Delhi Policeರಿಂದ ಏನೂ ಮಾಡೋಕಾಗಲ್ಲ: ಗೌತಮ್‌ ಗಂಭೀರ್‌ಗೆ ಮತ್ತೆ ಜೀವ ಬೆದರಿಕೆ ಇ-ಮೇಲ್!‌

Published : Nov 28, 2021, 03:13 PM ISTUpdated : Nov 28, 2021, 03:17 PM IST
Delhi Policeರಿಂದ ಏನೂ ಮಾಡೋಕಾಗಲ್ಲ: ಗೌತಮ್‌ ಗಂಭೀರ್‌ಗೆ ಮತ್ತೆ ಜೀವ ಬೆದರಿಕೆ ಇ-ಮೇಲ್!‌

ಸಾರಾಂಶ

*ಬಿಜೆಪಿ ಸಂಸದ ಗೌತಮ್‌ ಗಂಭೀರ್‌ಗೆ ಮತ್ತೆ ಜೀವ ಬೆದರಿಕೆ : ದೂರು ದಾಖಲು *'ನಿಮ್ಮ ದೆಹಲಿ ಪೊಲೀಸರು ಮತ್ತು ಐಪಿಎಸ್ ಶ್ವೇತಾ ಏನನ್ನೂ ಕಿತ್ತುಹಾಕಲು ಸಾಧ್ಯವಿಲ್ಲ' *isiskashmir@yahoo.com ಇ-ಮೇಲ್ - ಆರು ದಿನಗಳಲ್ಲಿ ಮೂರನೇ ಬೆದರಿಕೆ! 

ನವದೆಹಲಿ(ನ.28) : ಮಾಜಿ ಕ್ರಿಕೆಟಿಗ ಮತ್ತು ಭಾರತೀಯ ಜನತಾ ಪಕ್ಷದ (BJP) ಸಂಸದ ಗೌತಮ್ ಗಂಭೀರ್‌ಗೆ  (Gautam Gambhir) ಇಂದು 'ಐಸಿಸ್ ಕಾಶ್ಮೀರ' (ISIS Kashmir) ದಿಂದ ಮತ್ತೊಂದು ಕೊಲೆ ಬೆದರಿಕೆ ಬಂದಿದೆ ಎಂದು ಆರೋಪಿಸಲಾಗಿದೆ. ಇದು ಆರು ದಿನಗಳಲ್ಲಿ ಮೂರನೇ ಬೆದರಿಕೆ ಎಂದು ಪೊಲೀಸರು ತಿಳಿಸಿದ್ದಾರೆ. "ನಿಮ್ಮ ದೆಹಲಿ ಪೊಲೀಸರು (Delhi police) ಮತ್ತು ಐಪಿಎಸ್ ಶ್ವೇತಾ (DCP) ಏನನ್ನೂ ಕಿತ್ತುಹಾಕಲು ಸಾಧ್ಯವಿಲ್ಲ. ನಮ್ಮ ಗೂಢಚಾರರು (Spy) ಸಹ ಪೋಲೀಸ್‌ ಇಲಾಖೆಯಲ್ಲಿದ್ದಾರೆ, ನಿಮ್ಮ ಬಗ್ಗೆ ಎಲ್ಲಾ ಮಾಹಿತಿಯನ್ನು ಸ್ವೀಕರಿಸಲಾಗುತ್ತಿದೆ," ಎಂದು  1:37ಕ್ಕೆ isiskashmir@yahoo.com ನಿಂದ‌ ಗೌತಮ್‌ಗೆ ಇ-ಮೇಲ್ ಬಂದಿದೆ.

ಇ-ಮೇಲ್‌ನ ಬಗ್ಗೆ ಎಲ್ಲ ಮಾಹಿತಿ ನಾವು ಸ್ವೀಕರಿಸಿದ್ದೇವೆ ಮತ್ತು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕ್ರಿಕೆಟಿಗ-ರಾಜಕಾರಣಿಗೆ ಮಂಗಳವಾರ ಮತ್ತು ಬುಧವಾರವೂ ಕೊಲೆ ಬೆದರಿಕೆಗಳು ಬಂದಿದ್ದವು. ಗಂಭೀರ್ ಅವರ ಆಪ್ತ ಕಾರ್ಯದರ್ಶಿ ಗೌರವ್ ಅರೋರಾ (Gaurav Arora) ಅವರು ಪೊಲೀಸ್ ದೂರಿನ ಪ್ರಕಾರ, ಮಂಗಳವಾರ ರಾತ್ರಿ 9.32 ಕ್ಕೆ ತಮ್ಮ ಅಧಿಕೃತ ಇ-ಮೇಲ್ ಐಡಿಯಲ್ಲಿ ಸಂಸದರಿಗೆ ಮೊದಲ ಕೊಲೆ ಬೆದರಿಕೆ ಬಂದಿದೆ. ISIS ಕಾಶ್ಮೀರದಿಂದ ಬಂದಿರುವ ಇ-ಮೇಲ್‌ನಲ್ಲಿ "ನಾವು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಕೊಲ್ಲಲಿದ್ದೇವೆ" ಎಂದು ಬರೆಯಲಾಗಿತ್ತು.
ತನಿಖೆ ನಂತರ ಗೌತಮ್‌ ಗಂಭೀರ್‌ಗೆ ಇ-ಮೇಲ್‌ ಮೂಲಕ ಜೀವ ಬೆದರಿಕೆ ಒಡ್ಡಿದ್ದು ಪಾಕಿಸ್ತಾನದ ಕರಾಚಿ ಮೂಲಕ ವಿದ್ಯಾರ್ಥಿ ಶಾಹೀದ್‌ ಹಮೀದ್‌ ಎಂದು ತಿಳಿದು ಬಂದಿತ್ತು. 

ಗೌತಮ್ ಗಂಭೀರ್ ಅವರ ವೈಯಕ್ತಿಕ ಭದ್ರತೆ ಹೆಚ್ಚಳ

"ದೂರು ಸ್ವೀಕರಿಸಿದ ನಂತರ, ಜಿಲ್ಲಾ ಪೊಲೀಸರು ಗೌತಮ್ ಗಂಭೀರ್ ಅವರ ವೈಯಕ್ತಿಕ ಭದ್ರತೆ ಮತ್ತು ರಾಜಿಂದರ್ ನಗರದಲ್ಲಿರುವ ಅವರ ನಿವಾಸದ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಪೊಲೀಸರು ಪ್ರಸ್ತುತ ದೂರಿನ ಮೂಲದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ" ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ಶ್ವೇತಾ ಚೌಹಾಣ್ (Shweta Chauhan) ಹೇಳಿದ್ದರು.

Threat to Gautam Gambhir : ಜೀವ ಬೆದರಿಕೆ ಹಾಕಿದ್ದು ಪಾಕ್‌ ಕಾಲೇಜು ಯುವಕ

ಪೋಲಿಸ್‌ ವಿಶೇಷ ವಿಭಾಗದ ಇಂಟೆಲಿಜೆನ್ಸ್ ಫ್ಯೂಷನ್ನ (Intelligence Fusion) ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ (Strategic Operations) ಘಟಕವು Google ಗೆ ಪತ್ರ ಬರೆದು ಇ-ಮೇಲ್‌ ಕಳುಹಿಸಿದ ಖಾತೆ ನಿರ್ವಾಹಕರು ಮತ್ತು ನೋಂದಾಯಿತ ಇಮೇಲ್ ಐಡಿ ಮೂಲಕ ಆಪಾದಿತ ಮೇಲ್‌ಗಳನ್ನು ಕಳುಹಿಸುತ್ತಿದ್ದವರ ವಿವರ ಕೇಳಿದೆ. ಬುಧವಾರ ಮಧ್ಯಾಹ್ನ 2:32 ಕ್ಕೆ ಅದೇ ಇ-ಮೇಲ್ ಐಡಿಯಿಂದ ಎರಡನೇ ಬಾರಿಗೆ ಜೀವ ಬೆದರಿಕೆಯ ಕುರಿತು ಡಿಸಿಪಿಗೆ ದೂರವಾಣಿ ಕರೆ ಮೂಲಕ ತಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರುದಾರರ ಪ್ರಕಾರ, ಎರಡನೇ ಇ-ಮೇಲ್‌ನಲ್ಲಿ  ಗೌತಮ್ ಗಂಭೀರ್ ಅವರ ನಿವಾಸದ ವೀಡಿಯೊ ಕೂಡ ಲಗತ್ತಿಸಲಾಗಿದೆ ಎಂದು ತಿಳಿದು ಬಂದಿದೆ.

ನಿಮಗೆ ಗೊತ್ತಾ ಗೌತಮ್‌ ಗಂಭೀರ್‌ ಹಾಗೂ ನತಾಶಾ ಜೈನ್‌ ಇಂಟ್ರೆಸ್ಟಿಂಗ್ ಲವ್‌ಸ್ಟೋರಿ?

ಟೀಂ ಇಂಡಿಯಾ (Team India) ಎಡಗೈ ಬ್ಯಾಟರ್‌ ಗೌತಮ್ ಗಂಭೀರ್, ಭಾರತ ಹಾಗೂ ಪಾಕ್‌ (Indo-Pak Border) ಗಡಿಯಲ್ಲಿ ನಡೆಯುತ್ತಿರುವ ಪಾಕ್ ಪ್ರೇರಿತ ಭಯೋತ್ಪಾದನೆಯ ಕುರಿತಂತೆ ಪದೇ ಪದೇ ಧ್ವನಿಯೆತ್ತುತ್ತಲೇ ಬಂದಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಗೌತಮ್ ಗಂಭೀರ್, ಗಡಿಯಲ್ಲಿ ಪಾಕ್ ಪ್ರೇರಿತ ಭಯೋತ್ಫಾದನೆ (cross-border terrorism) ನಿಲ್ಲುವವರೆಗೂ ಪಾಕಿಸ್ತಾನದ ಜತೆ ಯಾವುದೇ ವ್ಯಾಪಾರ ವಹಿವಾಟುಗಳನ್ನು ಇಟ್ಟುಕೊಳ್ಳಬಾರದು ಎಂದು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಭಾರತ ಸೈನಿಕರ ಜೀವಕ್ಕಿಂತ ಮಹತ್ವವಾದ್ದದ್ದೂ ಬೇರೇನು ಇಲ್ಲ ಎಂದು ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ