
ಉಕ್ರೇನ್(ಮಾ.29): ಉಕ್ರೇನ್ ಮೇಲೆ ರಷ್ಯಾ ಸಾರಿರುವ ಯುದ್ಧ ಒಂದು ತಿಂಗಳು ಕಳೆದಿದೆ. ಹಲವು ಅಮಾಯಕ ಜೀವಗಳು ಬಲಿಯಾಗಿದೆ. ಹಲವರು ಉಕ್ರೇನ್ ತೊರೆದು ನಿರಾಶ್ರಿತರಾಗಿದ್ದಾರೆ. ಇದರ ನಡುವೆ ಉಕ್ರೇನ್‌ನಲ್ಲಿ ನಡೆದಿರುವ ಕೆಲ ಘಟನೆಗಳು ಎಂತವರನ್ನು ಒಂದು ಕ್ಷಣ ಬೆಚ್ಚಿ ಬೀಳಿಸುತ್ತದೆ. ಇಂತಹ ಘಟನೆಗಳ ಪೈಕಿ ಉಕ್ರೇನ್ ಮಹಿಳೆ ತನಗಾದ ಪರಿಸ್ಥಿತಿ ನೆನೆದು ಕಣ್ಣೀರಿಟ್ಟಿದ್ದಾರೆ. ಅತ್ತ ಪತಿಯನ್ನು ಗುಂಡಿಕ್ಕಿ ಕೊಂದ ರಷ್ಯಾ ಸೈನಿಕರು, ತನ್ನ ಮೇಲೆ ಮಗನ ಎದುರೇ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ತನ್ನ ಅಸಹಾಯಕ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ನಾಝಿ ಸಮುದಾಯಕ್ಕೆ ಸೇರಿದ ವ್ಯಕ್ತಿ. ಹೀಗಾಗಿ ರಷ್ಯಾ ಸೈನಿಕರು ನಾಝಿಗಳು ಹೆಚ್ಚಿರುವ ಪ್ರದೇಶಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿದ್ದಾರೆ. ಇತ್ತ ನಾಝಿಗಳನ್ನು ಹುಡುಕಿ ಹುಡುಕಿ ಕೊಲ್ಲುತ್ತಿದ್ದಾರೆ ಅನ್ನೋದು ಗೌಪ್ಯವಾಗಿ ಉಳಿದಿಲ್ಲ. ಹೀಗೆ ಹುಡುಕಾಟದಲ್ಲಿ ಮನೆಯಲ್ಲಿ ಪತ್ನಿ, ಪುತ್ರನೊಂದಿಗಿದ್ದ ನಾಝಿ ವ್ಯಕ್ತಿಯನ್ನು ರಷ್ಯಾ ಪತ್ತೆ ಹಚ್ಚಿ ಕೊಂದಿದೆ.
Russia Ukraine War: ದಾಳಿಯ ಮೊದಲ ಹಂತ ಪೂರ್ಣ: ರಷ್ಯಾ ಪ್ರಕಟ
ಅಂದು ಮಾರ್ಚ್ 9ನೇ ತಾರೀಖು. ಮನೆಯೊಳಗೆ ಕುಳಿತಿದ್ದ ನನಗೆ ಗುಂಡಿ ಶಬ್ಧ ಕೇಳಿದೆ. ಹೊರಗೆ ಬಂದಾಗ ನನ್ನ ಮುಂದೆ ಇಬ್ಬರು ರಷ್ಯಾ ಸೈನಿಕರು ನಿಂತಿದ್ದರು. ಆಗಲೇ ಪರಿಸ್ಥಿತಿ ಗಂಭೀರವಾಗಿದೆ ಎಂದು ಅರಿತ ನಾನು ಪತಿ ಎಲ್ಲಿ ಎಂದು ಹುಡುಕಾಡಿದೆ. ಗೇಟ್ ಮುಂದೆ ಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ನಿನ್ನ ಪತಿಯ ಕತೆ ಮುಗಿದೆ. ಕಾರಣ ಆತ ನಾಝಿ ಎಂದು ಒಳಗ್ಗೆ ನುಗಿದ್ದ ಇಬ್ಬರು ರಷ್ಯಾ ಸೈನಿಕರು ನನ್ನ ಮಾತುಗಳನ್ನು ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ನನ್ನ ಮಗ ಭಯದಿಂದ ಅಳುತ್ತಿದ್ದ. ಆತನ ಮೇಲೆ ಗನ್ ಇಟ್ಟು ಒಂದೇ ನಿಮಿಷಕ್ಕೆ ನಿಮ್ಮ ಕತೆಯೂ ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿದರು. ನನ್ನ ಮಗನನ್ನು ಏನೂ ಮಾಡಬೇಡಿ ಎಂದು ಗೋಗೆರೆದೆ. ಅಷ್ಟರಲ್ಲಿ ಮತ್ತೊಬ್ಬ ಸೈನಿಕ, ಬಟ್ಟೆ ಕಳಚಲು ಸೂಚಿಸಿದ. ಬಳಿಕ ಒಬ್ಬರ ಬಳಿಕ ಮತ್ತೊಬ್ಬ ನಿರಂತರ ಅತ್ಯಾಚಾರ ಮಾಡಿದರು. ನನ್ನ ಮಗನ ಎದುರಲ್ಲೇ ರೇಪ್ ನಡೆಯಿತು. ಮಗ ಅಳುತ್ತಲೇ ಇದ್ದಾಗ, ಆತನ ಅಳದಂತೆ ಬಾಯಿ ಮುಚ್ಚಲು ಸೂಚಿಸಿದರು ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಕಣ್ಣೀರ ಕತೆ ಹೇಳಿದ್ದಾರೆ.
Ukraine Crisis ಮರಿಯುಪೋಲ್ ಚಿತ್ರಮಂದಿರದ ಮೇಲಿನ ದಾಳಿಯಲ್ಲಿ 300 ನಾಗರೀಕರ ಸಾವು, ಮಕ್ಕಳ ಸಂಖ್ಯೆ ಹೆಚ್ಚು!
ಅತ್ಯಾಚಾರದ ವೇಳೆ ಮತ್ತೊರ್ವ ಸೈನಿಕ ಈಕೆಯನ್ನು ಮುಗಿಸಬೇಕಾ, ಜೀವಂತವಾಗಿ ಬಿಡಬೇಕಾ ಎಂದು ತಮಾಷೆ ಮಾಡುತ್ತಿದ್ದರು. ಇದಕ್ಕೆ ಅತ್ಯಾಚಾರ ಎಸಗುತ್ತಿದ್ದ ಸೈನಿಕ ನನ್ನ ಕೆಲಸ ಮುಗಿಯಲಿ ಬಳಿಕ ನೋಡೋಣ ಎಂದು ಉತ್ತರಿಸಿದ. ಬಳಿಕ ಹೊರಬಂದ ಸೈನಿಕರು ಒಂದು ಶಬ್ದ ಹೊರಬಂದರೆ ಜೀವಂತವಾಗಿ ಇರುವುದಿಲ್ಲ ಎಂದರು. ಇದೇ ದಾರಿಯಲ್ಲಿ 10 ನಿಮಿಷದಲ್ಲಿ ವಾಪಸ್ ಬರುತ್ತೇವೆ. ನಿನ್ನ ಪತಿ ನಾಝಿ, ಹೀಗಾಗಿ ಪುತ್ರನ ಕತೆ ವಾಪಸ್ ಬರುವಾಗ ನೋಡೋಣ ಎಂದು ಸೈನಿಕರು ಹೊರಟರು.
ಸೈನಿಕರು ಹೊರಟ ಬೆನ್ನಲ್ಲೇ ಮಗನ ಕೈ ಹಿಡಿದು ಮನೆಯಿಂದ ಹೊರಟೇ ಬಿಟ್ಟೆ. ನನ್ನ ಪತಿ ಗೇಟ್ ಮುಂದೆ ಶವವಾಗಿ ಬಿದ್ದಿದ್ದರು. ಆವರನ್ನು ಮಣ್ಣು ಮಾಡಲು ಸಾಧ್ಯವಾಗಲಿಲ್ಲ. ನನ್ನ ಮಗನ ಜೀವ ಉಳಿಸಲು ಹೊರಡುವುದು ಅನಿವಾರ್ಯವಾಗಿತ್ತು. ಸಂಪೂರ್ಣ ನಗರ ರಷ್ಯಾ ಸೈನಿಕರ ವಶವಾಗಿತ್ತು. ಈ ರೀತಿ ಕರಾಳ ನೋವು ನನ್ನದು ಮಾತ್ರವಲ್ಲ, ನಾಝಿ ಕುಟುಂಬದ ಬಹುತೇಕ ಹೆಣ್ಣುಮಕ್ಕಳ ಕತೆ ಇದೇ ಆಗಿದೆ. ಕೆಲ ಹೆಣ್ಮುಮಕ್ಕಳ ಮೇಲೆ 10 ಸೈನಿಕರು ಅತ್ಯಾಚಾರ ಕೊಂದಿದ್ದಾರೆ ಎಂದು ಅಸಹಾಯಕ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಈ ಘಟನೆ ತನಿಖೆಗೆ ಉಕ್ರೇನ್ ಪೊಲೀಸರು ಮುಂದಾಗಿದ್ದಾರೆ. ಆದರೆ ಸದ್ಯ ಹಲವು ನಗರಗಳು ರಷ್ಯಾ ವಶದಲ್ಲಿರುವ ಕಾರಣ ತನಿಖೆ ಅಸಾಧ್ಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ