
ಯಎಇ(ಮಾ.26) ಭಾರತದಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಲ್ಲಿ ಆಚರಿಸಾಗಿದೆ. ದೇಶ ವಿದೇಶಗಳಲ್ಲಿ ಹೋಳಿ ಹಬ್ಬದ ಸಂಭ್ರಮ ಪಸರಿಸಿತ್ತು. ಈ ಹಬ್ಬದ ಸಂಭ್ರಮವನ್ನು ಗಲ್ಫ್ ಟಿಕೆಟ್ ಇಮ್ಮಡಿ ಮಾಡಿದೆ. ಪ್ರಮುಖವಾಗಿ ಗಲ್ಫ್ ಟಿಕೆಟ್‌ನಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತಿದೆ. ಇತ್ತೀಚೆಗಿನ ಗಲ್ಫ್ ಟಿಕೆಟ್ ಡ್ರಾದಲ್ಲಿ ಹಲವು ಅದೃಷ್ಠರಿಗೆ ಲಕ್ಷ ಲಕ್ಷ ರೂಪಾಯಿ ಜಾಕ್‌ಪಾಟ್ ಬಂದಿದೆ.
ಪಾರ್ಚೂನ್ 5ರ ಡ್ರಾದಲ್ಲಿ 5 ಗೇಮಿಂಗ್ ನಂಬರ್ ಬೈಕಿ 4 ಹೊಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ AED 100,000 (22.5 ಲಕ್ಷ ರೂಪಾಯಿ) ಬಹುಮಾನ ಮೊತ್ತವನ್ನು ವಿಜೇತರು ಪಡೆದುಕೊಂಡಿದ್ದಾರೆ. ಕೇರಳದ ಇಬ್ರಾಹಿಂ ಕುಟ್ಟಿ ಕೆಸಿ, ತಮಿಳುನಾಡಿನ ಪತ್ಮರಾಜ ರಾಜಾಂಗಂ, ತೆಲಂಗಾಣದ ಸ್ವಾತಿ ರೆಡ್ಡಿ 22.5 ಲಕ್ಷ ರೂಪಾಯಿ ಬಹುಮಾನ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಫಾರ್ಚೂನ್ ರಾಫೆಲ್ ವಿಜೇತರು 1.12 ಲಕ್ಷ ರೂಪಾಯಿ ಬಹುಮಾನ ಪಡೆದುಕೊಂಡಿದ್ದಾರೆ. ಫಾರ್ಚೂನ್ 5 ರಾಫೆಲ್ ವಿಜೇತರಾದ ಕೇರಳದ ಬೈಜು ವಿಕೆ, ತೆಲಂಗಾಣದ ದುಬ್ಬಯ್ಯ ಗುಮ್ಮಲ ಹಾಗೂ ಅಬ್ಬಾಸ್ ಕಾಸಿಂ ಬಹುಮಾನ ಮೊತ್ತ ಪಡೆದಿದ್ದಾರೆ. ಈ ಮೂಲಕ ವಿಜೇತರ ಹೋಳಿ ಸಂಭ್ರಮ ಇಮ್ಮಡಿಯಾಗಿದೆ.
ಶಿವಮೊಗ್ಗದ ರಹೀಮ್ ಸೇರಿ ಮೂವರಿಗೆ ಜಾಕ್‌ಪಾಟ್, ಗಲ್ಫ್ ಟಿಕೆಟ್ ಡ್ರಾದಲ್ಲಿ 22.5 ಲಕ್ಷ ರೂ ಬಹುಮಾನ!
ಗಲ್ಫ್ ಟಿಕೆಟ್ ಫಾರ್ಚೂನ್ ವಿಜೇತರ ಜೊತೆಗೆ ಸೂಪರ್ 6 ಡ್ರಾ ಕೂಡ ಘೋಷಣೆಯಾಗಿದೆ. ತಮಿಳುನಾಡಿನ ಕವಿಯರಸನ್ ವಿ 6 ಗೇಮಿಂಗ್ ನಂಬರ್ ಪೈಕಿ 4 ಗೇಮಿಂಗ್ ನಂಬರ್ ಹೊಂದಿಸಿದ್ದಾರೆ. ಈ ಮೂಲಕ 11.25 ಲಕ್ಷ ರೂಪಾಯಿ ಬಹುಮಾನ ಮೊತ್ತ ಪಡೆದಿದ್ದಾರೆ. ಈ ಮೂಲಕ ಸೂಪರ್ 6 ಗೇಮಿಂಗ್ ಡ್ರಾ ಅತ್ಯುತ್ತಮ ನಗದು ಬಹುಮಾನಗಳ ಜೊತೆಗೆ ಬದುಕು ಬದಲಾಯಿಸುವ ಮಹತ್ತರ ಹೆಜ್ಜೆಗೂ ನಾಂದಿಹಾಡಲಿದೆ.
ಸೂಪರ್ 6 ಗೆಲುವಿಗೆ ಪೂರಕವಾಗಿ ಸೂಪರ್ 6 ರಾಫೆಲ್ ವಿಜೇತ ಪ್ರತಿಯೊಬ್ಬ 1.12 ಲಕ್ಷ ರೂಪಾಯಿ ನಗದು ಬಹುಮಾನ ಪಡೆದಿದ್ದಾರೆ. ರಾಜಸ್ಥಾನದ ವಿನ್ಸೆಂಟ್ ಟ್ರೆವರ್, ತಮಿಳುನಾಡಿನ ಇಳಯರಾಜ ಗೋಪಾಲಕೃಷ್ಣನ್, ಬಿನುರಾಜ್ ನಿಕೋಲಸ್, ಕೇರಳದ ಫಹಾದ್ ವೆಂಬಾಯಿಲ್ ಹಸನ್ ಹಾಗೂ ನರೇಂದ್ರನ್ ಕೆ ಕಮಲಾಸನ್ ಗಲ್ಫ್ ಟಿಕೆಟ್‌ನಲ್ಲಿ ಅದೃಷ್ಠ ಪರೀಕ್ಷೆ ನಡೆಸಿ ನಗದು ಬಹುಮಾನ ಪಡೆದುಕೊಂಡಿದ್ದಾರೆ.
ಗಲ್ಫ್ ಟಿಕೆಟ್ ಎಲ್ಲಾ ವರ್ಗದ ಜನರ ಕನಸುಗಳನ್ನು ನನಸಾಗಿಸಲು ವೇದಿಕೆಯನ್ನು ಒದಗಿಸುತ್ತದೆ. ಗಲ್ಫ್ ಟಿಕೆಟ್‌ನಲ್ಲಿ ತೊಡಗಿಸಿಕೊಳ್ಳುವ ಪ್ರತಿಯೊಬ್ಬರಿಗೆ ಅವಕಾಶವನ್ನು ಒದಗಿಸಲು ಸಂಸ್ಥೆ ಬದ್ಧವಾಗಿದೆ ಎಂದು ಗಲ್ಫ್ ಟಿಕೆಟ್ ಮಾರ್ಕೆಟಿಂಗ್ ಆಫೀಸರ್ ಜೋರಾನ್ ಪೋಪೊವಿಚ್ ಹೇಳಿದ್ದಾರೆ. ಗಲ್ಫ್ ಟಿಕೆಟ್ ಆಕರ್ಷಕ ಬಹುಮಾನದ ಜೊತೆಗೆ ಭಾರತೀಯರ ಜೀವನ ಪರಿವರ್ತಿಸಬಲ್ಲ ಅವಕಾಶಗಲನ್ನು ಒದಗಿಸುತ್ತದೆ ಎಂದರು.
ಗಲ್ಫ್ ಟಿಕೆಟ್ ಸೂಪರ್ 6 ಗೇಮ್ ಬಹುಮಾನ ಮೊತ್ತ ಏರಿಕೆ, ಅದೃಷ್ಠವಂತರಿಗೆ ದುಬಾರಿ ಪ್ರೈಜ್!
ವಿಜೇತರ ಆಟ ಹಾಗೂ ರೋಚಕ ಪಯಣ ಇತರರಿಗೆ ಜೀವನ ಬದಲಾಯಿಸುವ ಸ್ಪೂರ್ತಿಯಾಗಿದೆ. ಭವಿಷ್ಯದಲ್ಲಿ ಭಾರತೀಯರಿಗೆ ಸುಖ, ಸಂತೋಷ ಹಾಗೂ ಆರ್ಥಿಕ ಭದ್ರತೆ ಅವಕಾಶ ಗಲ್ಫ್ ಟಿಕೆಟ್ ಒದಗಿಸಲಿದೆ ಎಂದು ಪೊಪೋವಿಚ್ ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ www.gulfticket.com. ಭೇಟಿ ನೀಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ