'ಗಂಭೀರ ಸ್ವರೂಪದ ಅಲರ್ಜಿ ಇರುವವರು ಫೈಝರ್‌ನಿಂದ ದೂರವಿರಿ!'

By Suvarna NewsFirst Published Dec 10, 2020, 4:38 PM IST
Highlights

ಕೊರೋನಾ ಲಸಿಕೆಯಿಂದ ಪಾರಾಗಲು ಸಂಜೀವಿನಿಯಂತೆ ಮೈದಳೆದಿರುವ ಅಮೆರಿಕದ ಫೈಝರ್| ಗಂಭೀರ ಸ್ವರೂಪದ ಅಲರ್ಜಿ ಇರುವವರು ಫೈಝರ್‌ನಿಂದ ದೂರವಿರಿ: ಬ್ರಿಟನ್‌ ಸರ್ಕಾರ

ಲಂಡನ್‌(ಡಿ.10): ಕೊರೋನಾ ಲಸಿಕೆಯಿಂದ ಪಾರಾಗಲು ಸಂಜೀವಿನಿಯಂತೆ ಮೈದಳೆದಿರುವ ಅಮೆರಿಕದ ಫೈಝರ್‌ ಲಸಿಕೆ ನೀಡುವ ಅಭಿಯಾನ ಬ್ರಿಟನ್‌ನಲ್ಲಿ ಆರಂಭವಾಗಿರುವ ಬೆನ್ನಲ್ಲೇ, ಗಣನೀಯ ಪ್ರಮಾಣದ ಅಲರ್ಜಿ ರೀತಿಯ ಸೋಂಕು ಹೊಂದಿರುವವರು ‘ಫೈಝರ್‌’ ಚುಚ್ಚುಮದ್ದು ಹಾಕಿಸಿಕೊಳ್ಳಬಾರದು ಎಂದು ದೇಶದ ಜನತೆಗೆ ಬ್ರಿಟನ್‌ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಸೀರಂ, ಭಾರತ್‌ ಬಯೋಟೆಕ್‌ನಿಂದ ಮತ್ತಷ್ಟು ಮಾಹಿತಿ ಕೋರಿದ ಕೇಂದ್ರ!

ಬ್ರಿಟನ್‌ನ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಆರೋಗ್ಯ ಸೇವಾ ಕೇಂದ್ರದಲ್ಲಿ ಫೈಝರ್‌ ಲಸಿಕೆಗೆ ಒಳಪಟ್ಟಇಬ್ಬರು ಅಲರ್ಜಿ ಸೋಂಕಿತರ ಮೇಲೆ ಅಡ್ಡಪರಿಣಾಮವಾಗಿದ್ದು, ಇದೀಗ ಅವರಿಗೆ ಚಿಕಿತ್ಸೆಯ ಅಗತ್ಯವಿದೆ. ಹೀಗಾಗಿ ಮುಂದಿನ ಕೆಲ ದಿನಗಳ ಕಾಲ ಹೆಚ್ಚು ಪ್ರಮಾಣದ ಅಲರ್ಜಿ ಇರುವವರು ಲಸಿಕೆ ಹಾಕಿಸಿಕೊಳ್ಳುವುದರಿಂದ ದೂರವಿರಿ ಎಂದು ಸೂಚಿಸಲಾಗಿದೆ.

ಕೊರೋನಾ ಲಸಿಕೆ ಪಡೆದುಕೊಂಡವರಿಗೆ ಅಲರ್ಜಿ, ಪಾರ್ಶ್ವವಾಯು!

ಒಟ್ಟಾರೆ 4 ಕೋಟಿ ಲಸಿಕೆಗೆ ಆರ್ಡರ್‌ ಕೊಟ್ಟಿರುವ ಬ್ರಿಟನ್‌ಗೆ ಮೊದಲ ಹಂತದಲ್ಲಿ ಈಗಾಗಲೇ 8 ಲಕ್ಷ ಲಸಿಕೆಯ ಡೋಸ್‌ಗಳನ್ನು ರವಾನಿಸಲಾಗಿದ್ದು, 80 ವರ್ಷ ದಾಟಿದ ಹಿರಿಯ ನಾಗರಿಕರು, ವೈದ್ಯಕೀಯ ಸಿಬ್ಬಂದಿ ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ

click me!