Vladimir Putin: ಉಕ್ರೇನ್‌ ಜತೆ ದ್ವಿಪಕ್ಷೀಯ ಚರ್ಚೆಗೆ ಸಿದ್ಧ: ಮೊದಲ ಬಾರಿ ಪುಟಿನ್‌ ಘೋಷಣೆ

Published : Apr 22, 2025, 11:32 AM ISTUpdated : Apr 22, 2025, 01:29 PM IST
Vladimir Putin: ಉಕ್ರೇನ್‌ ಜತೆ ದ್ವಿಪಕ್ಷೀಯ ಚರ್ಚೆಗೆ ಸಿದ್ಧ: ಮೊದಲ ಬಾರಿ ಪುಟಿನ್‌ ಘೋಷಣೆ

ಸಾರಾಂಶ

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನ್ ಜೊತೆ ದ್ವಿಪಕ್ಷೀಯ ಮಾತುಕತೆಗೆ ಮೊದಲ ಬಾರಿಗೆ ಸಮ್ಮತಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆ ಬಳಿಕ 30 ದಿನಗಳ ಭಾಗಶಃ ಕದನವಿರಾಮಕ್ಕೂ ಒಪ್ಪಿಗೆ ಸೂಚಿಸಿದ್ದಾರೆ.

ಮಾಸ್ಕೋ: ಕಳೆದ 3 ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಉಕ್ರೇನ್‌ ಯುದ್ಧ ಪ್ರಮುಖ ಘಟಕ್ಕೆ ಬಂದು ನಿಂತಿದೆ. ಉಕ್ರೇನ್‌ ಜತೆ ಯುದ್ಧ ಮಾಡಿದ ನಂತರ ಇದೇ ಮೊದಲ ಬಾರಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಉಕ್ರೇನ್‌ ಜತೆ ದ್ವಿಪಕ್ಷೀಯ ಮಾತುಕತೆಗೆ ಸಿದ್ಧ ಎಂದು ಘೋಷಿಸಿದ್ದಾರೆ. ಶಾಂತಿ ಮಾತುಕತೆ ನಡೆಸದಿದ್ದರೆ ಮಧ್ಯಸ್ಥಿಕೆಯಿಂದ ಹೊರನಡೆಯುವುದಾಗಿ ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದರು. ಇದರ ಬೆನ್ನಲ್ಲೇ ಒತ್ತಡದಲ್ಲಿರುವ ಪುಟಿನ್‌, ದ್ವಿಪಕ್ಷೀಯ ಚರ್ಚೆಯ ಆಫರ್‌ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಶಾಂತಿ ಮಾತುಕತೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಒಪ್ಪಿ 30 ದಿನಗಳ ಭಾಗಶಃ ಕದನವಿರಾಮಕ್ಕೆ ಸಮ್ಮತಿ ಸೂಚಿಸಿದ್ದಾರೆ. ಈ ಅವಧಿಯಲ್ಲಿ ಉಭಯ ದೇಶಗಳ ಇಂಧನ, ವಿದ್ಯುತ್‌ ಶಕ್ತಿ ಕೇಂದ್ರಗಳ ಮೇಲೆ ದಾಳಿ ಮಾಡದಿರಲಿ ರಷ್ಯಾ ಒಪ್ಪಿದೆ. ಜೊತೆಗೆ ಉಕ್ರೇನ್‌ಗೆ ಅಮೆರಿಕ ಮತ್ತು ಐರೋಪ್ಯ ದೇಶಗಳು ಪೂರೈಸುತ್ತಿರುವ ಶಸ್ತ್ರಾಸ್ತ್ರಗಳನ್ನು ಕೂಡಲೇ ನಿಲ್ಲಿಸುವಂತೆ ಖಡಕ್‌ ಸೂಚನೆ ನೀಡಿದ್ದರು.

ಇದನ್ನೂ ಓದಿ: ಚೀನಾ ಮುಖ ಕೆಂಪಗಾಗಿಸಿದ ಉಕ್ರೇನ್‌ ನಡೆ: ತಟಸ್ಥ ನಿಲುವು ಎಂದಿದ್ದ ಚೀನಾಗೆ ಮುಖಭಂಗ

ಮಂಗಳವಾರ ಟ್ರಂಪ್‌ ಮತ್ತು ಪುಟಿನ್‌ ಕದನವಿರಾಮ ಕುರಿತು ಸುದೀರ್ಘವಾದ ದೂರವಾಣಿ ಮಾತುಕತೆ ನಡೆಸಿದ್ದಾರೆ. ಇದರ ಫಲಶೃತಿಯಾಗಿ ರಷ್ಯಾ ಉಕ್ರೇನ್‌ನ ಇಂಧನ ಕೇಂದ್ರಗಳು, ವಿದ್ಯುತ್‌ ಘಟಕಗಳು ಮತ್ತು ಇನ್ನಿತರ ಶಕ್ತಿಕೇಂದ್ರಗಳ ಮೇಲೆ ದಾಳಿ ಮಾಡುವುದಿಲ್ಲ ಎಂದು ಒಪ್ಪಿದೆ. ಇದರ ಜೊತೆಗೆ ಕದನವಿರಾಮದ ಅವಧಿಯಲ್ಲಿ ಉಕ್ರೇನ್‌ ತನ್ನ ಶಕ್ತಿ ವೃದ್ಧಿಸಿಕೊಳ್ಳದಂತೆ, ಆಯುಧಗಳನ್ನು ಭರ್ತಿ ಮಾಡಿಕೊಳ್ಳದಂತೆ ಹಾಗೂ ಸೈನಿಕರ ಸಂಖ್ಯೆ ಹೆಚ್ಚಿಸಿಕೊಳ್ಳದಂತೆ, ಉಕ್ರೇನ್‌ಗೆ ಯಾವುದೇ ಗುಪ್ತಚರ ಮಾಹಿತಿ ಹಂಚಿಕೊಳ್ಳದಂತೆ ಅಮೆರಿಕಕ್ಕೆ ಪುಟಿನ್‌ ಒತ್ತಿ ಹೇಳದ್ದಾರೆ ಎಂದು ಕ್ರೆಮ್ಲಿನ್‌ ಹೇಳಿದೆ.

ಶಾಂತಿ ಸ್ಥಾಪನೆಯ ಮೊದಲ ಹೆಜ್ಜೆ-ಅಮೆರಿಕ
ಪುಟಿನ್‌ ಜೊತೆಗಿನ ಸುಧೀರ್ಘ ಮಾತುಕತೆ ಮತ್ತು ಫಲಿತಾಂಶ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಶ್ವೇತಭವನ,‘ಇದು ಶಾಂತಿ ಸ್ಥಾಪನೆಯ ಮೊದಲ ಹೆಜ್ಜೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದೆ. ಇದರ ಮುಂದುವರಿದ ಭಾಗವಾಗಿ ಕಪ್ಪುಸಮುದ್ರದ ಮೇಲನ ನಿರ್ಬಂಧ ತೆರವು, ಪೂರ್ಣ ಪ್ರಮಾಣದ ಕದನವಿರಾಮ ಮತ್ತು ಹಾಗೆ ದೀರ್ಘಾವಧಿ ಶಾಂತಿ ಸ್ಥಾಪನೆಯನ್ನು ಅಮೆರಿಕ ಮುನ್ನೋಡುತ್ತದೆ ಎಂದು ಸಂತಸ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಟ್ರಂಪ್‍ ಎಚ್ಚರಿಕೆ ಬೆನ್ನಲ್ಲೇ ರಷ್ಯಾ-ಉಕ್ರೇನ್‌ ಕೈದಿಗಳ ವಿನಿಮಯ, 3 ದಿನ ಕದನ ವಿರಾಮ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ