Bizarre Alien : ವಿಜ್ಞಾನಿಗಳಲ್ಲಿ ಅಚ್ಚರಿ ಮೂಡಿಸಿದ "ಏಲಿಯನ್" ಥರದ ಜೀವಿ!

By Suvarna News  |  First Published Mar 2, 2022, 7:57 PM IST

ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಕಂಡು ಬಂದ ಜೀವಿ

ವಿಜ್ಞಾನಿಗಳು, ಸಂಶೋಧಕರು ಮತ್ತು ಸಾಮಾನ್ಯ ಜನರಿಗೆ ಅಚ್ಚರಿ

ಮಳೆಯಾದ ಬಳಿಕ ನಗರದ ರಸ್ತೆಗಳಲ್ಲಿ ಕಂಡು ಬಂದ ಅಚ್ಚರಿಯ ಜೀವಿ


ಬೆಂಗಳೂರು (ಮಾ. 2): ಆಸ್ಟ್ರೇಲಿಯಾದ (Australia) ಸಿಡ್ನಿ (Sydney) ನಗರದ ಬೀದಿಗಳಲ್ಲಿ ಕಂಡು ಬಂದಿರುವ "ಏಲಿಯನ್" ಥರದ ಸಣ್ಣ ಜೀವಿಯ ಬಗ್ಗೆ ಜಗತ್ತಿನಾದ್ಯಂತ ಕುತೂಹಲಗಳು ಆರಂಭವಾಗಿದೆ. ವಿಜ್ಞಾನಿಗಳು (biologists), ಸಂಶೋಧಕರು (academics) ಹಾಗೂ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡುವ ವ್ಯಕ್ತಿಗಳು ಈ ಅಪರೂಪದ ಜೀವಿಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಲ್ಯಾಡ್ ಬೈಬಲ್  (Ladbible) ಪತ್ರಿಕೆಯು ವರದಿ ಮಾಡಿರುವಂತೆ ಹ್ಯಾರಿ ಹೇಯ್ಸ್ (Harry Hayes)ಸೋಮವಾರ ಬೆಳಗ್ಗೆ ಎಂದಿನಂತೆ ಜಾಗಿಂಗ್ ತೆರಳುವ ವೇಳೆ ಅವರ ಕಣ್ಣಿಗೆ ಈ ಜೀವಿ ಬಿದ್ದಿದೆ. ಇತ್ತೀಚಿನ ದಿನಗಳಲ್ಲಿ ಸಿಡ್ನಿ ನಗರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಆದರೆ, ವಿಲಕ್ಷಣವಾಗಿ ಕಾಣುವ ಈ ಜೀವಿಯು ಪ್ರವಾಹಕ್ಕೆ ಒಳಗಾಗಿರುವಂಥ ಪ್ರದೇಶದಲ್‌ಲಿ ಕಂಡುಬಂದಿಲ್ಲ. ಬದಲಾಗಿ, ಸಿಡ್ನಿಯ ಮಾರಿಕ್ವಿಲ್ಲೆ ಉಪನಗರದ(Marrickville suburb of Sydney) ಜನವಸತಿ ಪ್ರದೇಶದಲ್ಲಿ ಜಾಗಿಂಗ್ ಮಾಡುವ ವೇಳೆ ಹೇಯ್ಸ್ ಅವರು ಕಂಡಿದ್ದಾರೆ.

"ನನಗೆ ಅನಿಸಿರುವ ಪ್ರಕಾರ ಇದು ಯಾವುದೋ ಪ್ರಾಣಿಯ ಭ್ರೂಣವಾಗಿರಲೂ ಬಹುದು. ಆದರೆ, ಕೋವಿಡ್-19, ಮೂರನೇ ಮಹಾಯುದ್ಧ ಹಾಗೂ ಪ್ರವಾಹಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಇದು ಅನ್ಯಲೋಕದವು ಆಗಿರಬಹುದು ಎನ್ನುವುದು ನನ್ನ ಅನುಮಾನ" ಎಂದು ಹೇಯ್ಸ್ ಹೇಳಿದ್ದಾರೆ.

ಏಲಿಯನ್ (alien) ರೀತಿಯಲ್ಲಿ ಕಾಣುವ ಈ ಜೀವಿಯನ್ನು ವಿಡಿಯೋ ಮಾಡಿ ಇನ್ಸ್ ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಲ್ಲಿಂದ ಈ ವಿಡಿಯೋ, ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಹಾಗೂ ಫೇಸ್ ಬುಕ್ ಸೇರಿದಂತೆ ಇತರ ತಾಣಗಳಲ್ಲೂ ಹಂಚಿಕೆಯಾಗಿದ್ದು ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹೇಯ್ಸ್, ಈ ಜೀವಿಯನ್ನು ಸಣ್ಣ ಕೋಲಿನಿಂದ ಅಲ್ಲಾಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಈ ಜೀವಿ ಸ್ವಲ್ಪವೂ ಪ್ರತಿಕ್ರಿಯೆ ನೀಡಿಲ್ಲ.
 

 
 
 
 
 
 
 
 
 
 
 
 
 
 
 

A post shared by @_harryhayes

Tap to resize

Latest Videos


ವಿಲಕ್ಷಣವಾಗಿ ಕಾಣುವ ಪ್ರಾಣಿಯ ಸುದ್ದಿಯನ್ನ ವೀಕ್ಷಿಸಿದ ಹಲವಾರು ಮಂದಿ ಸೋಷಿಯಲ್ ಮೀಡಿಯಾದಲ್ಲಿ ಇದನ್ನು 'ಅನ್ಯಜೀವಿ' ಎಂದು ಬಣ್ಣಿಸಿದ್ದಾರೆ. ಆಸ್ಟ್ರೇಲಿಯಾದ ಪ್ರಸಿದ್ಧ ಸೋಷಿಯಲ್ ಮೀಡಿಯಾ ಇನ್ ಫ್ಲೂಯೆನ್ಸರ್ ಲಿಲ್ ಅಹೆನ್ ಕನ್ (Lil Ahenkan, a popular Australian influencer) ಈ ವಿಡಿಯೋವನ್ನು ಇನ್ಸ್ ಟಾಗ್ರಾಮ್ ನಲ್ಲಿ (Instagram) ಹಂಚಿಕೊಂಡಿದ್ದಲ್ಲದೆ, "ಇದು ಏನು"ಎಂದು ಶೀರ್ಷಿಕೆಯನ್ನೂ ನೀಡಿದ್ದಾರೆ. ಆ ಬಳಿಕ ಇದು ಮತ್ತಷ್ಟು ವೈರಲ್ ಆಗಿದೆ.

"ಬಹುಶಃ ಇದು ಶಾರ್ಕ್ ನ ಭ್ರೂಣ ಇರಬಹುದು?  ಅಥವಾ ಬೇರೆ ಯಾವುದೋ ಸಮುದ್ರ ಜೀವಿ" ಎಂದು ಒಬ್ಬ ವ್ಯಕ್ತಿ ಊಹೆ ಮಾಡಿದ್ದರೆ, ಇನ್ನೊಬ್ಬ ವ್ಯಕ್ತಿ ಇದು ಏಲಿಯನ್ ಆಗಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ.

ಉಕ್ರೇನ್‌ನಲ್ಲಿ MBBS ಮಾಡ್ತಿದ್ದ ಗ್ರಾ.ಪಂ. ಅಧ್ಯಕ್ಷೆ: ಯುದ್ಧದ ಬಳಿಕ ಬಯಲಾದ ರಹಸ್ಯ
ವಿಚಿತ್ರವಾಗಿ ಕಾಣುವ ಈ ಜೀವಿಯನ್ನು ಕಂಚು ಜೀವಶಾಸ್ತ್ರಜ್ಞ ವಿಜ್ಞಾನಿಗಳೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜೀವಶಾಸ್ತ್ರಜ್ಞೆ ಎಲ್ಲೀ ಎಲಿಸ್ಸಾ(Biologist Ellie Elissa) ಅವರು ಈ ಚಿತ್ರವನ್ನು ಇನ್ಸ್ ಟಾಗ್ರಾಮ್ ನಲ್ಲಿ ರೀಪೋಸ್ಟ್ ಮಾಡಿದ್ದಲ್ಲದೆ, ಜೀವಿಯನ್ನು ಗುರುತಿಸಲು ಸಹಾಯ ಮಾಡುವಂತೆ ಕೇಳಿದ್ದಾರೆ. "ಇದು ಏನಿರಬಹುದು. ನನ್ನ ಪ್ರಕಾರ ಪಿಸಮ್/ಗ್ಲೈಡರ್ (possum/glider) ಭ್ರೂಣ ಎಂದು ಭಾವಿಸಿದ್ದೇನೆ. ಆದರೆ, ಇದನ್ನು ಪ್ರಮಾಣೀಕರಿಸಲು ಯಾವುದೇ ಸಾಕ್ಷ್ಯ ನನ್ನಲ್ಲಿಲ್ಲ. ನನ್ನ ಗೆಳೆಯರಲ್ಲಿ ಯಾರೂ ಕೂಡ ಇದನ್ನು ಒಪ್ಪುತ್ತಿಲ್ಲ' ಎಂದು ಬರೆದುಕೊಂಡಿದ್ದಾರೆ.

Russia Ukraine War: ಖಾರ್ಖಿವ್ ಮೇಲೆ ಭೀಕರ ದಾಳಿ ಸಾಧ್ಯತೆ.. ಈ ಕೂಡಲೇ ಅಲ್ಲಿಂದ ಹೊರಡಿ
ಕಟ್ಲ್‌ಫಿಶ್ ಭ್ರೂಣ, ಮೊಳಕೆಯೊಡೆಯುವ ಬೀಜ ಮತ್ತು ರೂಪಾಂತರಿತ ಗೊದಮೊಟ್ಟೆ ಎಲ್ಲವನ್ನೂ ಸಂಭವನೀಯ ಉತ್ತರಗಳಾಗಿ ಹೇಳಲಾಗಿದ್ದವೂ ಅವೆಲ್ಲವನ್ನೂ ತಿರಸ್ಕರಿಸಲಾಗಿದೆ. ಜೀವಿಯನ್ನು ಗುರುತಿಸಲು ಲ್ಯಾಡ್‌ಬೈಬಲ್ ಸಿಡ್ನಿ ವಿಶ್ವವಿದ್ಯಾಲಯ ಮತ್ತು ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯವನ್ನು ಕೂಡ ತಲುಪಿದ್ದು, ಅಲ್ಲಿಯೂ ಯಾವುದೇ ಸಂಶೋಧಕರು ಅದನ್ನು ಗುರುತಿಸಲು ಸಾಧ್ಯವಾಗಲಿಲ್ಲ.

 

click me!