
ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ತಮಗೆ ತಿಳಿಯದಂತೆ ತೀವ್ರ ಮುಜುಗರಕ್ಕೊಳಗಾದ ಘಟನೆ ಇತ್ತೀಚೆಗೆ ನಡೆದಿದೆ. ಅಮೆರಿಕಾದ ವಸಾಹತು ಆಗಿರುವ ಪೋರ್ಟರಿಕಾಗೆ ಇತ್ತೀಚೆಗೆ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಭೇಟಿ ನೀಡಿದ್ದರು. ಆದರೆ ಕಮಲಾ ಹ್ಯಾರಿಸ್ ಭೇಟಿ ವಿರೋಧಿಸಿ ಅಲ್ಲಿನ ಸಮುದಾಯದ ಜನ ಪ್ರತಿಭಟನೆ ನಡೆಸಿದ್ದರು. ಭೇಟಿಯ ವೇಳೆಯೇ ಹಾಡಿನ ಮೂಲಕ ಅವರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. ಕಂಜಿರ ಹಿಡಿದು (ಸಂಗೀತಾ ಸಾಧನ) ಪ್ರತಿಭಟನಾಕಾರರು ಪ್ರತಿಭಟನಾ ಗೀತೆಯನ್ನು ಹಾಡುತ್ತಿದ್ದಿದ್ದರಿಂದ ಹಾಗೂ ಭಾಷೆಯೂ ವಿಭಿನ್ನವಾಗಿದ್ದರಿಂದ ಕಮಲಾ ಹ್ಯಾರಿಸ್‌ಗೆ ಇದು ಪ್ರತಿಭಟನಾಗೀತೆ ಎಂಬುದರ ಅರಿವಾಗಿಲ್ಲ, ಕಂಜಿರದ ಸದ್ದಿನೊಂದಿಗೆ ಈ ಹಾಡು ಆದಿವಾಸಿ ಜಾನಪದ ಗೀತೆಯಂತೆ ಸುಮಧುರವಾಗಿ ಕೇಳಿ ಬಂದಿದ್ದು, ಕಮಲಾ ಹ್ಯಾರಿಸ್ ಖುಷಿಯಿಂದಲೇ ಈ ಹಾಡಿಗೆ ಚಪ್ಪಾಳೆ ತಟ್ಟಿದ್ದಾರೆ. ಆದರೆ ಕೂಡಲೇ ಪಕ್ಕದಲ್ಲಿದ್ದ ಕಮಲಾ ಅವರ ಸಹಾಯಕರಿಗೆ ಈ ಅಭಾಸದ ಅರಿವಾಗಿದ್ದು, ಕೂಡಲೇ ಅವರು ಈ ಈ ಹಾಡಿನ ಅರ್ಥವನ್ನು ಅವರಿಗೆ ಹೇಳಿದ್ದಾರೆ. ತಕ್ಷಣವೇ ಕಮಲ ಹ್ಯಾರಿಸ್ ಚಪ್ಪಾಳೆ ತಟ್ಟುವುದನ್ನು ನಿಲ್ಲಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೋರ್ಟೊ ರಿಕೊ ಪ್ರದೇಶವೂ ಪರ್ವತಗಳು, ಜಲಪಾತಗಳು ಮತ್ತು ಎಲ್ ಯುಂಕ್ ಉಷ್ಣವಲಯದ ಮಳೆಕಾಡುಗಳನ್ನು ಹೊಂದಿರುವ ಕೆರಿಬಿಯನ್ ದ್ವೀಪವಾಗಿದ್ದು, ಅಮೆರಿಕಾಗೆ ಇನ್ನೂ ಸೇರಿರದಂತಹ ದ್ವೀಪವಾಗಿದೆ. ಇಲ್ಲಿ ಅಮೆರಿಕಾವೂ ನಿರಂತರ ಜನರ ಮೇಲೆ ಹಿಂಸಾಚಾರ ಮಾಡುತ್ತಿದ್ದಾರೆ ಎಂದು ಅಲ್ಲಿನ ಜನ ಆ ಪ್ರದೇಶಕ್ಕೆ ಅಮೆರಿಕ ಉಪಾಧ್ಯಕ್ಷೆಯ ಭೇಟಿಯನ್ನು ವಿರೋಧಿಸಿದ್ದಾರೆ.
ಅಮೆರಿಕ ಅಧ್ಯಕ್ಷೆಯಾಗ್ತಾರಾ ಭಾರತ ಮೂಲದ ಮಹಿಳೆ? ಅಧಿಕಾರ ನಿರ್ವಹಿಸಲು ಸಿದ್ಧ ಎಂದು ಕಮಲಾ ಹ್ಯಾರಿಸ್ ಹೇಳಿದ್ಯಾಕೆ?
ಕಮಲಾ ಅವರೇ ನೀವು ಇಲ್ಲಿಗೇಕೆ ಬಂದಿದ್ದೀರಿ? ಈ ಕಾಲೋನಿ ಬಗ್ಗೆ ನೀವೇನು ಯೋಚಿಸಿದ್ದೀರಿ? ಎಂಬ ಅರ್ಥ ಬರುವ ಹಾಡನ್ನು ಪೋರ್ಟರಿಕೋ ನಿವಾಸಿಗಳು ಕಮಲಾ ಹ್ಯಾರಿಸ್ ಭೇಟಿ ವೇಳೆ ಹಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನ ಸಖತ್ ಕಾಮೆಂಟ್ ಮಾಡಿದ್ದಾರೆ. ಕೇವಲ ಪೋರ್ಟರಿಕೋದ ಜನ ಮಾತ್ರ ಈ ರೀತಿ ಸುಂದರವಾದ ಪ್ರತಿಭಟನಾ ಹಾಡು ಮಾಡಲು ಸಾಧ್ಯ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ಅಮ್ಮ ಅಮೆರಿಕಾ ಉಪಾಧ್ಯಕ್ಷರೇ ಅವರು ನಿಮ್ಮ ಭೇಟಿ ವಿರೋಧಿಸಿ ಹಾಡು ಹಾಡ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
60 ಕಳೆದ ಮೇಲೆ ಅರಳು ಮರಳಾ.... ಕಮಲಾ ಹ್ಯಾರಿಸ್ ಗಂಡನನ್ನು ಚುಂಬಿಸಿದ ಅಧ್ಯಕ್ಷ ಬೈಡೆನ್ ಪತ್ನಿ
ಅಂದಹಾಗೆ ಕಮಲ ಹ್ಯಾರಿಸ್ ಅವರು ಪೋರ್ಟರಿಕೋಗೆ ಭೇಟಿ ನೀಡಿದ ಮೊದಲ ಅಮೆರಿಕಾ ಉಪಾಧ್ಯಕ್ಷರಾಗಿದ್ದಾರೆ. ಆದರೂ ಈ ಐತಿಹಾಸಿಕ ಭೇಟಿ ಪ್ರತಿಭಟನೆಗೆ ಸಾಕ್ಷಿಯಾಗಿದೆ. 59 ವರ್ಷದ ಕಮಲ ಹ್ಯಾರಿಸ್ ಅವರು ಪೋರ್ಟರಿಕೋದ ಸ್ಯಾನ್ ಜ್ಯುಯಾನ್‌ನಲ್ಲಿರುವ ಗೊಯೊಕೊ ಕಮ್ಯೂನಿಟಿ ಸೆಂಟರ್‌ಗೆ ಭೇಟಿ ನೀಡಿದ ವೇಳೆ ಸ್ಪೇನಿಶ್ ಭಾಷೆಯಲ್ಲಿ ಈ ಹಾಡನ್ನು ಹಾಡಲಾಗಿತ್ತು. ಜೊತೆಗೆ ಗಾಜಾದಲ್ಲಿ ಇಸ್ರೇಲ್ ಆಕ್ರಮಣವನ್ನು ನಿಲ್ಲಿಸಿ ಎಂಬ ಘೋಷಣೆಯ ಪ್ಲೇಕಾರ್ಡ್‌ಗಳನ್ನು ಜನ ಅಲ್ಲಿ ಹಿಡಿದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ