Russia Ukraine Crisis: ರಷ್ಯಾದ ಸೇನಾ ಟ್ಯಾಂಕರ್ ಅನ್ನೇ ಟೋಯಿಂಗ್ ಮಾಡಿದ ಉಕ್ರೇನ್ ರೈತ!

By Suvarna NewsFirst Published Mar 2, 2022, 10:09 PM IST
Highlights

ಉಕ್ರೇನ್ ಹಾಗೂ ರಷ್ಯಾ ನಡುವಿನ ಸಮರ

ಉಕ್ರೇನ್ ನೆಲದಲ್ಲಿ ಬೀಡುಬಿಟ್ಟಿರುವ ರಷ್ಯಾದ ಸೇನಾ ಟ್ಯಾಂಕ್ ಗಳು

ಟ್ರ್ಯಾಕ್ಟರ್ ನಿಂದ ಸೇನಾ ಟ್ಯಾಂಕ್ ಗಳನ್ನೇ ಟೋಯಿಂಗ್ ಮಾಡಿದ ಉಕ್ರೇನ್ ರೈತ

ಕೈವ್ (ಮಾ.2): ಕಳೆದ ಒಂದು ವಾರದಿಂದ ಉಕ್ರೇನ್ (Ukraine)ನೆಲದಲ್ಲಿ ರಷ್ಯಾದ (Russia) ಆಕ್ರಮಣ ಭೀಕರವಾಗಿ ನಡೆಯುತ್ತಿದೆ. ಆದರೆ, ಸೈನಿಕರೊಂದಿಗೆ ಮಾತ್ರವಲ್ಲ, ಸ್ಥಳೀಯ ನಾಗರಿಕರಿಂದಲೂ ರಷ್ಯಾ ಸೇನೆಯ ಪ್ರತಿರೋಧ ಎದುರಿಸುತ್ತಿದೆ.  ಉಕ್ರೇನ್ ದೇಶದ ಜನರು ಪ್ರತಿರೋಧ ಒಡ್ಡುತ್ತಿರುವ ಸಾಕಷ್ಟು ವಿಡಿಯೋಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿವೆ. ಆದರೆ, ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಉಕ್ರೇನ್ ನ ರೈತನೊಬ್ಬ ತನ್ನ ಟ್ರ್ಯಾಕ್ಟರ್ ನಲ್ಲಿ (tractor ) ರಷ್ಯಾದ ಸೇನಾ ಟ್ಯಾಂಕ್ ಗಳನ್ನು ಟೋಯಿಂಗ್ ಮಾಡುತ್ತಿದ್ದಾರೆ.

 ಇನ್ನೊಂದು ವಿಡಿಯೋದಲ್ಲಿ ರಷ್ಯಾದ ಯುದ್ಧ ಟ್ಯಾಂಕರ್ ಗಳನ್ನು ಕದಿಯುತ್ತಿರುವ ವಿಡಿಯೋ ಸೆರೆಯಾಗಿದೆ. ಟ್ರ್ಯಾಕರ್ ಬಳಸಿಕೊಂಡು ಟ್ಯಾಂಕ್ ಅನ್ನು ಕದಿಯಲಾಗಿದ್ದು, ಬಹುಶಃ ಎರಡೂ ಪ್ರಕರಣದ ಹಿಂದೇ ಒಬ್ಬನೇ ವ್ಯಕ್ತಿ ಇದ್ದಾನೆ ಎನ್ನಲಾಗಿದೆ.  ಹಲವಾರು ಇತರ ವೀಡಿಯೊಗಳಲ್ಲಿ ಉಕ್ರೇನಿಯನ್ ವ್ಯಕ್ತಿಯೊಬ್ಬ ರಷ್ಯಾದ ನೆಲಬಾಂಬ್ ಅನ್ನು (Land Mines) ತನ್ನ ಬರಿಕೈಗಳಿಂದ ಒಯ್ಯುತ್ತಿರುವುದನ್ನು ಕಾಣಬಹುದು.

ಉಕ್ರೇನ್ ನ ರೈತ ಯುದ್ಧ ಟ್ಯಾಂಕರ್ ಅನ್ನು ಟ್ರ್ಯಾಕರ್ ಗೆ ಕಟ್ಟಿ ಅದನ್ನು ಎಳೆದುಕೊಂಡು ಹೋಗುತ್ತಿದ್ದಾನೆ. ಆತನ ಪಕ್ಕದಲ್ಲಿಯೇ ಇನ್ನೊಬ್ಬ ವ್ಯಕ್ತಿ ಓಡಿಬರುತ್ತಿದ್ದು, ರೈತನ ಜೊತೆಗಾರನಿರಬಹುದು ಎಂದು ಅಂದಾಜಿಸಲಾಗಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಯುದ್ಧ-ಹಾನಿಗೊಳಗಾದ ರಾಷ್ಟ್ರದ ಇತ್ತೀಚಿನ ವೀಡಿಯೊಗಳಲ್ಲಿ ಒಂದಾಗಿದೆ. ಉಕ್ರೇನ್ ದೇಶದ ಯಾವ ಭಾಗದ ವಿಡಿಯೋ ಇದು ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ, ನಿರ್ಜನವಾದ ಕಚ್ಚಾ ರಸ್ತೆಯಲ್ಲಿ ಸೇನಾ ಟ್ಯಾಂಕ್ ಅನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯ ಇದಾಗಿದ್ದು, ಇದನ್ನು ವಿಡಿಯೋ ಮಾಡಿರುವ ವ್ಯಕ್ತಿ ಉಕ್ರೇನಿಯನ್ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ನಗುತ್ತಿರುವುದು ದಾಖಲಾಗಿದ್ದು, ಇನ್ನೊಬ್ಬ ವ್ಯಕ್ತಿ ರೈತನನ್ನು ಹಿಡಿಯಲು ಪ್ರಯತ್ನ ಪಡುತ್ತಿರುವುದು ದಾಖಲಾಗಿದೆ.

No expert, but the invasion doesn’t seem to be going particularly well.

Ukrainian tractor steals Russian APC today 👇 pic.twitter.com/exutLiJc5v

— Johnny Mercer (@JohnnyMercerUK)


7 ಸೆಕೆಂಡ್‌ಗಳ ವೀಡಿಯೊವನ್ನು ಬ್ರಿಟಿಷ್ ಕನ್ಸರ್ವೇಟಿವ್ ರಾಜಕಾರಣಿ ಮತ್ತು ಪ್ಲೈಮೌತ್ ಮೂರ್ ವ್ಯೂ ಸಂಸದರಾದ ಜಾನಿ ಮರ್ಸರ್‌ (British Conservative politician and Member of Parliament for Plymouth Moor View Johnny Mercer) ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರ ಬೆನ್ನಲ್ಲಿಯೇ ಈ ವಿಡಿಯೋವನ್ನು ಸಾಕಷ್ಟು ಮಂದಿ ಹಂಚಿಕೊಂಡಿದ್ದಾರೆ.

Russia Ukraine war ಯುದ್ಧ ನಾಡು ಉಕ್ರೇನ್‌ನಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ನಿಧನ!
"ಇವರುಗಳು ಎಕ್ಸ್ ಪರ್ಟ್ ಗಳಲ್ಲ. ಆದರೆ, ರಷ್ಯಾ ಪಾಲಿಗೆ ಉಕ್ರೇನ್ ಮೇಲಿನ ಆಕ್ರಮಣ ಉತ್ತಮವಾಗಿ ನಡೆಯುತ್ತಿರುವಣತೆ ಕಾಣುತ್ತಿಲ್ಲ. ಉಕ್ರೇನ್ ನ ಟ್ರ್ಯಾಕ್ಟರ್ ಇಂದು ರಷ್ಯಾದ ಎಪಿಸಿಯನ್ನು ಕದಿಯುತ್ತಿದೆ' ಎಂದು ಟ್ವೀಟ್ ಅನ್ನು ಬರೆದಿದ್ದು, ಈಗಾಗಲೇ ಈ ಕ್ಲಿಪ್ 4.6 ಮಿಲಿಯನ್ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಹಲವಾರು ನಾಗರಿಕರು ರಷ್ಯಾದ ಮಿಲಿಟರಿ ಟ್ಯಾಂಕ್‌ಗಳನ್ನು ಉಕ್ರೇನ್ ದೇಶವನ್ನು ಹಾದುಹೋಗದಂತೆ ತಡೆಯಲು ಪ್ರಯತ್ನಿಸುತ್ತಿರುವ ಬೆಳವಣಿಗೆಯ ನಡುವೆ ಈ ಘಟನೆ ದಾಖಲಾಗಿದೆ. ಉಕ್ರೇನಿಯನ್ ರಾಜತಾಂತ್ರಿಕ ಓಲೆಕ್ಸಾಂಡರ್ ಶೆರ್ಬಾ (Ukrainian diplomat Olexander Scherba) ಅವರು ತಮ್ಮ ಶ್ಲಾಘನೆ ಮಾಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

Russia Ukraine War: ಖಾರ್ಖಿವ್ ಮೇಲೆ ಭೀಕರ ದಾಳಿ ಸಾಧ್ಯತೆ.. ಈ ಕೂಡಲೇ ಅಲ್ಲಿಂದ ಹೊರಡಿ
"ಇದು ನಿಜವಾಗಿದ್ದರೆ, ಬಹುಶಃ ರೈತನ ಮೂಲಕ ಕಳುವಾದ ಮೊದಲ ಸೇನಾ ಟ್ಯಾಂಕ್ ಇದಾಗಿದೆ ... ಉಕ್ರೇನಿಯನ್ನರು ಕಠಿಣ ವ್ಯಕ್ತಿಗಳು" ಎಂದು ಟ್ವೀಟ್ ಮಾಡಿದ್ದಾರೆ. ಈ ಘಟನೆಯು ಹಿಂಸಾಚಾರ-ಪೀಡಿತ ಉಕ್ರೇನ್‌ನಿಂದ ವರದಿಯಾದ ಅನೇಕ ಕೆಚ್ಚೆದೆಯ ಕೃತ್ಯಗಳಲ್ಲಿ ಒಂದಾಗಿದೆ. ಪ್ರತಿಭಟನೆಯಲ್ಲಿ ನಿರತರಾಗಿರುವ ಸಾವಿರಾರು ಉಕ್ರೇನಿಯನ್ನರು ಶರಣಾಗಲು ಅಥವಾ ಸ್ಥಳಾಂತರವಾಗಲು ನಿರಾಕರಿಸಿದ್ದು ತಮ್ಮ ನೆಲದ ರಕ್ಷಣೆಗಾಗಿ ನಿರ್ಭೀತವಾಗಿ ಹೋರಾಟ ನಡೆಸುವ ಮೂಲಕ ರಷ್ಯಾ ಸೈನಿಕರಿಗೆ ಸವಾಲೆಸೆದಿದ್ದಾರೆ. ಪೆಟ್ರೋಲ್ ಬಾಂಬ್ ಗಳಿಂದ ರಷ್ಯಾ ಸೈನಿಕರ ಮೇಲೆ ದಾಳಿ ಮಾಡುತ್ತಿದ್ದಾರೆ.

Latest Videos

click me!