
ಇಸ್ಲಾಮಾಬಾದ್(ಮಾ.26) ಉಗ್ರರ ಪೋಷಿಸಿ ಬೆಳೆಸಿದ ಪಾಕಿಸ್ತಾನಕ್ಕೆ ಇದೀಗ ಅದೇ ಉಗ್ರರು ಮುಳುವಾಗಿದ್ದಾರೆ. ಬಲೂಚ್ ಬಂಡುಕೋರರು ಪಾಕಿಸ್ತಾನ ವಾಯುನೆಲೆ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಇದೀಗ ಖೈಬರ್ ಪಖ್ತಾಂಕ್ವಾ ಪ್ರಾಂತ್ಯದಲ್ಲಿ ಭೀಕರ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಖೈಬರ್ ಪಖ್ತಾಂಕ್ವಾ ಪ್ರಾಂತ್ಯದಿಂದ ಇಸ್ಲಾಮಾಬಾದ್‌ಗೆ ತೆರಳುತ್ತಿದ್ದ ಚೀನಾ ಮೂಲದ ಎಂಜಿನೀಯರ್ಸ್ ವಾಹನದ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ವಾಹನದಲ್ಲಿದ್ದ ಐವರು ಚೀನಾ ಎಂಜಿನೀಯರ್ಸ್ ಹಾಗೂ ಓರ್ವ ಪಾಕಿಸ್ತಾನಿ ಹತ್ಯೆಯಾಗಿದ್ದಾರೆ. ಈ ಘಟನೆಯಿಂದ ಚೀನಾ ಕೆರಳಿದೆ.
ಚೀನಾ ಹಾಗೂ ಪಾಕಿಸ್ತಾನ ಜಂಟಿಯಾಗಿ ಹಲವು ಕಾಮಾಗಾರಿ ನಡೆಸುತ್ತಿದೆ. ಪ್ರಮುಖವಾಗಿ ಭಾರತದ ಗಡಿ ಮೂಲಕ ಸಾಗುತ್ತಿರುವ ಹೆದ್ದಾರಿ ಕಾರಿಡಾರ್ ಸೇರಿದಂತೆ ಹಲವು ಯೋಜನೆಗಳು ಆರಂಭಿಸಿದೆ. ಇದಕ್ಕೆ ಚೀನಾ ಮೂಲದ ಎಂಜಿನೀಯರ್ಸ್ ಸೇರಿದಂತೆ ಹಲವು ಸಿಬ್ಬಂದಿಗಳು ಪಾಕಿಸ್ತಾನದಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ಇದೇ ಚೀನಾ ಎಂಜಿನೀಯರ್ಸ್ ಮೇಲೆ ಆತ್ಮಾಹುತಿ ದಾಳಿ ನಡೆಸಿದೆ.
ನೆರೆ ದೇಶಕ್ಕೆ ಪ್ರಜಾಪ್ರಭುತ್ವ ಪಾಠ ಮಾಡೋದ್ ಬಿಟ್ಟು ಉಗ್ರರ ಫ್ಯಾಕ್ಟರಿ ಮುಚ್ಚಿ: ಪಾಕ್‌ಗೆ ಎಚ್ಚರಿಕೆ
ಈ ದಾಳಿ ಬೆನ್ನಲ್ಲೇ ಪಾಕಿಸ್ತಾನ ವಿರುದ್ಧ ಚೀನಾ ಕೆರಳಿ ಕೆಂಡವಾಗಿದೆ. ಪಾಕಿಸ್ತಾನದಲ್ಲಿ ಚೀನಾ ನಾಗರೀಕರಿಗೆ ಗರಿಷ್ಠ ಸುರಕ್ಷತೆಯ ಭರವಸೆಯನ್ನು ಪಾಕಿಸ್ತಾನ ನೀಡಿದೆ. ಆದರೆ ಪದೇ ಪದೇ ಚೀನಾ ನಾಗರೀಕರ ಗುರಿಯಾಗಿಸಿ ದಾಳಿಗಳು ನಡೆಯುತ್ತಿದೆ. ಇದರು ಚೀನಾವನ್ನು ಕೆರಳಿಸಿದೆ. ಈ ಕುರಿತು ಪಾಕಿಸ್ತಾನದ ವರದಿಯನ್ನು ಚೀನಾ ಕೇಳಿದೆ.
ಪಾಕಿಸ್ತಾನದ ನೌಕಾ ವಾಯುನೆಲೆ ಮೇಲೆ ಶಸ್ತ್ರಸಜ್ಜಿತ ಉಗ್ರರು ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ವಾಯುನೆಲೆ ಮೇಲೆ ನಡೆದ ದಾಳಿಯಲ್ಲಿ ಓರ್ವ ಪ್ಯಾರಾಮಿಲಿಟರಿ ಯೋಧ ಮೃತಪಟ್ಟಿದ್ದಾನೆ. ಇದೇ ವೇಳೆ ದಾಳಿ ನಡೆಸಿದ ಐವರು ಉಗ್ರರನ್ನು ಪಾಕಿಸ್ತಾನ ಸೇನೆ ಹತ್ಯೆ ಮಾಡಿದೆ. ಕಳೆದೊಂದು ವಾರದಿಂದ ಪಾಕಿಸ್ತಾನದ ಕೆಲವೆಡೆ ಬಲೂಚಿ ಹೋರಾಟಗಾರರು ದಾಳಿ ನಡೆಸಿದ್ದಾರೆ. ಬಲೂಚ್ ಪ್ರಾಂತ್ಯದಲ್ಲಿ ಚೀನಾ ನಡೆಸುತ್ತಿರುವ ಕಾಮಾಗಾರಿಗೆ ಬಲೂಚ್ ಜನರ ತೀವ್ರ ವಿರೋಧವಿದೆ. ಚೀನಾ ಹಾಗೂ ಪಾಕಿಸ್ತಾನ ಜಂಟಿಯಾಗಿ ನಡೆಸುತ್ತಿರುವ ಎಲ್ಲಾ ಕಾಮಾಗಾರಿ ಹಾಗೂ ಪಾಕ್ ಸೇನೆಯ ಆಡಳಿತಕ್ಕೆ ಭಾರಿ ವಿರೋಧವಿದೆ.
ಪಾಕಿಸ್ತಾನದ 2ನೇ ಅತೀದೊಡ್ಡ ನೇವಿ ಏರ್‌ಬೇಸ್ ಮೇಲೆ ಬಲೂಚಿಸ್ತಾನದ ಮಜೀದ್ ಬ್ರಿಗೇಡ್ ದಾಳಿ
ಆತ್ಮಾಹುತಿ ದಾಳಿ ಹಿಂದೆ ಬಲೂಚ್ ಲಿಬರೇಶನ್ ಆರ್ಮಿ ಕೈವಾಡವಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಬಲೂಚ್ ಪ್ರಾಂತ್ಯದಲ್ಲಿ ಪಾಕಿಸ್ತಾನ ಹಾಗೂ ಚೀನಾ ಆಸಕ್ತಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಲೂಚ್ ಲಿಬರೇಶನ್ ಆರ್ಮಿ ಇದೇ ರೀತಿಯ ದಾಳಿ ಮುಂದೆಯೂ ನಡೆಯಲಿದೆ ಎಂದು ಎಚ್ಚರಿಕೆ ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ