Baby Bonus Plan: ಅಮೇರಿಕಾದಲ್ಲಿ ಮಗು ಮಾಡಿಕೊಂಡರೆ 4.25 ಲಕ್ಷ ಬೋನಸ್; ಟ್ಯಾಕ್ಸ್ ಫ್ರೀ!

Published : Apr 22, 2025, 04:29 PM ISTUpdated : Apr 22, 2025, 05:17 PM IST
Baby Bonus Plan: ಅಮೇರಿಕಾದಲ್ಲಿ ಮಗು ಮಾಡಿಕೊಂಡರೆ 4.25 ಲಕ್ಷ ಬೋನಸ್; ಟ್ಯಾಕ್ಸ್ ಫ್ರೀ!

ಸಾರಾಂಶ

ಅಮೆರಿಕದಲ್ಲಿ ಕಡಿಮೆಯಾಗುತ್ತಿರುವ ಜನನ ಪ್ರಮಾಣವನ್ನು ಹೆಚ್ಚಿಸಲು ಟ್ರಂಪ್ ಸರ್ಕಾರ "ಬೇಬಿ ಬೋನಸ್" ಯೋಜನೆ ಪರಿಗಣಿಸುತ್ತಿದೆ. ಮಗುವಿನ ಜನನಕ್ಕೆ ತಾಯಿಗೆ ₹4.25 ಲಕ್ಷ ನೀಡುವ, ತೆರಿಗೆ ವಿನಾಯಿತಿ, ಮುಟ್ಟಿನ ಚಕ್ರ ಶಿಕ್ಷಣ ನೀಡುವ ಪ್ರಸ್ತಾಪಗಳಿವೆ. ಫುಲ್‌ಬ್ರೈಟ್ ವಿದ್ಯಾರ್ಥಿವೇತನದಲ್ಲಿ ವಿವಾಹಿತರಿಗೆ ಮೀಸಲಾತಿ ನೀಡುವ ಚಿಂತನೆಯೂ ಇದೆ. 1990ರಿಂದಲೂ ಜನನ ಪ್ರಮಾಣ ಕುಸಿಯುತ್ತಿದ್ದು, ಈ ಯೋಜನೆಯ ಪರಿಣಾಮ ಕಾದು ನೋಡಬೇಕಿದೆ.

US Baby Bonus: ಜಗತ್ತಿನಲ್ಲಿ ಮಕ್ಕಳ ಜನನ ಪ್ರಮಾಣ ಕಡಿಮೆಯಾಗುತ್ತಿರುವ ದೇಶಗಳಲ್ಲಿ ಅಮೆರಿಕ ಕೂಡ ಒಂದು. ಇದನ್ನು ತಡೆಯಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಜನರಿಗೆ ಮದುವೆಯಾಗಿ ಹೆಚ್ಚು ಮಕ್ಕಳನ್ನು ಹೊಂದಲು ಪ್ರೋತ್ಸಾಹಿಸುತ್ತಿದೆ.

ಇತ್ತೀಚೆಗೆ 2ನೇ ಬಾರಿಗೆ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಆಡಳಿತ ಅಮೆರಿಕನ್ನರು ಮದುವೆಯಾಗಿ ಹೆಚ್ಚು ಮಕ್ಕಳನ್ನು ಹೊಂದಲು ಪ್ರೋತ್ಸಾಹಿಸುವ ಉದ್ದೇಶದಿಂದ ಹಲವು ಪ್ರಸ್ತಾಪಗಳನ್ನು ಪರಿಗಣಿಸುತ್ತಿದೆ. ಇತ್ತೀಚೆಗೆ ವೈಟ್ ಹೌಸ್ ಸಹಾಯಕರು ನೀತಿ ತಜ್ಞರು ಮತ್ತು ಸಂಪ್ರದಾಯವಾದಿ ಗುಂಪುಗಳೊಂದಿಗೆ ಸಭೆ ನಡೆಸಿದ್ದಾರೆ. ಇವರು ಪ್ರೊನೇಟಲಿಸ್ಟ್ ಆಂದೋಲನದೊಂದಿಗೆ ಸಂಬಂಧ ಹೊಂದಿದ್ದಾರೆ. ಇದು ಕುಟುಂಬವನ್ನು ಬೆಂಬಲಿಸುವ ಮತ್ತು ಜನಸಂಖ್ಯಾ ಬೆಳವಣಿಗೆಯನ್ನು ಉತ್ತೇಜಿಸುವ ಒಂದು ವೈಚಾರಿಕ ಅಭಿಯಾನವಾಗಿದೆ.

ಮಗು ಹುಟ್ಟಿದರೆ ತಾಯಿಗೆ ₹4.25 ಲಕ್ಷ: ವರದಿಗಳ ಪ್ರಕಾರ, ಅಮೆರಿಕ ಸರ್ಕಾರ ತಾಯಿಗೆ ಮಗುವಿನ ಜನನದ ನಂತರ 5,000 ಅಮೆರಿಕನ್ ಡಾಲರ್ (₹4.25 ಲಕ್ಷಕ್ಕಿಂತ ಹೆಚ್ಚು) 'ಬೇಬಿ ಬೋನಸ್' ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಇದರೊಂದಿಗೆ ಮಗು ಹುಟ್ಟಿದರೆ ತೆರಿಗೆ ವಿನಾಯಿತಿ, ಮಹಿಳೆಯರ ಅಂಡೋತ್ಪತ್ತಿ ಮತ್ತು ಪ್ರಜನನ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಮುಟ್ಟಿನ ಚಕ್ರ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Vladimir Putin: ಉಕ್ರೇನ್‌ ಜತೆ ದ್ವಿಪಕ್ಷೀಯ ಚರ್ಚೆಗೆ ಸಿದ್ಧ: ಮೊದಲ ಬಾರಿ ಪುಟಿನ್‌ ಘೋಷಣೆ

ಫುಲ್‌ಬ್ರೈಟ್ ವಿದ್ಯಾರ್ಥಿವೇತನ ಕಾರ್ಯಕ್ರಮದಲ್ಲಿ ಶೇ.30 ರಷ್ಟು ಸ್ಥಾನಗಳನ್ನು ವಿವಾಹಿತರು ಅಥವಾ ಮಕ್ಕಳಿರುವವರಿಗೆ ಮೀಸಲಿಡುವ ಪ್ರಸ್ತಾಪವನ್ನು ಸರ್ಕಾರ ಪರಿಗಣಿಸುತ್ತಿದೆ. ಇದು ಅಮೆರಿಕದ ಅತ್ಯಂತ ಪ್ರತಿಷ್ಠಿತ ಶೈಕ್ಷಣಿಕ ಫೆಲೋಶಿಪ್‌ಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ. ಇದರಿಂದ ವಿದ್ಯಾರ್ಥಿಗಳು ಆಗಿದ್ದ ಅವಧಿಯಲ್ಲಿಯೇ ಮಕ್ಕಳು ಮಾಡಿಕೊಳ್ಳುವುದಕ್ಕೂ ಹಾಗೂ ಮದುವೆ ಮಕ್ಕಳ ನಂತರ ವಿದ್ಯಾಭ್ಯಾಸ ಮಾಡುವುದಕ್ಕೂ ಪ್ರೋತ್ಸಾಹ ನೀಡಲಾಗುತ್ತಿದೆ.

ಅಮೆರಿಕದಲ್ಲಿ ಜನನ ಪ್ರಮಾಣದಲ್ಲಿ ನಿರಂತರ ಇಳಿಕೆ: ಜಾಗತಿಕ ಮಟ್ಟದಲ್ಲಿ ಶ್ರೀಮಂತರ ರಾಷ್ಟ್ರ ಎನಿಸಿಕೊಂಡಿರುವ ಅಮೆರಿಕದಲ್ಲಿ 1990ರ ದಶಕದಿಂದಲೂ ಜನನ ಪ್ರಮಾಣದಲ್ಲಿ ನಿರಂತರ ಇಳಿಕೆ ಕಂಡುಬರುತ್ತಿದೆ. CDC ವರದಿಯ ಪ್ರಕಾರ, 2023 ರಲ್ಲಿ ಪ್ರತಿ ಮಹಿಳೆಗೆ 1.62 ರಷ್ಟು ಪ್ರಜನನ ಪ್ರಮಾಣವಿತ್ತು. ಇನ್ನು ವಿಶ್ವದ ಯಾವುದೇ ದೇಶದಲ್ಲಿ ಜನಸಂಖ್ಯೆಯನ್ನು ಈಗಿರುವ ಮಾದರಿಯಲ್ಲಿಯೇ ಸ್ಥಿರವಾಗಿ ಇಡಬೇಕೆಂದರೆ ಪ್ರತಿ ಮಹಿಳೆಯರಿಗೆ ಜನನ ಪ್ರಮಾಣ ಕನಿಷ್ಠ 2.1 ಇರಬೇಕು. ಆದರೆ, ಶ್ರೀಮಂತರ ರಾಷ್ಟ್ರಗಳ ಮಹಿಳೆಯರು ಅಲ್ಲಿನ ಜೀವನ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಒಂದೇ ಮಗುವನ್ನು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಜಾಗತಿಕ ಮಟ್ಟದಲ್ಲಿ ಹಲವು ಶ್ರೀಮಂತ ದೇಶಗಳು ಜನನ ಪ್ರಮಾಣದಲ್ಲಿ ಇಳಿಕೆಯನ್ನು ಎದುರಿಸುತ್ತಿವೆ.

ಇದನ್ನೂ ಓದಿ: ಟ್ರಂಪ್‍ ಎಚ್ಚರಿಕೆ ಬೆನ್ನಲ್ಲೇ ರಷ್ಯಾ-ಉಕ್ರೇನ್‌ ಕೈದಿಗಳ ವಿನಿಮಯ, 3 ದಿನ ಕದನ ವಿರಾಮ!

ತಜ್ಞರ ಪ್ರಕಾರ ಆರ್ಥಿಕ ಮತ್ತು ಸಾಂಸ್ಕೃತಿಕ ಕಾರಣಗಳಿಂದ ಈ ಪರಿಸ್ಥಿತಿ ಉಂಟಾಗಿದೆ. ಶ್ರೀಮಂತ ದೇಶಗಳಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚ, ಮಹಿಳೆಯರು ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಭಾಗವಹಿಸುವಿಕೆ ಮತ್ತು ಸಾಮಾಜಿಕ ಮೌಲ್ಯಗಳಲ್ಲಿನ ಬದಲಾವಣೆಗಳು ಇದಕ್ಕೆ ಕಾರಣ ಎಂದು ಹೇಳಿದ್ದಾರೆ. ಆದರೆ, ಬೇಬಿ ಬೋನಸ್ ಯೋಜನೆ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಕೆಲವರು ಅಮೇರಿಕಾದಂತಹ ಶ್ರೀಮಂತ ರಾಷ್ಟ್ರಗಳು ಮಕ್ಕಳ ಭವಿಷ್ಯಕ್ಕೆ ಏನಾದರೂ ದೊಡ್ಡ ಯೋಜನೆ ಘೋಷಣೆ ಮಾಡದೇ ಮಗು ಮಾಡಿಕೊಂಡ ತಾಯಿಗೆ 5000 ಡಾಲರ್ ನೀಡುವುದು ಕೂಡ ಸಣ್ಣ ಮೊತ್ತವಾಗಿದೆ ಎಂದು ಕೆಲವರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ