ದುಬೈ ಪಾರ್ಟಿಯಲ್ಲಿ ಅರೆಬರೆ ಶವವಾದ ಉಕ್ರೇನ್‌ನ ಮಾಡೆಲ್‌; ಏನು ನಡೆಯುತ್ತೆ ಆ ಪಾರ್ಟಿಯಲ್ಲಿ?

Published : Mar 27, 2025, 07:36 PM ISTUpdated : Mar 27, 2025, 07:41 PM IST
ದುಬೈ ಪಾರ್ಟಿಯಲ್ಲಿ ಅರೆಬರೆ ಶವವಾದ ಉಕ್ರೇನ್‌ನ ಮಾಡೆಲ್‌; ಏನು ನಡೆಯುತ್ತೆ ಆ ಪಾರ್ಟಿಯಲ್ಲಿ?

ಸಾರಾಂಶ

ದುಬೈನಲ್ಲಿ ನಡೆದ ಸೆಕ್ಸ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಉಕ್ರೇನಿಯನ್ ಮಾಡೆಲ್ ರಸ್ತೆ ಬದಿಯಲ್ಲಿ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಶ್ರೀಮಂತ ಶೇಕ್‌ಗಳು ತಮ್ಮ ಲೈಂಗಿಕ ವಿಕೃತಿ ತಣಿಸಿಕೊಳ್ಳಲು ಏನೇನ್‌ ಮಾಡ್ತಾರೆ ಆಂತ ತಿಳಿದರೆ ನೀವೇನ್‌ ಹೇಳ್ತೀರೋ! 

ದುಬೈನ ಹೋಟೆಲ್ ಒಂದರಲ್ಲಿ ನಡೆದ "ಸೆಕ್ಸ್ ಪಾರ್ಟಿ"ಯಲ್ಲಿ ಭಾಗವಹಿಸಲೆಂದು ಹೋಗಿದ್ದ ಚಂದದ ಉಕ್ರೇನಿಯನ್ ಮಾಡೆಲ್ ಒಬ್ಬಳು ಹತ್ತು ದಿನಗಳ ನಂತರ ರಸ್ತೆ ಬದಿಯಲ್ಲಿ ಅರೆಬರೆ ಶವವಾಗಿ ಪತ್ತೆಯಾಗಿದ್ದಾಳೆ. ಅವಳ ಮೈತುಂಬ ಭಯಾನಕ ಗಾಯಗಳು. ರಕ್ತಸಿಕ್ತಳಾಗಿದ್ದ ಅವಳ ಬೆನ್ನುಮೂಳೆ ಮತ್ತು ಕೈಕಾಲುಗಳು ಮುರಿದುಹೋಗಿದ್ದವು. ಅವಳು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅವಳ ಹೆಸರು ಮಾರಿಯಾ ಕೋವಲ್ಚುಕ್. ಹತ್ತು ದಿನಗಳ ಹಿಂದೆ ದುಬೈನಲ್ಲಿ ನಡೆಯುವ ಒಂದು ʼಸೆಕ್ಸ್‌ ಪಾರ್ಟಿʼಯಲ್ಲಿ ಭಾಗವಹಿಸುವುದಾಗಿ ತಿಳಿಸಿ ಹೋಗಿದ್ದಳವಳು. ಆ ದಿನದ ಬಳಿಕ 20 ವರ್ಷದ ಯುವತಿಯಿಂದ ಒಂದು ವಾರಕ್ಕೂ ಹೆಚ್ಚು ಕಾಲ ಆಕೆ ಏನಾದಳೆಂದು ಯಾರಿಗೂ ಗೊತ್ತೇ ಆಗಲಿಲ್ಲ. ಹತ್ತು ದಿನಗಳ ನಂತರ ಅವಳು ಗಾಯಾಳುವಾಗಿ ರಸ್ತೆ ಬದಿಯಲ್ಲಿ ಪತ್ತೆಯಾದಳು. ಆಸ್ಪತ್ರೆಗೆ ಸಾಗಿಸಲಾಯಿತು. ಕೋವಲ್ಚುಕ್ ಅವರ ಜೀವ ಉಳಿಸಲು ನಾಲ್ಕು ಶಸ್ತ್ರಚಿಕಿತ್ಸೆ ಮಾಡಲಾಯಿತು. 

ಹಾಗಿದ್ದರೆ ಈಕೆ ಭಾಗವಹಿಸಿದ್ದ ಸೆಕ್ಸ್‌ ಪಾರ್ಟಿ ಎಂಥದ್ದಿರಬಹುದು? ಎಷ್ಟು ಭಯಾನಕವಾಗಿದ್ದಿರಬಹುದು ಅದು!  ಏನಿದು ಸೆಕ್ಸ್‌ ಪಾರ್ಟಿ ಅಂದ್ರೆ? ಕೆಲವೇ ಕೆಲವು ಮಾಹಿತಿ ಸಿಕ್ಕಿದೆ ಇದರ ಬಗ್ಗೆ. ದುಬೈನಲ್ಲಿ ಬಹುಕೋಟ್ಯಧೀಶರಾದ ಶ್ರೀಮಂತ ಶೇಕ್‌ಗಳ ಲೈಂಗಿಕ ಖಯಾಲಿ ತಣಿಸಲು ನಡೆಯುವ ಪಾರ್ಟಿಗಳಿವು. ಇದಕ್ಕಾಗಿ ಇವರು ಲೆಕ್ಕ ಮಿತಿ ಇಲ್ಲದ ತಾವು ಗಳಿದ ತೈಲದ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಯಾವುದೇ ದೇಶದ ಶ್ರೀಮಂತ ಮಾಡೆಲ್‌ಗಳು, ನಟಿಯರನ್ನು ದುಡ್ಡು ಸುರಿದು ಕೊಂಡುಕೊಳ್ಳಬಲ್ಲೆ ಎಂಬ ಹಮ್ಮಿನ ಕುಬೇರರು ಇವರು. ಖಾಸಗಿ ಜಾಗಗಳಲ್ಲಿ ಗುಪ್ತವಾಗಿ ಈ ಪಾರ್ಟಿಗಳು ನಡೆಯುತ್ತವೆ.  ಇಲ್ಲಿ ಬಂದವರನ್ನು ಕೆಲವೊಮ್ಮೆ ಸೆಕ್ಸ್‌ ಗುಲಾಮರಾಗಿ ನಡೆಸಿಕೊಳ್ಳಲಾಗುತ್ತದೆ. ಸೆಕ್ಸ್‌ನ ಹೆಸರಿನಲ್ಲಿ ಹೇಳಬಾರದ ವಿಕೃತಿಗಳೆಲ್ಲಾ ಇಲ್ಲಿ ನಡೆಯುತ್ತವೆ. ಇಂಥದೇ ಒಂದು ವಿಕಾರ ಪಾರ್ಟಿಯಲ್ಲಿ ಶ್ರೀಮಂತರ ವಿಕೃತಿಗೆ ಈಕೆ ತುತ್ತಾಗಿದ್ದಾಳೆ ಎಂದು ತಿಳಿಯಲಾಗಿದೆ. 

ಬಹುಶಃ ಈ ಶ್ರೀಮಂತ ಶೇಕುಗಳು ಈಕೆಯನ್ನು ಲೈಂಗಿಕ ಗುಲಾಮಳನ್ನಾಗಿ ಮಾಡಿ ಹಲವಾರು ದಿನಗಳವರೆಗೆ ಬಳಸಿಕೊಂಡು ಅಂತಿಮವಾಗಿ ರಸ್ತೆಗೆ ಎಸೆದಿರಬೇಕು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಶೇಕುಗಳು ನಡೆಸುವ ಪಾರ್ಟಿಗಳನ್ನು ನಡೆಸುವವರ ಗುರುತೂ ಗುಪ್ತ್‌ ಗುಪ್ತ್.‌  ಅಲ್ಲಿ ಬಿಳಿ ಬಣ್ಣದ ಬೆಣ್ಣೆಯಂತಿರುವ ರಷ್ಯನ್, ಉಕ್ರೇನ್‌ ಮಾಡೆಲ್‌ಗಳು ಮತ್ತು ಓನ್ಲಿಫ್ಯಾನ್ಸ್ ಪೋರ್ನ್‌ ತಾರೆಗಳಿಗೆ ಬಹಳ ಬೇಡಿಕೆ. ಒಮ್ಮೆ ಈ ಪಾರ್ಟಿಗೆ ಅಟೆಂಡ್‌ ಆಗಲು ಒಬ್ಬ ಮಾಡೆಲ್‌ಗೆ ಸುಮಾರು $100,000 (ಸುಮಾರು 85 ಲಕ್ಷ ರೂ.) ಪಾವತಿಸಲಾಗುತ್ತದಂತೆ. ಆದರೆ ಇಷ್ಟು ಹಣಕ್ಕೆ ಬದಲಾಗಿ ಈ ಮಹಿಳೆಯರು ಆ ಶ್ರೀಮಂತ ಪುರುಷರ ಕರಾಳ ಆಸೆಗಳನ್ನು ಪೂರೈಸಬೇಕು. ಅದಕ್ಕಾಗಿ ತೀವ್ರ ದೌರ್ಜನ್ಯಕ್ಕೆ ಒಳಪಡಲು ಸಿದ್ಧರಾಗಬೇಕು.

ನನ್ನ ಕಪ್ಪುವರ್ಣದ ಬಗ್ಗೆ ನಿಂದನೆ :ಫೇಸ್‌ಬುಕ್‌ನಲ್ಲಿ ಬೇಸರ ಹೊರಹಾಕಿದ ಕೇರಳದ ಮುಖ್ಯ ಕಾರ್ಯದರ್ಶಿ ಶಾರದಾ

ಈ ಕಾರ್ಯಕ್ರಕ್ಕೆ "ಪೋರ್ಟಾ ಪಾಟಿ ಪಾರ್ಟಿ" ಅಂತಲೂ ಕರೀತಾರಂತೆ. ಅಂದರೆ ಬಹಳ ಭಯಾನಕ ಮತ್ತು ಅವಮಾನಕರ ಲೈಂಗಿಕ ಕ್ರಿಯೆಗಳನ್ನು ನಡೆಸುವ ಪಾರ್ಟಿ. ಅತಿಯಾದ ಹಣದ ಮೊತ್ತ ಇಲ್ಲಿ ಬಟವಾಡೆಯಾಗುತ್ತದೆ. ಮಲವನ್ನೂ ಬಳಸಲಾಗುತ್ತದಂತೆ. “ಪೋರ್ಟಾ ಪಾಟಿ ಪಾರ್ಟಿಗಳ ಬಗೆಗಿನ ಹಗರಣ ವರ್ಷಗಳಿಂದಲೂ ನಡೆಯುತ್ತಿದೆ. ಇಲ್ಲಿ ಶೇಕ್‌ಗಳು ಹುಡುಗಿಯರನ್ನು ಹೊಡೆಯುತ್ತಾರೆ, ಅವರ ಕೂದಲನ್ನು ಕತ್ತರಿಸುತ್ತಾರೆ ಮತ್ತು ಅವರಿಂದ ಎಲ್ಲಾ ಬಗೆಯ ಸೆಕ್ಸ್‌ ಸ್ಲೇವರಿ ಮಾಡಿಸುತ್ತಾರೆ. ಸರಪಳಿ ಬಿಗಿದು ವಾರಗಟ್ಟಲೆ ನೆಲದಡಿ ಕೂಡಿಹಾಕಬಹುದು. ಅಲ್ಲಿ ಅವರೇ ಕಾನೂನು. ಹೀಗಾಗಿ ಕಾನೂನು ಇಂಥವರನ್ನು ಏನೂ ಮಾಡೋಕಾಗಲ್ಲ. ಇಂತಹ ಕಾರ್ಯಕ್ರಮಗಳಿಗೆ ಒಪ್ಪಿಕೊಳ್ಳಬೇಡಿ, ದುರ್ಬಲರಾದರೆ ನೀವು ಸತ್ತೇ ಹೋಗಬಹುದು ಎಂದು ವಿಜ್ಞಾಪಿಸುವ ವಿಡಿಯೋಗಳನ್ನೂ ಇಲ್ಲಿಗೆ ಹೋದ ಮಹಿಳೆಯರು ಮಾಡಿ ಹೇಳಿದ್ದುಂಟು. 

ಈ ಅರಬ್‌ ದೇಶಗಳ ಕುಬೇರ ಶೇಕ್‌ಗಳ ಬಳಿ ಹಣವಿದೆ, ಅಧಿಕಾರವಿದೆ, ತೈಲವಿದೆ. ಆದರೆ ತಮ್ಮ ದೇಶದಲ್ಲಿ ಲೈಂಗಿಕತೆಯನ್ನು ತೀವ್ರವಾಗಿ ಹತ್ತಿಕ್ಕುವ ಕಾನೂನುಗಳಿವೆ. ಹೀಗಾಗಿ ದುಬೈಗೆ ಬಂದು ಮಜಾ ಉಡಾಯಿಸುತ್ತಾರೆ. ಅದರೊಂದಿಗೆ ಈ ವಿಕೃತಿಯನ್ನು ಮೆರೆಯುತ್ತಾರೆ.  

85 ಸಾವಿರ ಕೋಟಿ ಸಂಪತ್ತಿನ ಮಾಲೀಕನ ಪತ್ನಿಗೆ ಮತ್ತೊಬ್ಬನ ಮೋಹ, ಟ್ವಿಟರ್‌ನಲ್ಲಿ ವೈರಲ್‌ ಆಗ್ತಿದೆ ಹೆಂಡ್ತಿ ದ್ರೋಹ!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ