ಹೈದರಾಬಾದ್(ಜೂ.14): ಕೊರೋನಾ ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಲ್ಲ ಎರಡು ಸ್ವದೇಶಿ ಲಸಿಕೆ ಭಾರತದಲ್ಲಿವೆ. ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಹಾಗೂ ಸೀರಂ ಸಂಸ್ಥೆಯ ಕೋವಿಶೀಲ್ಡ್. ಇದೀಗ ಅಮೆರಿಕ ನೋವಾವಾಕ್ಸ್ ಸಂಸ್ಥೆ ಲಸಿಕೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ನೂತನ ನೋವಾವಾಕ್ಸ್ ಲಸಿಕೆ ಶೇಕಡಾ 90 ರಷ್ಟು ಪರಿಣಾಮಕಾರಿ ಅನ್ನೋದು ಪ್ರಯೋಗಿಕ ವರದಿಯಿಂದ ದೃಢಪಟ್ಟಿದೆ.
ಖಾಸಗಿ ಆಸ್ಪತ್ರೆಗೆ ಲಸಿಕೆ ದರ ನಿಗದಿಪಡಿಸಿದ ಕೇಂದ್ರ; ಇಲ್ಲಿದೆ 3 ವಾಕ್ಸಿನ್ ಬೆಲೆ !
NVX-CoV2373 ಅಥವಾ ನೋವಾವಾಕ್ಸ್ ನ್ಯಾನೊ ಪಾರ್ಟಿಕಲ್ ಪ್ರೋಟೀನ್ ಆಧಾರಿತ ಕೊರೋನಾ ಲಸಿಕೆ ಇದಾಗಿದೆ. 3ನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ರೂಪಾಂತರಿ ಹಾಗೂ ಕೊರೋನಾದಿಂದ ತೀವ್ರವಾಗಿ ಅಸ್ವಸ್ಥಗೊಂಡವರಿಗೆ ಶಕೇಡಾ 100 ರಷ್ಟು ರಕ್ಷಣೆ ಒದಗಿಸಿದೆ. 3ನೇ ಹಂತದ ಕ್ಲಿನಿಕಲ್ ಪ್ರಯೋಗದ ಸರಾಸರಿ ಫಲಿತಾಂಶದಲ್ಲಿ ಕೋವಿಡ್ ವಿರುದ್ಧ ನೋವಾವಾಕ್ಸ್ ಶೇಕಡಾ 90.4 ರಷ್ಟು ಪರಿಣಾಮಕಾರಿ ಅನ್ನೋದು ಸಾಬೀತಾಗಿದೆ.
ಪ್ರಯೋಗಗಳು ನಡೆಯುತ್ತಿದೆ. ಅಡ್ಡ ಪರಿಣಾಮ ಸೇರಿದಂತೆ ಎಲ್ಲಾ ಅಂಶಗಳನ್ನೂ ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಪ್ರಯೋಗದಲ್ಲಿ ಯಾವುದೇ ಅಡ್ಡಪರಿಣಾಮ ವರದಿಯಾಗಿಲ್ಲ. ಇದೀಗ ಲಸಿಕೆ ಅಧೀಕೃತ ಮಾನ್ಯತೆಗೆ ಬೇಕಾದ ಕೆಲಸಗಳು ನಡೆಯುತ್ತಿದೆ ಎಂದು ಅಮೆರಿಕ ನೋವಾವಾಕ್ಸ್ ಅಧ್ಯಶ್ರ ಸ್ಟಾನ್ಲಿ ಸಿ ಹೇಳಿದ್ದಾರೆ.