿ ಘಟನೆ ನಡೆದಿದ್ದು, ನವಜಾತ ಹೆಣ್ಣು ಶಿಶುವೊಂದು ಗುಡ್ಡದ ಭಾಗದಲ್ಲಿ ನಾಯಿಗಳ ನಡುವೆ ಅಳುತ್ತಿರುವುದು ಕಂಡು ಬಂದಿದೆ. ಇದನ್ನು ನೋಡಿದ ಹತ್ತಿರದ ನಿವಾಸಿಗಳ ಕಣ್ಣಂಚು ಒದ್ದೆಯಾಗಿದೆ.  ಕೂಡಲೇ ಮನೆ ಸದಸ್ಯ ಭೈಯಾಲಾಲ್ ಸಾಹು ಗ್ರಾಮದ ಸರಪಂಚ್‌ಗೆ ಮಾಹಿತಿ ನೀಡಿದ್ದಾರೆ.  ಸರಪಂಚ್ ತಡ ಮಾಡದೆ ಶಿಶುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವಿಷಯ ತಿಳಿದು ಪೊಲೀಸರು ಕೂಡ ಆಸ್ಪತ್ರೆಗೆ ಆಗಮಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಕಂದನನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. 

ನೀ ಅನಾಥನಲ್ಲ ನಿನಗೆ ನಾನು ನನಗೆ ನೀನು.... ನಿರ್ಗತಿಕನಿಗೆ ಜೊತೆಯಾದ ಶ್ವಾನhttps://kannada.asianetnews.com/world-news/heartwarming-video-dog-hugs-homeless-man-akb-r50v5h

ಅದೇ ಸಮಯದಲ್ಲಿ, ಗ್ರಾಮದಲ್ಲಿ ನಡೆದ ಇಂತಹ ಘಟನೆಯಿಂದ ಜನರು ಸಾಕಷ್ಟು ಆಶ್ಚರ್ಯಚಕಿತರಾಗಿದ್ದಾರೆ. ಏಕೆಂದರೆ ಮುಗ್ಧ ಮಗು ರಾತ್ರಿ ಇಡೀ ಮೈಕೊರೆಯುವ ಚಳಿ ಹಾಗೂ ಪ್ರಾಣಿಗಳ ನಡುವೆ ಬದುಕುಳಿದಿದ್ದು ಪವಾಡಕ್ಕಿಂತ ಕಡಿಮೆಯಿಲ್ಲ. ಈ ಪ್ರಾಣಿಗಳು ನವಜಾತ ಶಿಶುವಿಗೆ ಹಾನಿ ಮಾಡುವ ಸಾಧ್ಯತೆಯೂ ಇತ್ತು. ಆದರೆ ಹಾಗಾಗಲಿಲ್ಲ, ಬದಲಾಗಿ ಅವುಗಳೇ ಖುದ್ದು ಕಂದನಿಗೆ ರಕ್ಷಣೆ ನೀಡಿವೆ. ನಾಯಿಗಳು ಕಂದನನ್ನು ನಾಲಿಗೆಯಿಂದ ನೆಕ್ಕಿ ಸ್ವಚ್ಛಗೊಳಿಸಿವೆ. ಮನುಷ್ಯರಿಗಿಂತ ಈ ಮೂಕಪ್ರಾಣಿಗಳಲ್ಲಿ ಹೆಚ್ಚು ಮಾನವೀಯತೆ ಇರುವುದು ಇದರಿಂದ ಸ್ಪಷ್ಟವಾಗುತ್ತದೆ.

ಅದೇ ಸಮಯದಲ್ಲಿ, ಪ್ರಕರಣದ ತನಿಖೆಯಲ್ಲಿ ತೊಡಗಿರುವ ಲೋರ್ಮಿ ಪೊಲೀಸ್‌ನ ತನಿಖಾಧಿಕಾರಿ ಚಿಂತಾರಾಮ್ ಬಿಜ್ವರ್ ಅವರು ಈ ಬಗ್ಗೆ ಮಾಹಿತಿ ನೀಡುತ್ತಾ ಅಮಾಯಕ ಕಂದನನ್ನು ಚೈಲ್ಡ್ ಲೈನ್‌ಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದಾರೆ. ನವಜಾತ ಶಿಶು ಜನಿಸಿ 24 ಗಂಟೆಯೂ ಪೂರ್ಣಗೊಂಡಿಲ್ಲ ಎಂದು ಹೇಳಲಾಗುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್