
ಅಫ್ಘಾನಿಸ್ತಾನದ ಪತ್ರಕರ್ತೆ ಹಾಗೂ ಆಕೆಯ ಚಾಲಕನನ್ನು ಅಪರಿಚಿತರು ಶೂಟ್ ಮಾಡಿ ಕೊಂದಿರುವ ಘಟನೆ ಅಫ್ಘಾನಿಸ್ತಾನದ ಜಲಾಲಾಬಾದ್‌ನಲ್ಲಿ ನಡೆದಿದೆ. ಎನಿಕಾಸ್ ಟಿವಿ ನ್ಯೂಸ್ ಆಂಕರ್ ಹಾಗೂ ಟಾಕ್ ಶೋ ನಡೆಸುವ ಮಲಾಲಾ ಮಾಯ್ವಂಡ್ ಕೊಲೆಯಾಗಿದ್ದಾರೆ.
ಸಶಸ್ತ್ರರಾಗಿ ಬಂದ ಅಪರಿಚಿತರು ಬಂದು ಏಕಾಏಕಿ ದಾಳಿ ನಡೆಸಿ ಪತ್ರಕರ್ತೆ ಹಾಗೂ ಆಕೆಯ ಚಾಲಕನನ್ನು ಕೊಲೆ ಮಾಡಿದ್ದಾರೆ. ಜಲಾಲಾಬಾದ್‌ನ ಅರಬಾನೋ ಗೋಯಲೆಯಲ್ಲಿ ಅಪರಿಚಿತರು ಪತ್ರಕರ್ತೆಯ ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಕೆಲಸಕ್ಕೆಂದು ತೆರಳುತ್ತಿದ್ದ ಸಂದರ್ಭ ದಾಳಿ ನಡೆದಿದೆ.
ಮೋದಿ ಹಿಂದಿಕ್ಕಿದ ಜೋ ಬೈಡೆನ್, ಭಾರತದಲ್ಲಿ ಈ ಬಾರಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿ!
ಈ ಘಟನೆಯನ್ನು ಚಾನೆಲ್ ಮುಖ್ಯಸ್ಥ ಝಲ್ಮೆ ಲತೀಫಿ ಖಚಿತಪಡಿಸಿದ್ದು, ಘಟನೆ ಬಗ್ಗೆ ಹೆಚ್ಚಿನ ಯಾವುದೇ ಮಾಹಿತಿ ತಿಳಿದುಬಂದಿಲ್ಲ ಎಂದಿದ್ದಾರೆ. ಈ ಘಟನೆ ಹಿಂದೆ ನಾವಿಲ್ಲ ಎಂದಿದೆ ತಾಲಿಬಾನ್ ಸಂಘಟನೆ.
ಘಟನೆಯನ್ನು ಖಂಡಿಸಿರುವ ಅಫ್ಘಾನ್ ಪತ್ರಕರ್ತರ ಸಂಘಟನೆ ಶೀಘ್ರ ಘಟನೆ ತನಿಖೆ ನಡೆಸಿ ಸತ್ಯಾಂ ಹೊರತರುವಂತೆ ಒತ್ತಾಯಿಸಿದೆ. 2020ರಲ್ಲಿ ಸುಮಾರು 10 ಜನ ಪತ್ರಕರ್ತರು ಅಫ್ಘಾನಿಸ್ತಾನದಲ್ಲಿ ಕೊಲ್ಲಲ್ಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ