ಅಬ್ಬಬ್ಬಾ..2 ವರ್ಷದ ಬಾಲಕ ಬಿಡಿಸಿದ ಪೈಂಟಿಂಗ್‌ ಬರೋಬ್ಬರಿ 6 ಲಕ್ಷಕ್ಕೆ ಸೇಲ್‌!

By Vinutha PerlaFirst Published May 31, 2024, 6:34 PM IST
Highlights

ಜರ್ಮನಿಯ ಮಗುವೊಂದು ತನ್ನ ಕಲಾಕೃತಿಗಳಿಗೆ ಅಂತರಾಷ್ಟ್ರೀಯ ಮನ್ನಣೆಯನ್ನು ಪಡೆಯುತ್ತಿದೆ. 2 ವರ್ಷದ ಬಾಲಕ ತಯಾರಿಸಿದ ಪೇಂಟಿಂಗ್‌ ಸುಮಾರು 6 ಲಕ್ಷ ರೂ.ಗೆ ಮಾರಾಟವಾಗುತ್ತಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ವಿಶ್ವದ ಶ್ರೇಷ್ಠ ವರ್ಣಚಿತ್ರಕಾರನ ಬಗ್ಗೆ ಯೋಚಿಸಿದಾಗ ತಕ್ಷಣ ನೆನಪಿಗೆ ಬರುವ ಹೆಸರು ಪಿಕಾಸೊ. 13ನೇ ವಯಸ್ಸಿನಲ್ಲಿ, ಹೆಸರಾಂತ ಸ್ಪ್ಯಾನಿಷ್ ವರ್ಣಚಿತ್ರಕಾರನು ತನ್ನ ಮೊದಲ ತೈಲ ವರ್ಣಚಿತ್ರಗಳನ್ನು ತಯಾರಿಸಲು ಪ್ರಾರಂಭಿಸಿದನು. ಅದೇ ವಯಸ್ಸಿನಲ್ಲಿ ನಾವೆಲ್ಲರೂ ಪೈಂಟ್ ಬಳಸಿ ಮನೆಯ ಚಿತ್ರಗಳನ್ನು ಬಿಡಿಸುತ್ತಿದ್ದೆವು. ಆದರೆ ಎಲ್ಲಾ ಮಕ್ಕಳು ಹೀಗಿರಲ್ಲವಲ್ಲ. ಜರ್ಮನಿಯ ಮಗುವೊಂದು ತನ್ನ ಕಲಾಕೃತಿಗಳಿಗೆ ಅಂತರಾಷ್ಟ್ರೀಯ ಮನ್ನಣೆಯನ್ನು ಪಡೆಯುತ್ತಿದೆ. 2 ವರ್ಷದ ಬಾಲಕ ತಯಾರಿಸಿದ ಪೇಟಿಂಗ್‌ ಸುಮಾರು 6 ಲಕ್ಷ ರೂ.ಗೆ ಮಾರಾಟವಾಗುತ್ತಿದೆ. 

ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಬಾಲಕ ಲಾರೆಂಟ್ ಶ್ವಾರ್ಜ್ ಹೀಗೆ ಅತ್ಯಾಕರ್ಷಕ ಪೇಟಿಂಗ್‌ಗಳನ್ನು ಮಾಡುತ್ತಿದ್ದಾನೆ. ಈತ ಚಿತ್ರ ಬಿಡಿಸೋಕೆ ಹೆಚ್ಚು ಸಮಯ ಮೀಸಲಿಡಲು ಪ್ರಾರಂಭಿಸಿದಾಗ ಮನೆ ಮಂದಿ ಈತನಲ್ಲಿರುವ ಪ್ರತಿಭೆಯನ್ನು ಗಮನಿಸಿದರು. ಲಾರೆಂಟ್ ಪೋಷಕರಾದ ಲಿಸಾ ಮತ್ತು ಫಿಲಿಪ್ ಶ್ವಾರ್ಜ್ ಮಗ ಕ್ಯಾನ್ವಾಸ್‌ನ ಮೇಲೆ ಸುಂದರವಾದ ಪೇಂಟಿಂಗ್‌ ಬಿಡಿಸಿದಾಗ ಅಚ್ಚರಿಗೊಳಗಾದರು. ಕುದುರೆಗಳು, ಡೈನೋಸಾರ್‌ಗಳು ಮತ್ತು ಆನೆಗಳಂತಹ ಪ್ರಾಣಿಗಳನ್ನು ಒಳಗೊಂಡ ವೈವಿಧ್ಯಮಯ ವರ್ಣಚಿತ್ರಗಳಿಗಾಗಿ ಶ್ವಾರ್ಜ್ ಹೆಚ್ಚಾಗಿ ಗುರುತಿಸಲ್ಪಟ್ಟಿದ್ದಾರೆ.

Latest Videos

ಇದೇ ಫಸ್ಟ್ ಟೈಮ್ ಹೋದ ಸ್ಥಳದಲ್ಲಿ ಮಗನ ಪೇಂಟಿಂಗ್, ನೋಡಿ ಬೆಚ್ಚಿದ ದಂಪತಿ! ಪುನರ್ಜನ್ಮ ಇದೇನಾ?

ಇವುಗಳು ಸಾಮಾನ್ಯ ಚಿತ್ರವಾದರೂ ಅವುಗಳನ್ನು ಶ್ವಾರ್ಜ್‌ ಸಂಯೋಜಿಸುವ ರೀತಿ ಹೆಚ್ಚು ಅದ್ಭುತವಾಗಿದೆ ಎಂದು ಲಿಸಾ ಲಂಡನ್‌ನ ಟೈಮ್ಸ್‌ಗೆ ತಿಳಿಸಿದರು. 'ಪ್ರಕಾಶಮಾನವಾಗಿಮತ್ತು ವರ್ಣಮಯವಾಗಿರುವುದು ಅವನಿಗೆ ಬಹಳ ಮುಖ್ಯ. ಕಂದು ಮತ್ತು ಇತರ ನೀರಸ ಬಣ್ಣಗಳು ಅವನಿಗೆ ಆಸಕ್ತಿಯಿಲ್ಲ. ಅವನು ಬೆರೆಸುವ ಬಣ್ಣಗಳ ಬಗ್ಗೆ ಅವನಿಗೆ ಸ್ಪಷ್ಟವಾದ ಕಲ್ಪನೆ ಇದೆ' ಎಂದು ಶ್ವಾರ್ಜ್ ತಾಯಿ ಲಿಸಾ ವಿವರಿಸಿದ್ದಾರೆ.

ತನ್ನ ಮಗನ ಪೇಂಟಿಂಗ್‌ ಕೌಶಲ್ಯದಿಂದ ಬೆರಗಾದ ಲಿಸಾ, ಅವನ ಕೆಲಸವನ್ನು ಪ್ರದರ್ಶಿಸಲು ಇನ್‌ಸ್ಟಾಗ್ರಾಂ ಖಾತೆಯನ್ನು ತೆರೆದರು. ಇದು ಬಹುಬೇಗನೇ ಜನರ ಗಮನ ಸೆಳೆದದ್ದು ನೋಡಿ ಅಚ್ಚರಿಗೊಳಗಾದರು. ಶ್ವಾರ್ಜ್‌ ಖಾತೆ ಕೆಲವೇ ದಿನಗಳಲ್ಲಿ 30,000 ಅನುಯಾಯಿಗಳನ್ನು ಪಡೆದುಕೊಂಡಿದೆ. ಬಹುತೇಕರು ಪೇಂಟಿಂಗ್ ಕೊಳ್ಳಲು ಉತ್ಸಾಹ ತೋರುತ್ತಿದ್ದಾರೆ.  ಬಹಾಮಾಸ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನಂತಹ ದೂರದ ಕಲಾ ಉತ್ಸಾಹಿಗಳು ವರ್ಣಚಿತ್ರಗಳನ್ನು ಖರೀದಿಸಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟಿಗ ಕುಲ್ದೀಪ್ ಯಾದವ್ ಬಿಡಿಸಿದ ಶ್ರೀ ರಾಮನ ಚಿತ್ರ ವೈರಲ್..!

ನ್ಯೂಯಾರ್ಕ್ ಗ್ಯಾಲರಿಯು ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಲಾರೆಂಟ್ ಅವರ ಕಲಾಕೃತಿಯನ್ನು ಪ್ರದರ್ಶನಕ್ಕೆ ಇಡುವಂತೆ ಕೇಳಿದೆ. ಹೀಗಾಗಿ ಶ್ವಾರ್ಜ್‌ ಕಲಾಕೃತಿಯು ಏಪ್ರಿಲ್‌ನಲ್ಲಿ ನಡೆದ ಮ್ಯೂನಿಚ್‌ನ ಅತಿದೊಡ್ಡ ಕಲಾ ಮೇಳವಾದ ART MUCನಲ್ಲಿ ಪ್ರದರ್ಶನದಲ್ಲಿದೆ. ಲಾರೆಂಟ್ ಇಲ್ಲಿಯವರೆಗೆ ಮಾಡಿದ ಎಲ್ಲಾ ಪೇಂಟಿಂಗ್ ಮಾರಾಟಗೊಂಡಿದ್ದು, ಬರೋಬ್ಬರಿ ಆರು ಲಕ್ಷ ರೂ. ಗಳಿಸಿವೆ.

click me!