ಪಹಲ್ಗಾಮ್‌ ದಾಳಿ: ಪಾಕಿಸ್ತಾನಕ್ಕೆ ಕಠಿಣ ಪ್ರಶ್ನೆ ಕೇಳಿದ UNSC, ಧರ್ಮ ಕೇಳಿ ಕೊಂದಿದ್ದನ್ನು ಒಪ್ಪಿಕೊಂಡ ವಿಶ್ವಸಂಸ್ಥೆ!

Published : May 06, 2025, 10:59 AM ISTUpdated : May 06, 2025, 11:01 AM IST
ಪಹಲ್ಗಾಮ್‌ ದಾಳಿ: ಪಾಕಿಸ್ತಾನಕ್ಕೆ ಕಠಿಣ ಪ್ರಶ್ನೆ ಕೇಳಿದ UNSC, ಧರ್ಮ ಕೇಳಿ ಕೊಂದಿದ್ದನ್ನು ಒಪ್ಪಿಕೊಂಡ ವಿಶ್ವಸಂಸ್ಥೆ!

ಸಾರಾಂಶ

ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದೆ. ಲಷ್ಕರ್-ಎ-ತೊಯ್ಬಾ ಕೈವಾಡದ ಬಗ್ಗೆ ಪ್ರಶ್ನಿಸಿ, ಪಾಕಿಸ್ತಾನದ "ಸುಳ್ಳು" ನಿರೂಪಣೆಯನ್ನು ತಿರಸ್ಕರಿಸಿದೆ. ಧಾರ್ಮಿಕ ದ್ವೇಷದಿಂದ ಪ್ರವಾಸಿಗರನ್ನು ಗುರಿ ಮಾಡಿದ್ದನ್ನು ಖಂಡಿಸಿ, ಪಾಕಿಸ್ತಾನದ ಪರಮಾಣು ಹೇಳಿಕೆಗಳನ್ನು ಟೀಕಿಸಿದೆ. ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆಗೆ ಸೂಚಿಸಲಾಗಿದೆ. ಪಾಕಿಸ್ತಾನ ಆರೋಪಗಳನ್ನು ನಿರಾಕರಿಸಿದೆ.

ನವದೆಹಲಿ (ಮೇ.6): ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದೊಂದಿಗೆ ಉದ್ವಿಗ್ನತೆ ಉಂಟಾಗಿರುವ ನಡುವೆಯೇ, ಸೋಮಾರ ರಾತ್ರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕ್ಲೋಸ್ಡ್‌ ಡೋರ್‌ ಮೀಟಿಂಗ್‌ನಲ್ಲಿ ಪಾಕಿಸ್ತಾನದ ಗ್ರಹಚಾರ ಬಿಡಿಸಲಾಗಿದೆ. ಮಾತುಕತೆಯ ವೇಳೆ ಪಾಕಿಸ್ತಾನಕ್ಕೆ ಕಠಿಣ ಪ್ರಶ್ನೆಗಳನ್ನು ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಕೇಳಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಕಳೆದ ತಿಂಗಳು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 25 ಪ್ರವಾಸಿಗರು ಮತ್ತು ಕಾಶ್ಮೀರಿ ಪೋನಿ ರೈಡ್ ಆಪರೇಟರ್ ಅನ್ನು ಕೊಂದ ದಾಳಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೊಯ್ಬಾದ ಕೈವಾಡದ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರು ಇಸ್ಲಾಮಾಬಾದ್ ಅನ್ನು ಕಟುವಾಗಿ ಪ್ರಶ್ನೆ ಮಾಡಿದ್ದಾರೆ.

ಅಣ್ವಸ್ತ್ರದ ಬಗ್ಗೆ ಮಾತನಾಡಬೇಡಿ

ಪಾಕಿಸ್ತಾನ ಪದೇ ಪದೇ ಅಣ್ವಸ್ತ್ರದ ಬಗ್ಗೆ ಮಾತನಾಡುವುದು ಸಮಸ್ಯೆಯನ್ನು ಮತ್ತಷ್ಟು ಉಲ್ಭಣ ಮಾಡುವ ತಂತ್ರವೆಂದು ಭದ್ರತಾ ಮಂಡಳಿಯ ಸದಸ್ಯರು ಹೇಳುವುದರೊಂದಿಗೆ ಭಾರತದೊಂದಿಗೆ ಎದುರಾ ಪರಿಸ್ಥಿತಿಯನ್ನು ಜಾಗತೀಕರಣಗೊಳಿಸಲು ಇಸ್ಲಾಮಾಬಾದ್ ಮಾಡಿದ ಪ್ರಯತ್ನಗಳು ವಿಫಲವಾದವು ಎಂದು ವರದಿಗಳು ತಿಳಿಸಿವೆ. ಪಾಕಿಸ್ತಾನದ ಇತ್ತೀಚಿನ ಕ್ಷಿಪಣಿ ಪರೀಕ್ಷೆಗಳ ಬಗ್ಗೆಯೂ ಯುಎನ್‌ಎಸ್‌ಸಿ ಸದಸ್ಯರು ಕಳವಳ ವ್ಯಕ್ತಪಡಿಸಿದರು.

ಭಾರತದೊಂದಿಗಿನ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಮಂಡಳಿಯ 10 ಖಾಯಂ ಸದಸ್ಯರಲ್ಲಿ ಒಂದಾದ ಪಾಕಿಸ್ತಾನವು "ಮುಚ್ಚಿದ ಬಾಗಿಲಿನ ಒಳಗೆ ಸಮಾಲೋಚನೆ" ಗಳನ್ನು ಕೋರಿತ್ತು.

ಪ್ರವಾಸಿಗರನ್ನು ಧರ್ಮದ ಆಧಾರದ ಮೇಲೆ ಗುರಿ ಮಾಡಲಾಗಿದೆ

ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆಯ ಸಂದರ್ಭದಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರು ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಲ್ಲದೆ,  ಈ ದಾಳಿಯ ಹೊಣೆಗಾರಿಕೆಯ ಅಗತ್ಯವನ್ನು ಎತ್ತಿ ತೋರಿಸಿದರು. ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಅವರ ಧರ್ಮದ ಆಧಾರದ ಮೇಲೆ ಗುರಿಯಾಗಿಸಲಾಗಿದೆ ಎಂದು ಅವರು ಪ್ರಸ್ತಾಪಿಸಿದರು ಎಂದು ವರದಿ ತಿಳಿಸಿದೆ.

ಪಹಲ್ಗಾಮ್ ಬಗ್ಗೆ ಪಾಕಿಸ್ತಾನದ "ಸುಳ್ಳು" ನಿರೂಪಣೆಯನ್ನು ಅವರು ಒಪ್ಪಿಕೊಳ್ಳಲು ನಿರಾಕರಿಸಿದರು ಮತ್ತು ಭಾರತದೊಂದಿಗೆ ದ್ವಿಪಕ್ಷೀಯವಾಗಿ ತನ್ನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ತಿಳಿಸಿದ್ದಾರೆ.

ತಮ್ಮ ಮೇಲಿನ ಆರೋಪ ತಿರಸ್ಕರಿಸಿದ ಪಾಕ್‌

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಾತುಕತೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪಾಕಿಸ್ತಾನದ ರಾಯಭಾರಿ ಅಸಿಮ್ ಇಫ್ತಿಕರ್, ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಗಳನ್ನು ತಮ್ಮ ದೇಶ ತಿರಸ್ಕರಿಸಿದೆ ಎಂದು ಹೇಳಿದರು. ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿರುವುದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದರು.

ಭದ್ರತಾ ಮಂಡಳಿಯಾಗಲಿ ಅಥವಾ ಭಾರತವಾಗಲಿ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಸಭೆಯಿಂದ ಹೊರಬಂದ ನಂತರ ಪರಿಸ್ಥಿತಿಯನ್ನು "ಚಂಚಲ" ಎಂದು ಕರೆದ ಟುನೀಷಿಯನ್ ರಾಜತಾಂತ್ರಿಕ ಖಾಲಿದ್ ಮೊಹಮ್ಮದ್ ಖಿಯಾರಿ, "ಸಂವಾದದ ಮಾತುಕತೆ ಮತ್ತು ಶಾಂತಿಯುತ ಪರಿಹಾರಕ್ಕಾಗಿ" ಕರೆ ನೀಡಲಾಗಿದೆ ಎಂದು ಹೇಳಿದರು.

ಮೇ ತಿಂಗಳ ಭದ್ರತಾ ಮಂಡಳಿಯ ಅಧ್ಯಕ್ಷರಾದ ಗ್ರೀಕ್ ರಾಯಭಾರಿ ಇವಾಂಜೆಲೋಸ್ ಸೆಕೆರಿಸ್, ಸಭೆಯನ್ನು "ಉತ್ಪಾದಕ ಮತ್ತು ಸಹಾಯಕವಾಗಿದೆ" ಎಂದು ಕರೆದರು. "ಉಲ್ಬಣವನ್ನು ಶಮನಗೊಳಿಸಲು ನಾವು ಆಶಿಸುತ್ತೇವೆ" ಎಂದು ರಷ್ಯಾದ ರಾಜತಾಂತ್ರಿಕರೊಬ್ಬರು ಹೇಳಿದ್ದಾರೆ.

ಭದ್ರತಾ ಮಂಡಳಿಯ ಸಭೆಯಲ್ಲಿ ಆಗಿದ್ದೇನು?

  • ಅನೌಪಚಾರಿಕ ಅಧಿವೇಶನದಲ್ಲಿ UN ಭದ್ರತಾ ಮಂಡಳಿಯ ಸದಸ್ಯರು ಪಾಕಿಸ್ತಾನಕ್ಕೆ ಕಠಿಣ ಪ್ರಶ್ನೆಗಳನ್ನು ಎತ್ತಿದರು.
  • ಅವರ "ಸುಳ್ಳು" ನಿರೂಪಣೆಯನ್ನು ಸ್ವೀಕರಿಸಲು ನಿರಾಕರಿಸಿದರು ಮತ್ತು LeT ಭಾಗಿಯಾಗಿರುವ ಸಾಧ್ಯತೆ ಇದೆಯೇ ಎಂದು ಕೇಳಿದ್ದಾರೆ.
  • ಭಯೋತ್ಪಾದಕ ದಾಳಿಗೆ ವ್ಯಾಪಕ ಖಂಡನೆ ಮತ್ತು ಹೊಣೆಗಾರಿಕೆಯ ಅಗತ್ಯವನ್ನು ಗುರುತಿಸಲಾಗಿದೆ
  • ಕೆಲವು ಸದಸ್ಯರು ನಿರ್ದಿಷ್ಟವಾಗಿ ತಮ್ಮ ಧಾರ್ಮಿಕ ನಂಬಿಕೆಯ ಆಧಾರದ ಮೇಲೆ ಪ್ರವಾಸಿಗರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಪ್ರಸ್ತಾಪಿಸಿದರು.
  • ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆಗಳು ಮತ್ತು ಪರಮಾಣು ಮಾತುಗಳು ಸಮಸ್ಯೆ ಉಲ್ಬಣಗೊಳ್ಳುವ ಅಂಶಗಳಾಗಿವೆ ಎಂದು ಅನೇಕ ಸದಸ್ಯರು ಕಳವಳ ವ್ಯಕ್ತಪಡಿಸಿದರು.
  • ಪರಿಸ್ಥಿತಿಯನ್ನು ಅಂತರರಾಷ್ಟ್ರೀಯೀಕರಿಸಲು ಪಾಕಿಸ್ತಾನದ ಪ್ರಯತ್ನಗಳು ಸಹ ವಿಫಲವಾದವು. ಭಾರತದೊಂದಿಗೆ ದ್ವಿಪಕ್ಷೀಯವಾಗಿ ಸಮಸ್ಯೆಗಳನ್ನು ಬಗೆಹರಿಸಲು ಅವರಿಗೆ ಸೂಚಿಸಲಾಯಿತು.
     

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!