ಗೆಳತಿ ಕಾರಿಗೆ ಆ್ಯಪಲ್ ವಾಚ್‌ ಜೋಡಿಸಿ ಟ್ರ್ಯಾಕ್ ಮಾಡುತ್ತಿದ್ದ ಯುವಕನ ಬಂಧನ!

Published : Mar 29, 2022, 01:01 PM IST
ಗೆಳತಿ ಕಾರಿಗೆ ಆ್ಯಪಲ್ ವಾಚ್‌ ಜೋಡಿಸಿ ಟ್ರ್ಯಾಕ್ ಮಾಡುತ್ತಿದ್ದ  ಯುವಕನ ಬಂಧನ!

ಸಾರಾಂಶ

ಏರ್‌ಟ್ಯಾಗ್‌ಗಳ ಮೂಲಕ ತಮ್ಮನ್ನು ಹಿಂಬಾಲಿಸಲಾಗಿದೆ ಎಂದು  ಆಪಲ್ ಹಲವಾರು ದೂರುಗಳನ್ನು ಸ್ವೀಕರಿಸಿದೆ. ಈ ಬೆನಲ್ಲೇ ಆಪಲ್ ಇತ್ತಿಚೆಗೆ ತನ್ನ ಏರ್‌ಟ್ಯಾಗ್‌ಗಳನ್ನು ಹೆಚ್ಚಿನ ಭದ್ರತೆ ಮತ್ತು ಆಂಟಿ-ಸ್ಟಾಕಿಂಗ್ ವೈಶಿಷ್ಟ್ಯಗಳೊಂದಿಗೆ ಅಪ್‌ಗ್ರೇಡ್ ಮಾಡಿದೆ

Tech Desk: ತಂತ್ರಜ್ಞಾನ ಜಗತ್ತು ವಿಸ್ತಾರವಾದಂತೆ ಇದೇ ತಂತ್ರಜ್ಞಾನ ಬಳಸಿ ಕಾನೂನುಬಾಹಿರ ಕೃತ್ಯಗಳಿಗೆ ಕೈ ಹಾಕುವವರ ಜಾಲ ವಿಸ್ತಾರವಾಗುತ್ತಿದೆ. ತಂತ್ರಜ್ಞಾನ ಅನೇಕ ಸಂದರ್ಭಗಳಲ್ಲಿ ಜೀವರಕ್ಷಕವಾಗಿ ಹೊರಹೊಮ್ಮಿದ  ಉದಾಹಣೆಗಳಿವೆ. ಇದೇ ವೇಳೆ ಜನರು ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡ ಹಲವಾರು ಘಟನೆಗಳನ್ನು ನಾವು ಕೇಳಿದ್ದೇವೆ. ಈಗ ದುಷ್ಕರ್ಮಿಗಳು ಆಪಲ್ ವಾಚನ್ನು ಜನರನ್ನು ಟ್ರ್ಯಾಕ್‌ ಮಾಡುವ ಸಾಧನವಾಗಿ ಪರಿವರ್ತಿಸಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ತನ್ನ ಗೆಳತಿಯ ಕಾರಿಗೆ ಆಪಲ್ ವಾಚ್ ಜೋಡಿಸಿ  ಆಕೆಯನ್ನು ಟ್ರ್ಯಾಕ್ ಮಾಡಲು ಯತ್ನಿಸಿದ ಘಟನೆ ಅಮೆರಿಕಾದಲ್ಲಿ ನೆಡೆದಿದ್ದು, 29 ವರ್ಷದ ಯುವಕನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಗೆಳತಿಯ ಸ್ಥಳವನ್ನು ಪತ್ತೆಹಚ್ಚಲು ಆಪಲ್ ವಾಚನ್ನು ಬಳಸಿದ್ದಕ್ಕಾಗಿ ಯುಎಸ್‌ನ ಟೆನ್ನೆಸ್ಸಿಯ ನ್ಯಾಶ್‌ವಿಲ್ಲೆಯ ವ್ಯಕ್ತಿಯನ್ನು ಬಂಧಿಸಲಾಗಿದೆ. 

ಈ ಹಿಂದೆ ಏರ್‌ಟ್ಯಾಗ್‌ಗಳ ಮೂಲಕ ತಮ್ಮನ್ನು ಹಿಂಬಾಲಿಸಲಾಗಿದೆ ಎಂದು ಹಲವು ಬಳಕೆದಾರರು ಆಪಲ್‌ಗೆ ದೂರುಗಳನ್ನು ನೀಡಿದ್ದರು. ಈ ಬೆನ್ನಲ್ಲೇ ಆಪಲ್ ಇತ್ತಿಚೆಗೆ ತನ್ನ ಏರ್‌ಟ್ಯಾಗ್‌ಗಳನ್ನು ಹೆಚ್ಚಿನ ಭದ್ರತೆ ಮತ್ತು ಆಂಟಿ-ಸ್ಟಾಕಿಂಗ್ ವೈಶಿಷ್ಟ್ಯಗಳೊಂದಿಗೆ ಅಪ್‌ಗ್ರೇಡ್ ಮಾಡಿತ್ತು. ಆದರೆ ಜನರು ಇತರರನ್ನು ಟ್ರ್ಯಾಕ್‌  ಮಾಡಲು ಮತ್ತು ಅಪರಾಧಗಳನ್ನು ಮಾಡಲು ಆಪಲ್‌ ವಾಚಗಳನ್ನು ಬಳಸಲಾರಂಭಿಸಿದ್ದಾರೆ ಎಂಬುದನ್ನು ಆಪಲ್‌ ಇನ್ನಷ್ಟೇ ಅರಿತುಕೊಳ್ಳಬೇಕಿದೆ. ಹೀಗಾಗಿ ಆಪಲ್ ಏರ್‌ಟ್ಯಾಗ್‌ಗಳಿಗೆ ಆಂಟಿ-ಸ್ಟಾಕಿಂಗ್ ವೈಶಿಷ್ಟ್ಯಗಳನ್ನು ಹೊರತಂದಿರುವ ಆಪಲ್ ಈಗ ವಾಚ್‌ನಲ್ಲಿ ಟ್ರ್ಯಾಕಿಂಗ ಮಿತಿಗೊಳಿಸಲು ಮಾರ್ಗವನ್ನು ಕಂಡುಹಿಡಿಯಬೇಕಾಗಿದೆ. 

ಇದನ್ನೂ ಓದಿ: ಪತಿಯ ಜೀವ ಉಳಿಸಿದ ಆ್ಯಪಲ್ ವಾಚ್‌: ಸಿಇಒ ಟಿಮ್ ಕುಕ್‌ಗೆ ಕೃತಜ್ಞತೆ ಸಲ್ಲಿಸಿದ ಪತ್ನಿ!

ಕಾರಿನ ಚಕ್ರಕ್ಕೆ ಆಪಲ್ ವಾಚ್:  ಆರೋಪಿ ತನ್ನ ಗೆಳತಿಯ ಕಾರಿನ ಚಕ್ರಕ್ಕೆ ಆಪಲ್ ವಾಚನ್ನು ಜೋಡಿಸಿದ್ದು  ಅವಳ ಇರುವಿಕೆಯ ಬಗ್ಗೆ ಪರಿಶೀಲಿಸಲು ಥರ್ಡ್‌ ಪಾರ್ಟಿ ಟ್ರ್ಯಾಕಿಂಗ್ ಅಪ್ಲಿಕೇಶನನ್ನು ಬಳಸಿದ್ದಾನೆ.  ಅಫಿಡವಿಟ್ ಪ್ರಕಾರ 29 ವರ್ಷದ ಲಾರೆನ್ಸ್ ವೆಲ್ಚ್ ಮೇಲೆ ವಾಹನಕ್ಕೆ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧನವನ್ನು ಜೋಡಿಸಿದ ಆರೋಪ ಹೊರಿಸಲಾಗಿದೆ. 

WSMV4 ವರದಿ ಪ್ರಕಾರ ಯುವತಿಯ ಗೆಳೆಯನು ಆಕೆ ಇದ್ದ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ಈ ಬೆನಲ್ಲೇ ಪೊಲೀಸರು ಯುವತಿ ಇದ್ದ ಫ್ಯಾಮಿಲಿ ಸರ್ವಿಸ್‌ ಸೆಂಟರ್‌ಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಕಷ್ಟಕರ ಸಂದರ್ಭಗಳಲ್ಲಿ ಕುಟುಂಬಗಳಿಗೆ ಫ್ಯಾಮಿಲಿ ಸರ್ವಿಸ್‌ ಸೆಂಟರ್‌ ಸಹಾಯ ಮಾಡುತ್ತವೆ. 

ಫ್ಯಾಮಿಲಿ ಸರ್ವಿಸ್‌ ಸೆಂಟರ್‌ ತಲುಪಿದ ನಂತರ, ವೆಲ್ಚ್ ಕಟ್ಟಡದ ಕಡೆಗೆ ಹೋಗುವ ಬದಲು ಕಾರಿನ ಚಕ್ರದ ಕಡೆಗಡ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅನುಮಾನದಿಂದ, ಅಧಿಕಾರಿಗಳು ಅವನ ಬಳಿ ತೆರಳಿದಾಗ  ಚಕ್ರದ ಕಡ್ಡಿಗಳಿಗೆ ಜೋಡಿಸಲಾದ ಆಪಲ್ ವಾಚನ್ನು ಗುರುತಿಸಿದ್ದಾರೆ. ವಿಚಾರಣೆ ಬಳಿಕ ವಾಚ್ ತನ್ನದು ಎಂದು ವೆಲ್ಚ್ ಪೊಲೀಸರಿಗೆ ದೃಢಪಡಿಸಿದ್ದಾನೆ.

ಇದನ್ನೂ ಓದಿ: ಅಪಘಾತಕ್ಕೊಳಗಾದ ವ್ಯಕ್ತಿಯ ಜೀವ ಉಳಿಸಿದ Apple Watch

ಈ ನಡುವೆ ಯುವತಿ ರಕ್ಷಣೆಗಾಗಿ ಆರ್ಡರ್ ಆಫ್ ಪ್ರೊಟೆಕ್ಷನ್ ಆದೇಶ ನೀಡಲಾಗಿದೆ.  ಆರ್ಡರ್ ಆಫ್ ಪ್ರೊಟೆಕ್ಷನ್ ಎನ್ನುವುದು  ಕಿರುಕುಳ ಅಥವಾ ನಿಂದನೆಯಿಂದ ಜನರನ್ನು ರಕ್ಷಿಸಲು ಸಹಾಯ ಮಾಡಲು ನ್ಯಾಯಾಲಯದಿಂದ ನೀಡುವ ಆದೇಶವಾಗಿದೆ. "ಯುವಕ ತನಗೆ ಅನೇಕ ಬಾರಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಮತ್ತು ತಾನು ಕೆಲ ಸಮಯದವರೆಗೆ ಫ್ಯಾಮಿಲಿ ಸರ್ವಿಸ್‌ ಸೆಂಟರ್‌ ನೀಡುತ್ತಿದ್ದೆ" ಎಂದು ಯುವತಿ  ಹೇಳಿದ್ದಾಳೆ

Life360 ಎಂಬ ಅಪ್ಲಿಕೇಶನ್‌ನಿಂದ ವೆಲ್ಚ್ ಅವಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾಯಿತು. ತಾನು ಮತ್ತು ಆಕೆಯ ಗೆಳೆಯ ವೆಲ್ಚ್ ಪರಸ್ಪರರ ಸ್ಥಳವನ್ನು ಮೇಲ್ವಿಚಾರಣೆ ಮಾಡಲು Life360 ಬಳಸುತ್ತಿದ್ದಳು, ಆದರೆ ಹಿಂದೆ ಫ್ಯಾಮಿಲಿ ಸರ್ವಿಸ್‌ ಸೆಂಟರ್‌ಗೆ ಹಾಜರಾಗುವ ಮೊದಲು ಅಪ್ಲಿಕೇಶನ್‌ನಲ್ಲಿ ಟ್ರ್ಯಾಕಿಂಗನ್ನು ಆಫ್ ಮಾಡಿದ್ದಾಳೆ ಎಂದು ಯುವತಿ  ತಿಳಿಸಿದ್ದಾಳರ. ಈ ವೇಳೆ ತನ್ನ ಗೆಳೆಯನಿಂದ ತನ್ನ ಸ್ಥಳವನ್ನು ಅವನಿಗೆ ಕಳುಹಿಸಲು ಮತ್ತು ಅವನನ್ನು ಮರಳಿ ಕರೆ ಮಾಡುವಂತೆ ತನಗೆ ಪದೇ ಪದೇ ಮೇಸೆಜ್‌ ಬರುತ್ತಿದ್ದವು ಎಂದು ಯುವತಿ ತಿಳಿಸಿದ್ದಾಳೆ. 

ಸ್ಪಷ್ಟವಾಗಿ ಯುವತಿ ತನ್ನ Life360 ಅಪ್ಲಿಕೇಶನನ್ನು ಆಫ್ ಮಾಡಿದ ನಂತರ, ವೆಲ್ಚ್ ತನ್ನ ಆವೃತ್ತಿಯನ್ನು ಆಪಲ್ ವಾಚ್‌ನಲ್ಲಿ ಸಕ್ರಿಯವಾಗಿರಿಸಿಕೊಂಡಿದ್ದಾನೆ. ನಂತರ, ತನ್ನ ಗೆಳತಿ ಆ್ಯಪ್ ಆಕ್ಟಿವೇಟ್ ಆಗದೇ ಇದ್ದಾಗಲೂ ಆಕೆ ಇರುವ ಸ್ಥಳವನ್ನು ಪತ್ತೆಹಚ್ಚಲು ಆ್ಯಪ್ ಬಳಸಿದ್ದಾನೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈ ಸರ್ಕಾರದಲ್ಲಿ 63% ಕಮಿಷನ್‌: ಅಶೋಕ್‌
ಸಾಮಾಜಿಕ ಜಾಲತಾಣ ಖಾತೆ ಪಬ್ಲಿಕ್‌ ಇದ್ರಷ್ಟೇ ವೀಸಾ : ಟ್ರಂಪ್‌